1,000 ತ್ಯಾಜ್ಯ ಜೈವಿಕ ಅನಿಲ ಸ್ಥಾವರ ಸ್ಥಾಪನೆ


Team Udayavani, Aug 22, 2017, 6:15 AM IST

2108mlr44-zp.jpg

ಮಂಗಳೂರು: ದಕ್ಷಿಣ ಕನ್ನಡ ಜಿಲೆಯಲ್ಲಿ ಕೇಂದ್ರ ನವೀಕರಿಸಬಹುದಾದ ಇಂಧನಗಳ ಸಚಿ ವಾಲಯದ ನೆರವಿನೊಂದಿಗೆ 1,000 ತ್ಯಾಜ್ಯ ಜೈವಿಕ ಅನಿಲ ಉತ್ಪಾದನಾ ಸ್ಥಾವರ ಗಳನ್ನು ಸ್ಥಾಪಿಸುವ ಗುರಿ ಹೊಂದ ಲಾಗಿದೆ ಎಂದು ದ.ಕ. ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ| ಎಂ.ಆರ್‌. ರವಿ ಹೇಳಿದರು.

ಸ್ವತ್ಛ ಭಾರತ್‌ ಮಿಶನ್‌ನಡಿ ದ.ಕ. ಜಿ.ಪಂ. ನಲ್ಲಿ ಸೋಮವಾರ ಆಯೋಜಿಸಿದ್ದ “ನಮ್ಮ ಮನೆ ನಮ್ಮ ತ್ಯಾಜ್ಯ’ ಮಾಹಿತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಕೇಂದ್ರ ಸರಕಾರದ ನವೀಕರಿಸ ಬಹುದಾದ ಇಂಧನಗಳ ಸಚಿವಾಲಯ ಈಗಾಗಲೇ ದ.ಕ. ಜಿಲ್ಲೆಗೆ ತ್ಯಾಜ್ಯದಿಂದ ಜೈವಿಕ ಅನಿಲ ಉತ್ಪಾದಿಸುವ 1,000 ಸ್ಥಾವರಗಳನ್ನು ಸ್ಥಾಪಿಸುವ ಗುರಿಯನ್ನು ನಿಗದಿಪಡಿಸಿದೆ. ಇದಕ್ಕೆ 12,000 ರೂ. ವರೆಗೆ ಸಹಾಯಧನವಿದೆ. ಇದೇ ರೀತಿ ಬೇರೆ ಯೋಜನೆಗಳ ಮೂಲಕ ಇನ್ನೂ 1,000 ಘಟಕಗಳನ್ನು ಸ್ಥಾಪಿಸಲು ಯೋಜಿಸಲಾಗಿದೆ ಎಂದರು.

ಅಡುಗೆ ತ್ಯಾಜ್ಯದಿಂದ ಜೈವಿಕ ಅನಿಲ ಘಟಕಗಳ ಸ್ಥಾಪನೆ ಕುರಿತಂತೆ ದ.ಕ. ಜಿಲ್ಲಾ ಪಂಚಾಯತ್‌ ವತಿಯಿಂದ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಜಿ.ಪಂ. ಸಿಇಒ, ಜಿ.ಪಂ. ಕ್ಯಾಂಟೀನ್‌, ಸರಕಾರಿ ವಿದ್ಯಾರ್ಥಿನಿಲಯಗಳಲ್ಲಿ ಅಳ ವಡಿಸಲಾಗಿದೆ. ವಿವಿಧ ಇಲಾಖೆ ಗಳ 133 ಸರಕಾರಿ ವಸತಿಗೃಹಗಳಲ್ಲಿ ಘಟಕಗಳ ಸ್ಥಾಪನೆ ಕುರಿತು ಆಯಾಯ ಇಲಾಖೆಗಳಿಗೆ ಪ್ರಸ್ತಾವನೆ ಕಳು ಹಿಸ ಲಾಗಿದೆ. ಇದರಲ್ಲಿ 24 ವಸತಿ ನಿಲಯ ಗಳಲ್ಲಿ ಸಿಎಸ್‌ಆರ್‌ ನೆರವಿನೊಂದಿಗೆ ಈಗಾಗಲೇ ಅಳವಡಿಸಲಾಗಿದೆ ಎಂದು ಡಾ| ರವಿ ವಿವರಿಸಿದರು.

