“ಗ್ಯಾಸ್‌ ಇನ್ಸುಲೇಟೆಡ್‌ ಸಬ್‌ಸ್ಟೇಶ‌ನ್‌’ ಕಡತದಲ್ಲೇ ಬಾಕಿ!

ಮೆಸ್ಕಾಂ ಸಬ್‌ ಸ್ಟೇಶ‌ನ್‌ ಮೇಲ್ದರ್ಜೆಗೇರಿಸುವ ಯೋಜನೆ

Team Udayavani, Dec 19, 2019, 3:05 AM IST

XC-23

ಮಹಾನಗರ: ನಗರದ ನೆಹರೂ ಮೈದಾನದ ಬಳಿ ಇರುವ ಮೆಸ್ಕಾಂನ 33 ಕೆ.ವಿ. ಸಾಮರ್ಥ್ಯದ ಸಬ್‌ ಸ್ಟೇಶ‌ನ್‌ ಅನ್ನು ದ.ಕ. ಜಿಲ್ಲೆಯ ಮೊದಲ 110 ಕೆ.ವಿ.ಯ ಅತ್ಯಾಧುನಿಕ ತಂತ್ರಜ್ಞಾನದ ಜಿಐಎಸ್‌(ಗ್ಯಾಸ್‌ ಇನ್ಸುಲೇಟೆಡ್‌ ಸ್ಟೇಶ‌ನ್‌) ಆಗಿ ಮೇಲ್ದರ್ಜೆಗೇರಿಸುವ ಯೋಜನೆ ಸದ್ಯ ಕಡತದಲ್ಲಿಯೇ ಬಾಕಿಯಾಗಿದೆ !

ಕಳೆದ ವರ್ಷ ಈ ಯೋಜನೆ ಆರಂಭಿಸುವ ಬಗ್ಗೆ ಕೆಪಿಟಿಸಿಎಲ್‌(ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ) ನಿರ್ಧರಿಸಿತ್ತಾದರೂ ಈ ಬಗ್ಗೆ ಅಂತಿಮ ಕಾರ್ಯರೂಪ ಇನ್ನೂ ಸಿದ್ಧವಾಗಿಲ್ಲ. ಆದರೆ ಯೋಜನೆ ಶೀಘ್ರದಲ್ಲಿ ಕಾರ್ಯರೂಪಕ್ಕೆ ಬರಲಿದ್ದು, ಟೆಂಡರ್‌ ಪ್ರಕ್ರಿಯೆ ಬೇಗನೆ ಆಗಲಿದೆ ಎಂದು ಕೆಪಿಟಿಸಿಎಲ್‌ ಮೂಲಗಳು ತಿಳಿಸಿವೆ.

ಈ ಸಬ್‌ಸ್ಟೇಶ‌ನ್‌ನಿಂದ ಜಿಲ್ಲಾಧಿಕಾರಿ ಕಚೇರಿ ಸಹಿತ ಅಕ್ಕಪಕ್ಕದ ವಿವಿಧ ಭಾಗ ಗಳಿಗೆ ವಿದ್ಯುತ್‌ ಸರಬರಾಜು ಆಗುತ್ತಿದೆ. ಹೀಗಾಗಿ ಸಾಮಾನ್ಯವಾಗಿ ಇಲ್ಲಿ ಒತ್ತಡ ಅಧಿಕವಾಗುತ್ತಿರುವ ಹಿನ್ನೆಲೆಯಲ್ಲಿ ಇದನ್ನು ಜಿಐಎಸ್‌ ತಂತ್ರಜ್ಞಾನದಂತೆ ಮೇಲ್ದರ್ಜೆ ಗೇರಿಸಬೇಕಾದ ಅಗತ್ಯ ಮನಗಂಡು ಮೆಸ್ಕಾಂ ಕಳೆದ ವರ್ಷ ಕೆಪಿಟಿಸಿಎಲ್‌ಗೆ ಪ್ರಸ್ತಾವನೆ ಕಳುಹಿಸಿತ್ತು. ಇದಕ್ಕೆ ಒಪ್ಪಿಗೆ ನೀಡಿರುವ ಕೆಪಿಟಿಸಿಎಲ್‌ ತಾನೇ ಜಿಐಎಸ್‌ ಯೋಜನೆಯನ್ನು ಮಂಗಳೂರಿನಲ್ಲಿ ಕೈಗೆತ್ತಿಕೊಳ್ಳಲು ನಿರ್ಧರಿಸಿತ್ತು. ಈ ಸಂಬಂಧ ಸರ್ವೆ ಕೂಡ ನಡೆಸಲಾಗಿದೆ. ಮೈಸೂರಿನಲ್ಲಿ ಈಗಾಗಲೇ ಅನುಷ್ಠಾನವಾಗಿರುವ ಜಿಐಎಸ್‌ ಕೇಂದ್ರಕ್ಕೆ ಮಂಗಳೂರಿನ ಕೆಪಿಟಿಸಿಎಲ್‌ ತಂಡ ಭೇಟಿ ನೀಡಿ ಅಲ್ಲಿನ ಯೋಜನ ಹಂತದ ಬಗ್ಗೆ ಅಧ್ಯಯನ ಕೂಡ ನಡೆಸಿದೆ. ಅದರಂತೆ ವರದಿ ಸಿದ್ಧಗೊಳಿಸಿ ಬೆಂಗಳೂರಿನಲ್ಲಿರುವ ಕೆಪಿಟಿಸಿಎಲ್‌ ಕೇಂದ್ರ ಕಚೇರಿಗೆ ಸಲ್ಲಿಸಲಾಗಿತ್ತು.
ಬಳಿಕ ಜಿಎಸ್‌ಟಿ ಸಹಿತ ವಿವಿಧ ವಿಚಾರಗಳ ಪ್ರಶ್ನೆಗಳೊಂದಿಗೆ ಕಡತ ಕಚೇರಿಯಿಂದ ಕಚೇರಿಗೆ ಬದಲಾವಣೆಯಾಗಿದೆ.

