ಉಪ್ಪಿನಂಗಡಿ ಸಮೀಪದ ಬೆದ್ರೋಡಿಯಲ್ಲಿ ಟ್ಯಾಂಕರ್‌ ಪಲ್ಟಿ: ಅನಿಲ ಸೋರಿಕೆ

Team Udayavani, Dec 3, 2018, 12:12 PM IST

gas-tanker-palti-3-12.jpg

ಉಪ್ಪಿನಂಗಡಿ: ಅಡುಗೆ ಅನಿಲ ಸಾಗಾಟ ಮಾಡುತ್ತಿದ್ದ ಟ್ಯಾಂಕರೊಂದು ಚಾಲಕನ ನಿಯಂತ್ರಣ ತಪ್ಪಿ ಮಗುಚಿದ ಪರಿಣಾಮ ಅನಿಲ ಸೋರಿಕೆಯಾದ ಘಟನೆ ಶನಿವಾರ ರಾತ್ರಿ 11 ಗಂಟೆ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ 75ರ ಬೆದ್ರೋಡಿಯಲ್ಲಿ ಸಂಭವಿಸಿದೆ. ಇದರಿಂದಾಗಿ ಪರಿಸರದಲ್ಲಿ ಸ್ವಲ್ಪ ಹೊತ್ತು ಆತಂಕ ನೆಲೆಸಿತ್ತು.

ಮಂಗಳೂರಿನಿಂದ ಬೆಂಗಳೂರಿನತ್ತ ಸಾಗುತ್ತಿದ್ದ ಟ್ಯಾಂಕರ್‌ ಉಪ್ಪಿನಂಗಡಿ ಸಮೀಪದ ಬಜತ್ತೂರು ಗ್ರಾಮದ ಬೆದ್ರೋಡಿ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮಗುಚಿಬಿದ್ದಿತು. ಘಟನೆ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ ಸ್ಥಳೀಯ ಯುವಕರು ಉಪ್ಪಿನಂಗಡಿಯಲ್ಲೇ ಇತರ ವಾಹನಗಳಿಗೆ ತಡೆಯೊಡ್ಡುವ ಮೂಲಕ ಹೆಚ್ಚಿನ ಅನಾಹುತ ತಪ್ಪಿಸಿದರು. ಸ್ಥಳಕ್ಕೆ ಧಾವಿಸಿದ ಉಪ್ಪಿನಂಗಡಿ ಪೊಲೀಸರು ಹಾಗೂ ಪುತ್ತೂರು ಸಂಚಾರ ಪೊಲೀಸರು ಘಟನಾ ಸ್ಥಳದಲ್ಲಿ ಸೂಕ್ತ ರಕ್ಷಣಾ ಕ್ರಮಗಳನ್ನು ಕೈಗೊಂಡರು.

ಪರಿಸರದಲ್ಲಿ ಅನಿಲದ ವಾಸನೆ ಹರಡಿದ್ದು, ಮನೆಗಳಲ್ಲಿ ಯಾವುದೇ ಕಾರಣಕ್ಕೂ ಬೆಂಕಿ, ವಿದ್ಯುತ್‌ ಬಳಸದಂತೆ ಸೂಚಿಸಲಾಯಿತು. ಮುಂಜಾಗ್ರತಾ ಕ್ರಮವಾಗಿ ಪುತ್ತೂರು, ಬಂಟ್ವಾಳ, ಬೆಳ್ತಂಗಡಿ, ಮಂಗಳೂರು ಕಡೆಗಳಿಂದ ಅಗ್ನಿಶಾಮಕ ದಳವನ್ನು ಕರೆಯಿಸಲಾಗಿತ್ತು.