ತ್ಯಾಜ್ಯವೂ ಸಂಪನ್ಮೂಲ
ಮನೆ ತ್ಯಾಜ್ಯವನ್ನು ಪರಿಣಾಮ ಕಾರಿಯಾಗಿ ನಿರ್ವಹಿಸುವುದರ ಜತೆಗೆ ಇದನ್ನು ಸಂಪನ್ಮೂಲವಾಗಿ ಪರಿವರ್ತಿಸಿ ಮರುಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಆಯೋ ಜಿಸಲಾಗಿದೆ. ಪ್ರತಿಯೊಂದು ಮನೆ, ಶಿಕ್ಷಣ ಸಂಸ್ಥೆಗಳು, ವೈದ್ಯಕೀಯ ಕಾಲೇಜುಗಳು, ಹೊಟೇಲ್‌ಗ‌ಳು ತಮ್ಮಲ್ಲೇ ಅಡುಗೆ ಜೈವಿಕ ಅನಿಲ ಘಟಕ ಗಳನ್ನು ಸ್ಥಾಪಿಸಿ ತ್ಯಾಜ್ಯ ನಿರ್ವ ಹಣೆ ಜತೆಗೆ ಅಡುಗೆ ಅನಿಲ ಪಡೆಯ ಬಹು ದಾಗಿದೆ. ಇದರಿಂದ ದೊರೆಯುವ ದ್ರವ ತ್ಯಾಜ್ಯವನ್ನು ಗೊಬ್ಬರವಾಗಿ ಗಿಡ ಗಳಿಗೆ ಬಳಸಬಹುದಾಗಿದೆ ಎಂದವರು ವಿವರಿಸಿದರು.

ಉಪಯುಕ್ತ ಯೋಜನೆ
ಕಾರ್ಯಕ್ರಮ ಉದ್ಘಾಟಿಸಿದ ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅವರು ಮನೆ ತ್ಯಾಜ್ಯ ದಿಂದ ಜೈವಿಕ ಅನಿಲ ಉತ್ಪಾ ದನೆ ಘಟಕ ಸ್ಥಾಪನೆ ಉಪಯುಕ್ತ ಯೋಜನೆ ಯಾಗಿದೆ ಎಂದರು.

ಕಟಪಾಡಿ ವಿಜಯಾ ಇಂಡಸ್ಟ್ರೀಸ್‌ನ ಸತ್ಯೆಂದ್ರ ಪೈ ಅವರು ಮನೆ ತ್ಯಾಜ್ಯ ಅನಿಲ ಘಟಕ ಸ್ಥಾವರದ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾ ಪಂಚಾ ಯತ್‌ ಉಪಾಧ್ಯಕ್ಷೆ ಕಸ್ತೂರಿ ಪಂಜ, ಸದಸ್ಯ ಧರಣೇಂದ್ರ ಕುಮಾರ್‌ ಉಪಸ್ಥಿತ ರಿದ್ದರು. ಜಿ.ಪಂ. ಕಾರ್ಯ ದರ್ಶಿ ಎನ್‌.ಆರ್‌. ಉಮೇಶ್‌ ಸ್ವಾಗತಿಸಿದರು. ಸ್ವತ್ಛ ಭಾರತ್‌ ಯೋಜನೆ ಜಿಲ್ಲಾ ಸಂಯೋ ಜಕಿ ಮಂಜುಳಾ ಅವರು ನಿರೂಪಿಸಿದರು.

