ಸಾಧನೆಗೆ ಸಂಗೀತದ ತಳ ಹದಿಯ ಬಗ್ಗೆ ತಿಳಿಯುವುದೂ ಬಹುಮುಖ್ಯ


Team Udayavani, Mar 15, 2018, 5:33 PM IST

15-March-16.jpg

ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಲು ಸ್ವರ ಮಾತ್ರ ಇದ್ದರೆ ಸಾಲದು. ಇದರ ಜತೆಗೆ ಸಂಗೀತದ ತಳಹದಿ ಕೂಡ ಮುಖ್ಯ ಎಂದು ಮಾತಿಗಿಳಿದ ಬಸ್ತಿಕಾರ್‌ ಕವಿತಾ ವಿಜಯ್‌ ಶೆಣೈ ಇವರು ಹಿಂದೂಸ್ತಾನಿ ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತ, ಭಜನೆ ಕ್ಷೇತ್ರದಲ್ಲಿ ಗುರುತಿಸಿಕೊಂಡು ಅನೇಕರಿಗೆ ಕಲಿತ ವಿದ್ಯೆಯನ್ನು ಧಾರೆ ಎರೆಯುತ್ತಿದ್ದಾರೆ.

ಕೋಟೆಕಾರ್‌ ಶ್ರೀಧರ ಕಾಮತ್‌ ಮತ್ತು ವೇದಾವತಿ ಕಾಮತ್‌ ದಂಪತಿ ಪುತ್ರಿಯಾದ ಇವರಿಗೆ ಸಂಗೀತ ಕ್ಷೇತ್ರಕ್ಕೆ ಮನೆಯೇ ಮೊದಲ ಪಾಠ ಶಾಲೆ. ಬಾಲ್ಯದಿಂದಲೇ ಸಂಗೀತ ಕ್ಷೇತ್ರದಲ್ಲಿ ಕೃಷಿ ಮಾಡಿರುವ ಇವರು ಕಳೆದ 8 ವರ್ಷಗಳಿಂದ ಮಂಗಳೂರಿನ ಗಾಂಧೀನಗರದಲ್ಲಿ ಸ್ವರ ಸೇವಾ ಎಂಬ ಭಜನೆ, ಹಿಂದೂಸ್ತಾನಿ ಸಂಗೀತ ಮತ್ತು ಸ್ತೋತ್ರ ತರಗತಿಯನ್ನು ಕಲಿಸುತ್ತಿದ್ದಾರೆ. ನನ್ನ ಸಾಧನೆಯ ಹಿಂದೆ ಪತಿ ಬಸ್ತಿ ವಿಜಯ್‌ ಶೆಣೈ ಅವರು ಬೆಂಬಲವಾಗಿದ್ದಾರೆ ಎನ್ನುತ್ತಾರೆ ಕವಿತಾ.

ಸಂಗೀತ ಕ್ಷೇತ್ರದಲ್ಲಿ ಆಸಕ್ತಿ ಹುಟ್ಟಿದ್ದು ಹೇಗೆ?
ಚಿಕ್ಕಂದಿನಿಂದಲೇ ನಾನು ಸಂಗೀತ ಕ್ಷೇತ್ರದ ಹಿನ್ನೆಲೆಯುಳ್ಳ ಕುಟುಂಬದಲ್ಲಿ ಬೆಳೆದಳು. ನನ್ನ ತಂದೆ ಕೋಟೇಶ್ವರದ ದೇವಸ್ಥಾನದಲ್ಲಿನ ಹಾಡುತ್ತಿದ್ದರು. ನಾನು ಕೂಡ ದೇವಸ್ಥಾನಕ್ಕೆ ತೆರಳುವ ವೇಳೆ ಸಂಗೀತ, ವಾದ್ಯಗಳನ್ನು ಕೇಳುತ್ತಿದ್ದೆ. ತನ್ನಿಂತಾನೆ ಹಾಡಲು ಆಸಕ್ತಿ ಹುಟ್ಟಿತು. ನನ್ನ ಸ್ವರ ಚೆನ್ನಾಗಿದ್ದರಿಂದ ಹೆತ್ತ ವರು ಸಂಗೀತ ಕಲಿಯಲು ಸೇರಿಸಿದರು.

ಇಂದಿನ ಕೆಲವು ಚಲನಚಿತ್ರ ಹಾಡುಗಳಿಂದ ಮೂಲ ಸಂಗೀತಕ್ಕೆ ಧಕ್ಕೆಯಾಗುತ್ತಿವೆಯೇ?
ಕೆಲ ವರ್ಷಗಳ ಹಿಂದೆ ಜನರು ಪಾಪ್‌ ಸಂಗೀತದತ್ತ ವಾಲಿದ್ದರು. ಆದರೆ ಇತ್ತೀಚೆಗೆ ಆ ಸಂಗೀತಕ್ಕೆ ಭವಿಷ್ಯವಿಲ್ಲ ಎಂದು ತಿಳಿದಿದೆ. ಪುನಃ ಮೂಲ ಸಂಗೀತದ ಕಡೆಗೆ ಬರುತ್ತಿದ್ದಾರೆ. ಈಗ ಕಾಲ ಬದಲಾಗಿದೆ. ಪೋಷಕರು ಮಕ್ಕಳಿಗೆ ಶಾಸ್ತ್ರೀಯ ಸಂಗೀತ ಕಲಿಸಲು ಉತ್ಸುಕರಾಗಿದ್ದಾರೆ. ಅದರಂತೆಯೇ ಮಕ್ಕಳು ಕೂಡ ಆಸಕ್ತಿ ತೋರುತ್ತಿದ್ದಾರೆ.

