ಜೋಮ್ಲು ತೀರ್ಥ: ಸುರಕ್ಷತೆಗೆ ಇರಲಿ ಆದ್ಯತೆ


Team Udayavani, Jun 19, 2018, 6:00 AM IST

1806bvre4.jpg

ಬ್ರಹ್ಮಾವರ: ಕಳೂ¤ರು ಸಂತೆಕಟ್ಟೆ ಸಮೀಪದ ಜೋಮ್ಲು ತೀರ್ಥ ಪ್ರಾಕೃತಿಕ ಸೌಂದರ್ಯದ ನಡುವಿನ ಸುಂದರ ಜಲಪಾತ. ಆದರೆ ಅಷ್ಟೇ ಅಪಾಯಕಾರಿಯಾದ್ದರಿಂದ ಸುರಕ್ಷತೆಯೂ ಅತ್ಯಗತ್ಯ.

ಹೆಬ್ರಿ ಸಮೀಪದ ಕಳೂ¤ರು ಸಂತೆಕಟ್ಟೆಯಿಂದ ಸುಮಾರು 6 ಕೀ.ಮಿ. ದೂರದಲ್ಲಿದೆ ಜೋಮ್ಲು ಜಲಪಾತ. ಮಳೆಗಾಲದಲ್ಲಿ ಭೋರ್ಗರೆಯುತ್ತಾ ಬರುವ ಸೀತೆ ಸುಮಾರು 30 ಅಡಿ ಆಳಕ್ಕೆ ಧುಮುಕುವ ಸ್ಥಳವಾಗಿದೆ. ಶ್ರೀ ಬೊಬ್ಬರ್ಯ ಆರಾಧ್ಯ ಸ್ಥಳವಾದ ಇದು ಜೋಮ್ಲು ತೀರ್ಥವೆಂದೇ ಪ್ರಸಿದ್ಧವಾಗಿದೆ. ಪ್ರತಿ ವರ್ಷ ಎಳ್ಳಮವಾಸ್ಯೆಯಂದು ಜಾತ್ರೆ ಜರಗುತ್ತದೆ.

ಸುರಕ್ಷತೆ ಅಗತ್ಯ
ಸಂತೆಕಟ್ಟೆಯಿಂದ ಬಹುತೇಕ ಕಾಡು ದಾರಿಯಲ್ಲೇ ಸಾಗಬೇಕಿದೆ. ಕಾಡುಕೋಣ, ಜಿಂಕೆ ಮೊದಲಾದ ಪ್ರಾಣಿಗಳು ಸಂಚರಿಸುವ ಸ್ಥಳವಾದ್ದರಿಂದ ಜಾಗರೂಕರಾಗಿಬೇಕು.

ನೋಡಲಷ್ಟೇ ಚಂದ
ನೀರು ಧುಮುಕುವ ಸ್ಥಳ ತೀರಾ ಅಪಾಯಕಾರಿಯಾದ್ದರಿಂದ ನೋಡಲಷ್ಟೆ ಚಂದ. ಕೊರಕಲು ಕಲ್ಲುಗಳ ನಡುವೆ ಎಚ್ಚರ ತಪ್ಪಿದರೆ ಅವಘಡ ನಿಶ್ಚಿತ. ಮಳೆಗಾಲದ ಸಮಯ ಜಲಪಾತದ ಆಸುಪಾಸು ಸಹ ನೀರಿಗಿಳಿಯುವುದು ಸುರಕ್ಷಿತವಲ್ಲ.

ಸಾಕಷ್ಟು ಅಭಿವೃದ್ಧಿ
ಇತ್ತೀಚಿನ ದಿನಗಳಲ್ಲಿ ಚಾರಾ ವಿವೇಕಾನಂದ ಯುವ ವೇದಿಕೆ, ಅರಣ್ಯ ಇಲಾಖೆ ಹಾಗೂ ಗ್ರಾ.ಪಂ. ಸಹಯೋಗದಲ್ಲಿ ಸಾಕಷ್ಟು ಅಭಿವೃದ್ಧಿಗೊಳಿಸಲಾಗಿದೆ. ಜಲಪಾತಕ್ಕೆ ತೆರಳುವ ದಾರಿ ದುರಸ್ತಿಗೊಳಿಸಿ, ಸ್ವತ್ಛತೆಗೆ ಆದ್ಯತೆ ನೀಡಲಾಗಿದೆ. ಪರಿಸರ ಸಂರಕ್ಷಣೆಯ ಫಲಕಗಳನ್ನು ಅಳವಡಿಸಲಾಗಿದೆ.

ಕುದುರೆಮುಖ ವನ್ಯಜೀವಿ ಸಂರಕ್ಷಣಾ ವಿಭಾಗಕ್ಕೆ ಒಳಪಟ್ಟ ಜೋಮ್ಲು ತೀರ್ಥದಲ್ಲಿ ಸುರಕ್ಷತೆಗಾಗಿ ಓರ್ವ ಸಿಬಂದಿಯನ್ನು ನೇಮಿಸಲಾಗಿದೆ. 

