ಜಾಂಬೂರಿಯಲ್ಲಿ ವಿಜ್ಞಾನದ ಮೆರುಗು; ವಿದ್ಯಾರ್ಥಿಗಳ ಕೌತುಕ ನಿವಾರಿಸಿದ ಮಾದರಿಗಳು

ಮೇಳದಲ್ಲಿ ಸಂಚಾರಿ ತಾರಾಲಯವೂ ವಿಶೇಷ ಆಕರ್ಷಣೆಯಾಗಿದೆ

Team Udayavani, Dec 24, 2022, 12:49 PM IST

ಜಾಂಬೂರಿಯಲ್ಲಿ ವಿಜ್ಞಾನದ ಮೆರುಗು; ವಿದ್ಯಾರ್ಥಿಗಳ ಕೌತುಕ ನಿವಾರಿಸಿದ ಮಾದರಿಗಳು

ಮೂಡುಬಿದಿರೆ: ಇಸ್ರೋದ ರಾಕೆಟ್‌, ಉಪಗ್ರಹಗಳು, ಸೆಮಿ ಕಂಡಕ್ಟರ್‌ಗಳು, ವಿವಿಧ ಮಾದರಿಯ ವಿಮಾನಗಳು, ಸೋಲಾರ್‌ ಶಕ್ತಿಯಿಂದ ಸಂಚರಿಸುವ ವಾಹನಗಳು, ವಿವಿಧ ಮಾದರಿಯ ರೋಬೋಟ್‌, ಡ್ರೋನ್‌ಗಳು, ಟೆಲಿಸ್ಕೋಪ್‌…ಹೀಗೆ ನೂರಾರು ಬಗೆಯ ವಿಜ್ಞಾನ ಮಾದರಿಗಳು ಒಂದೇ ಕಡೆಯಲ್ಲಿ ಕಾಣಲು ಸಿಕ್ಕಿದ್ದು, ಆಳ್ವಾಸ್‌ ವಿಜ್ಞಾನ ಮೇಳದಲ್ಲಿ.

ಆಳ್ವಾಸ್‌ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನಡೆತ್ತಿರುವ ಸ್ಕೌಟ್ಸ್‌ – ಗೈಡ್ಸ್‌ ಸಾಂಸ್ಕೃತಿಕ ಜಾಂಬೂರಿ ಯಲ್ಲಿ ವಿಜ್ಞಾನ ಕ್ಷೇತ್ರದ ವಿವಿಧ ಕೌತುಕಗಳನ್ನು ಅನಾವರಣಗೊಳಿಸಲಾಗಿದೆ. ಶಾಲಾ ವಿದ್ಯಾರ್ಥಿ ಗಳಿಂದ ಹಿಡಿದು ಎಂಜಿನಿಯರಿಂಗ್‌, ಬಿಎಸ್ಸಿ- ಎಂಎಸ್ಸಿ ವಿದ್ಯಾರ್ಥಿಗಳು ತಮ್ಮ ಕಲ್ಪನೆಯ ಮಾದರಿಗಳನ್ನು ಪ್ರದರ್ಶಿಸಿದ್ದಾರೆ. ಸಾವಿರಕ್ಕೂ ಹೆಚ್ಚು ಮಾದರಿಗಳಿದ್ದು, ಸೀನಿಯರ್‌, ಜೂನಿಯರ್‌, ಸೀನಿಯರ್‌ ಪ್ರಾಜೆಕ್ಟ್ ಎಂದು ವಿಭಾಗಿಸಿ ಪ್ರದರ್ಶನ ಮಾಡಲಾಗಿದೆ. ಸ್ಟಾರ್ಟ್‌ ಅಪ್‌ ಪ್ರಾಜೆಕ್ಟ್ಗಳಿಗೂ ಉತ್ತೇಜನ ನೀಡಲಾಗಿದೆ.

ವಿಜ್ಞಾನ ಮೇಳದಲ್ಲಿ ಇಸ್ರೋ, ಐಐಎಸ್ಸಿ, ಡಿ ಆರ್‌ಡಿಒ, ಸಿತಾರ್‌, ಮೊದಲಾದ ಕಡೆಗಳಿಂದ ಆಯ್ದ ವಿಜ್ಞಾನಿಗಳು ಆಗಮಿಸಿದ್ದು, ಆಯಾ ಸಂಸ್ಥೆಗಳಿಗೆ ಸಂಬಂಧಿಸಿದ ಮಾದರಿಗಳು, ವೈಜ್ಞಾನಿಕ ಉಪಕರಣಗಳನ್ನು ಪ್ರದರ್ಶಿಸಿದ್ದಾರೆ. ವಿಜ್ಞಾನಿಗಳ ಜತೆಗೆ ಸಂವಾದದ ಮೂಲಕ ಮಕ್ಕಳಿಗೆ ವೈಜ್ಞಾನಿಕ ಜ್ಞಾನ ಒದಗಿಸುತ್ತಿದ್ದಾರೆ.

