ಕೈಗಾರಿಕಾ ತರಬೇತಿ ಕೇಂದ್ರ: ಲಕ್ಷಾಂತರ ರೂ. ವೆಚ್ಚದ ಸೊತ್ತುಗಳು ಕಳ್ಳರ ಪಾಲು


Team Udayavani, May 24, 2024, 1:15 PM IST

ಕೈಗಾರಿಕಾ ತರಬೇತಿ ಕೇಂದ್ರ: ಲಕ್ಷಾಂತರ ರೂ. ವೆಚ್ಚದ ಸೊತ್ತುಗಳು ಕಳ್ಳರ ಪಾಲು

ಬಂಟ್ವಾಳ: ಒಂದು ಕಾಲದಲ್ಲಿ ಬಹು ಬೇಡಿಕೆಯ ಕೋರ್ಸ್‌ ಎನಿಸಿಕೊಂಡಿದ್ದ ಜೆಒಸಿ (ಜಾಬ್‌ ಓರಿಯೆಂಟೆಡ್‌ ಕೋರ್ಸ್‌) ಶಿಕ್ಷಣ ನೀಡುತ್ತಿದ್ದ ಸರಕಾರಿ ಕೈಗಾರಿಕಾ ತರಬೇತಿ ಕೇಂದ್ರಗಳು ಉದ್ಯೋಗವಕಾಶ ಕೊರತೆಯಿಂದ ಮುಚ್ಚಿ ಹೋಗಿದ್ದು, ಕಡೇಶ್ವಾಲ್ಯದಲ್ಲಿ
ಕಾರ್ಯಾಚರಿಸುತ್ತಿದ್ದ ಕೈಗಾರಿಕಾ ತರಬೇತಿ ಕೇಂದ್ರವೂ ಇದೇ ಕಾರಣಕ್ಕೆ ಮುಚ್ಚಿ ಹೋಗಿತ್ತು. ಆದರೆ ಕೇಂದ್ರ ಮುಚ್ಚುವ ಸಂದರ್ಭ ಕೇಂದ್ರದ ಪರಿಕರಗಳನ್ನು ಅಲ್ಲೇ ಬಿಟ್ಟಿರುವ ಪರಿಣಾಮ ಲಕ್ಷಾಂತರ ರೂಪಾಯಿ ವೆಚ್ಚದ ಸೊತ್ತುಗಳು ಕಳ್ಳರ ಪಾಲಾಗಿದ್ದು, ಕಟ್ಟಡ ಪಾಳು ಬಿದ್ದಿದೆ.

ಕಡೇಶ್ವಾಲ್ಯದಲ್ಲಿ ಕಾರ್ಯಾಚರಿಸುತ್ತಿದ್ದ ಸರಕಾರಿ ತರಬೇತಿ ಕೇಂದ್ರದ ಕಟ್ಟಡಗಳು ಪ್ರಸ್ತುತ ಸಂಪೂರ್ಣ ಕಾಡಿನ ರೀತಿ ಪೊದೆಯಲ್ಲಿ ತುಂಬಿ ಹೋಗಿದ್ದು,ಕಟ್ಟಡವೂ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿ ಬೀಳುವ ಸ್ಥಿತಿಯಲ್ಲಿದೆ.ಸಂಬಂಧಪಟ್ಟ ಇಲಾಖೆಯು ಕೇಂದ್ರವನ್ನು ಮುಚ್ಚುವ ಸಂದರ್ಭ ತೋರಿದ ನಿರ್ಲಕ್ಷ್ಯದ ಪರಿಣಾಮ ಸರಕಾರದ ಸೊತ್ತುಗಳು
ನಾಶವಾಗಿವೆ.

