ದೇಹದಾನ ಮಾಡಿ ಎಲ್ಲರಿಗೂ ಮಾದರಿಯಾದ ಬಾಲಕಿ


Team Udayavani, Nov 2, 2018, 4:15 AM IST

prateeksha-2-11.jpg

ಮಂಗಳೂರು: ಹತ್ತನೇ ತರಗತಿ ವಿದ್ಯಾರ್ಥಿನಿಯೊಬ್ಬಳು ತನ್ನ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾಳೆ. ದೇಹದಾನ, ಅಂಗಾಂಗ ದಾನಗಳ ಕುರಿತು ಜನರಲ್ಲಿ ಸಾಕಷ್ಟು ಅರಿವು ಮೂಡುತ್ತಿರುವ ದಿನಗಳಲ್ಲಿ ಈಕೆಯೂ ಅಂಥದ್ದೇ ಒಂದು ಉದಾಹರಣೆಯನ್ನು ಉಳಿಸಿಹೋಗಿದ್ದಾಳೆ. ಅಶೋಕ ನಗರದ ಪ್ರತೀಕ್ಷಾ (16) ಪ್ರತಿಭಾವಂತ ವಿದ್ಯಾರ್ಥಿನಿ. ಕಾಯಿಲೆಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದಳು. ಆಕೆಗೆ ಸಾವೇ ಖಚಿತ ಎನಿಸತೊಡಗಿದ್ದಾಗ ತನ್ನ ಪೋಷಕರಲ್ಲಿ, “ನಾನು ಒಂದುವೇಳೆ ಇಲ್ಲವಾದರೆ ದೇಹವನ್ನು ದಾನ ಮಾಡಿ’ ಎಂದಿದ್ದಳಂತೆ. ಅದು ಅವಳ ಕೊನೆ ಇಚ್ಛೆ. ಅದೃಷ್ಟ ಕೈಗೂಡಲಿಲ್ಲ; ಕೊನೆಯುಸಿರೆಳೆದಳು. ಆಕೆಯ ಪೋಷಕರಾದ ಕುಮಾರಸ್ವಾಮಿ ಕೊಕ್ಕಡ ಹಾಗೂ ವಂದನಾ ದಂಪತಿ ತಮ್ಮ ಮಗಳ ಇಚ್ಛೆಯನ್ನು ಗುರುವಾರ ನೆರವೇರಿಸಿದರು.

ಮೂವರೂ ಪ್ರತಿಭಾವಂತರು 
ಕುಮಾರಸ್ವಾಮಿ – ವಂದನಾ ದಂಪತಿಗೆ ಮೂವರು ಮಕ್ಕಳು. ಹಿರಿಯ ಪುತ್ರ ಪ್ರಜ್ವಲ್‌ ಕೃಷ್ಣ ಸಂತ ಅಲೋಶಿಯಸ್‌ ಕಾಲೇಜಿನ ದ್ವಿತೀಯ ವರ್ಷದ ಪದವಿ ಕಲಿಯುತ್ತಿದ್ದರೆ, ಅನಂತರ ಹುಟ್ಟಿದ ಪ್ರತೀಕ್ಷಾ ಮತ್ತು ಪ್ರೀತಂ ಅವಳಿ ಮಕ್ಕಳು. ಇಬ್ಬರೂ ಈಗ ಕೊಡಿಯಾಲ್‌ಬೈಲ್‌ನ ಶಾರದಾ ವಿದ್ಯಾಲಯದಲ್ಲಿ ಹತ್ತನೇ ತರಗತಿಯಲ್ಲಿ ಓದುತ್ತಿದ್ದರು. ಪ್ರತೀಕ್ಷಾಳಿಗೆ 6ನೇ ತರಗತಿ ಓದುತ್ತಿದ್ದಾಗ ಎಲುಬಿನ ಕ್ಯಾನ್ಸರ್‌ ಕಾಣಿಸಿಕೊಂಡಿತ್ತು. ಎರಡು ವರ್ಷಗಳ ಚಿಕಿತ್ಸೆಯ ಬಳಿಕ ಗುಣಮುಖ ಹೊಂದಿದ್ದಳು. ಆದರೆ ಒಂದೇ ವರ್ಷದಲ್ಲಿ ಕಾಯಿಲೆ ಮರುಕಳಿಸಿತ್ತು. ಆ ಬಳಿಕ ಚಿಕಿತ್ಸೆ ಪಡೆಯುತ್ತಲೇ ವ್ಯಾಸಂಗವನ್ನು ಮುಂದುವರಿಸಿದ್ದಳು. ಒಟ್ಟು ಐದು ವರ್ಷಗಳ ಸುದೀರ್ಘ‌ ಅವಧಿಯ ಚಿಕಿತ್ಸೆಯೂ ಫ‌ಲಕಾರಿಯಾಗದೆ ಬುಧವಾರ ರಾತ್ರಿ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಳು.

