ನಿರಂತರ ಮಳೆ: ದ.ಕ. ಜಿಲ್ಲೆ: ಅಪಾಯದ ಮಟ್ಟ ತಲುಪಿದ ಪ್ರಮುಖ ನದಿಗಳು


Team Udayavani, Jul 8, 2018, 6:00 AM IST

v-42.jpg

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ ಬೆಳಗ್ಗಿನಿಂದ ಸಂಜೆವರೆಗೆ ಸುರಿದ ಮಳೆಗೆ ಪುತ್ತೂರು ತಾಲೂಕಿನಲ್ಲಿ  ಇಬ್ಬರು ಮೃತಪಟ್ಟಿದ್ದಾರೆ.  ಜಿಲ್ಲೆಯ ನದಿಗಳು ಪ್ರಮುಖ ನದಿಗಳು ಅಪಾಯದ ಮಟ್ಟ ತಲುಪುತ್ತಿದ್ದು, ಪ್ರವಾಹದ ಆತಂಕ ಎದುರಾಗಿದೆ.

ಪುತ್ತೂರು, ಸುಳ್ಯ, ಬೆಳ್ತಂಗಡಿ ತಾಲೂಕುಗಳಲ್ಲಿ ಶನಿವಾರ ಶಾಲೆಗಳಿಗೆ ರಜೆ ನೀಡಲಾಗಿತ್ತು. ಮಳೆಯಿಂದಾಗಿ ಹಲವೆಡೆ ಭೂಕುಸಿತ ಸಂಭವಿಸಿದೆ, ತಗ್ಗು ಪ್ರದೇಶ ಹಾಗೂ ನದಿ ತೀರದ ಮನೆಗಳಿಗೂ ನೀರು ನುಗ್ಗಿದ್ದು ಅಪಾರ ಹಾನಿ ಸಂಭವಿಸಿದೆ. ಮಂಗಳೂರು ನಗರದ ಹೊರ ವಲಯದಲ್ಲಿ ಇತ್ತೀಚೆಗೆ ಸೇತುವೆ ಕುಸಿತ ಸಂಭವಿಸಿದ ಮೂಲರ ಪಟ್ಣದಲ್ಲಿ ತೂಗು ಸೇತುವೆಗೆ ಸಂಪರ್ಕಿಸುವ ರಸ್ತೆ ಜಲಾಮಯವಾಗಿತ್ತು. ಸೂರಿಂಜೆ ಮತ್ತು ಶಿಬರೂರು ಪ್ರದೇಶಗಳಲ್ಲಿ ನಂದಿನಿ ನದಿಯ ನೀರು ಉಕ್ಕಿ ಹರಿದ ಪರಿಣಾಮ ಹಲವು ಮನೆಗಳು ಜಲಾವೃತವಾಗಿದ್ದು, 16 ಮಂದಿಯನ್ನು ಅಗ್ನಿ ಶಾಮಕ ದಳ ಮತ್ತು ಪೊಲೀಸರು ದೋಣಿಯಲ್ಲಿ ರಕ್ಷಿಸಿದರು.

85 ಮನೆ ಜಲಾವೃತ
ಕೆಮ್ರಾಲ್‌ ಗ್ರಾ.ಪಂ. ವ್ಯಾಪ್ತಿಯ ಪಕ್ಷಿಕೆರೆಯ ಪಂಜ, ಉಲ್ಯ, ಕೊಯಿ ಕುಡೆಯಲ್ಲಿ 70 ಮನೆಗಳು ಜಲಾವೃತ ಗೊಂಡಿವೆ. ಪಂಜ ನಂದಿನಿ ನದಿ ಬಳಿ ರಸ್ತೆ ಮುಳುಗಡೆಯಾಗಿದೆ. ಕಟೀಲಿನ ಮಿತ್ತಬೈಲ್‌ಗೆ ಸಂಪರ್ಕ ಕಲ್ಪಿಸುವ ರಸ್ತೆ ಜಲಾವೃತಗೊಂಡಿದೆ. ಬಳಕುಂಜೆಯಲ್ಲಿ ಮುಗೇರ ಬೈಲು ಪ್ರದೇಶದಲ್ಲಿ 15 ಮನೆಗಳಿದ್ದು ನೀರಿನ ಮಟ್ಟ ಹೆಚ್ಚಾದರೆ ಸಂಪರ್ಕ ಕಳೆದುಕೊಳ್ಳಲಿವೆ. ಕಿಲೆಂಜೂರಿನಲ್ಲಿ ಜನರನ್ನು ರಕ್ಷಿಸಲಾಗಿದೆ. ಸಂತ್ರಸ್ತರಿಗಾಗಿ ಗಂಜಿ ಕೇಂದ್ರ ತೆರೆಯಲಾಗಿದೆ.

