Prajwal Revanna Case ಸಂತ್ರಸ್ತೆಯರಿಗೆ ನೆರವಾಗಿ: ಸಿಎಂಗೆ ರಾಹುಲ್‌

ಪ್ರಜ್ವಲ್‌ ರೇವಣ್ಣಗೆ ಪ್ರಧಾನಿ ಗೃಹ ಸಚಿವರ ಆಶೀರ್ವಾದ

Team Udayavani, May 5, 2024, 12:30 AM IST

Prajwal Revanna Case ಸಂತ್ರಸ್ತೆಯರಿಗೆ ನೆರವಾಗಿ: ಸಿಎಂಗೆ ರಾಹುಲ್‌

ಬೆಂಗಳೂರು: ಹಾಸನ ಸಂಸದ ಪ್ರಜ್ವಲ್‌ ರೇವಣ್ಣರಿಂದ ಸಂತ್ರಸ್ತರಾಗಿರುವವರಿಗೆ ಅಗತ್ಯವಾದ ಎಲ್ಲ ನೆರವು ನೀಡಬೇಕೆಂದು ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಕೋರಿದ್ದಾರೆ.

ಪ್ರಕರಣದಲ್ಲಿನ ಸಂತ್ರಸ್ತರು ನಮ್ಮ ಸಹಾನುಭೂತಿಗೆ ಅರ್ಹರಾಗಿದ್ದು, ನ್ಯಾಯಕ್ಕಾಗಿ ಹೋರಾಟಕ್ಕೆ ಧುಮುಕಿರುವ ಅವರಿಗೆ ನಮ್ಮ ಬೆಂಬಲ ಇರಬೇಕು. ಇಂತಹ ಭಯಾನಕ ಅಪರಾಧಕ್ಕೆ ಕಾರಣವಾಗಿರುವ ಎಲ್ಲ ವ್ಯಕ್ತಿಗಳನ್ನು ಕಾನೂನಿನ ಕಟಕಟೆಯಲ್ಲಿ ನಿಲ್ಲಿಸುವ ಸಂಘಟಿತ ಕರ್ತವ್ಯ ನಮಗಿದೆ ಎಂದು ರಾಹುಲ್‌ ಗಾಂಧಿ ತಮ್ಮ ಪತ್ರದಲ್ಲಿ ಹೇಳಿದ್ದಾರೆ.

ಹಲವು ವರ್ಷಗಳಿಂದ ಪ್ರಜ್ವಲ್‌ ರೇವಣ್ಣ ನೂರಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಅದನ್ನು ಚಿತ್ರೀಕರಿಸಿಕೊಂಡಿದ್ದಾರೆ. ತಾಯಂದಿರು ಮತ್ತು ಸೋದರಿಯರ ಮೇಲೆ ನಡೆದಿರುವ ಅತ್ಯಾಚಾರಕ್ಕೆ ಕಠಿನ ಶಿಕ್ಷೆಯಾಗಬೇಕು ಎಂದು ರಾಹುಲ್‌ ಹೇಳಿದ್ದಾರೆ.

2023ರ ಡಿಸೆಂಬರ್‌ನಲ್ಲೇ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ಜಿ.ದೇವರಾಜೇಗೌಡ ಅವರು ರೇವಣ್ಣ ಅವರ ಲೈಂಗಿಕ ದೌರ್ಜನ್ಯ ಮತ್ತು ಈ ಬಗ್ಗೆಗಿರುವ ದೃಶ್ಯಾವಳಿಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಇಂತಹ ಕ್ರೌರ್ಯಯುತ ದೌರ್ಜನ್ಯ ನಡೆಸಿದ ಆರೋಪಗಳಿದ್ದರೂ ಸಾಮಾಹಿಕ ಅತ್ಯಾಚಾರಿಯ ಪರ ಪ್ರಧಾನಮಂತ್ರಿ ಚುನಾವಣ ಪ್ರಚಾರ ನಡೆಸಿದ್ದರು. ಇದರ ಜತೆಗೆ ಅರ್ಥಪೂರ್ಣ ತನಿಖೆಯ ಹಳಿ ತಪ್ಪಿಸಲು ಕೇಂದ್ರ ಸರಕಾರ ಉದ್ದೇಶ ಪೂರ್ವಕವಾಗಿ ಪ್ರಜ್ವಲ್‌ ವಿದೇಶಕ್ಕೆ ಪರಾರಿಯಾಗಲು ಅವಕಾಶ ಮಾಡಿಕೊಟ್ಟಿದೆ ಎಂಬ ಗಂಭೀರ ಆರೋಪ ಮಾಡಿದ್ದಾರೆ.