ಮೂವರೂ ಮಕ್ಕಳು ಕಲಿಕೆಯಲ್ಲಿ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಪ್ರತಿಭಾವಂತರು. ಸಂಗೀತ, ಯಕ್ಷಗಾನ ಮತ್ತು ಭರತನಾಟ್ಯವನ್ನು ಕಲಿತಿದ್ದರು. ಪ್ರತೀಕ್ಷಾ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಜೂನಿಯರ್‌ ತೇರ್ಗಡೆ ಹೊಂದಿದ್ದಳು. ಪಠ್ಯ ವಿಷಯಗಳಲ್ಲಿ ಉತ್ತಮ ಅಂಕ ಗಳಿಸುತ್ತಿದ್ದಳು.

ದೇಹ ದಾನಕ್ಕೆ ಅಣ್ಣ ಪ್ರಜ್ವಲ್‌ ಕೃಷ್ಣ ಮುಖ್ಯ ಪ್ರೇರಣೆ. ಆತನಿಗೆ ಸಾಮಾಜಿಕ ಚಟುವಟಿಕೆಗಳಲ್ಲಿ ಆಸಕ್ತಿ. ಶಾರದಾ ವಿದ್ಯಾಲಯದ ಅಧ್ಯಕ್ಷ ಎಂ.ಬಿ. ಪುರಾಣಿಕ್‌ ಅವರೂ ಈ ನಿಟ್ಟಿನಲ್ಲಿ ಉತ್ತೇಜನ ನೀಡುತ್ತಿದ್ದರು ಎನ್ನುತ್ತಾರೆ ತಂದೆ ಕುಮಾರಸ್ವಾಮಿ. ಪ್ರತೀಕ್ಷಾ 20 ದಿನಗಳ ಹಿಂದೆ, ತಾನು ಸತ್ತರೆ ದೇಹವನ್ನು ಕೆಎಂಸಿಗೆ ದಾನ ಮಾಡಬೇಕೆಂದು ತಾಯಿಯ ಬಳಿ ಹೇಳಿದ್ದಳು. ಅದರಂತೆ ಗುರುವಾರ ದೇಹವನ್ನು ಹಸ್ತಾಂತರಿಸಲಾಯಿತು.

ಡಾಕ್ಟರ್‌ ಆಗುವ ಆಸೆ ಇತ್ತು
ಪ್ರತೀಕ್ಷಾಳಿಗೆ ತಾನು ಡಾಕ್ಟರ್‌ ಆಗಬೇಕೆಂಬ ಆಸೆ ಇತ್ತು. ಇದಕ್ಕೆ ಪೂರಕವಾಗಿ ವಿಜ್ಞಾನದಲ್ಲಿ ಆಸಕ್ತಿ ಹೆಚ್ಚಿತ್ತು. ಈ ಹಿನ್ನೆಲೆಯಲ್ಲಿ ಆಕೆ ತನ್ನ ದೇಹದಾನ ಮಾಡುವ ಇಚ್ಛೆಯನ್ನು ವ್ಯಕ್ತಪಡಿಸಿರಬಹುದು ಎಂದು ತಂದೆ ತಿಳಿಸಿದರು.

