ದ.ಕ. ಜಿಲ್ಲೆಯಲ್ಲಿ  35,460 ಎಕ್ರೆ ಭತ್ತ ನಾಟಿ


Team Udayavani, Aug 5, 2017, 8:27 AM IST

05-MLR-2.jpg

ಮಂಗಳೂರು: ದ.ಕ. ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳು ಬಿರುಸುಗೊಂಡಿದ್ದು ಇದುವರೆಗೆ 35,460 ಎಕ್ರೆ ಭೂಮಿಯಲ್ಲಿ ಭತ್ತದ ನಾಟಿ ಮಾಡಲಾಗಿದೆ.

ಮಂಗಳೂರು ತಾಲೂಕಿನಲ್ಲಿ 3,000 ಹೆಕ್ಟೇರ್‌ (7,410 ಎಕ್ರೆ), ಬಂಟ್ವಾಳ- 5,200 ಹೆಕ್ಟೇರ್‌ (12,844 ಎಕ್ರೆ), ಬೆಳ್ತಂಗಡಿ-4,550 ಹೆಕ್ಟೇರ್‌ (11,238 ಎಕ್ರೆ), ಪುತ್ತೂರು-1,250 (3,087 ಎಕ್ರೆ) ಹೆಕ್ಟೇರ್‌ ಹಾಗೂ ಸುಳ್ಯ ತಾಲೂಕಿನಲ್ಲಿ 350 ಹೆಕ್ಟೇರ್‌ (864 ಎಕ್ರೆ) ಭೂಮಿಯಲ್ಲಿ ಭತ್ತದ ಕೃಷಿ ಮಾಡಲಾಗಿದೆ.

ಜಿಲ್ಲೆಯಲ್ಲಿ 2015-16ರಲ್ಲಿ ಮುಂಗಾರು, ಹಿಂಗಾರು ಹಾಗೂ ಬೇಸಗೆ ಸೇರಿ 2013-14ರಲ್ಲಿ 56,452 ಹೆಕ್ಟೇರ್‌, 2014-15ರಲ್ಲಿ 53,640 ಹೆಕ್ಟೇರ್‌, 48,689 ಹೆಕ್ಟೇರ್‌ ಹಾಗೂ 2016-17ರಲ್ಲಿ 43,282 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಕೃಷಿ ಮಾಡಲಾಗಿತ್ತು. 

ಜಿಲ್ಲೆಯಲ್ಲಿ ಭತ್ತದ ಕೃಷಿಗೆ ಸುಮಾರು 504 ಕ್ವಿಂಟಾಲ್‌ ಬಿತ್ತನೆ ಬೀಜವನ್ನು ವಿತರಿಸಲಾಗಿದೆ. ರಾಜ್ಯ ಸರಕಾರವು ರೈತರಿಗೆ ಬಿತ್ತನೆ ಬೀಜ ರಿಯಾಯಿತಿ ದರದಲ್ಲಿ ಖರೀದಿಸಲು ಸಹಾಯಧನವನ್ನೂ ನೀಡುತ್ತಿದೆ. ರಸಗೊಬ್ಬರದ ಕೊರತೆಯಾಗದಂತೆ ಪ್ರಸಕ್ತ ಖಾರೀಫ್‌ ಸೀಸನ್‌ನಲ್ಲಿ 9,330 ಟನ್‌ ರಸಗೊಬ್ಬರ ವಿರಿಸುವ ಗುರಿ ಹೊಂದಿದ್ದು, ಈ ಪೈಕಿ ಈಗಾಗಲೇ 7,500 ಟನ್‌ ವಿತರಿಸಲಾಗಿದೆ. ಇನ್ನೂ 1,750 ಟನ್‌ ಸಂಗ್ರಹಿಸಿಡಲಾಗಿದೆ. 
ಖಾಸಗಿ ವಿತರಕರಲ್ಲದೆ ವಿವಿಧ ಸಹಕಾರ ಸಂಘಗಳು, ಸೊಸೈಟಿಗಳ ಮೂಲಕವೂ ರಸಗೊಬ್ಬರವನ್ನು ರೈತರು ಖರೀದಿಸುತ್ತಿದ್ದಾರೆ.

