ಭಾರೀ ಮಳೆ: ಸಸಿಹಿತ್ಲು ಭಗವತೀ ದೇವಸ್ಥಾನದ ಅಂಗಣಕ್ಕೆ ನೀರು
Team Udayavani, Sep 20, 2020, 4:24 PM IST
ಸಸಿಹಿತ್ಲು: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಇಲ್ಲಿನ ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನಕ್ಕೆ ಮಳೆ ನೀರು ನುಗ್ಗಿದ್ದು, ಅಂಗಣದ ಸುತ್ತಮುತ್ತ ಹರಡಿದೆ.
ಕಳೆದ ವರ್ಷವೂ ಸಹ ಇದೇ ಸಂದರ್ಭದಲ್ಲಿ ನೀರು ಬಂದಿತ್ತು. ಹೊಯಿಗೆ ಮಿಶ್ರಿತ ನೀರು ಅಂಗಣದಲ್ಲಿ ನೀರು ನಿಂತಿದ್ದು ಇದನ್ನು ಪಂಪ್ ಮೂಲಕ ಹೊರಗೆ ಬಿಡುವ ಕೆಲಸ ನಡೆಸಲಾಗುತ್ತಿದೆ.
ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಪಡುಪಣಂಬೂರು ಮೇಗಿನ ನೆಲೆ ಅನಂತನಾಥ ಸ್ವಾಮಿ ಬಸದಿ ಆವರಣೆ ಗೋಡೆ ಕುಸಿದಿದ್ದು, ಬಸದಿಗೆ ಅಪಾರ ನಷ್ಟ ಉಂಟಾಗಿದೆ.
ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಕಳೆದೆರಡು ದಿನಗಳಿಂದ ಭಾರಿ ಮಳೆಯಾಗುತ್ತಿದೆ. ಉಡುಪಿಯಲ್ಲಿ ಮಳೆಯ ತೀವ್ರತೆ ಹೆಚ್ಚಾಗಿದ್ದು, ಹಲವು ಪ್ರದೇಶಗಳು ಮುಳುಗಡೆಯಾಗಿದೆ.