ಬೆಳ್ತಂಗಡಿ: 2 ಮನೆಗೆ ಹಾನಿ
ಬೆಳ್ತಂಗಡಿ ತಾಲೂಕಿನ ನಾವೂರು ಹಾಗೂ ಲಾೖಲ ಗ್ರಾಮದಲ್ಲಿ ಎರಡು ಮನೆಗಳಿಗೆ ಹಾನಿ ಮತ್ತು ಬೆಳ್ತಂಗಡಿ ಪೇಟೆಯ ಅಂಗಡಿಯ ಗೋದಾಮು ಕುಸಿದಿದೆ. ಲಾೖಲ ಗ್ರಾಮದ ಗುರಿಂಗಾಣ ನಿವಾಸಿ ರಮೇಶ್‌ ಅವರ ಮನೆಗೆ ಹಲಸಿನ ಮರ ಬಿದ್ದು, ಮನೆಯ ಒಂದು ಭಾಗ ಜಖಂಗೊಂಡಿದೆ.

ಚಾರ್ಮಾಡಿ ಬ್ಲಾಕ್‌
ಶುಕ್ರವಾರ ರಾತ್ರಿ 11ರ ಸುಮಾರಿಗೆ ಚಾರ್ಮಾಡಿ ಘಾಟ್‌ ರಸ್ತೆಯಲ್ಲಿ ಗೂಡ್ಸ್‌ ಲಾರಿಯೊಂದು ಬಾಕಿಯಾದ ಪರಿಣಾಮ ಕೊಂಚ ಹೊತ್ತು ಟ್ರಾಫಿಕ್‌ ಜಾಮ್‌ ಇತ್ತು. ಬಳಿಕ ಸ್ಥಳೀಯರು ಹಾಗೂ ಪೊಲೀಸರು ಸೇರಿ ಲಾರಿಯನ್ನು ಬದಿಗೆ ಸರಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
ಪುತ್ತೂರು ಕೆದಿಲದಲ್ಲಿ ಶನಿವಾರ ಬರೆ ಜರಿದು ಚಂದಪ್ಪ ಹಾಗೂ ಪೂವಮ್ಮ ಎಂಬವರು ಗಾಯಗೊಂಡಿದ್ದಾರೆ. ಮೂಡಬಿದಿರೆಯ ಕಡಂದಲೆಯ ಶಾಂಭವಿ ನದಿ ಬದಿಯ 4 ಮನೆಗಳಿಗೆ ನೀರು ನುಗ್ಗಿದ್ದು ನಿವಾಸಿಗಳನ್ನು  ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಪೊಳಲಿ ಭಾಗದಲ್ಲಿ ಫಲ್ಗುಣಿ ಉಕ್ಕಿ ಹರಿದಿದ್ದು ಅಡೂxರು, ಪೊಳಲಿ ಪ್ರದೇಶಗಳಲ್ಲಿ ಇನ್ನಷ್ಟು ಮಳೆ ಬಂದರೆ ಅಪಾಯ ಉಂಟಾಗಲಿದೆ. 