ಅಪರಾಧದಲ್ಲಿ ಅಡಕವಾಗಿರುವ ವಿಕೃತಿಯ ಗುಣ ಮತ್ತು ಪ್ರಧಾನಿ ಮತ್ತು ಗೃಹ ಸಚಿವರ ಆಶೀರ್ವಾದದಿಂದ ಪ್ರಜ್ವಲ್‌ ರೇವಣ್ಣವರಿಗೆ ಸಿಕ್ಕಿರುವ ವಿನಾಯಿತಿಯನ್ನು ಖಂಡಿಸಬೇಕಿದೆ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ.

ನ್ಯಾಯದ ಜತೆ ನಿಲ್ಲುವ ವಾಗ್ಧಾನ
ರಾಹುಲ್‌ ಗಾಂಧಿ ಪತ್ರ ತಲುಪಿದ ಬೆನ್ನಲ್ಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸಂಸದ ಪ್ರಜ್ವಲ್‌ ರೇವಣ್ಣ ಅವರಿಂದ ಅತ್ಯಾಚಾರ, ಅನ್ಯಾಯಕ್ಕೆ ಒಳಗಾದ ಸಂತ್ರಸ್ತರ ರಕ್ಷಣೆಗೆ ನಮ್ಮ ಸರಕಾರ ಬದ್ಧವಾಗಿದೆ. ನಿಷ್ಪಕ್ಷಪಾತ ತನಿಖೆ ನಡೆಸಿ ಪ್ರಕರಣದಲ್ಲಿ ಎಷ್ಟೇ ಪ್ರಭಾವಿಗಳು ಶಾಮೀಲಾಗಿದ್ದರೂ ಅವರನ್ನು ಕಾನೂನಿನ ಕೈಗಳಿಗೆ ಒಪ್ಪಿಸಲಾಗುವುದು. ನೊಂದವರ ಕಣ್ಣೀರು ಒರೆಸುವ ಜತೆಗೆ ಅವರ ನ್ಯಾಯದ ಹೋರಾಟದಲ್ಲಿ ನಮ್ಮ ಸರಕಾರ ಜತೆ ನಿಲ್ಲಲಿದೆ ಎಂಬ ವಾಗ್ಧಾನವನ್ನು ಅವರು ಸಹಿತ ನಾಡಿನ ಪ್ರತಿಯೊಬ್ಬರಿಗೂ ನೀಡುತ್ತಿದ್ದೇನೆ ಎಂದು ಸಾಮಾಜಿಕ ಜಾಲ ತಾಣದಲ್ಲಿ ಹಂಚಿಕೊಂಡಿದ್ದಾರೆ.