ಅವಳ ಇಚ್ಛೆ ಪೂರೈಸಿದೆವು
ದೇಹದಾನ ಎಂಬುದು ನಮ್ಮ (ಬ್ರಾಹ್ಮಣ) ಸಂಪ್ರದಾಯದಲ್ಲಿ  ಇಲ್ಲ. ಆದರೂ ಆಕೆಯ ಇಚ್ಛೆಯನ್ನು ನಾವು ಈಡೇರಿಸುವ ನಿಟ್ಟಿನಲ್ಲಿ  ಇದಕ್ಕೆ ಒಪ್ಪಿಗೆ ಸೂಚಿಸಿದೆವು.
– ಕುಮಾರಸ್ವಾಮಿ ಕೊಕ್ಕಡ, (ತಂದೆ)

ಟಾಪ್ ನ್ಯೂಸ್

Restaurant Sealed: ಸಾಂಬಾರ್ ನಲ್ಲಿ ಸತ್ತ ಇಲಿ, ಗ್ರಾಹಕ ಶಾಕ್..! ರೆಸ್ಟೋರೆಂಟ್ ಗೆ ಸೀಲ್

Restaurant Sealed: ಸಾಂಬಾರ್ ನಲ್ಲಿ ಸತ್ತ ಇಲಿ, ಗ್ರಾಹಕ ಶಾಕ್..! ರೆಸ್ಟೋರೆಂಟ್ ಗೆ ಸೀಲ್

akash

Singapore ಬಿಟ್ಟು ಬೆಂಗಳೂರಲ್ಲಿ ನೆಲೆಸಿದ ಉದ್ಯಮಿ; ವೈರಲ್ ಆಯ್ತು ಆತ ನೀಡಿದ ಕಾರಣ

14-

ಕಾರ ಹುಣ್ಣಿಮೆ; ಮಣ್ಣಿನ ಎತ್ತುಗಳ ಪೂಜೆಯ ಸಂಭ್ರಮ; ಕನ್ನಡದ ಮೊದಲ ಮಣ್ಣಿನ ಹಬ್ಬ ಕಾರಹುಣ್ಣಿಮೆ

ಅಮೆರಿಕದ ಕಾಲೇಜಿನಲ್ಲಿ ಪದವಿ ಪಡೆದರೆ Green Card! ವಿದೇಶಿ ವಿದ್ಯಾರ್ಥಿಗಳಿಗೆ ಟ್ರಂಪ್ ಭರವಸೆ

ಅಮೆರಿಕದ ಕಾಲೇಜಿನಲ್ಲಿ ಪದವಿ ಪಡೆದರೆ Green Card! ವಿದೇಶಿ ವಿದ್ಯಾರ್ಥಿಗಳಿಗೆ ಟ್ರಂಪ್ ಭರವಸೆ

Haveri; ಜನರನ್ನು ಸಂಕಷ್ಟಕ್ಕೆ ನೂಕಿ ಅದ್ಯಾವ ಅಭಿವೃದ್ಧಿ ಮಾಡುತ್ತಾರೆ?: ಬೊಮ್ಮಾಯಿ

Haveri; ಜನರನ್ನು ಸಂಕಷ್ಟಕ್ಕೆ ನೂಕಿ ಅದ್ಯಾವ ಅಭಿವೃದ್ಧಿ ಮಾಡುತ್ತಾರೆ?: ಬೊಮ್ಮಾಯಿ

Dhananjaya as Nadaprabhu Kempegowda

Dhananjaya; ನಾಡಪ್ರಭು ಕೆಂಪೇಗೌಡ ಪಾತ್ರದಲ್ಲಿ ಡಾಲಿ

Pat Cummins becomes the 2nd Australian to pick a hat-trick in the T20 World Cup history

T20 World Cup; ಹ್ಯಾಟ್ರಿಕ್ ವಿಕೆಟ್ ಕಿತ್ತ ಕಮಿನ್ಸ್; 17 ವರ್ಷದ ಬಳಿಕ ಆಸೀಸ್ ಬೌಲರ್ ಸಾಧನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

22

Mangalore: ಪೊಲೀಸ್‌ “ಪರ್ಸ್‌’ ಎಗರಿಸಿದ ಕಳ್ಳ!

