Mangaluru ವಿಶ್ವವಿದ್ಯಾನಿಲಯ ಹೊಸ ಕುಲಪತಿ ಶೀಘ್ರ ಅಂತಿಮ

ಮೂವರ ಪೈಕಿ ಹುದ್ದೆ ಯಾರಿಗೆ; ಮೂಡಿದ ಕುತೂಹಲ

Team Udayavani, Sep 14, 2023, 1:21 AM IST

Mangaluru ವಿಶ್ವವಿದ್ಯಾನಿಲಯ ಹೊಸ ಕುಲಪತಿ ಶೀಘ್ರ ಅಂತಿಮ

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಬಹುನಿರೀಕ್ಷಿತ ಕುಲಪತಿ ನೇಮಕ ಪ್ರಕ್ರಿಯೆ ನಿರ್ಣಾಯಕ ಹಂತದಲ್ಲಿದ್ದು ಮೂರು ಹೆಸರುಗಳು ಬಲವಾಗಿ ಕೇಳಿಬರುತ್ತಿವೆ.

ಕುಲಪತಿ ಆಯ್ಕೆ ಸಂಬಂಧಿಸಿ ಶೋಧನಾ ಸಮಿತಿಯ ಮಹತ್ವದ ಸಭೆ ಈಗಾಗಲೇ ಅಂತಿಮಗೊಂಡಿದ್ದು ಸರಕಾರಕ್ಕೆ ವರದಿಯೂ ಸಲ್ಲಿಕೆ ಹಂತದಲ್ಲಿದೆ. ಒಂದೆರಡು ವಾರದೊಳಗೆ ಹೊಸ ಕುಲಪತಿ ನೇಮಕವಾಗುವ ಎಲ್ಲ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ಹೆಸರುಗಳು ಯಾವುವು?
ಮೈಸೂರು ವಿ.ವಿ.ಯ ರಾಜ್ಯಶಾಸ್ತ್ರ ವಿಭಾಗದ ನಿವೃತ್ತ ಉಪನ್ಯಾಸಕ ಪ್ರೊ| ಮುಜಾಫರ್‌ ಅಸ್ಸಾದಿ, ಮಂಗಳೂರು ವಿ.ವಿ.ಯ ಮಾಜಿ ಕುಲಸಚಿವ (ಪರೀಕ್ಷಾಂಗ) ರಾಜ್ಯಶಾಸ್ತ್ರ ಉಪನ್ಯಾಸಕ ಪ್ರೊ| ಪಿ.ಎಲ್‌. ಧರ್ಮ ಹಾಗೂ ಮಂಗಳೂರು ವಿ.ವಿ.ಯ ಮಾಜಿ ಕುಲಸಚಿವ (ಆಡಳಿತ), ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಪ್ರೊ| ಕಿಶೋರ್‌ ಕುಮಾರ್‌ ಸಿ.ಕೆ. ಸಹಿತ ಕೆಲವರ ಹೆಸರು ಬಲವಾಗಿ ಕೇಳಿಬರುತ್ತಿದೆ.ಶೋಧನಾ ಸಮಿತಿಯಲ್ಲಿ ರಾಜ್ಯಪಾಲರು, ಸರಕಾರ, ಯುಜಿಸಿ ಹಾಗೂ ಮಂಗಳೂರು ವಿ.ವಿ.ಯ ಸೂಚಿತ ವ್ಯಕ್ತಿಗಳು ಸದಸ್ಯರಾಗಿದ್ದಾರೆ. ಸಮಿತಿಯ ಮಹತ್ವದ ಸಭೆಯು ಸೆ. 12ರಂದು ನಡೆದಿದೆ.

ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸಲ್ಲಿಕೆಯಾಗುವ ಶೋಧನಾ ಸಮಿತಿಯ ವರದಿಯು ಉನ್ನತ ಶಿಕ್ಷಣ ಸಚಿವರಿಗೆ ಸಲ್ಲಿಕೆಯಾಗುತ್ತದೆ. ಅಲ್ಲಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೀಡಲಾಗುತ್ತದೆ. ಸಿಎಂ ಅವರು ಮೂವರಲ್ಲಿ ಒಬ್ಬರ ಹೆಸರನ್ನು ಅಂತಿಮಗೊಳಿಸಿ ರಾಜ್ಯಪಾಲರಿಗೆ ಶಿಫಾರಸು ಮಾಡುತ್ತಾರೆ. ರಾಜ್ಯಪಾಲರು ಆ ಹೆಸರಿಗೆ ಒಪ್ಪಿಗೆ ಸೂಚಿಸಿದರೆ ಅದೇ ಹೆಸರು ಅಂತಿಮವಾಗುತ್ತದೆ. ಇಲ್ಲವಾದರೆ ರಾಜ್ಯಪಾಲರು ಪರ್ಯಾಯ ಹೆಸರನ್ನು ಸೂಚಿಸಿ ಸರಕಾರದ ಗಮನಸೆಳೆಯುತ್ತಾರೆ. ಈ ಪ್ರಕ್ರಿಯೆ ಬಳಿಕ ಅಂತಿಮ ಹೆಸರು ಪ್ರಕಟವಾಗುತ್ತದೆ.

ಈ ಬಾರಿ ಯಾವ ಕಡೆಗೆ?
ಮಂಗಳೂರು ವಿ.ವಿ. ಸ್ಥಾಪನೆಯಾಗಿ ಇದುವರೆಗೆ 9 ಕುಲಪತಿಗಳು ಕಾರ್ಯ ನಿರ್ವಹಿಸಿದ್ದು, ಇದರಲ್ಲಿ 8 ಕುಲಪತಿಗಳು ವಿ.ವಿ. ವ್ಯಾಪ್ತಿಯ ಹೊರ ಪ್ರದೇಶದವರು. ಕಳೆದ ಬಾರಿ ಮಾತ್ರ ಮಂಗಳೂರು ಮೂಲದವರು ಕುಲಪತಿಯಾಗಿದ್ದರು. ಹೀಗಾಗಿ ಈ ಬಾರಿಯ ಕುಲಪತಿ ಹುದ್ದೆ ಯಾರ ಪಾಲಾಗಲಿದೆ ಎಂಬ ಕುತೂಹಲ ಮೂಡಿದೆ.

ಜೂನ್‌ನಿಂದ “ವಿಸಿ’
ಹುದ್ದೆ ಖಾಲಿ
4 ವರ್ಷಗಳಿಂದ ಮಂಗಳೂರು ವಿ.ವಿ. ಕುಲಪತಿಯಾಗಿದ್ದ ಪ್ರೊ| ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ಜೂ. 2ರಂದು ಸೇವಾ ನಿವೃತ್ತರಾಗಿದ್ದಾರೆ. ಅಲ್ಲಿಂದ ಕುಲಪತಿ ಹುದ್ದೆ ಖಾಲಿ ಇದೆ. ಜೂ. 2ರಂದು ಪ್ರಭಾರ ಕುಲಪತಿಯಾಗಿ ಮಂಗಳೂರು ವಿ.ವಿ. ರಾಜ್ಯಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಾಪಕ ಹಾಗೂ ಕಲಾ ನಿಕಾಯದ ಡೀನ್‌ ಪ್ರೊ| ಜಯರಾಜ್‌ ಅಮೀನ್‌ ಅಧಿಕಾರದಲ್ಲಿದ್ದಾರೆ.

ಕುಲಪತಿ ಸ್ಥಾನಕ್ಕೆ 108 ಅರ್ಜಿ!
ಕುಲಪತಿ ಹುದ್ದೆಗೆ ಈ ಬಾರಿ ಒಟ್ಟು 108 ಅರ್ಜಿಗಳು ಸಲ್ಲಿಕೆಯಾಗಿತ್ತು. ಇಷ್ಟೂ ಅರ್ಜಿಗಳನ್ನು ಪರಿಶೀಲಿಸಿದ ಶೋಧನಾ ಸಮಿತಿಯು ಪ್ರಾರಂಭಿಕವಾಗಿ 40 ಹೆಸರನ್ನು ಪಟ್ಟಿ ಮಾಡಿಕೊಂಡಿತ್ತು. ಬಳಿಕ ಇದರಲ್ಲಿ 10 ಹೆಸರನ್ನು ಅಂತಿಮ ಮಾಡಿ ಮಂಗಳವಾರ ನಡೆದ ಮಹತ್ವದ ಸಭೆಯಲ್ಲಿ ಮೂರು ಹೆಸರನ್ನು ಅಖೈರುಗೊಳಿಸಿ ಸೀಲ್ಡ್‌ ಕವರ್‌ನಲ್ಲಿ ಸರಕಾರಕ್ಕೆ ಸಲ್ಲಿಸಲಿ ದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.