ಟಾಪ್ ನ್ಯೂಸ್

Hubli; ಅಂಜಲಿ ಹಂತಕ ಗಿರೀಶನ ಮೇಲೆ ಮತ್ತೊಂದು ಪ್ರಕರಣ ದಾಖಲು

Hubli; ಅಂಜಲಿ ಹಂತಕ ಗಿರೀಶನ ಮೇಲೆ ಮತ್ತೊಂದು ಪ್ರಕರಣ ದಾಖಲು

Smiling Buddha; ಬುದ್ಧ ನಕ್ಕ ಗಳಿಗೆಗೆ ಸ್ವರ್ಣ ಸಂಭ್ರಮ; ಮೊದಲ ಪರಮಾಣು ಪರೀಕ್ಷೆಗೆ 50 ವರ್ಷ

Smiling Buddha; ಬುದ್ಧ ನಕ್ಕ ಗಳಿಗೆಗೆ ಸ್ವರ್ಣ ಸಂಭ್ರಮ; ಮೊದಲ ಪರಮಾಣು ಪರೀಕ್ಷೆಗೆ 50 ವರ್ಷ

Agra: ಆಗ್ರಾದಲ್ಲಿ ತಲೆ ಎತ್ತಿದೆ ತಾಜ್‌ ಮಹಲ್‌ ಪ್ರತಿಸ್ಪರ್ಧಿ

Agra: ಆಗ್ರಾದಲ್ಲಿ ತಲೆ ಎತ್ತಿದೆ ತಾಜ್‌ ಮಹಲ್‌ ಪ್ರತಿಸ್ಪರ್ಧಿ

2

ಎಸ್‌ಎಸ್‌ಎಲ್‌ಸಿ ಗ್ರೇಸ್‌ ಮಾರ್ಕ್ಸ್ ರದ್ದು: ಪ್ರತಿಭಾವಂತರ ಶ್ರಮಕ್ಕೆ ಮನ್ನಣೆ 

ಕ್ಯಾಂಟರ್ ಅಡ್ಡಗಟ್ಟಿ 32 ಲಕ್ಷ ರೂ. ದರೋಡೆ: ಖಾರದ ಪುಡಿ ಎರಚಿ ಹಲ್ಲೆ, ಇಬ್ಬರಿಗೆ ಗಾಯ

ಕ್ಯಾಂಟರ್ ಅಡ್ಡಗಟ್ಟಿ 32 ಲಕ್ಷ ರೂ. ದರೋಡೆ: ಖಾರದ ಪುಡಿ ಎರಚಿ ಹಲ್ಲೆ, ಇಬ್ಬರಿಗೆ ಗಾಯ

Bengaluru ಎಷ್ಟೇ ಮಳೆ ಬಂದರೂ ಪಂದ್ಯ ನಡೆಸಬಹುದು; ಏನಿದು ಚಿನ್ನಸ್ವಾಮಿಯ ಸಬ್ ಏರ್ ಸಿಸ್ಟಂ?

Bengaluru ಎಷ್ಟೇ ಮಳೆ ಬಂದರೂ ಪಂದ್ಯ ನಡೆಸಬಹುದು; ಏನಿದು ಚಿನ್ನಸ್ವಾಮಿಯ ಸಬ್ ಏರ್ ಸಿಸ್ಟಂ?

Untitled-1

ಪವಿತ್ರಾ – ಚಂದು ಪ್ರೀತಿಯಲ್ಲಿದ್ದರು.. ಆತ ನನ್ನ ಗಂಡ ಎಂದಿದ್ದರಂತೆ ಪವಿತ್ರಾ – ಚಂದು ಪತ್ನಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಾಶಿಯಲ್ಲಿ ಕಾಲು ಸಂಕ- ಬಟ್ಟೆ ಒಗೆಯುವ ಕಲ್ಲಾಗಿದೆ ಕೆಳದಿ ಸಾಮ್ರಾಜ್ಯದ ಶಾಸನ

ಅವ್ಯವಸ್ಥೆ… ಕಾಶಿಯಲ್ಲಿ ಕಾಲು ಸಂಕ- ಬಟ್ಟೆ ಒಗೆಯುವ ಕಲ್ಲಾಗಿದೆ ಕೆಳದಿ ಸಾಮ್ರಾಜ್ಯದ ಶಾಸನ

PU ಕಂಪ್ಯೂಟರ್‌ ಸೈನ್ಸ್‌, ಸೈಕಾಲಜಿಗೂ ಎನ್‌ಸಿಇಆರ್‌ಟಿ ಪಠ್ಯ

PU ಕಂಪ್ಯೂಟರ್‌ ಸೈನ್ಸ್‌, ಸೈಕಾಲಜಿಗೂ ಎನ್‌ಸಿಇಆರ್‌ಟಿ ಪಠ್ಯ

Bengaluru-Mysuru Expressway; 15 ದಿನಗಳ‌ಲ್ಲಿ 12 ಸಾವಿರ ವಾಹನಗಳಿಗೆ ದಂಡ!