ಕೃತಕ ನೆರೆ: ನೋಟಿಸ್‌
ಬಂಟ್ವಾಳ ಬಿ.ಮೂಡ ಗ್ರಾಮದ ಭಂಡಾರಿಬೆಟ್ಟು ಪ್ರದೇಶದಲ್ಲಿ ಗ್ಯಾರೇಜ್‌ ಮತ್ತು ವಸತಿ ಸಂಕೀರ್ಣ ನಿರ್ಮಾಣ ಸಂದರ್ಭ ಚರಂಡಿ ಮುಚ್ಚಿದ ಕಾರಣ ಕೃತಕ ನೆರೆ ತಲೆದೋರಿದೆ. ಸಾರ್ವಜನಿಕರ ದೂರಿನಂತೆ ಗ್ಯಾರೇಜ್‌ ಮತ್ತು ವಸತಿ ಸಂಕೀರ್ಣದ ಮಾಲಕರಿಗೆ ಪುರಸಭೆ ಮುಖ್ಯಾಧಿಕಾರಿ ನೋಟಿಸ್‌ ಜಾರಿ ಮಾಡಿದ್ದಾರೆ.

ಮಂಗಳೂರು ನಗರದಲ್ಲಿ ತಗ್ಗು ಪ್ರದೇಶದ ರಸ್ತೆಗಳಲ್ಲಿ ನೀರು ತುಂಬಿ ನಿಂತ ಪರಿಣಾಮ ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿತ್ತು. ಉರ್ವ ಗಾಂಧಿನಗರ ಸರಕಾರಿ ಶಾಲೆಯ ಬಳಿ ಆವರಣ ಗೋಡೆ ಕುಸಿದಿದ್ದು, ಯಾವುದೇ ಅಪಾಯ ಸಂಭವಿಸಿಲ್ಲ. ಬಾವುಟಗುಡ್ಡೆಯ ಕೇಂದ್ರ ಗ್ರಂಥಾಲಯದ ಬಳಿ ಆವರಣ ಗೋಡೆಯ ಒಂದು ಭಾಗ ಕುಸಿದು ಬಿದ್ದ ಘಟನೆ ನಡೆದಿದೆ. ನಗರದಲ್ಲಿಯೂ ಕೆಲವು ಶಾಲೆಗಳಿಗೂ ಮಳೆ ಕಾರಣ ರಜೆ ಸಾರಲಾಗಿತ್ತು. ಪಣಂಬೂರು ಕೂರಿಕಟ್ಟದಲ್ಲಿ ತಮಿಳ್ನಾಡು ಮೂಲದ ಎರಡು ಕೂಲಿ ಕಾರ್ಮಿಕ ಕುಟುಂಬಗಳ ಡೇರೆ ಸಮುದ್ರ ಪಾಲಾಗಿದೆ.

ನಳಿನ್‌ ರಾಂಚಿಯಿಂದ ವಾಪಸ್‌
ಮಳೆಯಿಂದ ಹಾನಿ ಉಂಟಾಗಿರುವ ಹಿನ್ನೆಲೆಯಲ್ಲಿ ಸಂಸದ ನಳಿನ್‌ ಕುಮಾರ್‌ ರಾಂಚಿ ಪ್ರವಾಸವನ್ನು ಮೊಟಕುಗೊಳಿಸಿ ಶನಿವಾರ ರಾತ್ರಿ ಮಂಗಳೂರಿಗೆ ಮರಳಿದ್ದಾರೆ. ಕೇಂದ್ರ ಸರಕಾರದ ಕೃಷಿ ಸಮಿತಿಯ ರಾಂಚಿ ಹಾಗೂ ಪಾಟ್ನಾ ಅಧ್ಯಯನ ಪ್ರವಾಸ ಜು.7ರಿಂದ 11ರ ವರೆಗೆ ನಿಗದಿಯಾಗಿತ್ತು.

