ಕರಾಳ ದಿನಾಚಾರಣೆ, ‘ಸಂಪಾಜೆಗೆ ಪೋಯಿ’ ಬೃಹತ್‌ ಕಾಲ್ನಡಿಗೆ ಜಾಥಾ

Team Udayavani, Nov 9, 2017, 10:51 AM IST

9-Nov-4.jpg

ಸುಳ್ಯ: ದ.ಕ. ಜಿಲ್ಲೆಯ ಸುಳ್ಯ ಮತ್ತು ಕೊಡಗು ಜಿಲ್ಲೆಯ ನಾಪೋಕ್ಲು ಬ್ಲಾಕ್‌ ಕಾಂಗ್ರೆಸ್‌ ಜಂಟಿಯಾಗಿ ನೋಟು ಅಮಾನ್ಯೀಕರಣ ದಿನವಾದ ನ. 8ನ್ನು ಕರಾಳ ದಿನವನ್ನಾಗಿ ಆಚರಿಸಿದ್ದು, ಆ ಪ್ರಯುಕ್ತ ಗುರುವಾರ ಸುಳ್ಯದಿಂದ- ಸಂಪಾಜೆವರೆಗೆ ‘ಸಂಪಾಜೆಗೆ ಪೋಯಿ’ ಬೃಹತ್‌ ಕಾಲ್ನಡಿಗೆ ಜಾಥಾ ನಡೆಯಿತು. ಈ ಮೂಲಕ ಕಾಂಗ್ರೆಸ್‌ ಸಂಘಟನಾತ್ಮಕವಾಗಿ ಸ್ವಲ್ಪ ಚೇತರಿಸಿಕೊಂಡಂತೆ ಕಂಡುಬಂದಿತು.

ಬುಧವಾರ ಬೆಳಗ್ಗೆ 9.30ಕ್ಕೆ ಸುಳ್ಯಶಾಸ್ತ್ರಿ ವೃತ್ತದಲ್ಲಿ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ಪದ್ಮಿನಿ ಪೊನ್ನಪ್ಪ ಪಾದಯಾತ್ರೆಗೆ ಚಾಲನೆ ನೀಡಿದರು. ಬಳಿಕ ಸುಳ್ಯ ಹಳೆ ಬಸ್‌ ನಿಲ್ದಾಣದಲ್ಲಿ ಸಮಾವೇಶಗೊಂಡಿತು. 

ರಾಜ್ಯ ರೇಷ್ಮೆ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಟಿ.ಪಿ.ರಮೇಶ್‌ ಮಾತನಾಡಿ, ಕೇಂದ್ರ ಸರಕಾರ ನೋಟು ಅಮಾನ್ಯೀಕರಣ ನಿರ್ಧಾರವನ್ನು ಕಾರ್ಯರೂಪಕ್ಕೆ ತಂದ ಬಗೆಯನ್ನು ಟೀಕಿಸಿದರು. ಬಿಜೆಪಿ ಚುನಾವಣೆ ಪ್ರಣಾ ಳಿಕೆಯಲ್ಲಿ ನೀಡಿದ ಕಾಳದನ ತರುವ ನಿರ್ಧಾರ ಎಷ್ಟು ಯಶಸ್ವಿಯಾಗಿದೆ ಎಂದು ಪ್ರಶ್ನಿಸಿದರು.

ಉದ್ವಿಗ್ನತೆಗೆ ಆಸ್ಪದವಿಲ್ಲ: ಜೆ.ಪಿ.
ಸುಳ್ಯ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಜಯಪ್ರಕಾಶ್‌ ರೈ ಮಾತನಾಡಿ, ಬಿಜೆಪಿ ಪರಿವರ್ತನ ಯಾತ್ರೆ, ಕಾಂಗ್ರೆಸ್‌ನ ಪಾದಾಯಾತ್ರೆ ಕಾರ್ಯಕ್ರಮಗಳು ಪರಸ್ಪರ ಪೈಪೋಟಿಗಿಳಿದು ಉದ್ವಿಗ್ನ ವಾತಾವರಣಕ್ಕೆ ನಾವು ಅವಕಾಶ ಮಾಡಿಕೊಡುವುದು ಬೇಡ. ನಾವು ಅಹಿತಕರ ಘಟನೆಗಳಿಗೆ ಆಸ್ಪದ ನೀಡುವುದಿಲ್ಲ ಎಂದರಲ್ಲದೇ ಬಿಜೆಪಿಯವರು ನಮ್ಮ  ಪಾದಯಾತ್ರೆ ಬಳಿಕದ ಕಾರ್ಯಕ್ರಮವಾದರೂ ಮೊದಲೇ ಬ್ಯಾನರ್‌ ಅಳವಡಿಸಿದ್ದಾರೆ. ಆದರೆ ನಾವು ಅಳವಡಿಸಿದ ಧ್ವಜಗಳನ್ನು ಕಾರ್ಯಕ್ರಮ ಮುಗಿದ ತಕ್ಷಣ ತೆರವುಗೊಳಿಸಿ ಮಾದರಿಯಾಗಿ ನಡೆದುಕೊಳ್ಳುತ್ತೇವೆ ಎಂದರು.