Bengaluru-Mysuru Expressway; 15 ದಿನಗಳ‌ಲ್ಲಿ 12 ಸಾವಿರ ವಾಹನಗಳಿಗೆ ದಂಡ!

Kota ಮೇಲ್ಮನೆ ಸ್ಥಾನ ನಳಿನ್‌ ಕುಮಾರ್‌ಗೆ ? ವಿಧಾನಸಭೆ ಮೂಲಕ ಪರಿಷತ್‌ ಪ್ರವೇಶಿಸಲು ಯತ್ನ

Kota ಮೇಲ್ಮನೆ ಸ್ಥಾನ ನಳಿನ್‌ ಕುಮಾರ್‌ಗೆ ? ವಿಧಾನಸಭೆ ಮೂಲಕ ಪರಿಷತ್‌ ಪ್ರವೇಶಿಸಲು ಯತ್ನ

Karnataka ಶಿಕ್ಷಣ ವ್ಯವಸ್ಥೆ ಹಾಳು ಮಾಡಿದ್ದೇ ಸರ್ಕಾರದ ಸಾಧನೆ: ಸುರೇಶ್‌ ಕುಮಾರ್‌

Karnataka ಶಿಕ್ಷಣ ವ್ಯವಸ್ಥೆ ಹಾಳು ಮಾಡಿದ್ದೇ ಸರ್ಕಾರದ ಸಾಧನೆ: ಸುರೇಶ್‌ ಕುಮಾರ್‌

MUST WATCH

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

ಹೊಸ ಸೇರ್ಪಡೆ

1-panaji

Panaji: 55ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಪೋಸ್ಟರ್ ಅನಾವರಣ

Hubli; Government should have woken up after Neha case: Jayamrinthujaya Swamiji

Hubli; ನೇಹಾ ಪ್ರಕರಣದ ಬಳಿಕ ಸರ್ಕಾರ ಎಚ್ಚೆತ್ತುಕೊಳ್ಳಬೇಕಿತ್ತು: ಜಯಮೃಂತ್ಯುಜಯ ಸ್ವಾಮೀಜಿ

ಅಂಜಲಿ ಹತ್ಯೆ ಖಂಡಿಸಿ ಬಿಜೆಪಿ ಪ್ರತಿಭಟನೆ

Belagavi; ಅಂಜಲಿ ಹತ್ಯೆ ಖಂಡಿಸಿ ಬಿಜೆಪಿ ಪ್ರತಿಭಟನೆ

Hubli; ಅಂಜಲಿ ಹಂತಕ ಗಿರೀಶನ ಮೇಲೆ ಮತ್ತೊಂದು ಪ್ರಕರಣ ದಾಖಲು

Hubli; ಅಂಜಲಿ ಹಂತಕ ಗಿರೀಶನ ಮೇಲೆ ಮತ್ತೊಂದು ಪ್ರಕರಣ ದಾಖಲು

Hubli; ಅಂಜಲಿ ಅಂಬಿಗೇರ ಪ್ರಕರಣ ತನಿಖೆ ಸಿಐಡಿಗೆ ವಹಿಸಲಿ: ಸಂತೋಷ್ ಲಾಡ್

Hubli; ಅಂಜಲಿ ಅಂಬಿಗೇರ ಪ್ರಕರಣ ತನಿಖೆ ಸಿಐಡಿಗೆ ವಹಿಸಲಿ: ಸಂತೋಷ್ ಲಾಡ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.