ಅಪಘಾತದಿಂದಾಗಿ ಬೆಂಗಳೂರು – ಮಂಗಳೂರು ನಡುವೆ ಪ್ರಯಾಣಿಕ ವಾಹನಗಳನ್ನು ಸ್ವಲ್ಪ ಸಮಯ ತಡೆಹಿಡಿಯಲಾಯಿತು, ಬಳಿಕ ಪರ್ಯಾಯ ಮಾರ್ಗದಲ್ಲಿ ಸಂಚಾರ ಮುಂದುವರಿಸಿದವು. ಅಪಘಾತಕ್ಕೀಡಾದ ಟ್ಯಾಂಕರ್‌ನಿಂದ ಇನ್ನೊಂದು ಟ್ಯಾಂಕರ್‌ಗೆ ಅನಿಲವನ್ನು ವರ್ಗಾಯಿಸುವ ಪ್ರಕ್ರಿಯೆ ರವಿವಾರ ಮಧ್ಯಾಹ್ನ 2.30ರ ವೇಳೆಗೆ ಪೂರ್ಣಗೊಂಡು ಹೆದ್ದಾರಿಯಲ್ಲಿ ಸಂಚಾರ ಪುನರಾರಂಭಗೊಂಡಿತು.

ಟ್ಯಾಂಕರ್‌ ಚಾಲಕ ಬೆಂಗಳೂರು ಮೂಲದ ಪುಷ್ಪರಾಜ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಉಪ್ಪಿನಂಗಡಿ ಪೊಲೀಸ್‌ ಠಾಣಾ ಎಸ್‌ಐ ನಂದ ಕುಮಾರ್‌ ಹಾಗೂ ಪುತ್ತೂರು ಸಂಚಾರ ಠಾಣೆ ಎಸ್‌ಐ ನಾರಾಯಣ ರೈ ನೇತೃತ್ವದಲ್ಲಿ ಸೂಕ್ತ ಬಂದೋಬಸ್ತು ಕೈಗೊಳ್ಳಲಾಯಿತು.

ಟಾಪ್ ನ್ಯೂಸ್

Fraud Case ಆನ್‌ಲೈನ್‌ ಮೂಲಕ ಲಕ್ಷಾಂತರ ರೂಪಾಯಿ ವಂಚನೆ

Fraud Case ಆನ್‌ಲೈನ್‌ ಮೂಲಕ ಲಕ್ಷಾಂತರ ರೂಪಾಯಿ ವಂಚನೆ

Heart Attack; ಬೈಕ್‌ ಓಡಿಸುತ್ತಿರುವಾಗಲೇ ಹೃದಯಾಘಾತ; ಸಾವು

Heart Attack; ಬೈಕ್‌ ಓಡಿಸುತ್ತಿರುವಾಗಲೇ ಹೃದಯಾಘಾತ; ಸಾವು

Puttur ಎಪಿಎಂಸಿ ಸಹಾಯಕ ಕಾರ್ಯದರ್ಶಿ ಅಮಾನತು

Puttur ಎಪಿಎಂಸಿ ಸಹಾಯಕ ಕಾರ್ಯದರ್ಶಿ ಅಮಾನತು

Kundapura ವಿದ್ಯಾರ್ಥಿ ಶವ ಬೀಚ್‌ನಲ್ಲಿ ಪತ್ತೆ

Kundapura ವಿದ್ಯಾರ್ಥಿ ಶವ ಬೀಚ್‌ನಲ್ಲಿ ಪತ್ತೆ

Belthangady ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ದೇಗುಲದ ಅರ್ಚಕ

Belthangady ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ದೇಗುಲದ ಅರ್ಚಕ

1-wewqe

Congress ಕಾರ್ಯಕರ್ತರು ಹಣ ಹಂಚುತ್ತಿದ್ದಾರೆ ಎಂದು ಠಾಣೆ ಎದುರು BJP ಶಾಸಕರ ಪ್ರತಿಭಟನೆ

CM ವಿರುದ್ಧ ನಕಲಿ ಪೋಸ್ಟ್‌: ವಿಕ್ರಮ್‌ ಹೆಗ್ಡೆ, ಗಿಳಿಯಾರ್‌ ಬಂಧನಕ್ಕೆ ತಾತ್ಕಾಲಿಕ ತಡೆ

CM ವಿರುದ್ಧ ನಕಲಿ ಪೋಸ್ಟ್‌: ವಿಕ್ರಮ್‌ ಹೆಗ್ಡೆ, ಗಿಳಿಯಾರ್‌ ಬಂಧನಕ್ಕೆ ತಾತ್ಕಾಲಿಕ ತಡೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Heart Attack; ಬೈಕ್‌ ಓಡಿಸುತ್ತಿರುವಾಗಲೇ ಹೃದಯಾಘಾತ; ಸಾವು