10.5 ಕಿ.ಮೀ.ಉದ್ದದ ಭೂಗತ ಕೇಬಲ್‌
ಕೆಪಿಟಿಸಿಎಲ್‌ನ ಕಾವೂರಿನಲ್ಲಿರುವ 220 ಕೆ.ವಿ. ಶರಾವತಿ ವಿದ್ಯುತ್‌ ಸ್ವೀಕರಣ ಕೇಂದ್ರದಿಂದ ಜಿಲ್ಲೆಯ ಬೇರೆ ಬೇರೆ ಭಾಗದ ಮೆಸ್ಕಾಂ ಸಬ್‌ಸ್ಟೇಶನ್‌ಗೆ ವಿದ್ಯುತ್‌ ಸರಬರಾಜಾಗುತ್ತದೆ. ಇದರಂತೆ ನೆಹರೂ ಮೈದಾನದ ಪಕ್ಕದ ಸಬ್‌ಸ್ಟೇಶನ್‌ಗೆ ವಿದ್ಯುತ್‌ ಸರಬರಾಜಾಗುತ್ತಿದೆ. ಇಲ್ಲಿ ನೂತನ ಜಿಐಎಸ್‌ ಸ್ಟೇಶನ್‌ ಆಗುವ ವೇಳೆಯಲ್ಲಿ ಈಗಿರುವ ಲೈನ್‌ ಅನ್ನು ಬದಲಿಸಿ ಭೂಗತ ಕೇಬಲ್‌ ಅಳವಡಿಸಲಾಗುತ್ತದೆ. ಕಾವೂರಿನಿಂದ ಪದವಿನಂಗಡಿ, ನಂತೂರು, ಮಲ್ಲಿಕಟ್ಟೆ, ಜ್ಯೋತಿ, ಹಂಪನಕಟ್ಟೆ ಆಗಿ ಸ್ಟೇಟ್‌ಬ್ಯಾಂಕ್‌ ಬಸ್‌ನಿಲ್ದಾಣ ಭಾಗದಿಂದ ಸುಮಾರು 10.5 ಕಿ.ಮೀ. ಉದ್ದದ ಭೂಗತ ಕೇಬಲ್‌ ಅಳವಡಿಸುವ ಬಗ್ಗೆ ಕೆಪಿಟಿಸಿಎಲ್‌ ಸರ್ವೆ ನಡೆಸಿದೆ. ಸಬ್‌ ಸ್ಟೇಶನ್‌ ರಚನೆಗೆ ಜರ್ಮನ್‌ನಿಂದ ಉಪಕರಣಗಳು ಆಮದು ಆಗಲಿದೆ ಎಂದು ಮೂಲಗಳು ತಿಳಿಸಿವೆ.

