ಕರಾವಳಿ ಮೀನುಗಾರರಲ್ಲಿಯೂ ಹೆಚ್ಚಿದ ಆತಂಕ

Team Udayavani, Oct 31, 2018, 10:31 AM IST

karavali-meenugararu.png

ಮಂಗಳೂರು: ವಾಣಿಜ್ಯ ಹಡಗುಗಳ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಲು ಸಮುದ್ರದಲ್ಲಿ 15ರಿಂದ 20 ನಾಟಿಕಲ್‌ ಮೈಲುಗಳ ನಡುವಣ ವಲಯವನ್ನು “ಶಿಪ್ಪಿಂಗ್‌ ಕಾರಿಡಾರ್‌’ ಆಗಿ ಘೋಷಿಸಿ ಮೀನುಗಾರಿಕೆ ನಿಷೇಧಿಸಲು ಕೇಂದ್ರ ನೌಕಾಯಾನ ಸಚಿವಾಲಯ ತೀರ್ಮಾನಿಸಿದೆ. ಇದು ಮೀನುಗಾರಿಕೆಯನ್ನು ನಂಬಿರುವ ಲಕ್ಷಾಂತರ ಮಂದಿಗೆ ಸಂಕಷ್ಟ ತರುವ ಆತಂಕವಿದೆ. 

ಸಮುದ್ರದಲ್ಲಿ 15ರಿಂದ 20 ನಾಟಿಕಲ್‌ ಮೈಲು ನಡುವಣ 5 ನಾಟಿಕಲ್‌ ಮೈಲು ವಲಯವನ್ನು ಶಿಪ್ಪಿಂಗ್‌ ಕಾರಿಡಾರ್‌ ಆಗಿ ಗುರುತಿಸಲು ಶಿಪ್ಪಿಂಗ್‌ ಮಹಾನಿರ್ದೇಶಕರು (ಡಿಜಿಎಸ್‌) ಉದ್ದೇಶಿಸಿದ್ದಾರೆ. ಮೀನುಗಾರಿಕೆ ದೋಣಿಗಳು ಹಾಗೂ ವಾಣಿಜ್ಯ ಹಡಗುಗಳ ಢಿಕ್ಕಿ ತಪ್ಪಿಸುವುದು ಇದರ ಮುಖ್ಯ ಉದ್ದೇಶ. ಈ ಪ್ರಸ್ತಾವನೆ ವಿರೋಧಿಸಿ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಮೀನುಗಾರರು ಮುಂದಾಗಿದ್ದಾರೆ.

ಶಿಪ್ಪಿಂಗ್‌ ಕಾರಿಡಾರ್‌ ಗುಜರಾತ್‌ನ ಕಚ್‌fನಿಂದ ಕರ್ನಾಟಕ-ಕೇರಳ ವರೆಗಿನ ಪ. ಕರಾವಳಿ ಹಾಗೂ ಪೂರ್ವ ಕರಾವಳಿಯ ಸುಮಾರು 3 ಕೋಟಿ ಮೀನು ಗಾರರ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. 2,300 ಕಿ.ಮೀ. ಉದ್ದ ಹಾಗೂ 37.04 ಕಿ.ಮೀ. (20 ನಾಟಿಕಲ್‌ ಮೈಲ್‌) ಅಗಲ ಪ್ರದೇಶದಲ್ಲಿ ಮೀನುಗಾರಿಕೆ ನಿಷೇಧವಾಗಿ ಒಟ್ಟು 85,000 ಚ. ಕಿ.ಮೀ. ಪ್ರದೇಶ ಮೀನುಗಾರಿಕೆ ಚಟುವಟಿಕೆಯಿಂದ ವಂಚಿತವಾಗಲಿದೆ. ಈ ಅಧಿಸೂಚನೆ ಪ್ರಕಟವಾದರೆ ಯಾಂತ್ರೀಕೃತ ದೋಣಿಗಳು ತೀರದಿಂದ 20 ನಾ. ಮೈಲು ದೂರದವರೆಗೆ ಮೀನುಗಾರಿಕೆ ಮಾಡುವಂತಿಲ್ಲ. ಸಣ್ಣ ಮೀನುಗಾರಿಕೆ ದೋಣಿಗಳು 27.78 ಕಿ.ಮೀ. (15 ನಾಟಿಕಲ್‌ ಮೈಲು) ಕಿ.ಮೀ.ಯಿಂದಾಚೆಗೆ ಮೀನುಗಾರಿಕೆಗೆ ಹೋಗುವಂತಿಲ್ಲ.

