ಅಶಕ್ತ ಬಾಲಕನಿಗೆ ನೆರವಾಗಿ


Team Udayavani, Apr 5, 2018, 12:24 PM IST

5-April-8.jpg

ಹಳೆಯಂಗಡಿ: ಆತನಿಗೆ ಇನ್ನೂ 7ರ ಹರೆಯ. ಬಾಲ್ಯದ ದಿನಗಳಲ್ಲಿ ಎಲ್ಲರಂತೆ ಸ್ನೇಹಿತರೊಂದಿಗೆ ಓಡಾಡಿಕೊಂಡು ಹೆತ್ತವರೊಂದಿಗೆ ದಿನ ಕಳೆಯಬೇಕಾದ ಬಾಲಕನಿಗೆ ದೈಹಿಕ ಕ್ಷಮತೆ ಇದ್ದರೂ ಕಾಲಿನ ಅಶಕ್ತಿಯಿಂದ ಆತನ ತಾಯಿಯೇ ಆತನಿಗೆ ಕಾಲಿನ ಶಕ್ತಿಯಾಗಿದ್ದಾರೆ. ಇದು ಹಳೆಯಂಗಡಿ ಬಳಿಯ ಇಂದಿರಾನಗರದ ಬಡಕುಟುಂಬವೊಂದರ ವ್ಯಥೆ.

ಬೊಳ್ಳೂರಿನ ಇಂದಿರಾನಗರದ ಆಶಿಯಾ ಎಂಬವರ ಎರಡನೇ ಪುತ್ರ ಮೊಹಮ್ಮದ್‌ ಸವಾನ್‌ (7) ಸಣ್ಣ ವಯಸ್ಸಿನಲ್ಲಿಯೇ ಕಾಲಿನ ಅಂಗವೈಕಲ್ಯದಿಂದ ಬಳಲುತ್ತಿದ್ದ. 8ನೇ ತರಗತಿಯಲ್ಲಿ ಕಲಿಯುತ್ತಿರುವ ಮೊಹಮ್ಮದ್‌ ಸವಾದ್‌(13) ಜತೆಗೆ ತವರು ಮನೆಯಲ್ಲಿಯೇ ಆಸರೆ ಪಡೆದಿರುವ ಆಶಿಯಾ, ಮೊಹಮ್ಮದ್‌ ಸವಾನ್‌ಗೆ ಅನೇಕ ಕಡೆಗಳಲ್ಲಿ ಔಷಧ ನೀಡಿ ಲಕ್ಷಾಂತರ ರೂ. ಖರ್ಚು ಮಾಡಿದ್ದರೂ ಕಾಲಿನ ಶಕ್ತಿ ಇನ್ನೂ ಬಂದಿಲ್ಲ.

ವೈದ್ಯರ ಪ್ರಕಾರ ಅಪೌಷ್ಟಿಕತೆಯಿಂದ ಮಾಂಸ ಖಂಡಗಳು ಹಾಗೂ ನರನಾಡಿಗಳು ಸ್ಪಂದಿಸದೇ ಇರುವುದರಿಂದ ಈ ರೀತಿಯಾಗಿ ಕಾಲಿನ ಶಕ್ತಿ ಕಳೆದುಕೊಂಡಿದ್ದಾನೆ. ಕಾಲಿನ ಮಾಂಸದ ಒಂದು ಭಾಗವನ್ನು ಪರೀಕ್ಷೆಗೆಂದು ಬೆಂಗಳೂರಿಗೆ ರವಾನಿಸಲಾಗಿದೆ. ಅದರ ವರದಿಯ ಆಧಾರದಲ್ಲಿ ಸೂಕ್ತ ಚಿಕಿತ್ಸೆ ನೀಡಿದರೆ ಗುಣಮುಖನಾಗಲು ಸಾಧ್ಯವಿದೆ ಎಂದಿದ್ದಾರೆ. ಬಡತನದ ಚೌಕಟ್ಟಿನಲ್ಲಿ ಜೀವನ ಸಾಗಿಸುತ್ತಿರುವ ಇವರ ಚಿಕಿತ್ಸೆಗಾಗಿ ಧನ ಸಹಾಯ ಸಿಗಬೇಕಾಗಿದೆ. ಈಗಾಗಲೇ ಈ ಬಡ ಕುಟುಂಬಕ್ಕೆ ಆಸರೆಯಾಗಿ ನಿಂತಿರುವುದು ಇಂದಿರಾನಗರದ ರಿಲಯನ್ಸ್‌ ಅಸೋಸಿಯೇಶನ್‌ ಎಂಬ ಸಮಾಜ ಸೇವಾ ಸಂಸ್ಥೆ.