1988ರಲ್ಲಿ ಕೇಂದ್ರ ಪ್ರಾರಂಭ
ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ವೃತ್ತಿ ಆಧಾರಿತ ಕೋರ್ಸ್‌ಗಳನ್ನು ನೀಡಬೇಕು ಎಂದು ಕೆಲವೊಂದು ಕಡೆಗಳಲ್ಲಿ ಇಂತಹ ತರಬೇತಿ ಕೇಂದ್ರಗಳನ್ನು ತೆರೆದಿತ್ತು. ಕಡೇಶ್ವಾಲ್ಯದಲ್ಲಿ ದ.ಕ.ಜಿ.ಪಂ. ಅನುದಾನದಡಿ ಗಿರಿಜನ ಉಪಯೋಜನೆಯಡಿ 1988ರಲ್ಲಿ ಸರಕಾರಿ ಕೈಗಾರಿಕಾ ತರಬೇತಿ ಮತ್ತು ಸೇವಾ ಕೇಂದ್ರವನ್ನು ಆರಂಭಿಸಲಾಗಿತ್ತು.

ಈ ಕೇಂದ್ರದಲ್ಲಿ ವಾಹನ ರಿಪೇರಿ, ಜನರಲ್‌ ಎಂಜಿನಿಯರಿಂಗ್‌ ಮೊದಲಾದ ವಿಷಯಕ್ಕೆ ಸಂಬಂಧಿಸಿ ತರಬೇತಿಯನ್ನು ನೀಡಲಾಗುತ್ತಿತ್ತು. ಬಂಟ್ವಾಳ ತಾಲೂಕು ಸೇರಿದಂತೆ ಇತರ ತಾಲೂಕುಗಳಿಂದ ಈ ಕೇಂದ್ರಕ್ಕೆ ವಿದ್ಯಾರ್ಥಿಗಳು ಆಗಮಿಸಿ ತರಬೇತಿ ಪಡೆಯುತ್ತಿದ್ದರು. 1996ರ ವರೆಗೆ ಅಂದರೆ ಸುಮಾರು 8 ಬರ್ಷಗಳ ಕಾಲ ಕಾರ್ಯಾಚರಿಸಿದ್ದ ಕೇಂದ್ರವು ಮತ್ತೆ ತೆರೆಯಲೇ ಇಲ್ಲ.

ಅಲ್ಲಿನ ತರಬೇತಿಗಾಗಿ ಉಪಯೋಗಿಸುತ್ತಿದ್ದ ಯಂತ್ರೋಪಕರಣಗಳು, ಅದರ ಬಿಡಿ ಭಾಗಗಳು, ಪೀಠೊಪಕರಣಗಳು
ಸೇರಿದಂತೆ ಇತರ ಸೊತ್ತುಗಳನ್ನು ಹಾಗೇ ಬಿಟ್ಟು ಬೀಗ ಹಾಕಲಾಗಿತ್ತು. ಈ ಕೇಂದ್ರದ ಕಟ್ಟಡವನ್ನು ಮತ್ತೆ ಉಪಯೋಗಿಸಬೇಕು ಎಂಬ ಪ್ರಯತ್ನದ ಫಲವಾಗಿ ವಯಸ್ಕರ ಶಿಕ್ಷಣ ಇಲಾಖೆಗೆ ಹಸ್ತಾಂತರಿಸಲು 2000ದಲ್ಲಿ ಜಿ.ಪಂ. ಸಾಮಾನ್ಯ ಸಭೆಯಲ್ಲಿ ರ್ಣಯಕೈಗೊಳ್ಳಲಾಗಿತ್ತು. ಬೆಂಗಳೂರಿನ ಲೋಕ ಶಿಕ್ಷಣ ನಿರ್ದೇಶನಾಲಯ ಈ ಕುರಿತು ಮಾಹಿತಿಯನ್ನೂ ಕೇಳಿತ್ತು. ಜತೆಗೆ ಕಡೇಶ್ವಾಲ್ಯ ಗ್ರಾ.ಪಂ. ಸಾಮಾನ್ಯ ಸಭೆಯಲ್ಲೂ ಚರ್ಚೆ ನಡೆದು ಕಟ್ಟಡವನ್ನು ಗ್ರಾ.ಪಂ.ಗೆ ಹಸ್ತಾಂತರಿಸುವ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ ಅದ್ಯಾವುದು ಕೂಡ ಪರಿಣಾಮಕಾರಿಯಾಗಿ ನುಷ್ಠಾನಗೊಂಡಿರಲಿಲ್ಲ.