‘ಸುಳ್ಳೇ ಸುಳ್ಳು..’ ಹಾಡು
ಎರಡು ಬ್ಲಾಕ್‌ಗಳ ಸಾವಿರಕ್ಕೂ ಅಧಿಕ ಮಂದಿ ಕಾಂಗ್ರೆಸ್‌ ಕಾರ್ಯಕರ್ತರು ಪಕ್ಷದ ಧ್ವಜಗಳನ್ನು ಹಿಡಿದು ಸಾಗಿದರು. ಮೈಲು ದ್ದುದ ಸಾಲು ಕಂಡುಬಂದಿತು. ಕೇಂದ್ರ ಸರಕಾರದ ಯೋಜನೆಗಳು, ಚುನಾವಣೆಯ ಪ್ರಣಾಳಿಕೆಗಳ ಬಗೆಗಿನ ‘ಸುಳ್ಳೇ ಸುಳ್ಳು…’ ಹಾಡು ಕೇಳಿಬಂದಿತು. ಚಂಡೆ, ವಾದ್ಯ ಮೇಳ, ಹುಲಿ ವೇಷ, ಮರಕೋಲು ನಡಿಗೆ ಯಾತ್ರೆಗೆ ಸಾಥ್‌ ನೀಡಿದವು. ಪಾದಯಾತ್ರೆ ಸಂದರ್ಭ ನಟಿ ಭಾವನಾ ಮುಂಚೂಣಿಯಲ್ಲಿದ್ದರು. ಹಳೇ ಬಸ್‌ ನಿಲ್ದಾಣ ಬಳಿ ಫೋಟೋ, ಸೆಲ್ಫಿಗಾಗಿ ಕಾರ್ಯಕರ್ತರು ಮುಗಿಬಿದ್ದರು.

ಮುಟ್ಟಾಳೆ ಧರಿಸಿದ ಕಾರ್ಯಕರ್ತ
ಯಾತ್ರೆಯಲ್ಲಿ ಶ್ವೇತವಸ್ತ್ರಧಾರಿಯಾಗಿದ್ದ ತಲೆಗೆ ಮುಟ್ಟಾಳೆ ಧರಿಸಿದ್ದ ಏಕೈಕ ಸದಸ್ಯ ನ.ಪ. ಸದಸ್ಯ ಗೋಕುಲ್‌ದಾಸ್‌ ಗಮನ ಸೆಳೆದರು.  ಸ್ವಯಂಸೇವಕರಾಗಿ ಕಾರ್ಯನಿರ್ವಹಿಸಿದ್ದ ಅವರ ಛಾಯಾಚಿತ್ರ ತೆಗೆಯುವ ವೇಳೆ ‘ಇಂದಿರಾ ಕಾಂಗ್ರೆಸ್‌’ ಎಂದು ಪ್ರತಿಕ್ರಿಯಿಸಿದರು.