ರಿಲಾಯನ್ಸ್‌ ಅಸೋಸಿಯೇಶನ್‌
ಒಂದು ಪುಟ್ಟ ಗ್ರಾಮದಲ್ಲಿ ಹುಟ್ಟಿಕೊಂಡಿರುವ ರಿಲಯನ್ಸ್‌ ಅಸೋಸಿಯೇಶನ್‌ ಇಂದು ದೇಶ ವಿದೇಶದಲ್ಲಿನ ದಾನಿಗಳ ಸಂಪರ್ಕ ಪಡೆದು ವಿವಿಧ ರೀತಿಯಲ್ಲಿ ನಿಧಿ ಕ್ರೋಢಿಕರಿಸಿಕೊಂಡು ತಮ್ಮ ಸೇವಾ ಮನೋಭಾವನೆಯನ್ನು ಸ್ಥಳೀಯವಾಗಿ ಪಸರಿಸುತ್ತಿರುವುದರಿಂದ ಆಶಿಯಾ ಅವರಿಗೂ ಪರೋಕ್ಷವಾಗಿ ಆಕೆಯ ಮಗನಿಗೆ ಚಿಕಿತ್ಸೆ ನೀಡುವಲ್ಲಿ ಸಹಕಾರಿಯಾಗಿದೆ. ಈಗಾಗಲೇ ಊರ, ಪರವೂರ ದಾನಿಗಳಿಂದ ನಿಧಿ ಸಂಗ್ರಹಿಸಿ ಮಂಗಳೂರಿನ ತಜ್ಞ ವೈದ್ಯರಲ್ಲಿ ಚಿಕಿತ್ಸೆಗಾಗಿ ಸಂಸ್ಥೆಯೇ ನೆರವು ನೀಡುತ್ತಿದೆ. ಜತೆಗೆ ಎರಡು ವರ್ಷಗಳ ಹಿಂದೆಯೇ ಆಶಿಯಾಗೆ ಮನೆಯನ್ನು ಸಹ ನಿರ್ಮಿಸಿಕೊಟ್ಟಿದೆ.

ಸಹೃದಯರಿಂದ ಸಹಕಾರ
ಎರಡು ವರ್ಷದ ಹಿಂದೆ ಆಶಿಯಾ ಅವರು ತಮ್ಮ ಮಗನ ಅನಾರೋಗ್ಯದ ಬಗ್ಗೆ ಸಂಸ್ಥೆಯಲ್ಲಿ ಹೇಳಿಕೊಂಡಿದ್ದರು. ಸವಾನ್‌ನ ಚಿಕಿತ್ಸೆಗೆ ಲಕ್ಷಾಂತರ ರೂ. ಖರ್ಚು ಮಾಡಲಾಗಿದೆ. ಬೆಂಗಳೂರಿನ ವೈದ್ಯರೊಬ್ಬರು ಆತನು ನಡೆದಾಡಲು ಸಾಧ್ಯವಿದೆ ಎಂದು ತಿಳಿಸಿರುವುದರಿಂದ ಸಂಸ್ಥೆಯೇ ಆಕೆಯ ನೆರವಿಗೆ ನಿಂತಿದೆ.
-ಆರೀಫ್‌ ಹಳೆಯಂಗಡಿ,
ಮಾಜಿ ಅಧ್ಯಕ್ಷರು
ರಿಲಯನ್ಸ್‌ ಅಸೋಸಿಯೇಶನ್‌.

ನೆರವಿಗಾಗಿ ಸಂಪರ್ಕಿಸಿ
ಆಶಿಯಾ ಅವರಿಗೆ ನೆರವು ನೀಡಲು ಬಯಸುವವರು  ASIA  ಅಕೌಂಟ್‌ ಸಂಖ್ಯೆ 0637101206996. ಕೆನರಾ ಬ್ಯಾಂಕ್‌, ಹಳೆಯಂಗಡಿ ಬ್ರ್ಯಾಂಚ್‌. IFSC CODE CNRB0000637 ಗೆ ಹಣ ಜಮೆ ಮಾಡಬಹುದು.

ಟಾಪ್ ನ್ಯೂಸ್

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Brahmavar

Padubidri: ಅಪಘಾತದ ಗಾಯಾಳು ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.