Heart Attack; ಬೈಕ್‌ ಓಡಿಸುತ್ತಿರುವಾಗಲೇ ಹೃದಯಾಘಾತ; ಸಾವು

Puttur ಎಪಿಎಂಸಿ ಸಹಾಯಕ ಕಾರ್ಯದರ್ಶಿ ಅಮಾನತು

Puttur ಎಪಿಎಂಸಿ ಸಹಾಯಕ ಕಾರ್ಯದರ್ಶಿ ಅಮಾನತು

Belthangady ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ದೇಗುಲದ ಅರ್ಚಕ

Belthangady ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ದೇಗುಲದ ಅರ್ಚಕ

Vitla: ಬಿಸಿಲಿನ ಎಫೆಕ್ಟ್: ಚಲಿಸುತ್ತಿದ್ದ ಬಸ್ಸಿನ ಗಾಜು ಒಡೆದು ಮೂವರಿಗೆ ಗಾಯ

Vitla: ಬಿಸಿಲಿನ ಎಫೆಕ್ಟ್: ಚಲಿಸುತ್ತಿದ್ದ ಬಸ್ಸಿನ ಗಾಜು ಒಡೆದು ಮೂವರಿಗೆ ಗಾಯ

Puttur ಅಡಿಕೆಗೂ ಬಿಸಿಲ ತಾಪ: ಉದುರುತ್ತಿವೆ ನಳ್ಳಿ! ಶೇ. 50ರಷ್ಟು ಫಸಲು ನಷ್ಟದ ಭೀತಿ

Puttur ಅಡಿಕೆಗೂ ಬಿಸಿಲ ತಾಪ: ಉದುರುತ್ತಿವೆ ನಳ್ಳಿ! ಶೇ. 50ರಷ್ಟು ಫಸಲು ನಷ್ಟದ ಭೀತಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Fraud Case ಆನ್‌ಲೈನ್‌ ಮೂಲಕ ಲಕ್ಷಾಂತರ ರೂಪಾಯಿ ವಂಚನೆ

Fraud Case ಆನ್‌ಲೈನ್‌ ಮೂಲಕ ಲಕ್ಷಾಂತರ ರೂಪಾಯಿ ವಂಚನೆ

Heart Attack; ಬೈಕ್‌ ಓಡಿಸುತ್ತಿರುವಾಗಲೇ ಹೃದಯಾಘಾತ; ಸಾವು

Heart Attack; ಬೈಕ್‌ ಓಡಿಸುತ್ತಿರುವಾಗಲೇ ಹೃದಯಾಘಾತ; ಸಾವು

Puttur ಎಪಿಎಂಸಿ ಸಹಾಯಕ ಕಾರ್ಯದರ್ಶಿ ಅಮಾನತು

Puttur ಎಪಿಎಂಸಿ ಸಹಾಯಕ ಕಾರ್ಯದರ್ಶಿ ಅಮಾನತು

Kundapura ವಿದ್ಯಾರ್ಥಿ ಶವ ಬೀಚ್‌ನಲ್ಲಿ ಪತ್ತೆ

Kundapura ವಿದ್ಯಾರ್ಥಿ ಶವ ಬೀಚ್‌ನಲ್ಲಿ ಪತ್ತೆ

Kapu ಜಾಂಡೀಸ್ ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿ ಸಾವು

Kapu ಜಾಂಡೀಸ್ ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.