ಸರಕಾರ ಈ ನಿರ್ಧಾರ ಕೈಗೊಳ್ಳುವುದಕ್ಕೆ ಮುನ್ನ ಮೀನುಗಾರ ಸಮುದಾಯ, ಸಂಘಟನೆಗಳ ಜತೆ ಚರ್ಚಿಸಿಲ್ಲ. ಮೀನುಗಳ ನಿಕ್ಷೇಪ ಇಂಥಲ್ಲೇ ಇರುತ್ತದೆ ಎಂದು ಹೇಳಲಾಗದು. ಅದರ ಜಾಡು ಹಿಡಿದು ಮೀನುಗಾರಿಕೆ ಬೋಟುಗಳು ಚಲಿಸಬೇಕಾಗುತ್ತದೆ. ಭಾರತಕ್ಕೆ ಸೇರಿದ ಸಮುದ್ರ ಭಾಗದಲ್ಲಿ 200 ನಾಟಿಕಲ್‌ ಮೈಲುವರೆಗೆ ನಮಗೆ ಮೀನುಗಾರಿಕೆ ನಡೆಸಲು ಅವಕಾಶವಿದೆ. ಉದ್ದೇಶಿತ ಶಿಪ್ಪಿಂಗ್‌ ಕಾರಿಡಾರ್‌ ಪ್ರದೇಶವೇ ಮೀನುಗಾರಿಕೆಯ ಪ್ರಮುಖ
ತಾಣ. ಆದುದರಿಂದ ಇಲ್ಲಿ ನಿಷೇಧ ಸರಿಯಲ್ಲ ಎಂದು ಮೀನುಗಾರಿಕೆ ಸಂಘಟನೆಗಳು ಹೇಳುತ್ತಿವೆ. 

ಈವರೆಗೆ ಶಿಪ್ಪಿಂಗ್‌ ಕಾರಿಡಾರ್‌ ಇರಲಿಲ್ಲ. ಈಗ ಕೇಂದ್ರ ಸರಕಾರ ಸಾಗರಮಾಲಾ ಯೋಜನೆಯಡಿ ವಾಣಿಜ್ಯ ಹಡಗುಗಳ ಸಂಚಾರಕ್ಕೆ ನಿರ್ದಿಷ್ಟ ಪಥ ಗುರುತಿಸಲು ಉದ್ದೇಶಿಸಿದೆ. ಇದೊಂದು ಉತ್ತಮ ಕ್ರಮ ಎಂಬುದು ವಾಣಿಜ್ಯ ಹಡಗಿನ ಮಾಜಿ ಕ್ಯಾಪ್ಟನ್‌ ಒಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ಪ್ರತಿಭಟನೆ
ಕೇಂದ್ರ ಸರಕಾರದ ನೌಕಾ ಯಾನ ಸಚಿವಾಲಯದ ಪ್ರಸ್ತಾವನೆಯನ್ನು ಪ್ರತಿಭಟಿಸಿ ದೇಶಾದ್ಯಂತ ಅ. 30ರಂದು ಪ್ರತಿಭಟನೆ ನಡೆದಿದೆ. ಮಂಗಳೂರು ಹಾಗೂ ಮಲ್ಪೆಯಲ್ಲೂ ಟ್ರಾಲ್‌ಬೋಟು, ಪರ್ಸಿನ್‌ ಹಾಗೂ ಗಿಲ್‌ನೆಟ್‌ ಬೋಟುಗಳ ಮೀನುಗಾರರು ಸಭೆ ನಡೆಸಿ ಸಾಂಕೇತಿಕ ಪ್ರತಿಭಟನೆ ನಡೆಸಿದ್ದಾರೆ.

ಶಿಪ್ಪಿಂಗ್‌ ಕಾರಿಡಾರ್‌ ರೂಪಿಸಿ, ಮೀನುಗಾರಿಕೆ ನಿಷೇಧಿಸುವ ಕೇಂದ್ರದ ಪ್ರಸ್ತಾವನೆ ಮೀನುಗಾರಿಕೆಗೆ ತೀವ್ರ ಹೊಡೆತ ನೀಡಲಿದೆ. ಇದರ ವಿರುದ್ಧ ರಾಷ್ಟ್ರೀಯ ಮೀನುಗಾರರ ವೇದಿಕೆ ತೀವ್ರ ವಿರೋಧ ವ್ಯಕ್ತಪಡಿಸಿದೆ. ಅ.30ರಂದು ದೇಶಾದ್ಯಂತ ಒಂದು ದಿನದ ಪ್ರತಿಭಟನೆ ನಡೆದಿದ್ದು, ಇಲ್ಲೂ ಮೀನುಗಾರರು ಸಾಂಕೇತಿಕ ಪ್ರತಿಭಟನೆ ನಡೆಸಿದ್ದಾರೆ.