ಏನಿದು ಜಿಐಎಸ್‌ ?
ಜಪಾನಿನಲ್ಲಿ ಪ್ರಥಮವಾಗಿ ಗ್ಯಾಸ್‌ ಇನ್ಸುಲೇಟೆಡ್‌ ವಿಧಾನ ಮೊದಲಿಗೆ ಅಭಿವೃದ್ಧಿªಪಡಿಸಲಾಗಿತ್ತು. ಹೈ ವೋಲ್ಟೆಜ್‌ ವಿದ್ಯುತ್‌ ಪ್ರಸರಣದ ಪ್ರಮುಖ ರಚನೆಗಳನ್ನು ಕಿರಿ ದಾಗಿಸಿ, ಸಲರ್‌ ಹೆಕ್ಸಾಫ‌ೂರಿಡ್‌ ಗ್ಯಾಸ್‌ ಕವಚದಲ್ಲಿ ಮುಚ್ಚಿಡುವ ವಿಧಾನವಾಗಿದೆ. ಬ್ರೇಕರ್‌, ಟ್ರಾನ್‌ಫಾರ್ಮರ್‌ ಯಾರ್ಡ್‌ ಸಣ್ಣ ಕಂಟ್ರೋಲ್‌ ರೂಂನಿಂದ ಇದನ್ನು ನಿಯಂತ್ರಿಸಬಹುದು. ಸಾಮಾನ್ಯವಾಗಿ 110 ಕೆ.ವಿ.ಸಬ್‌ ಸ್ಟೇಶ‌ನ್‌ಗೆ 100 ಚದರ ಮೀ. ನಷ್ಟು ಜಾಗದ ಅಗತ್ಯವಿದ್ದರೆ, ಜಿಐಎಸ್‌ ಸಬ್‌ ಸ್ಟೇಶ‌ನ್‌ಗೆ ಕೇವಲ 30 ಚದರ ಮೀ. ಜಾಗ ಸಾಕಾಗುತ್ತದೆ. ಇದರ ನಿರ್ಮಾಣ ವೆಚ್ಚ ದುಬಾರಿಯಾದರೂ ಆದರೆ ನಿರ್ವಹಣೆ ಸರಳ, ಹೆಚ್ಚು ಹಣ ವ್ಯಯವಾಗುವುದಿಲ್ಲ. ನೆಹರೂ ಮೈದಾನದ ಪಕ್ಕದ ಈಗಿನ ಸಬ್‌ಸ್ಟೇಶ‌ನ್‌ನಲ್ಲಿ 5 ಎಂ.ವಿ.ಎ ಸಾಮ ರ್ಥ್ಯದ 2 ಟ್ರಾನ್ಸ್‌ ಫಾರ್ಮರ್‌ ಸದ್ಯ ಬಳಕೆಯಲ್ಲಿದ್ದರೆ, ಮುಂದೆ ಹೊಸ ಸ್ಟೇಶ‌ನ್‌ನಲ್ಲಿ 20 ಎಂ.ವಿ.ಎ. ಸಾಮರ್ಥ್ಯದ 3 ಟ್ರಾನ್ಸ್‌ ಫಾರ್ಮರ್‌ಗಳು ಬರಲಿದೆ. ಈ ಮೂಲಕ ವಿದ್ಯುತ್‌ ಒತ್ತಡ ಕಡಿಮೆಯಾಗಿ ವಿದ್ಯುತ್‌ ಹಂಚಿಕೆ ಸುಲಭವಾಗಲಿದೆ.

ಟಾಪ್ ನ್ಯೂಸ್

Modi (2)

PM Modi ಸ್ಪರ್ಧೆಗೆ ನಿರ್ಬಂಧ: ದಿಲ್ಲಿ ಹೈಕೋರ್ಟ್‌ ನಕಾರ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

Mangaluru; ಪ್ರಯಾಣಿಕರ ಗಮನಕ್ಕೆ; ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ

Mangaluru; ಪ್ರಯಾಣಿಕರ ಗಮನಕ್ಕೆ; ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ

1-wewqwq-eqw

Amit Shah ನಕಲಿ ವೀಡಿಯೋ :ತೆಲಂಗಾಣ ಸಿಎಂಗೆ ಪೊಲೀಸ್‌ ಸಮನ್ಸ್‌

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

Mangaluru; ಪ್ರಯಾಣಿಕರ ಗಮನಕ್ಕೆ; ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ

Mangaluru; ಪ್ರಯಾಣಿಕರ ಗಮನಕ್ಕೆ; ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Modi (2)

PM Modi ಸ್ಪರ್ಧೆಗೆ ನಿರ್ಬಂಧ: ದಿಲ್ಲಿ ಹೈಕೋರ್ಟ್‌ ನಕಾರ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

kejriwal 2

CM ‘ಅಲಂಕಾರಿಕವಲ್ಲ’: ಕೇಜ್ರಿಗೆ ಮತ್ತೆ ಕೋರ್ಟ್‌ ಗುದ್ದು

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

Mangaluru; ಪ್ರಯಾಣಿಕರ ಗಮನಕ್ಕೆ; ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ

Mangaluru; ಪ್ರಯಾಣಿಕರ ಗಮನಕ್ಕೆ; ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.