ಜಂಟಿಯಾಗಿ ಕಾಲ್ನಡಿಗೆ ಜಾಥಾ
ನಾಪೋಕ್ಲು ಬ್ಲಾಕ್‌ ಕಾಂಗ್ರೆಸ್‌ ‘ನಾಪೋಕ್ಲುಗೆ ಪೋಯಿ’ ಕಾರ್ಯಕ್ರಮ ಆಯೋಜಿಸಿತ್ತು. ಬಳಿಕ ರಾಷ್ಟ್ರಮಟ್ಟದ ಕರಾಳ ದಿನಾಚರಣೆ ಅಂಗವಾಗಿ ಎರಡೂ ಬ್ಲಾಕ್‌ಗಳು ಜಂಟಿಯಾಗಿ ಸುಳ್ಯದಿಂದ ಸಂಪಾಜೆವರೆಗೆ ಕಾಲ್ನಡಿಗೆ ಜಾಥಾ ಹಮ್ಮಿಕೊಂಡವು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಹಮ್ಮದ್‌ ಹುಸೇನ್‌, ಉಪಾಧ್ಯಕ್ಷ ಮಿಟ್ಟು ಚಂಗಪ್ಪ, ವಿಧಾನ ಪರಿಷತ್‌ ಸದಸ್ಯೆ ವೀಣಾ ಅಚ್ಚಯ್ಯ, ಮಾಜಿ ಸಚಿವೆ ಸುಮಾ ವಸಂತ್‌, ಸುಳ್ಯ ಬ್ಲಾಕ್‌ ಕಾಂಗ್ರೆಸ್‌ ಉಸ್ತುವಾರಿ ಸವಿತಾ ರಮೇಶ್‌ ಗೌಡ, ಕೆಪಿಸಿಸಿ ಸದಸ್ಯರಾದ ಅರುಣ್‌ ಮಾಚಯ್ಯ, ಎಂ. ವೆಂಕಪ್ಪ ಗೌಡ, ಡಾ| ಬಿ. ರಘು, ಕೆಪಿಸಿಸಿ ಸದಸ್ಯೆ ಹಾಗೂ ಚಿತ್ರನಟಿ ಭಾವನಾ, ಕೊಡಗು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಶಿವಮಾದಪ್ಪ, ಕಿಸಾನ್‌ ಘಟಕದ ಜಿಲ್ಲಾಧ್ಯಕ್ಷ ನೆರವಂಡ ಉಮೇಶ್‌, ಸುಳ್ಯ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎನ್‌. ಜಯಪ್ರಕಾಶ್‌ ರೈ, ನಾಪೊಕ್ಲು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ರಮಾನಾಥ್‌ ಕರಿಕೆ, ಪೊನ್ನಂಪೇಟೆ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಧರ್ಮಜ ಉತ್ತಪ್ಪ, ವಿರಾಜಪೇಟೆ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಅಬ್ದುಲ್‌ ಸಲಾಂ, ಸುಳ್ಯ ಬ್ಲಾಕ್‌ ಮಹಿಳಾ ಘಟಕದ ಕಾಂಗ್ರೆಸ್‌ ಅಧ್ಯಕ್ಷೆ ಗೀತಾ ಕೋಲ್ಚಾರ್‌, ಎಸ್‌. ಸಂಶುದ್ದೀನ್‌, ಕಿರಣ್‌ ಬುಡ್ಲೆಗುತ್ತು, ಪಿ.ಸಿ. ಜಯರಾಮ, ದಿವ್ಯಪ್ರಭಾ ಚಿಲ್ತಡ್ಕ, ಅಶೋಕ್‌ ನೆಕ್ರಾಜೆ ಮೊದಲಾದವರು ಬೃಹತ್‌ ಕಾಲ್ನಡಿಗೆ ಪಾದ ಯಾತ್ರೆಯಲ್ಲಿ ಪಾಲ್ಗೊಂಡರು.

ಗಾಯಾಳು ಬಿಜೆಪಿ ಮಿತ್ರನಿಗೆ ಶುಭಹಾರೈಕೆ
ಪಾದಯಾತ್ರೆ ಉದ್ಘಾಟನೆ ವೇಳೆ ಮಾತನಾಡಿದ ಸುಳ್ಯ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಜಯಪ್ರಕಾಶ್‌ ರೈ, ‘ಅಪಘಾತದಲ್ಲಿ ಗಾಯಗೊಂಡಿದ್ದ ಮಿತ್ರ ಪ್ರಕಾಶ್‌ ಹೆಗ್ಡೆಗೆ ಆದ ನೋವು ನಮಗಾದ ನೋವು. ಪಕ್ಷಗಳ ನಾಯಕರು ಯಾತ್ರೆಗಳಿಗೆ ಬಂದುಹೋಗುತ್ತಾರೆ. ಆದರೆ ನಾವಿಲ್ಲಿ ಪರಸ್ಪರ ಮುಖ ನೋಡಿಕೊಂಡು ಬದುಕಬೇಕಾದವರು. ಅವರು ಶೀಘ್ರ ಗುಣಮಖರಾಗಿ ಸಮಾಜಸೇವೆಯಲ್ಲಿ ತೊಡಗಲಿ’ ಎಂದು ಹಾರೈಕೆ ಮಾಡಿದರು.

ಟಾಪ್ ನ್ಯೂಸ್

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು

Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್ ವಾಹನ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

Belthangady ಓರ್ವ ಮತದಾರನಿಂದ ಕೈ ತಪ್ಪುತ್ತಿತ್ತು ಶೇ.100 ಸಾಧನೆ

Belthangady ಓರ್ವ ಮತದಾರನಿಂದ ಕೈ ತಪ್ಪುತ್ತಿತ್ತು ಶೇ.100 ಸಾಧನೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ನಾರಿಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.