-ವಾಸುದೇವ ಬೋಳೂರು, ರಾ. ಮೀನುಗಾರರ ವೇದಿಕೆ ಉಪಾಧ್ಯಕ್ಷ 

– ಕೇಶವ ಕುಂದರ್‌

ಟಾಪ್ ನ್ಯೂಸ್

Mudhol ಬೈಕ್‌ಗಳ ಸರಣಿ ಕಳ್ಳತನ; ಆರೋಪಿ ಪೊಲೀಸ್‌ ವಶಕ್ಕೆ

Mudhol ಬೈಕ್‌ಗಳ ಸರಣಿ ಕಳ್ಳತನ; ಆರೋಪಿ ಪೊಲೀಸ್‌ ವಶಕ್ಕೆ

Rahul Gandhi resfused to take Leader of Opposition post In Lok Sabha

Lok Sabha; ವಿಪಕ್ಷ ನಾಯಕನ ಸ್ಥಾನಕ್ಕೆ ಹೆಸರು ಬಹುತೇಕ ಅಂತಿಮ; ಹುದ್ದೆ ಬೇಡ ಎಂದ ರಾಹುಲ್

Goa Calangute Beach: ಮೊಬೈಲ್,ಬ್ಯಾಗ್‍ ಕಳ್ಳತನ; ಮೂವರ ಬಂಧನ

Goa Calangute Beach: ಮೊಬೈಲ್,ಬ್ಯಾಗ್‍ ಕಳ್ಳತನ; ಮೂವರ ಬಂಧನ

ರಸ್ತೆ ಬದಿ ನಿಲ್ಲಿಸಿದ್ದ ಟ್ರ್ಯಾಕ್ಟರ್ ಟ್ರಾಲಿಗೆ ಬೈಕ್ ಡಿಕ್ಕಿ: ಸವಾರ ಸ್ಥಳದಲ್ಲೇ ಮೃತ್ಯು

ರಸ್ತೆ ಬದಿ ನಿಲ್ಲಿಸಿದ್ದ ಟ್ರ್ಯಾಕ್ಟರ್ ಟ್ರಾಲಿಗೆ ಬೈಕ್ ಡಿಕ್ಕಿ: ಸವಾರ ಸ್ಥಳದಲ್ಲೇ ಮೃತ್ಯು

Panaji: ಪಕ್ಷ ಅವಕಾಶ ನೀಡಿದರೆ ಸ್ಥಳೀಯ ರಾಜಕಾರಣಕ್ಕೆ ಬರಲು ಸಿದ್ಧ: ಶ್ರೀಪಾದ್ ನಾಯ್ಕ್

Panaji: ಪಕ್ಷ ಅವಕಾಶ ನೀಡಿದರೆ ಸ್ಥಳೀಯ ರಾಜಕಾರಣಕ್ಕೆ ಬರಲು ಸಿದ್ಧ: ಶ್ರೀಪಾದ್ ನಾಯ್ಕ್

PM Modi- Pope ಭೇಟಿ ಫೋಟೋ: ಕ್ಷಮೆಯಾಚಿಸಿದ ಕೇರಳ ಕಾಂಗ್ರೆಸ್-‌ ಏನಿದು ವಿವಾದ?

PM Modi- Pope ಭೇಟಿ ಫೋಟೋ: ಕ್ಷಮೆಯಾಚಿಸಿದ ಕೇರಳ ಕಾಂಗ್ರೆಸ್-‌ ಏನಿದು ವಿವಾದ?

12-uppinangady

Uppinangady: ಮಹಿಳೆ ಸಾವು; ಕೊಲೆ ಶಂಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪಂಪ್‌ವೆಲ್‌-ಪಡೀಲ್‌ ಚತುಷ್ಪಥ ಕಾಮಗಾರಿ: ಸಂಚಾರಕ್ಕೆ ಸಂಕಷ್ಟ

ಪಂಪ್‌ವೆಲ್‌-ಪಡೀಲ್‌ ಚತುಷ್ಪಥ ಕಾಮಗಾರಿ: ಸಂಚಾರಕ್ಕೆ ಸಂಕಷ್ಟ

Mangaluru: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಬಿಜೆಪಿಯಿಂದ ವಿಭಿನ್ನ ಪ್ರತಿಭಟನೆ

Mangaluru: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಬಿಜೆಪಿಯಿಂದ ವಿಭಿನ್ನ ಪ್ರತಿಭಟನೆ

ಕರಾವಳಿಯಲ್ಲಿ ಇಲ್ಲ ವಾಡಿಕೆ ಮಳೆ!