ಕೃಷಿ ಯಂತ್ರಧಾರೆ ಯೋಜನೆ
ರೈತರಿಗೆ ಕೃಷಿಯಂತ್ರ ಹಾಗೂ ಇನ್ನಿತರ ಉಪಕರಣಗಳನ್ನು ಬಾಡಿಗೆ ಆಧಾರದಲ್ಲಿ ಒದಗಿಸಲು ಕೃಷಿ ಯಂತ್ರಧಾರೆ ಯೋಜನೆ ಜಾರಿಗೆ ತರಲಾಗಿದೆ. ಈ ಕೇಂದ್ರಗಳ ಮೂಲಕ ರೈತರಿಗೆ ಕೃಷಿ ಯಂತ್ರೋಪಕರಣಗಳನ್ನು ಅತ್ಯಲ್ಪ ದರದಲ್ಲಿ ಬಾಡಿಗೆಗೆ ನೀಡಲಾಗುತ್ತಿದೆ. ಟಿಲ್ಲರ್‌, ಟ್ರಾಕ್ಟರ್‌, ನಾಟಿಯಂತ್ರ, ಸ್ಪೇಯರ್‌, ಕಳೆ ನಿಯಂತ್ರಣ ಯಂತ್ರ, ಒಕ್ಕಣೆ ಯಂತ್ರ (ನೇಜಿ ಕಟಾವು ಯಂತ್ರ) ಮ¤ತಿತರ ಯಾಂತ್ರೀಕೃತ ಉಪಕರಣಗಳನ್ನು ರೈತರು ಬಾಡಿಗೆಗೆ ಪಡೆಯಬಹುದಾಗಿದೆ. ಜಿಲ್ಲೆಯ 11 ಹೋಬಳಿ ಕೇಂದ್ರದಲ್ಲಿ ಕೃಷಿ ಯಂತ್ರಧಾರೆ ಕೇಂದ್ರ ತೆರೆಯಲಾಗಿದ್ದು, ಈ ಕೇಂದ್ರಗಳ ಮೂಲಕ ರೈತರಿಗೆ ಯಂತ್ರಗಳನ್ನು ಕಡಿಮೆ ಬಾಡಿಗೆ ದರದಲ್ಲಿ ಒದಗಿಸಲಾಗುತ್ತಿದೆ. ಯಂತ್ರಗಳ ಮೂಲಕ ಭತ್ತದ ನಾಟಿ ಮಾಡುವ ರೈತರಿಗೆ ಪ್ರತೀ ಎಕ್ರೆಗೆ 1,600 ರೂ.ರಂತೆ ರಾಜ್ಯ ಸರಕಾರ ಪ್ರೋತ್ಸಾಹಧನವನ್ನೂ ನೀಡುತ್ತಿದ್ದು ಜಿಲ್ಲೆಯಲ್ಲಿ ಈವರೆಗೆ 8497 ರೈತರು ಕೃಷಿ ಯಂತ್ರಧಾರೆ ಪ್ರಯೋಜನ ಪಡೆದಿದ್ದಾರೆ. ರೈತರಿಗೆ ಶೇ.90ರಷ್ಟು ರಿಯಾಯಿತಿ ದರದಲ್ಲಿ ತುಂತುರು ನೀರಾವರಿ ಘಟಕ, ಸಾಮಾನ್ಯ ರೈತರಿಗೆ ಶೇ. 50 ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರಿಗೆ ಶೇ. 75ರ ರಿಯಾಯಿತಿ ದರದಲ್ಲಿ ಕೃಷಿ ಸುಣ್ಣ, ಸಾವಯವ ಗೊಬ್ಬರವನ್ನು ಬೇಡಿಕೆಯನುಸಾರ ಪೂರೈಸಲಾಗುತ್ತಿದೆ. ಕಳೆದ 4 ವರ್ಷದಲ್ಲಿ 1.35 ಕೋ.ರೂ. ಅನುದಾನದಲ್ಲಿ 205 ಪವರ್‌ ಟಿಲ್ಲರ್‌ ಹಾಗೂ 2.69 ಕೋ.ರೂ. ಅನುದಾನದಲ್ಲಿ 2,168 ಪವರ್‌ ವೀಡರ್‌ ವಿತರಿಸಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಕೆಂಪೇಗೌಡ ತಿಳಿಸಿದ್ದಾರೆ.

ಟಾಪ್ ನ್ಯೂಸ್

priyanka gandhi (2)

Modi ಮದುವೆ ಮನೆಯಲ್ಲಿ ಕೂತ ಮಾವ ಇದ್ದಂತೆ: ಪ್ರಿಯಾಂಕಾ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ

Congress 1.20 ಲಕ್ಷಕ್ಕೂ ಅಧಿಕ ಮತಗಳ ಗೆಲುವು: ಪದ್ಮರಾಜ್‌ ಆರ್‌.

Congress 1.20 ಲಕ್ಷಕ್ಕೂ ಅಧಿಕ ಮತಗಳ ಗೆಲುವು: ಪದ್ಮರಾಜ್‌ ಆರ್‌.

BJP ಅಭೂತಪೂರ್ವ ವಿಜಯದ ವಿಶ್ವಾಸ: ಕಾ| ಬೃಜೇಶ್‌ ಚೌಟ

BJP ಅಭೂತಪೂರ್ವ ವಿಜಯದ ವಿಶ್ವಾಸ: ಕಾ| ಬೃಜೇಶ್‌ ಚೌಟ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

priyanka gandhi (2)

Modi ಮದುವೆ ಮನೆಯಲ್ಲಿ ಕೂತ ಮಾವ ಇದ್ದಂತೆ: ಪ್ರಿಯಾಂಕಾ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.