ಆಹಾರ ಮರೆಯಬೇಡಿ
ತಿನ್ನಲು, ಕುಡಿಯಲು ಏನು ಬೇಕಿದ್ದರೂ ಸುಮಾರು 6 ಕಿ.ಮೀ. ದೂರದ ಸಂತೆಕಟ್ಟೆ ಅಥವಾ ಮುದ್ದೂರಿಗೆ ತೆರಳಬೇಕು. ಆದ್ದರಿಂದ ಜೋಮ್ಲು ತೀರ್ಥಕ್ಕೆ ಹೋಗುವುದಾದರೆ ಆಹಾರ ವಸ್ತುಗಳನ್ನು ಕೊಂಡೊಯ್ಯಲು ಮರೆಯಬೇಡಿ.

ಯಾವ ಯಾವ ದಾರಿಗಳು ?
ಉಡುಪಿಯಿಂದ ಬ್ರಹ್ಮಾವರ ಮೂಲಕ ಕಳೂ¤ರು ಸಂತೆಕಟ್ಟೆ  30 ಕಿ.ಮೀ. ಅಥವಾ ಹೆಬ್ರಿ ಮೂಲಕ ಕಳೂ¤ರು ಸಂತೆಕಟ್ಟೆ  38 ಕಿ.ಮೀ. ತಲುಪಬಹುದು. ಅಲ್ಲಿಂದ 5 ಕಿ.ಮೀ. ಡಾಮರು ರಸ್ತೆ ಹಾಗೂ ಸುಮಾರು 1 ಕಿ.ಮೀ. ಮಣ್ಣು ರಸ್ತೆಯಲ್ಲಿ ಕ್ರಮಿಸಿದರೆ ಜೋಮ್ಲು ತೀರ್ಥ ತಲುಪುತ್ತದೆ. ಮಂದಾರ್ತಿ, ಕೊಕ್ಕರ್ಣೆ ಭಾಗದವರು ಮುದ್ದೂರು ಮೂಲಕ 4 ಕಿ.ಮೀ. ತೆರಳಿದರೆ ಜೋಮ್ಲು ಸಿಗುತ್ತದೆ. ನಿರ್ಜನ ಪ್ರದೇಶವಾದ್ದರಿಂದ ತಂಡವಾಗಿ ತೆರಳುವುದು ಸುರಕ್ಷಿತ.

ಪ್ರಸ್ತಾವನೆ ಸಲ್ಲಿಕೆ
ಸುರಕ್ಷತೆ ದೃಷ್ಟಿಯಿಂದ ಇಲಾಖೆಯ ಸಿಬಂದಿ ಇರುತ್ತಾರೆ. ಮಳೆಗಾಲದಲ್ಲಿ ಹಾಗೂ ವಾರಾಂತ್ಯದಲ್ಲಿ ಹೆಚ್ಚುವರಿ ಸಿಬಂದಿ ಕರೆಯಿಸಿಕೊಳ್ಳಲಾಗುತ್ತದೆ. ಮುಂದೆ ಟಿಕೆಟ್‌ ದರ ನಿಗದಿಪಡಿಸಿ, ಇನ್ನಷ್ಟು ಸೌಲಭ್ಯ ಕಲ್ಪಿಸುವ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.
– ವಾಣಿಶ್ರೀ ಹೆಗ್ಡೆ
ರೇಂಜ್‌ ಫಾರೆಸ್ಟರ್‌, ಸೋಮೇಶ್ವರ ವಲಯ

ತಪಾಸಣೆ ಅಗತ್ಯ
ಜೋಮ್ಲುವಿಗೆ ಬರುವ ಪ್ರವಾಸಿಗರ ಮಾಹಿತಿ ದಾಖಲಿಸುವ, ತರುವ ವಸ್ತುಗಳನ್ನು ಪರಿಶೀಲಿಸುವ ಕೇಂದ್ರ ತೆರೆಯಬೇಕು. ಟಿಕೆಟ್‌ ದರ ನಿಗದಿಪಡಿಸಿ ಸುರಕ್ಷತೆ ಒದಗಿಸಬೇಕು.
– ಮಿಥುನ್‌ ಶೆಟ್ಟಿ ಚಾರಾ
ವಿವೇಕಾನಂದ ಯುವ ವೇದಿಕೆ

– ಪ್ರವೀಣ್‌ ಮುದ್ದೂರು

ಟಾಪ್ ನ್ಯೂಸ್

ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

1-wqeqwewewqe

IPL; ಹೊಸ ಉತ್ಸಾಹದಲ್ಲಿರುವ ಆರ್‌ಸಿಬಿ ಮುಂದೆ ಗುಜರಾತ್‌ ಹರ್ಡಲ್ಸ್‌

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌

1-24-sunday

Daily Horoscope: ವಸ್ತ್ರಾಭರಣ ಖರೀದಿಗೆ ಧನವ್ಯಯ, ಅವಿವಾಹಿತರಿಗೆ ಶೀಘ್ರ ವಿವಾಹ ಯೋಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

1-wqeqwewewqe

IPL; ಹೊಸ ಉತ್ಸಾಹದಲ್ಲಿರುವ ಆರ್‌ಸಿಬಿ ಮುಂದೆ ಗುಜರಾತ್‌ ಹರ್ಡಲ್ಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.