ಆಳ್ವಾಸ್‌ ವಿಜ್ಞಾನ, ಎಂಜಿನಿಯರಿಂಗ್‌, ಮೆಡಿಕಲ್‌ ಕಾಲೇಜು ವಿಭಾಗದ ವಿದ್ಯಾರ್ಥಿಗಳಿಂದ, ವಿವಿಧ ಎಂಜಿನಿಯರಿಂಗ್‌ ಕಾಲೇಜುಗಳ ವತಿಯಿಂದಲೂ ಮಾದರಿಗಳನ್ನು ಪ್ರದರ್ಶಿಸಲಾಗಿದೆ. ವಿವಿಧ ರಾಜ್ಯಗಳ ಸಾಂಪ್ರದಾಯಿಕ, ವೈಜ್ಞಾನಿಕ ಆಟಿಕೆಗಳ ಪ್ರದರ್ಶನ, ಹ್ಯಾಮ್‌ ರೇಡಿಯೋ, ನೇಚರ್‌ ಕ್ಲಬ್‌, ಬರ್ಡ್‌ ಕ್ಲಬ್‌ಗಳೂ ಪಾಲ್ಗೊಂಡಿವೆ. ಅಗಸ್ತ್ಯ ಫೌಂಡೇಶನ್‌ ಸಂಸ್ಥೆ, ನಿರ್ಮಿತಿ ಕೇಂದ್ರಗಳಿಂದ ಮಾದರಿಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಪ್ರಾತ್ಯಕ್ಷಿಕೆ, ಭಾರತದ ಭೂವೈಜ್ಞಾನಿಕ ಸಮೀಕ್ಷೆ ವತಿಯಿಂದ ವಿವಿಧ ರೀತಿಯ ಕಲ್ಲುಗಳನ್ನೂ ಪ್ರದರ್ಶನಕ್ಕೆ ಇಡಲಾಗಿದೆ.

ಸಂಚಾರಿ ತಾರಾಲಯ
ಮೇಳದಲ್ಲಿ ಸಂಚಾರಿ ತಾರಾಲಯವೂ ವಿಶೇಷ ಆಕರ್ಷಣೆಯಾಗಿದೆ. ಮೂರು ಸಂಚಾರಿ ತಾರಾಲಯದ ವಾಹನಗಳನ್ನು ಮೇಳ ನಡೆಯುವಲ್ಲಿ ಇರಿಸಲಾಗಿದ್ದು, ಮಕ್ಕಳಿಗೆ ನಭೋಮಂಡಲದಲ್ಲಿರುವ ವಿವಿಧ ಕೌತುಕಗಳನ್ನು ನೋಡುವ ಅವಕಾಶ ಕಲ್ಪಿಸಲಾಗಿದೆ.

ಯುದ್ಧ ವಿಮಾನಗಳು
ಬೆಂಗಳೂರಿನ ಎರೋನಾಟಿಕಲ್‌ ಡೆವಲಪ್‌ ಮೆಂಟ್‌ ಏಜೆನ್ಸಿಯವರು ತೇಜಸ್‌, ಮಾರ್ಕ್‌ 1 ಯುದ್ಧ ವಿಮಾನಗಳ ಮಾದರಿಗಳನ್ನು ಇರಿಸಿದ್ದು, ಮಕ್ಕಳನ್ನು ಹೆಚ್ಚಾಗಿ ಆಕರ್ಷಿಸುತ್ತಿದೆ. 2025, 2026 ಮತ್ತು 2035ರಲ್ಲಿ ಬಿಡುಗಡೆಯಾಗಲಿರುವ ಆಮ್ಕಾ, ಟಿಇಡಿಬಿಎಫ್‌ ಯುದ್ಧ ವಿಮಾನಗಳೂ ಪ್ರದರ್ಶನದಲ್ಲಿವೆ. ವಿವಿಧ ರಾಷ್ಟ್ರಗಳ 30ಕ್ಕೂ ಅಧಿಕ ವಿಮಾನಗಳ ಮಾದರಿಗಳನ್ನು ಆಳ್ವಾಸ್‌ ಎರೊನಾಟಿಕಲ್‌ ವಿಭಾಗದ ವಿದ್ಯಾರ್ಥಿಗಳು ಪ್ರದರ್ಶನಕ್ಕೆ ಇಟ್ಟಿದ್ದಾರೆ.

ಮೀನುಗಾರಿಕೆ ಮಾದರಿ
ಮೀನುಗಾರಿಕೆ ಬೋಟ್‌, ಬಲೆಗಳು ಮೀನುಗಾರಿಕೆ ಇಲಾಖೆಯಿಂದ ವಿವಿಧ ಬೋಟ್‌ಗಳು, ಬಲೆಗಳು, ಪಂಜರಕೃಷಿ ಮಾದರಿಗಳನ್ನು ಪ್ರದರ್ಶಿಸಲಾಗಿದ್ದು, ವಿವಿಧ ಬಗೆಯ ಅಕ್ವೇರಿಯಂ ಮೀನುಗಳನ್ನೂ ಪ್ರದರ್ಶಿಸಲಾಗಿದೆ. ವಿವಿಧ ಯೋಜನೆಗಳ ಬಗ್ಗೆಯೂ ವಿವರಿಸಿಲಾಗಿದೆ. 30ಕ್ಕೂ ಅಧಿಕ ಅಕ್ವೇರಿಯಂಗಳಲ್ಲಿ ಬಣ್ಣಬಣ್ಣದ ಮೀನುಗಳು ವಿಶೇಷ ಆಕರ್ಷಣೆಯಾಗಿದೆ.