Rain ಕರಾವಳಿಯಲ್ಲಿ ಇಲ್ಲ ವಾಡಿಕೆ ಮಳೆ!

Mangaluru ಬ್ರೇಕ್‌ ಸಮಸ್ಯೆ; ಬಸ್‌ ಚಾಲಕನ ಸಮಯಪ್ರಜ್ಞೆ; ತಪ್ಪಿದ ದುರಂತ

Mangaluru ಬ್ರೇಕ್‌ ಸಮಸ್ಯೆ; ಬಸ್‌ ಚಾಲಕನ ಸಮಯಪ್ರಜ್ಞೆ; ತಪ್ಪಿದ ದುರಂತ

Mangaluru ದ್ವಿಚಕ್ರ ವಾಹನ ಕಳವು; ದೂರು ದಾಖಲು

Mangaluru ದ್ವಿಚಕ್ರ ವಾಹನ ಕಳವು; ದೂರು ದಾಖಲು

MUST WATCH

udayavani youtube

ಈದ್ಗಾ ಮೈದಾನದಲ್ಲಿ ನಡೆದ ಬಕ್ರೀದ್ ಆಚರಣೆಯಲ್ಲಿ ಪ್ರಾರ್ಥನೆ ಸಲ್ಲಿಸಿದ ಆರ್ ಬಿ ತಿಮ್ಮಾಪುರ

udayavani youtube

ಮಾನಸಿಕ ಸಮಸ್ಯೆಯ ಲಕ್ಷಣಗಳೇನು?

udayavani youtube

ಈ ಇಳಿವಯಸ್ಸಿನಲ್ಲಿ ಇಂತದ್ದೆಲ್ಲ ಒಳ್ಳೆಯದಲ್ಲ… BSY ಕುರಿತು ಸಚಿವ ತಿಮ್ಮಾಪುರ ಹೇಳಿಕೆ

udayavani youtube

ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಆಡಳಿತ ಮಾಡಲು ಅಸಮರ್ಥರು

udayavani youtube

ಬಿಜೆಪಿ ಹಿರಿಯ ಮುಖಂಡ ಎಂ.ಬಿ‌.ಭಾನುಪ್ರಕಾಶ್ ಹೃದಯಾಘಾತದಿಂದ ನಿಧನ

ಹೊಸ ಸೇರ್ಪಡೆ

Mudhol ಬೈಕ್‌ಗಳ ಸರಣಿ ಕಳ್ಳತನ; ಆರೋಪಿ ಪೊಲೀಸ್‌ ವಶಕ್ಕೆ

Mudhol ಬೈಕ್‌ಗಳ ಸರಣಿ ಕಳ್ಳತನ; ಆರೋಪಿ ಪೊಲೀಸ್‌ ವಶಕ್ಕೆ

Rahul Gandhi resfused to take Leader of Opposition post In Lok Sabha

Lok Sabha; ವಿಪಕ್ಷ ನಾಯಕನ ಸ್ಥಾನಕ್ಕೆ ಹೆಸರು ಬಹುತೇಕ ಅಂತಿಮ; ಹುದ್ದೆ ಬೇಡ ಎಂದ ರಾಹುಲ್

Goa Calangute Beach: ಮೊಬೈಲ್,ಬ್ಯಾಗ್‍ ಕಳ್ಳತನ; ಮೂವರ ಬಂಧನ

Goa Calangute Beach: ಮೊಬೈಲ್,ಬ್ಯಾಗ್‍ ಕಳ್ಳತನ; ಮೂವರ ಬಂಧನ

ಬಾಗಲಕೋಟೆ: ಇಳಕಲ್ಲ ಸೀರೆಯುಟ್ಟು ಓಡಿದ 1500 ನಾರಿಯರು !

ಬಾಗಲಕೋಟೆ: ಇಳಕಲ್ಲ ಸೀರೆಯುಟ್ಟು ಓಡಿದ 1500 ನಾರಿಯರು !

ರಸ್ತೆ ಬದಿ ನಿಲ್ಲಿಸಿದ್ದ ಟ್ರ್ಯಾಕ್ಟರ್ ಟ್ರಾಲಿಗೆ ಬೈಕ್ ಡಿಕ್ಕಿ: ಸವಾರ ಸ್ಥಳದಲ್ಲೇ ಮೃತ್ಯು

ರಸ್ತೆ ಬದಿ ನಿಲ್ಲಿಸಿದ್ದ ಟ್ರ್ಯಾಕ್ಟರ್ ಟ್ರಾಲಿಗೆ ಬೈಕ್ ಡಿಕ್ಕಿ: ಸವಾರ ಸ್ಥಳದಲ್ಲೇ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.