ದಿನನಿತ್ಯ ಮೂರುವರೆ ಲಕ್ಷ ಲೀಟರ್‌ ನೀರಿನ ಅಗತ್ಯವಿದ್ದರೂ ಕೊರತೆಯಿಲ್ಲ

Team Udayavani, Apr 29, 2018, 6:15 AM IST

2804mlr1-pilikula2.jpg

ಮಹಾನಗರ: ಡಾ| ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದಲ್ಲಿ ಬೇಸಗೆ ಬಂತೆಂದರೆ ಸಾಕು ಪ್ರವಾಸಿಗರ ಸಂಖ್ಯೆ ದುಪ್ಪಟ್ಟಾಗುತ್ತದೆ. ಇದರ ಜತೆಗೆ ಬೇಸಗೆಯಲ್ಲಿ ಇಲ್ಲಿ ನೀರಿನ ಬೇಡಿಕೆಯೂ ಹೆಚ್ಚಲಿದ್ದು, ಈಗ ಪ್ರತಿದಿನ 3.5 ಲಕ್ಷ ಲೀಟರ್‌ ನೀರಿನ ಆವಶ್ಯಕತೆ ಇದ್ದರೂ ಯಾವುದೇ ಕೊರತೆ ಕಂಡುಬಂದಿಲ್ಲ. 

ಬೇಸಗೆಯಲ್ಲಿ ಇಲ್ಲಿನ ಗಾರ್ಡನ್‌ಗಳಿಗೆ ಹೆಚ್ಚಿನ ನೀರಿನ ಆವಶ್ಯಕತೆ ಇರು ತ್ತದೆ. ಜತೆಗೆ ಜೈವಿಕ ಉದ್ಯಾನವನದ ಪ್ರಾಣಿಗಳಿಗೆ ಬಿಸಿಲಿನ ತಾಪದಿಂದ ವಾತಾವರಣವನ್ನು ತಂಪಾಗಿಸಲು ಹೆಚ್ಚಿನ ನೀರು ಬೇಕಾಗು ತ್ತದೆ. ಪ್ರವಾಸಿಗರಿಗೆ ಕುಡಿಯು ವುದಕ್ಕೂ ನೀರು ಬೇಕಾಗುತ್ತದೆ. ಇವೆಲ್ಲ ವನ್ನೂ ಹೊಂದಿಸಿಕೊಳ್ಳುವುದಕ್ಕಾಗಿ ಬೇರೆ ಬೇರೆ ಮೂಲಗಳಿಂದ ನೀರನ್ನು ಬಳಸಿಕೊಳ್ಳಲಾಗುತ್ತಿದೆ. 

ಗುರುಪುರ ನದಿಯಿಂದ ನೀರು
ಪಿಲಿಕುಳಕ್ಕೆ ಪ್ರಮುಖ ನೀರಿನ ಮೂಲವೇ ಗುರುಪುರ ನದಿ. ಗುರುಪುರದ ಸಮೀಪ ನದಿಯ ಬದಿಯಲ್ಲಿ ಪಿಲಿಕುಳದ ಜಾಗದಲ್ಲೇ ಜಾಕ್‌ವೆಲ್‌ ನಿರ್ಮಿಸಲಾಗಿದೆ. ಇದರಲ್ಲಿ 60 ಎಚ್‌ಪಿ ಹಾಗೂ 30 ಎಚ್‌ಪಿಗಳ 2 ಪುಂಪ್‌ಗ್ಳ ಮೂಲಕ ನೀರನ್ನು ಎತ್ತಲಾಗುತ್ತದೆ. ಈ ಎರಡು ಪಂಪ್‌ಗ್ಳ ಮೂಲಕ ಬೆಳಗ್ಗೆ 8ರಿಂದ ಸಂಜೆ 5ರ ವರೆಗೆ ತಲಾ ಒಂದು ಲಕ್ಷ ಲೀಟರ್‌ ನೀರನ್ನು ಎತ್ತಲಾಗುತ್ತದೆ.
 
ಒಂದು ಲಕ್ಷ ಲೀಟರ್‌ ನೀರು ಜೈವಿಕ 
ಉದ್ಯಾನವನದ ಪ್ರಾಣಿಗಳಿಗೆ ಉಪ ಯೋಗಿಸಲಾಗುತ್ತದೆ. ಜಾಕ್‌ವೆಲ್‌ ಮೂಲಕ ಎತ್ತಿದ ನೀರನ್ನು ಪ್ರವಾಸಿಗರಿಗೆ
ಕುಡಿಯುವುದಕ್ಕೂಬಳಸುವುದರಿಂದ ಶುದ್ಧೀಕರಿಸಿಯೇ ಉಪಯೋಗಿಸಲಾ ಗುತ್ತದೆ. ಜತೆಗೆ ಇಲ್ಲಿನ ಗಾರ್ಡನ್‌ಗಳಿಗೆ ಹೇರಳವಾಗಿ ನೀರು ಬೇಕಿರುವುದರಿಂದ ಇದಕ್ಕೆ ಪಾಲಿಕೆಯ ಡ್ರೈನೇಜ್‌ ನೀರನ್ನು ಖಾಸಗಿ ಸಂಸ್ಥೆಯ ಮೂಲಕ ಶುದ್ಧೀಕರಿಸಿ ಬಳಸಲಾಗುತ್ತದೆ. ಪ್ರತಿನಿತ್ಯ ಸುಮಾರು 1.5 ಎಂಎಲ್‌ಡಿ ಶುದ್ಧೀಕರಿಸಿದ ನೀರು ಲಭ್ಯವಾಗುತ್ತದೆ. 