ಅಂತಾರಾಷ್ಟ್ರೀಯ ಜಾಂಬೂರಿಯಲ್ಲಿ ಭಾಗ ವಹಿಸುತ್ತಿರುವುದು ಇದೇ ಮೊದಲು. ಆಳ್ವಾಸ್‌ ಕಾಲೇಜಿನಲ್ಲಿ ಸಾಂಸ್ಕೃತಿಕ ಲೋಕವೇ ಧರೆಗಿಳಿದಿದೆ, ಉತ್ಸಾಹದಿಂದಲೇ ಭಾಗವಹಿಸುತ್ತಿದ್ದೇವೆ.
– ಶ್ರಾವಣಿ, ಹೈದರಾಬಾದ್‌

ಜಾಂಬೂರಿ ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ಭಾಗವಹಿಸುತ್ತಿದ್ದೇವೆ. ಶಾಲೆಯಿಂದ ಒಟ್ಟು 65 ಮಂದಿ ಬಂದಿದ್ದೇವೆ. ವಿವಿಧ ಮೇಳಗಳು ಆಕರ್ಷಣೀಯವಾಗಿವೆ. ಕಲಿಕೆಗೂ ಪೂರಕವಾಗಿದೆ. ಬೀಚ್‌, ಪಿಲಿಕುಳಕ್ಕೆ ಕರೆದುಕೊಂಡು ಹೋಗುವುದಾಗಿ ತಿಳಿಸಿದ್ದಾರೆ. ಅಲ್ಲಿಗೆ ಹೋಗಲೂ ಕಾತರದಿಂದಿದ್ದೇವೆ.
– ಗಾದಿಲಿಂಗನಗೌಡ, ಬಿಪಿಎಸ್‌ಸಿ ಶಾಲೆ ಬಳ್ಳಾರಿ

ಬೆಂಗಳೂರಿನಿಂದ ಮಕ್ಕಳನ್ನು ಕರೆದು ಕೊಂಡು ಬಂದಿದ್ದೇವೆ. ವ್ಯವಸ್ಥೆ ಅಚ್ಚುಕಟ್ಟಾಗಿದ್ದು, ಮಕ್ಕಳೂ ವಿವಿಧ ಚಟುವಟಿಕೆಗಳಲ್ಲಿ ಉತ್ಸಾಹದಿಂದಲೇ ಭಾಗವಹಿಸುತ್ತಿದ್ದಾರೆ. ಮೂರು ದಿನ ಹೇಗೆ ಕಳೆಯಿತು ಎಂದೇ ಗೊತ್ತಾಗಿಲ್ಲ. ಸಾಂಸ್ಕೃತಿಕ ಜಾಂಬೂರಿ ನಿಜಕ್ಕೂ ಸಾಂಸ್ಕೃತಿಕ ವಿಚಾರ-ವೈವಿಧ್ಯಗಳನ್ನು ಪರಿಚಯ ಮಾಡಿಸುವಲ್ಲಿ ಯಶಸ್ವಿಯಾಗಿದೆ ಎನ್ನಬಹುದು.
– ಜ್ಯೋತಿ, ಶಿಕ್ಷಕಿ, ಆರ್‌ಎಂಎಸ್‌
ಇನ್‌ಸ್ಟಿಟ್ಯೂಶನ್ಸ್‌ ಬೆಂಗಳೂರು

*ಭರತ್‌ ಶೆಟ್ಟಿಗಾರ್‌

ಟಾಪ್ ನ್ಯೂಸ್

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ

College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ

Mangaluru; ಪೆಟ್ರೋಲ್‌ ಬದಲು ಡೀಸೆಲ್‌ ತುಂಬಿಸಿದ ಆರೋಪ: ಕೋರ್ಟ್‌ಗೆ ಮೊರೆ

Mangaluru; ಕಾರಿಗೆ ಪೆಟ್ರೋಲ್‌ ಬದಲು ಡೀಸೆಲ್‌ ; ಕಾರು ಮಾಲಕರಿಗೆ ಲಕ್ಷಾಂತರ ರೂ.ನಷ್ಟ

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

8-ptr

Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ

Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ

Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ

College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ

Mangaluru; ಪೆಟ್ರೋಲ್‌ ಬದಲು ಡೀಸೆಲ್‌ ತುಂಬಿಸಿದ ಆರೋಪ: ಕೋರ್ಟ್‌ಗೆ ಮೊರೆ

Mangaluru; ಕಾರಿಗೆ ಪೆಟ್ರೋಲ್‌ ಬದಲು ಡೀಸೆಲ್‌ ; ಕಾರು ಮಾಲಕರಿಗೆ ಲಕ್ಷಾಂತರ ರೂ.ನಷ್ಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.