ನೇತ್ರಾವತಿ ಸೇತುವೆ – ಮಂಗಳೂರು ಸೆಂಟ್ರಲ್‌: ರೈಲು ಹಳಿ ದ್ವಿಗುಣ

ಒಂದೂವರೆ ಕಿ.ಮೀ. ಉದ್ದದ ಕಾಮಗಾರಿಗೆ ಮರುಜೀವ

Team Udayavani, Feb 11, 2020, 5:09 AM IST

kemmu-27

ಮಹಾನಗರ: ನಗರದ ಮೋರ್ಗನ್‌ಗೆಟ್‌ ಸಮೀಪದ ನೇತ್ರಾ ವತಿ ರೈಲ್ವೇ ಸೇತುವೆಯಿಂದ ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣದವರೆಗಿನ ಒಂದೂವರೆ ಕಿ.ಮೀ. ಉದ್ದದ ಬಹು ನಿರೀಕ್ಷಿತ ರೈಲು ಹಳಿ ದ್ವಿಗುಣ ಕಾಮಗಾರಿಗೆ ಇದೀಗ ಮರುಜೀವ ದೊರಕಿದೆ. 2016 -17ರಲ್ಲಿ ರೈಲ್ವೇ ಇಲಾಖೆಯಿಂದ ಅನುಮೋದನೆಯಾದ ಈ ಯೋಜನೆ ಸದ್ಯ ಅನುಷ್ಠಾನ ಹಂತದಲ್ಲಿದ್ದು, ಈ ಕಾಮಗಾರಿ ಮುಗಿದ ಬಳಿಕ ಸೆಂಟ್ರಲ್‌ ರೈಲು ನಿಲ್ದಾಣಕ್ಕೆ ರೈಲುಗಳು ನಿಲು ಗಡೆ ಇಲ್ಲದೆ (ನೇತ್ರಾವತಿ ಸೇತುವೆ ಬಳಿ) ನೇರ ವಾಗಿ ಸಂಚರಿಸಲು ಸಾಧ್ಯವಾಗಲಿದೆ.

2017ರಲ್ಲಿ ಶಿಲಾನ್ಯಾಸ ನಡೆದಿತ್ತು
ಹಳಿ ದ್ವಿಗುಣ ಕಾಮಗಾರಿಗೆ 2017ರ ಆ. 18ರಂದು ನಗರದಲ್ಲಿ ಶಿಲಾನ್ಯಾಸ ನಡೆದಿತ್ತು. ಅಂದಿನ ರೈಲ್ವೇ ಸಚಿವ ಸುರೇಶ್‌ ಪ್ರಭು ಅವರು ಹೊಸದಿಲ್ಲಿಯ ರೈಲ್ವೇ ಮಂಡಳಿ ಸಭಾಭವನದಿಂದ ವೀಡಿಯೋ ಕಾನ್ಫರೆನ್ಸ್‌ ಮೂಲಕ ಶಿಲಾನ್ಯಾಸ ನಡೆಸಿದ್ದರು. 28.05 ಕೋ.ರೂ.ವೆಚ್ಚದಲ್ಲಿ ಹಳಿದ್ವಿಗುಣ ಕಾಮಗಾರಿ ಕೈಗೆತ್ತಿ ಕೊಳ್ಳಲಾಗಿದೆ ಎಂದು ಅಂದು ತಿಳಿಸಲಾಗಿತ್ತು. ಆದರೆ ಅನಂತರ ಈ ಯೋಜನೆ ಅಂತಿಮ ರೂಪ ಪಡೆದಿರಲೇ ಇಲ್ಲ. ಪ್ರಸ್ತುತ ಇದರ ಅಂದಾಜು ಮೊತ್ತ ಕೂಡ ಸುಮಾರು 38 ಕೋ.ರೂ.ಗೂ ಮೀರಿದೆ.