ಕೇಂದ್ರವು ಮುಚ್ಚುವ ಸಂದರ್ಭದಲ್ಲೇ ಅಲ್ಲಿನ ಎಲ್ಲ ಯಂತ್ರೋಪಕರಣ, ಪೀಠೊಪಕರಣಗಳನ್ನು ಬೇರೆ ಇತರ ಸರಕಾರಿ ಸಂಸ್ಥೆಗೆ ಹಸ್ತಾಂತರಿಸಿದ್ದರೆ ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳು ಕಳ್ಳರ ಪಾಲಾಗುವುದು, ತುಕ್ಕು ಹಿಡಿದು ಹೋಗುವುದು ತಪ್ಪುತ್ತಿತ್ತು ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ.

ವಿಟ್ಲ ಐಟಿಐಗೆ ಹಸ್ತಾಂತರ
‌ಡೇಶ್ವಾಲ್ಯ ಸರಕಾರಿ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಯಂತ್ರೋಪಕರಣಗಳು ಪಾಳು ಬಿದ್ದಿರುವ ಜತೆಗೆ ಕಳ್ಳರ ಪಾಲಾಗುತ್ತಿರುವ ಮಾಹಿತಿ ಪಡೆದ ವಿಟ್ಲ ಸರಕಾರಿ ಐಟಿಐ ಕಾಲೇಜಿನವರು ಅಲ್ಲಿನ ಯಂತ್ರೋಪಕರಣಗಳು ತಮ್ಮ ಸಂಸ್ಥೆಗೆ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಅನುಮತಿ ಪಡೆದು 2 ಸೊತ್ತುಗಳನ್ನು ಪಡೆದುಕೊಂಡಿದ್ದರು.

*ಕಿರಣ್‌ ಸರಪಾಡಿ

ಟಾಪ್ ನ್ಯೂಸ್

1-imek-22

Controversy ನಡುವೆ “ಪ್ರೇರಣಾ ಸ್ಥಳ’ ಉದ್ಘಾಟನೆ

1-imek

ನಮ್ಮ ‘ಐಮೆಕ್‌’ ಪ್ರಾಜೆಕ್ಟ್ ಗೆ ಜಿ7 ನಾಯಕರ ಬೆಂಬಲ!

vande bharat

ಜೂ.20ಕ್ಕೆ ಬೆಂಗಳೂರು-ಮಧುರೈ ವಂದೇ ಭಾರತ್‌: ಕರ್ನಾಟಕಕ್ಕೆ 9ನೇ ರೈಲು

1-sugopi

ಇಂದಿರಾ ಗಾಂಧಿ ಕಾಂಗ್ರೆಸ್‌ ಮಾತೆ: ಉಲ್ಟಾ ಹೊಡೆದ ಸುರೇಶ್‌ ಗೋಪಿ

ಶಕ್ತಿ ಯೋಜನೆಯಿಂದ ಪ್ರವಾಸೋದ್ಯಮ ಚುರುಕು: ಸಚಿವ ಎಚ್‌.ಕೆ. ಪಾಟೀಲ್‌

ಶಕ್ತಿ ಯೋಜನೆಯಿಂದ ಪ್ರವಾಸೋದ್ಯಮ ಚುರುಕು: ಸಚಿವ ಎಚ್‌.ಕೆ. ಪಾಟೀಲ್‌

ಎಚ್‌ಡಿಕೆ ಕಾಲದಲ್ಲೂ ತೈಲ ದರ ಏರಿಸಿದ್ದರು: ಸಿದ್ಧರಾಮಯ್ಯ

ಎಚ್‌ಡಿಕೆ ಕಾಲದಲ್ಲೂ ತೈಲ ದರ ಏರಿಸಿದ್ದರು: ಸಿದ್ಧರಾಮಯ್ಯ

1-wewwqewq

T20 World Cup; ಐರ್ಲೆಂಡ್ ಎದುರು ಪಾಕ್ ಗೆ ಗೆಲುವಿನ ಸಮಾಧಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Missing Case ಉಪ್ಪಿನಂಗಡಿ: ತಾಯಿ, ಮಗ ನಾಪತ್ತೆMissing Case ಉಪ್ಪಿನಂಗಡಿ: ತಾಯಿ, ಮಗ ನಾಪತ್ತೆ

