ಬೆಂಜ್‌ ಕಾರಿನಲ್ಲಿ ವಿಶ್ವಪರ್ಯಟನೆ ಮಂಗಳೂರಿನಲ್ಲಿ ಜರ್ಮನ್‌ ದಂಪತಿ


Team Udayavani, Jan 13, 2020, 5:20 AM IST

1201MLR42

ಮಂಗಳೂರು: ಭಾರತ ಸಾಂಸ್ಕೃತಿಕ ವೈಭವದಿಂದ ಕೂಡಿದ ದೇಶ. ಇಲ್ಲಿನ ಸಂಸ್ಕೃತಿಗೆ ವಿದೇಶಿಗರೂ ಮನಸೋಲುತ್ತಾರೆ. ವಿವಿಧ ದೇಶಗಳ ಸಂಸ್ಕೃತಿಯನ್ನು ಅರಿಯುವ ಉದ್ದೇಶದಿಂದ ಜರ್ಮನಿಯ ದಂಪತಿ ಮರ್ಸಿಡಿಸ್‌ ಬೆಂಜ್‌ ಕಾರಿನಲ್ಲಿ ವಿಶ್ವಪರ್ಯಟನೆ ಆರಂಭಿಸಿದ್ದು, ಕೆಲವು ದಿನಗಳಿಂದ ಮಂಗಳೂರಿನಲ್ಲಿ ವಾಸವಿದ್ದಾರೆ.

ವಿಶ್ವದ ವಿವಿಧ ರಾಷ್ಟ್ರಗಳ ಜನಜೀವನ, ವೈವಿಧ್ಯಗಳನ್ನು ತಿಳಿಯುತ್ತ ಸಾಗುತ್ತಿರುವ ಇವರು ಜರ್ಮನಿಯ ಉದ್ಯಮಿ ಪೀಟರ್‌ ಮತ್ತು ಮೂಳೆ ಶಾಸ್ತ್ರಜ್ಞೆಯಾಗಿರುವ ಅಲೋನಾ ದಂಪತಿ. ವಿವಿಧ ದೇಶಗಳಲ್ಲಿ ಜನರ ಜೀವನಶೈಲಿಯನ್ನು ಅರ್ಥಮಾಡಿ ಕೊಳ್ಳುವುದು ಇವರ ಪ್ರಮುಖ ಉದ್ದೇಶ. ಈ ದಂಪತಿ 2019ರ ಮೇ 1ರಂದು ವಿಶ್ವಯಾತ್ರೆಯನ್ನು ಆರಂಭಿಸಿದ್ದು, ಈಗ ಮಂಗಳೂರಿಗೆ ಬಂದಿದ್ದಾರೆ.

ದಂಪತಿ ಈಗಾಗಲೇ ಪೋಲೆಂಡ್‌, ಐಸ್‌ಲ್ಯಾಂಡ್‌, ರಷ್ಯಾ, ಮಂಗೋಲಿಯ, ಕಜಕಿಸ್ಥಾನ, ಉಜ್ಬೆಕಿಸ್ಥಾನ, ಕಿರ್ಗಿಸ್ಥಾನ, ತಜಕಿಸ್ಥಾನ, ಇರಾನ್‌, ಬಲೂಚಿಸ್ಥಾನ, ಪಾಕಿಸ್ಥಾನಗಳಿಗೆ ಭೇಟಿ ನೀಡಿದ್ದಾರೆ.

ಕಳೆದ ನವೆಂಬರ್‌ ತಿಂಗಳಿನಲ್ಲಿ ಭಾರತಕ್ಕೆ ಆಗಮಿಸಿದ್ದು, ಹೊಸದಿಲ್ಲಿ, ಆಗ್ರಾ, ತಾಜ್‌ಮಹಲ್‌, ಎಲ್ಲೋರಗಳಿಗೆ ಭೇಟಿ ನೀಡಿದ್ದಾರೆ. ಮೂರು ವಾರಗಳ ಹಿಂದೆ ಮಂಗಳೂರಿಗೆ ಆಗಮಿಸಿದ್ದು, ಕಾರಿನಲ್ಲಿ ಸಣ್ಣ ದೋಷ ಕಾಣಿಸಿಕೊಂಡಿದೆ. ಮರ್ಸಿಡಿಸ್‌ ಕಾರು ಶೋರೂಂನಲ್ಲಿ ಬಿಡಿ ಭಾಗ ಖರೀದಿ ಮಾಡಲಿದ್ದು, ಅದು ಸಿಕ್ಕ ಕೂಡಲೇ ದುರಸ್ತಿಪಡಿಸಿ ಕೇರಳ, ಗೋವಾ ಕಡೆಗೆ ಪ್ರಯಾಣ ಮುಂದುವರಿಸಲಿದ್ದಾರೆ.