5 ವಿ.ವಿ.ಯಲ್ಲಿ “ಲೆಕ್ಕಾಚಾರ’!
ರಾಜ್ಯದ ಐದು ವಿ.ವಿ.ಗಳಿಗೆ ಕುಲಪತಿ ನೇಮಕ ಆಗಲು ಬಾಕಿ ಇದೆ. ಮೈಸೂರು, ಬಳ್ಳಾರಿ, ಶಿವಮೊಗ್ಗ, ಬೆಳಗಾವಿ ಹಾಗೂ ಮಂಗಳೂರು ವಿವಿಗೆ ಕುಲಪತಿ ಆಯ್ಕೆ ನಡೆಯಲು ಬಾಕಿ ಇದೆ. ಹೀಗಾಗಿ 5 ವಿ.ವಿ.ಗಳಿಗೆ ಕುಲಪತಿ ನೇಮಕ ಬಗ್ಗೆ ರಾಜ್ಯಪಾಲರು ಹಾಗೂ ಸರಕಾರದ ಮಟ್ಟದಲ್ಲಿ ವಿವಿಧ “ಲೆಕ್ಕಾಚಾರ’ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.

ಮಂಗಳೂರು ವಿ.ವಿ. ಕುಲಸಚಿವರಾಗಿ
ರಾಜು ಕೆ. ನಿಯೋಜನೆ
ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಆಡಳಿತ ವಿಭಾಗದ 18ನೇ ಕುಲಸಚಿವರಾಗಿ ಕೆಎಎಸ್‌ ಕಿರಿಯ ಶ್ರೇಣಿ ಅಧಿಕಾರಿ ರಾಜು ಕೆ. ಅವರನ್ನು ಸರಕಾರ ಪ್ರಭಾರ ನೆಲೆಯಲ್ಲಿ ನಿಯೋಜಿಸಿ ಆದೇಶ ಹೊರಡಿಸಿದೆ.
ಕೆಐಎಡಿಬಿ ವಿಶೇಷ ಭೂಸ್ವಾಧೀನಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಅವರು ಆಡಳಿತಾತ್ಮಕ ಹಿತದೃಷ್ಟಿಯಿಂದ ವಿ.ವಿ. ಆಡಳಿತ ವಿಭಾಗದ ಹುದ್ದೆಯನ್ನೂ ಪ್ರಭಾರ ನೆಲೆಯಲ್ಲಿ ನಿಭಾಯಿಸಲಿರುವರು. ಈ ಹಿಂದೆ ವಿ.ವಿ. ಆಡಳಿತ ವಿಭಾಗದ 17ನೇ ಕುಲಸಚಿವರಾಗಿ ಕೆಎಎಸ್‌ ಹಿರಿಯ ಶ್ರೇಣಿ ಅಧಿಕಾರಿ ಮೊಹಮ್ಮದ್‌ ನಯೀಮ್‌ ಮೊಮಿನ್‌ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಅವರನ್ನು ಬಿಬಿಎಂಪಿಯ ಯಲಹಂಕ ವಲಯದ ಜಂಟಿ ಆಯುಕ್ತರಾಗಿ ನಿಯೋಜಿಸಿ ವರ್ಗಾಯಿಸಲಾಗಿತ್ತು. ಅನಂತರ ಖಾಲಿ ಉಳಿದ ಕುಲಸಚಿವ ಹುದ್ದೆಯನ್ನು ಪರಿಕ್ಷಾಂಗ ಕುಲಸಚಿವ ಡಾ| ರಾಜುಕೃಷ್ಣ ಚೆನ್ನನ್ನವರ್‌ ಪ್ರಭಾರ ನೆಲೆಯಲ್ಲಿ ವಹಿಸಿಕೊಂಡಿದ್ದರು.

ಟಾಪ್ ನ್ಯೂಸ್

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

2-baikampady

Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.