ಈಗ ನೇತ್ರಾವತಿ ಸೇತುವೆಯಿಂದ ಬಲಭಾಗದ ರೈಲು ಹಳಿಯು ಮಂಗಳೂರು ಜಂಕ್ಷನ್‌ವರೆಗೆ (ಕಂಕನಾಡಿ) ದ್ವಿಗುಣಗೊಂಡಿದೆ. ಆದರೆ ನೇತ್ರಾವತಿ ಸೇತು ವೆಯಿಂದ ಮಂಗಳೂರು ಸೆಂಟ್ರಲ್‌ ಹಾಗೂ ಸೆಂಟ್ರಲ್‌ನಿಂದ ಮಂಗಳೂರು ಜಂಕ್ಷನ್‌ (ಕಂಕನಾಡಿ) ಮಧ್ಯೆ ರೈಲು ಹಳಿ ದ್ವಿಗುಣಗೊಂಡಿಲ್ಲ.

“ಫಿಟ್‌ ಲೈನ್‌’ ಸ್ಥಳಾಂತರ
ರೈಲು ಹಳಿ ದ್ವಿಗುಣಗೊಳ್ಳುವ ಕಾರಣದಿಂದ ಮಂಗಳೂರು ಸೆಂಟ್ರಲ್‌ನಲ್ಲಿ ಇನ್ನೊಂದು ಫ್ಲಾಟ್‌ಫಾರಂ ಕೂಡ ನಿರ್ಮಾಣಗೊಳ್ಳಲಿದೆ. ಹಾಗಾಗಿ ಈಗ ಸೆಂಟ್ರಲ್‌ನಲ್ಲಿರುವ “ಫಿಟ್‌ ಲೈನ್‌'(ಬೋಗಿಗಳ ತಾಂತ್ರಿಕ ಕಾಮಗಾರಿ ನಡೆಸುವ ಹಳಿ)ಅನ್ನು ಸ್ಥಳಾಂತರಿಸಬೇಕಾಗಿದೆ. ಸದ್ಯ ಫಿಟ್‌ಲೈನ್‌ ಅನ್ನು ಈಗಿರುವ ಜಾಗ ದಿಂದ ಸ್ವಲ್ಪ ದೂರಕ್ಕೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ. ನೇತ್ರಾವತಿ ಸೇತುವೆಯಿಂದ ಸೆಂಟ್ರಲ್‌ವರೆಗಿನ ಹಳಿ ದ್ವಿಗುಣದ ಹಿನ್ನೆಲೆಯಲ್ಲಿ ರೈಲ್ವೇ ಇಲಾಖೆಗೆ ಸೇರಿದ ಭೂಮಿಯೇ ಅಧಿಕ ವಿದ್ದು, ಕೊಂಚ ಖಾಸಗಿ ಭೂಮಿ ಇದೆ. ಹೀಗಾಗಿ ಭೂಸ್ವಾಧೀನ ಪ್ರಕ್ರಿಯೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಶೋರ್ನೂರುವಿನಿಂದ ಮಂಗಳೂರುವರೆಗೆ ರೈಲು ಹಳಿ ದ್ವಿಗುಣ ಕಾಮಗಾರಿಯನ್ನು ಸುದೀರ್ಘ‌ವಾಗಿ ವರ್ಷದ ಹಿಂದೆ ಕೈಗೊಳ್ಳಬಹುದಾಗಿತ್ತು. ಆದರೆ ಮಂಗಳೂರು ಸೆಂಟ್ರಲ್‌ಗೆ ಬರಬೇಕಾದ ದ್ವಿಗುಣ ಸವಲತ್ತು ಮಂಗಳೂರು ಜಂಕ್ಷನ್‌(ಕಂಕನಾಡಿ) ಪಾಲಾಯಿತು. ಕೇರಳದಿಂದ ಬರುವ ರೈಲುಗಳು ಮಂಗಳೂರು ಜಂಕ್ಷನ್‌ ಅನ್ನೇ ನೆಚ್ಚಿ ಕೊಂಡ ಹಿನ್ನೆಲೆಯಲ್ಲಿ ಮಂಗಳೂರು ಸೆಂಟ್ರಲ್‌ಗೆ ರೈಲು ದ್ವಿಗುಣ ಸವಲತ್ತು ದೊರೆತಿರಲಿಲ್ಲ. ಕೆಲವು ವರ್ಷಗಳ ಹಿಂದೆ ಈ ತಾರತಮ್ಯವನ್ನು ಖಂಡಿಸಿ ಕರಾ ವಳಿ ಭಾಗದ ರೈಲ್ವೇ ಹೋರಾಟ ಗಾರರು ಕೇಂದ್ರ ಸರಕಾರದ ಗಮನಕ್ಕೆ ತಂದ ಬಳಿಕ ರೈಲು ಹಳಿಯು ದ್ವಿಗುಣ ಪ್ರಕ್ರಿಯೆಗೆ ಜೀವಬಂದಿದೆ.