ಕಾರಿನಲ್ಲೇ ಪುಟ್ಟ ಮನೆ
ಪೀಟರ್‌ ಮತ್ತು ಅಲೋನಾ ದಂಪತಿ ತಮ್ಮ ಬೆಂಜ್‌ ವಾಹನವನ್ನು ಪುಟ್ಟ ಮನೆಯನ್ನಾಗಿ ಮಾರ್ಪಡಿಸಿದ್ದಾರೆ. ಕೈ ತೊಳೆಯಲು ಸಿಂಕ್‌ ಇದ್ದು, ಕಾರಿನ ಮೇಲ್ಭಾಗವನ್ನು ತೆರೆದು ವಿಶ್ರಾಂತಿ ಪಡೆಯುತ್ತಾರೆ. ವಿವಿಧ ರಾಷ್ಟ್ರಗಳಿಗೆ ಭೇಟಿ ನೀಡುತ್ತಿರುವ ಸಂದರ್ಭ ಆಯಾ ಪ್ರದೇಶದ ಪ್ರಮುಖ ವ್ಯಕ್ತಿಗಳ ಸಹಿಯನ್ನು ಕೂಡ ಕಾರಿನ ಮೇಲೆ ಹಾಕಿಸಿಕೊಳ್ಳುತ್ತಿದ್ದಾರೆ.

ಟಾಪ್ ನ್ಯೂಸ್

train-track

Belagavi: ರೈಲಿನಲ್ಲಿ ಮುಸುಕುಧಾರಿಯಿಂದ ಚಾಕು ಇರಿತ: ವ್ಯಕ್ತಿ ಸಾವು,ಇಬ್ಬರಿಗೆ ಗಾಯ !

Revanna 2

Holenarasipur case; ರೇವಣ್ಣ ಅವರಿಗೆ ಒಂದು ದಿನದ ರಿಲೀಫ್

Ullal; ಸ್ಕೂಟರ್ ಗಳ ಢಿಕ್ಕಿ; ಸಹಸವಾರ ಮೃತ್ಯು

Ullal; ಸ್ಕೂಟರ್ ಗಳ ಢಿಕ್ಕಿ; ಸಹಸವಾರ ಮೃತ್ಯು

3

ಫಾಹದ್‌ ಫಾಸಿಲ್‌ ಜೊತೆ ʼದೃಶ್ಯಂʼ ನಿರ್ದೇಶಕನ ಸಿನಿಮಾ:‌ ಸುದ್ದಿ ಕೇಳಿ ಥ್ರಿಲ್‌ ಆದ ಫ್ಯಾನ್ಸ್

Kalaburagi; Suresh Sajjan submits nomination as BJP rebel candidate

Kalaburagi; ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸುರೇಶ ಸಜ್ಜನ್ ನಾಮಪತ್ರ ಸಲ್ಲಿಕೆ

doctor

Mistake; ಮಗುವಿನ ಬೆರಳಿಗೆ ಶಸ್ತ್ರಚಿಕಿತ್ಸೆ ಬೇಕಿತ್ತು: ವೈದ್ಯರು ಮಾಡಿದ್ದು ನಾಲಗೆಗೆ!

1-wqeewqe

J’khand; ಬಂಧಿತ ಸಚಿವ ಅಲಂಗೀರ್ ಆಲಂ 6 ದಿನಗಳ ಕಾಲ ಇಡಿ ಕಸ್ಟಡಿಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ullal; ಸ್ಕೂಟರ್ ಗಳ ಢಿಕ್ಕಿ; ಸಹಸವಾರ ಮೃತ್ಯು

Ullal; ಸ್ಕೂಟರ್ ಗಳ ಢಿಕ್ಕಿ; ಸಹಸವಾರ ಮೃತ್ಯು

“ಫೆಡೆಕ್ಸ್‌ ಪಾರ್ಸೆಲ್‌’ ಹೆಸರಲ್ಲಿ ಸೈಬರ್‌ ವಂಚಕರಿಂದ “ಗಾಳ’