ಜೈವಿಕ ಇಂಧನ ಘಟಕ
ಅಡುಗೆ ತ್ಯಾಜ್ಯ ಇಂಧನ ಘಟಕ ವಿವಿಧ ಸಾಮರ್ಥ್ಯಗಳಲ್ಲಿ ಅಳವಡಿಸ ಬಹುದಾಗಿದೆ. ಉತ್ಪತ್ತಿಯಾಗುವ ಅಡುಗೆ ತ್ಯಾಜ್ಯದ ಪ್ರಮಾಣದ ಮೇಲೆ ಘಟಕದ ಸಾಮರ್ಥ್ಯ ಅಡಗಿದೆ. ಸಾಮಾನ್ಯವಾಗಿ ಮನೆಗಳಲ್ಲಿ 5 ಕೆಜಿ ವರೆಗೆ ಅಡುಗೆ ತ್ಯಾಜ್ಯ ಉತ್ಪತಿಯಾಗಲು ಸಾಧ್ಯವಿದೆ. ಈ ಹಿನ್ನೆಲೆಯಲ್ಲಿ ಮನೆಗಳಿಗೆ ಈ ಪ್ರಮಾಣದ ಘಟಕವನ್ನು ಅಳವಡಿಸಬಹುದಾಗಿದೆ. ಕ್ಯಾಂಟೀನ್‌, ವಸತಿ ನಿಲಯ ಗಳಲ್ಲಿ ಅಲ್ಲಿ ಉತ್ಪತ್ತಿಯಾಗುವ ತ್ಯಾಜ್ಯದ ಪ್ರಮಾಣದ ಮೇಲೆ ಘಟಕ ಗಳನ್ನು ಅಳವಡಿಸಲಾಗುತ್ತಿದೆ. ಅನ್ನ, ಸಾಂಬಾರು, ಚಪಾತಿ, ಗಂಜಿ ನೀರು (ತೆಳಿ), ತರಕಾರಿ ತ್ಯಾಜ್ಯಗಳು, ಚಹಾ ಮತ್ತು ಕಾಫಿಯ ತ್ಯಾಜ್ಯ ಮುಂತಾದ ತ್ಯಾಜ್ಯಗಳನ್ನು ಇದಕ್ಕೆ ಬಳಸ ಬಹುದಾಗಿದೆ ಎಂದು ಸತ್ಯೇಂದ್ರ ಪೈ ವಿವರಿಸಿದರು.

ಟಾಪ್ ನ್ಯೂಸ್

ಯಾರಿಂದಲೂ ರಾಜ್ಯ ಸರ್ಕಾರ ಅಲ್ಲಾಡಿಸಲು ಆಗಲ್ಲ: ಬೇಳೂರು

Gopal Krishna Belur ಯಾರಿಂದಲೂ ರಾಜ್ಯ ಸರ್ಕಾರ ಅಲ್ಲಾಡಿಸಲು ಆಗಲ್ಲ

20

Sandalwood: ದರ್ಶನ್‌ ʼಡೆವಿಲ್‌ʼಗೆ ಕರಾವಳಿ ಬೆಡಗಿ ರಚನಾ ರೈ ನಾಯಕಿ; ಫಸ್ಟ್‌ ಪೋಸ್ಟರ್‌ ಔಟ್

satish jarakiholi

Belagavi,ಚಿಕ್ಕೋಡಿ ಸೇರಿ 14 ರಿಂದ 17 ಸೀಟು ಕಾಂಗ್ರೆಸ್ ಗೆಲ್ಲಲಿದೆ: ಸತೀಶ್ ಜಾರಕಿಹೊಳಿ

Shivraj tangadagi

Prajwal Revanna ಬಂಧನಕ್ಕೆ ಕೇಂದ್ರ ಸರಕಾರದಿಂದ ಅಸಹಕಾರ: ಸಚಿವ ತಂಗಡಗಿ

1-qwewe

Odisha ಜನರು ನಿಂದನೀಯ ಭಾಷೆ ಮೆಚ್ಚಿಕೊಳ್ಳುವುದಿಲ್ಲ:ಬಿಜೆಪಿಗೆ ಪಟ್ನಾಯಕ್ ತಿರುಗೇಟು

6-rabakavi

Rabkavi Banhatti: ಶತಮಾನದ ಸೋಮವಾರಪೇಟೆ ಸಮಸ್ತ ದೈವ ಮಂಡಳಿಯ ಗರಡಿ ಮನೆ

Ramanagara: ಈಜಲು ಹೋಗಿ‌ದ್ದ ಮೂವರು ಮಕ್ಕಳು ನೀರುಪಾಲು

Ramanagara: ಈಜಲು ಹೋಗಿ‌ದ್ದ ಮೂವರು ಮಕ್ಕಳು ನೀರುಪಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5