Mangalore: ಮಾದಕ ವಸ್ತು ಸೇವನೆ; ಇಬ್ಬರು ವಶಕ್ಕೆ

Mangalore: ಮಾದಕ ವಸ್ತು ಸೇವನೆ; ಇಬ್ಬರು ವಶಕ್ಕೆ

Mang-Airport

Mangaluru ವಿಮಾನ ನಿಲ್ದಾಣಕ್ಕೆ ಮತ್ತೆ ಬಾಂಬ್ ಬೆದರಿಕೆ

1-ml

Ullal; ಯುವಮೋರ್ಚ ಮಂಡಲ ಅಧ್ಯಕ್ಷನ ಎಳೆದಾಡಿದ ಠಾಣಾಧಿಕಾರಿ: ಕಾರ್ಯಕರ್ತರ ಆಕ್ರೋಶ

ಬೆಳೆಯುತ್ತಿರುವ ಪಡುಬಿದ್ರಿಗೆ “ಹೆದ್ದಾರಿ’ಯೇ ಗೋಳು!

ಬೆಳೆಯುತ್ತಿರುವ ಪಡುಬಿದ್ರಿಗೆ “ಹೆದ್ದಾರಿ’ಯೇ ಗೋಳು!

MUST WATCH

udayavani youtube

ಅಣ್ಣಾವ್ರ ಅಪರೂಪದ ವಿಡಿಯೋ | ಯೋಗ ದಿನ | ಡಾ. ರಾಜ್ ಕುಮಾರ್

udayavani youtube

ತರಂಗ ಯುಗಾದಿ ಧಮಾಕ-2024 | ಅದೃಷ್ಟಶಾಲಿಗಳ ಆಯ್ಕೆ

udayavani youtube

ಹಾಸ್ಟೆಲ್ ಗಳ ಸಮಸ್ಯೆ ಬಗೆಹರಿಸಿ: ಶಾಸಕ ಗುರುರಾಜ್ ಗಂಟಿಹೊಳೆ ಸೂಚನೆ

udayavani youtube

ಇದು ಭವ್ಯ ಭಾರತದ ಹೆಗ್ಗುರುತು | ನಳಂದ ವಿಶ್ವವಿದ್ಯಾಲಯ

udayavani youtube

ಕಲಬುರಗಿ ಜಿಮ್ಸ್ ಮತ್ತು ಜಯದೇವ ಆಸ್ಪತ್ರೆಗಳಿಗೆ ಆರ್.ಅಶೋಕ ಭೇಟಿ

ಹೊಸ ಸೇರ್ಪಡೆ

Kotee; ಧನುಗೆ ದುನಿಯಾ ವಿಜಯ್‌ ಸಾಥ್‌

Kotee; ಧನುಗೆ ದುನಿಯಾ ವಿಜಯ್‌ ಸಾಥ್‌

Restaurant Sealed: ಸಾಂಬಾರ್ ನಲ್ಲಿ ಸತ್ತ ಇಲಿ, ಗ್ರಾಹಕ ಶಾಕ್..! ರೆಸ್ಟೋರೆಂಟ್ ಗೆ ಸೀಲ್

Restaurant Sealed: ಸಾಂಬಾರ್ ನಲ್ಲಿ ಸತ್ತ ಇಲಿ, ಗ್ರಾಹಕ ಶಾಕ್..! ರೆಸ್ಟೋರೆಂಟ್ ಗೆ ಸೀಲ್

15

Doddanagudde ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ; ನಾಗ ತನುತರ್ಪಣ ಮಂಡಲ ಸೇವೆ ಸಂಪನ್ನ

akash

Singapore ಬಿಟ್ಟು ಬೆಂಗಳೂರಲ್ಲಿ ನೆಲೆಸಿದ ಉದ್ಯಮಿ; ವೈರಲ್ ಆಯ್ತು ಆತ ನೀಡಿದ ಕಾರಣ

Udayavani Campaign: ಬಸ್‌ ಬೇಕೇ, ಬೇಕು- ಆ ಊರಿನ ಬಸ್‌ ಕೊರೊನಾಗೆ ಬಲಿಯಾಗಿದೆ!

Udayavani Campaign: ಬಸ್‌ ಬೇಕೇ, ಬೇಕು- ಆ ಊರಿನ ಬಸ್‌ ಕೊರೊನಾಗೆ ಬಲಿಯಾಗಿದೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.