“ಫೆಡೆಕ್ಸ್‌ ಪಾರ್ಸೆಲ್‌’ ಹೆಸರಲ್ಲಿ ಸೈಬರ್‌ ವಂಚಕರಿಂದ “ಗಾಳ’

ಆಧಾರ್‌-ಪಹಣಿ ಸೀಡಿಂಗ್‌ ಮಂದಗತಿ; ಕಡ್ಡಾಯವಲ್ಲದ ಕಾರಣ ರೈತರ ನಿರಾಸಕ್ತಿ!

ಆಧಾರ್‌-ಪಹಣಿ ಸೀಡಿಂಗ್‌ ಮಂದಗತಿ; ಕಡ್ಡಾಯವಲ್ಲದ ಕಾರಣ ರೈತರ ನಿರಾಸಕ್ತಿ!

ಹೆಚ್ಚುತ್ತಿರುವ ಸೈಬರ್‌ ಅಪರಾಧ; ಮಂಗಳೂರು ಸೈಬರ್‌ ಠಾಣೆಗೆ”ಪ್ರಭಾರಿ’ಗಳೇ ಉಸ್ತುವಾರಿ!

ಹೆಚ್ಚುತ್ತಿರುವ ಸೈಬರ್‌ ಅಪರಾಧ; ಮಂಗಳೂರು ಸೈಬರ್‌ ಠಾಣೆಗೆ”ಪ್ರಭಾರಿ’ಗಳೇ ಉಸ್ತುವಾರಿ!

ರಸ್ತೆ ಬದಿ ತ್ಯಾಜ್ಯ ರಾಶಿ ಬೀಳದಂತೆ ಕ್ರಮ ಕೈಗೊಳ್ಳಿ : ಪಿಡಿಒಗಳಿಗೆ ಜಿ.ಪಂ. ಸಿಇಒ ಸೂಚನೆ

ರಸ್ತೆ ಬದಿ ತ್ಯಾಜ್ಯ ರಾಶಿ ಬೀಳದಂತೆ ಕ್ರಮ ಕೈಗೊಳ್ಳಿ : ಪಿಡಿಒಗಳಿಗೆ ಜಿ.ಪಂ. ಸಿಇಒ ಸೂಚನೆ

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

Misbehavior: ಅನುಚಿತ ವರ್ತನೆ; ಕೇಂದ್ರ ವಿ.ವಿ. ಅಧ್ಯಾಪಕನ ಅಮಾನತು

Misbehavior: ಅನುಚಿತ ವರ್ತನೆ; ಕೇಂದ್ರ ವಿ.ವಿ. ಅಧ್ಯಾಪಕನ ಅಮಾನತು

Fraud Case: ಆರೋಪಿ ರತೀಶ್‌ ಗೋವಾಕ್ಕೆ ಪರಾರಿ

Fraud Case: ಆರೋಪಿ ರತೀಶ್‌ ಗೋವಾಕ್ಕೆ ಪರಾರಿ

Bike theft: ಬಿ.ಸಿ.ರೋಡಿನಲ್ಲಿ ಬೈಕ್‌ ಕಳವು; ಪ್ರಕರಣ ದಾಖಲು

Bike theft: ಬಿ.ಸಿ.ರೋಡಿನಲ್ಲಿ ಬೈಕ್‌ ಕಳವು; ಪ್ರಕರಣ ದಾಖಲು

Bantwal: ಗಾಂಜಾ ಸೇವನೆ, ಸಾಗಾಟ; ಓರ್ವ ವಶಕ್ಕೆ

Bantwal: ಗಾಂಜಾ ಸೇವನೆ, ಸಾಗಾಟ; ಓರ್ವ ವಶಕ್ಕೆ

Arrested: ಉಪ್ಪಳದಲ್ಲಿ ಯುವಕನ ಕೊಲೆ ಪ್ರಕರಣ: 11 ವರ್ಷಗಳ ಬಳಿಕ ಆರೋಪಿ ಬಂಧನ

Arrested: ಉಪ್ಪಳದಲ್ಲಿ ಯುವಕನ ಕೊಲೆ ಪ್ರಕರಣ: 11 ವರ್ಷಗಳ ಬಳಿಕ ಆರೋಪಿ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.