ಸ್ಪರ್ಧೆಗೋಸ್ಕರ ಮಾತ್ರ ಸಂಗೀತದ ಮೊರೆ ಹೋಗುತ್ತಿದ್ದಾರಲ್ಲ?
ಹೌದು .. ನಿಜ ರಿಯಾಲಿಟಿ ಶೋದಲ್ಲಿ ಹಾಡಬೇಕು. ಸ್ಪರ್ಧೆಯಲ್ಲಿ ಬಹುಮಾನ ಪಡೆಯಬೇಕು ಎಂಬ ಉದ್ದೇಶಕ್ಕೋಸ್ಕರ ಒಂದು ವಾರದಲ್ಲಿ ಸಂಗೀತ ಹೇಳಿಕೊಡಿ ಎಂದು ಪೋಷಕರು ಕೇಳುತ್ತಾರೆ. ಇದು ತಪ್ಪು. ಸಂಗೀತ ಕಲಿಯುವುದು ಎಂದರೆ ತಪಸ್ಸು. ಗಾಯಕರಿಗೆ ಸಂಗೀತದ ತಳಹದಿ ತಿಳಿಯದಿದ್ದರೆ ಯಾವ ರೀತಿ ಹಾಡಲು ಸಾಧ್ಯ?.

ಎಲ್ಲೆಲ್ಲ ಹಿಂದೂಸ್ತಾನಿ ಸಂಗೀತ ಪ್ರದರ್ಶನ ನೀಡಿದ್ದೀರಿ?
ಇಲ್ಲಿಯವರೆಗೆ ಸುಮಾರು 200ಕ್ಕೂ ಹೆಚ್ಚು ವೇದಿಕೆಗಳಲ್ಲಿ ಪ್ರದರ್ಶನ ನೀಡಿದ್ದೇನೆ. ಅದರಲ್ಲಿಯೂ, ಮುಂಬಯಿ, ದೆಹಲಿ, ಹರಿದ್ವಾರ, ಹೈದರಾಬಾದ್‌, ಕೊಚ್ಚಿನ್‌, ಎರ್ನಾಕುಲಂ ಕೇರಳ, ಹುಬ್ಬಳ್ಳಿ, ಮೈಸೂರು, ಬೆಂಗಳೂರು, ಮಂಗಳೂರು ಸಹಿತ ರಾಜ್ಯ ಮತ್ತು ವಿವಿಧ ಹೊರ ರಾಜ್ಯಗಳಲ್ಲಿ ಪ್ರದರ್ಶನ ನೀಡಿದ್ದೇನೆ.

ನಿಮ್ಮ ಹಾಡಿನ ಧ್ವನಿ ಸುರಳಿ ಬಿಡುಗಡೆಯಾಗಿದೆಯೇ?
ಕಳೆದ ಕೆಲ ಸಮಯಗಳ ಹಿಂದೆ ‘ಶ್ರೀ ಸುಧೀಂದ್ರವಂದನ’ ಎಂಬ ಭಜನೆ ಹಾಡುಗಳುಳ್ಳ ಸಿ.ಡಿ. ಬಿಡುಗಡೆಯಾಗಿದೆ. ಇದರಲ್ಲಿ 4 ಭಜನೆ ಹಾಡನ್ನು ಹಾಡಿದ್ದೇನೆ. ಇನ್ನೇನು ಸದ್ಯದಲ್ಲಿಯೇ ಮಗದೊಂದು ಸಿ.ಡಿ. ಬಿಡುಗಡೆ ಮಾಡುವ ತಯಾರಿಯಲ್ಲಿದ್ದೇನೆ. 

ನವೀನ್‌ ಭಟ್‌ ಇಳಂತಿಲ

ಟಾಪ್ ನ್ಯೂಸ್

ನಮ್ಮ ವಿರುದ್ಧ ಷಡ್ಯಂತ್ರ: ಎಚ್‌.ಡಿ. ರೇವಣ್ಣ

ನಮ್ಮ ವಿರುದ್ಧ ಷಡ್ಯಂತ್ರ: ಎಚ್‌.ಡಿ. ರೇವಣ್ಣ

1-qewqeqw

Tragedy; ಲಚ್ಯಾಣ ರಥೋತ್ಸವ ಗಾಯಾಳುವೂ ಸಾವು: ಮೃತರ ಸಂಖ್ಯೆ ಮೂರಕ್ಕೇರಿಕೆ

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

1-qeqwewqe

Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು

1-qeqewewq

Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ನಮ್ಮ ವಿರುದ್ಧ ಷಡ್ಯಂತ್ರ: ಎಚ್‌.ಡಿ. ರೇವಣ್ಣ

ನಮ್ಮ ವಿರುದ್ಧ ಷಡ್ಯಂತ್ರ: ಎಚ್‌.ಡಿ. ರೇವಣ್ಣ

1-qewqeqw

Tragedy; ಲಚ್ಯಾಣ ರಥೋತ್ಸವ ಗಾಯಾಳುವೂ ಸಾವು: ಮೃತರ ಸಂಖ್ಯೆ ಮೂರಕ್ಕೇರಿಕೆ

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

1-qeqwewqe

Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು

police

Bidar; ಹಣ ಹಂಚುವ ದೂರು: ನಾಗಮಾರಪಳ್ಳಿ‌ ಮನೆಯಲ್ಲಿ ಪರಿಶೀಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.