ಲಕ್ಷದ್ವೀಪ ಪ್ರವಾಸೋದ್ಯಮದ ಅವಕಾಶ ಬಳಸಿಕೊಳ್ಳುವಲ್ಲಿ ಮಂಗಳೂರು ಹಿನ್ನಡೆ

Mangaluru: ನಾಪತ್ತೆಯಾಗಿದ್ದ ಮಹಿಳೆ ವಿಮಾನ ನಿಲ್ದಾಣದಲ್ಲಿ ಪ್ರತ್ಯಕ್ಷ!

Mangaluru: ನಾಪತ್ತೆಯಾಗಿದ್ದ ಮಹಿಳೆ ವಿಮಾನ ನಿಲ್ದಾಣದಲ್ಲಿ ಪ್ರತ್ಯಕ್ಷ!

Theft Case: ಮನೆಯಿಂದ ಚಿನ್ನಾಭರಣ ಕಳವು

Theft Case: ಮನೆಯಿಂದ ಚಿನ್ನಾಭರಣ ಕಳವು

Ullal; ಸ್ಕೂಟರ್ ಗಳ ಢಿಕ್ಕಿ; ಸಹಸವಾರ ಮೃತ್ಯು

Ullal; ಸ್ಕೂಟರ್ ಗಳ ಢಿಕ್ಕಿ; ಸಹಸವಾರ ಮೃತ್ಯು

“ಫೆಡೆಕ್ಸ್‌ ಪಾರ್ಸೆಲ್‌’ ಹೆಸರಲ್ಲಿ ಸೈಬರ್‌ ವಂಚಕರಿಂದ “ಗಾಳ’

“ಫೆಡೆಕ್ಸ್‌ ಪಾರ್ಸೆಲ್‌’ ಹೆಸರಲ್ಲಿ ಸೈಬರ್‌ ವಂಚಕರಿಂದ “ಗಾಳ’

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

1-qwewqewqe

Governor ಸಹಿ ನಕಲಿ ; ಕೋಟ್ಯಂತರ ರೂ. ವಂಚನೆ: ಕೊರಟಗೆರೆಯ ಜುಬೇರ್ ಅರೆಸ್ಟ್

ಯಾರಿಂದಲೂ ರಾಜ್ಯ ಸರ್ಕಾರ ಅಲ್ಲಾಡಿಸಲು ಆಗಲ್ಲ: ಬೇಳೂರು

Gopal Krishna Belur ಯಾರಿಂದಲೂ ರಾಜ್ಯ ಸರ್ಕಾರ ಅಲ್ಲಾಡಿಸಲು ಆಗಲ್ಲ

20

Sandalwood: ದರ್ಶನ್‌ ʼಡೆವಿಲ್‌ʼಗೆ ಕರಾವಳಿ ಬೆಡಗಿ ರಚನಾ ರೈ ನಾಯಕಿ; ಫಸ್ಟ್‌ ಪೋಸ್ಟರ್‌ ಔಟ್

1——-qweweqw

Dr.G. Parameshwara ಹೆಸರು ದುರ್ಬಳಕೆ: ಕಾಂಗ್ರೆಸ್ ನಿಂದ ಮೊಹಮ್ಮದ್ ಜುಬೇರ್ ಉಚ್ಛಾಟನೆ

satish jarakiholi

Belagavi,ಚಿಕ್ಕೋಡಿ ಸೇರಿ 14 ರಿಂದ 17 ಸೀಟು ಕಾಂಗ್ರೆಸ್ ಗೆಲ್ಲಲಿದೆ: ಸತೀಶ್ ಜಾರಕಿಹೊಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.