Missing Case ಉಪ್ಪಿನಂಗಡಿ: ತಾಯಿ, ಮಗ ನಾಪತ್ತೆ

Subramanya: ವಿದ್ಯುತ್‌ ಕಂಬಕ್ಕೆ ಕಾರು ಢಿಕ್ಕಿ

Subramanya: ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಕಾರು

Road Mishap ಕಡಪಾಲ: ಕಾರುಗಳ ಮುಖಾಮುಖಿ ಢಿಕ್ಕಿ

Road Mishap ಕಡಪಾಲ: ಕಾರುಗಳ ಮುಖಾಮುಖಿ ಢಿಕ್ಕಿ

Mangaluru ದ್ವಿಚಕ್ರ ವಾಹನ ಕಳವು; ದೂರು ದಾಖಲು

Mangaluru ದ್ವಿಚಕ್ರ ವಾಹನ ಕಳವು; ದೂರು ದಾಖಲು

Belthangady ತಾಯಿಗೆ ಅನಾರೋಗ್ಯ: ವಿದ್ಯಾರ್ಥಿನಿ ಆತ್ಮಹತ್ಯೆ

Belthangady ತಾಯಿಗೆ ಅನಾರೋಗ್ಯ: ವಿದ್ಯಾರ್ಥಿನಿ ಆತ್ಮಹತ್ಯೆ

MUST WATCH

udayavani youtube

ಕೆ‌ಎಸ್‌ಆರ್‌ಟಿಸಿ‌ ಬಸ್- ಬೈಕ್ ಮುಖಾಮುಖಿ ಢಿಕ್ಕಿ ; ಸವಾರ ಮೃತ್ಯು

udayavani youtube

ಇಡ್ಲಿ, ವಡೆ, ಚಟ್ನಿ ಗೆ ತುಂಬಾ ಫೇಮಸ್ ಈ ಹೋಟೆಲ್

udayavani youtube

ಕಾಪು ಸರ್ವೀಸ್ ರಸ್ತೆಯಲ್ಲಿ ರಿಕ್ಷಾ ಚಾಲಕ ಮತ್ತು ಬೈಕ್ ಸವಾರನ ನಡುವೆ ಹೊಡೆದಾಟ

udayavani youtube

ದರ್ಶನ್ ಗ್ಯಾಂಗ್ ಕ್ರೌರ್ಯ ಹೇಗಿತ್ತು ಗೊತ್ತಾ..? ವೈರಲ್ ಆಡಿಯೋ ಇಲ್ಲಿದೆ

udayavani youtube

Udupi: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

ಹೊಸ ಸೇರ್ಪಡೆ

1-imek-22

Controversy ನಡುವೆ “ಪ್ರೇರಣಾ ಸ್ಥಳ’ ಉದ್ಘಾಟನೆ

police crime

ಗೇಮಿಂಗ್‌ ಜೋನ್‌ ದುರಂತ: ಇನ್ನೂ ಇಬ್ಬರು ಪೊಲೀಸ್‌ ವಶಕ್ಕೆ

police USA

ಅಮೆರಿಕದಲ್ಲಿ 2 ಪ್ರತ್ಯೇಕ ಶೂಟೌಟ್‌: ಇಬ್ಬರು ಸಾವು

arrested

ಸಲ್ಮಾನ್‌ ಮನೆ ಹೊರಗೆ ಗುಂಡಿನ ದಾಳಿ: ರಾಜಸ್ಥಾನದ ವ್ಯಕ್ತಿ ಸೆರೆ

baby

UP ಕ್ಷುಲ್ಲಕ ಕಾರಣಕ್ಕೆ 2 ವರ್ಷದ ಮಗಳನ್ನು ಕಾಲುವೆಗೆಸೆದ ತಂದೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.