ಟ್ಯಾಂಕ್‌ಗಳ ಮೂಲಕ ಸಂಗ್ರಹ
ನಿಸರ್ಗಧಾಮದಲ್ಲಿ ಈಗ 5 ಕೊಳವೆಬಾವಿಗಳಿದ್ದು, ಹೆಚ್ಚಾಗಿ ಪ್ರವಾಸಿ ಗರ ಕುಡಿಯುವದಕ್ಕಾಗಿ ಇದನ್ನು ಉಪ ಯೋಗಿಸಲಾಗುತ್ತದೆ. 2 ಲಕ್ಷ ಲೀ. ಹಾಗೂ 1.5 ಲಕ್ಷ ಲೀ. ಸಾಮರ್ಥ್ಯದ 2 ಅಂಡರ್‌ಗ್ರೌಂಡ್‌ ಟ್ಯಾಂಕ್‌ಗಳ ಮೂಲಕ ನೀರು ಸಂಗ್ರಹಿಸಲಾಗುತ್ತಿದೆ. ಜತೆಗೆ ಕಳೆದ ವರ್ಷ 1 ಲಕ್ಷ ಲೀಟರ್‌ ಸಾಮರ್ಥ್ಯದ ಹೊಸ ಟ್ಯಾಂಕ್‌ ನಿರ್ಮಿಸವಾಗಿದೆ. 

ದೋಣಿ ವಿಹಾರ ಪ್ರದೇಶದಲ್ಲಿ ಕೆರೆಗಳಲ್ಲೂ ಸಾಕಷ್ಟು ನೀರಿದ್ದು, ಇದರ ನೀರನ್ನು ಉಪಯೋಗಿಸುವುದು ಕಡಿಮೆ. ಆದರೆ  ಅಲ್ಲಿನ ಗಿಡಗಳಿಗೆ ಅದೇ ನೀರು ಉಪ ಯೋಗವಾಗುತ್ತದೆ. ಈ ರೀತಿಯಲ್ಲಿ ನಿಸರ್ಗ ಧಾಮದ ನಿರ್ವಹಣೆಗೆ ಬೇಸಗೆಯಲ್ಲಿ ಹೆಚ್ಚಿನ ನೀರು ಆವಶ್ಯಕತೆ ಇರುವುದರಿಂದ ಎಲ್ಲೂ ಕೂಡ ನೀರಿನ ತೊಂದರೆ ಎದುರಾಗಬಾರದು ಎಂಬ ಕಾರಣಕ್ಕೆ ಇಲ್ಲಿನ ಆಡಳಿತ ಮಂಡಳಿ ಎಲ್ಲ ವ್ಯವಸ್ಥೆ ಮಾಡಿದೆ. 

ಅತಿ ಹೆಚ್ಚಿನ ಪ್ರವಾಸಿಗರು
ಎಪ್ರಿಲ್‌-ಮೇ ತಿಂಗಳು ರಜೆಯ ಅವಧಿಯಾದ ಕಾರಣ ಈ ಸಂದರ್ಭ ಪಿಲಿಕುಳಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಿರುತ್ತದೆ. ಅದರಲ್ಲೂ ಈ ತಿಂಗಳುಗಳ ಶನಿವಾರ-ರವಿವಾರ ಹೆಚ್ಚಿನ ಪ್ರವಾಸಿಗರು ಇರುತ್ತಾರೆ. ಎ. 21ರ ಶನಿವಾರ 3 ಸಾವಿರ, ಎ. 22ರ ರವಿವಾರ 5,500 ಪ್ರವಾಸಿಗರು ಆಗಮಿಸಿದ್ದರು. ಎ. 15ರಂದು ರವಿವಾರ ಪ್ರವಾಸಿಗರ ಸಂಖ್ಯೆ 6 ಸಾವಿರ ದಾಟಿತ್ತು. ಈಗ ಪ್ರತಿದಿನ ಸರಾಸರಿ 3 ಸಾವಿರದಷ್ಟು ಪ್ರವಾಸಿಗರು ಆಗಮಿಸುತ್ತಾರೆ ಎಂದು ಅಧಿಕಾರಿಗಳು ತಿಳಿಸುತ್ತಾರೆ. 

 ನೀರಿನ ಸಮಸ್ಯೆ ಇಲ್ಲ
ಈಗ ಪಿಲಿಕುಳದಲ್ಲಿ ಯಾವುದೇ ರೀತಿಯಲ್ಲಿ ನೀರಿನ ತೊಂದರೆ ಇಲ್ಲ. ಎಲ್ಲ  ವಿಭಾಗಗಳಿಗೂ ಅನುಕೂಲವಾಗುವಂತೆ ನೀರಿನ ವ್ಯವಸ್ಥೆಗಳನ್ನು ಮಾಡಲಾಗಿದೆ.

– ವಿ.ಪ್ರಸನ್ನ, ಕಾರ್ಯನಿರ್ವಾಹಕ ನಿರ್ದೇಶಕರು, ಪಿಲಿಕುಳ ನಿಸರ್ಗಧಾಮ

– ಕಿರಣ್‌ ಸರಪಾಡಿ

ಟಾಪ್ ನ್ಯೂಸ್

2-baikampady

Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

by-raghavendra

Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ

ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-baikampady

Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ

Congress 1.20 ಲಕ್ಷಕ್ಕೂ ಅಧಿಕ ಮತಗಳ ಗೆಲುವು: ಪದ್ಮರಾಜ್‌ ಆರ್‌.

Congress 1.20 ಲಕ್ಷಕ್ಕೂ ಅಧಿಕ ಮತಗಳ ಗೆಲುವು: ಪದ್ಮರಾಜ್‌ ಆರ್‌.

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

2-baikampady

Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ

Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

by-raghavendra

Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.