ಭಾರೀ ಮಳೆ: ಮುನ್ನೆಚ್ಚರಿಕೆ
ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ ಮಂಗಳೂರು ನಗರ ಸೇರಿದಂತೆ, ಜಿಲ್ಲೆಯಾದ್ಯಂತ ಇನ್ನೂ ಮೂರು ದಿನಗಳ ಕಾಲ ಭಾರೀ ಮಳೆಯಾಗಲಿದೆ. ಜಿಲ್ಲೆಯ ತಾಲೂಕು ಕೇಂದ್ರಗಳಲ್ಲಿ ಕಂಟ್ರೋಲ್‌ ರೂಂ ತೆರೆದಿದ್ದು, ಸಾರ್ವಜನಿಕರು ಸಂಪರ್ಕಿಸಬಹುದು.
ಮಂಗಳೂರು 0824-2220587 ಅಥವಾ 2220596
ಬಂಟ್ವಾಳ 08255-232120/232500
ಪುತ್ತೂರು 08251-230349/232799
ಬೆಳ್ತಂಗಡಿ 08256-232047/233123
ಸುಳ್ಯ 08257-230330/231231, 
ಮೂಡಬಿದಿರೆ 08258-238100/239900
ಕಡಬ 08251-260435, ಮೂಲ್ಕಿ 0824-2294496
ಮಹಾನಗರ ಪಾಲಿಕೆ 0824-2220306

ಟಾಪ್ ನ್ಯೂಸ್

modi (4)

NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!

Exam

NEET ಟಾಪರ್‌ಗಳ ಸಂಖ್ಯೆ 67ರಿಂದ ಈಗ 17ಕ್ಕೆ ಇಳಿಕೆ!

1-assam

UNESCO ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ‘ದಿಬ್ಬ ಸಮಾಧಿಗಳು’: ಏನಿದು ಮೊಯಿಡಮ್ಸ್‌?

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

1-kanwar-msid

Uttara Khand; ಕನ್ವರ್‌ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

Taranga Ugadi Dhamaka2024; ಓದಿನಿಂದ ಜ್ಞಾನದ ವ್ಯಾಪ್ತಿ ವಿಸ್ತರಣೆ: ಡಾ| ಸಂಧ್ಯಾ ಎಸ್‌.ಪೈ

Taranga Ugadi Dhamaka2024; ಓದಿನಿಂದ ಜ್ಞಾನದ ವ್ಯಾಪ್ತಿ ವಿಸ್ತರಣೆ: ಡಾ| ಸಂಧ್ಯಾ ಎಸ್‌.ಪೈ

Mangaluru ನದಿ ದಡದಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

Mangaluru ನದಿ ದಡದಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

Mobile, ಗಾಂಜಾ ಪತ್ತೆ ಹಿನ್ನೆಲೆ: ಜಿಲ್ಲಾ ಕಾರಾಗೃಹಕ್ಕೆ ಬಂಧಿಖಾನೆ ಡಿಐಜಿ ಭೇಟಿ

Mobile, ಗಾಂಜಾ ಪತ್ತೆ ಹಿನ್ನೆಲೆ: ಜಿಲ್ಲಾ ಕಾರಾಗೃಹಕ್ಕೆ ಬಂಧಿಖಾನೆ ಡಿಐಜಿ ಭೇಟಿ

Mangaluru ಬಾರ್‌ ವಿರುದ್ಧ ಎಫ್ಐಆರ್‌ ದಾಖಲು

Mangaluru ಬಾರ್‌ ವಿರುದ್ಧ ಎಫ್ಐಆರ್‌ ದಾಖಲು

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

modi (4)

NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!

Exam

NEET ಟಾಪರ್‌ಗಳ ಸಂಖ್ಯೆ 67ರಿಂದ ಈಗ 17ಕ್ಕೆ ಇಳಿಕೆ!

1-assam

UNESCO ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ‘ದಿಬ್ಬ ಸಮಾಧಿಗಳು’: ಏನಿದು ಮೊಯಿಡಮ್ಸ್‌?

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

1-kanwar-msid

Uttara Khand; ಕನ್ವರ್‌ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.