ರೈಲು ಕಾಯುವ ಪ್ರಮೇಯವಿರಲ್ಲ!
ಮಂಗಳೂರು ಸೆಂಟ್ರಲ್‌ನಿಂದ ನೇತ್ರಾವತಿ ಸೇತುವೆವರೆಗೆ ಸದ್ಯ ಒಂದೇ ರೈಲು ಹಳಿ ಇದೆ. ಹೀಗಾಗಿ ಸೆಂಟ್ರಲ್‌ನಿಂದ ಒಂದು ರೈಲು ಹೊರಟ ಅನಂತರ ಅದು ನೇತ್ರಾವತಿ ಸೇತುವೆ ದಾಟುವವರೆಗೆ, ಕೇರಳ ಭಾಗದಿಂದ ಇನ್ನೊಂದು ರೈಲು ಬರಲು ಅವಕಾಶವಿಲ್ಲ. ಅದಕ್ಕಾಗಿ ಕೇರಳ ಭಾಗದಿಂದ ಬರುವ ರೈಲು ಸುಮಾರು 10-15 ನಿಮಿಷ ನೇತ್ರಾವತಿ ಸೇತುವೆ ಬಳಿ ನಿಲ್ಲಬೇಕಾಗುತ್ತದೆ. ಹಳಿ ದ್ವಿಗುಣಗೊಂಡರೆ ಇಂತಹ ಸಮಸ್ಯೆ ಇರುವುದಿಲ್ಲ. ಅದರ ಜತೆಗೆ ಹೊಸ ರೈಲು ಓಡಾಟಕ್ಕೂ ಅವಕಾಶ ಸಿಗಲಿದೆ ಎಂಬುದು ರೈಲ್ವೇ ಮೂಲಗಳ ಮಾಹಿತಿ.

ಕಾಮಗಾರಿ ಆರಂಭ
ಮಂಗಳೂರು ಸೆಂಟ್ರಲ್‌ನಿಂದ ನೇತ್ರಾವತಿ ಸೇತುವೆವರೆಗಿನ ರೈಲು ಹಳಿ ದ್ವಿಗುಣ ಕಾಮಗಾರಿ ಇತ್ತೀಚೆಗೆ ಆರಂಭವಾಗಿದೆ. ಇದು ಪೂರ್ಣಗೊಂಡ ಬಳಿಕ ಮಂಗಳೂರು ಸೆಂಟ್ರಲ್‌ ರೈಲ್ವೇ ನಿಲ್ದಾಣಕ್ಕೆ ಇನ್ನಷ್ಟು ರೈಲು ಸೇವೆ ದೊರೆಯುವ ನಿರೀಕ್ಷೆಯಿದೆ.
 - ಕಿಶನ್‌ ಕುಮಾರ್‌ ಎಂ.ಎಸ್‌., ಡೆಪ್ಯುಟಿ ಸ್ಟೇಷನ್‌ ಮ್ಯಾನೇಜರ್‌ (ವಾಣಿಜ್ಯ)
ಮಂಗಳೂರು ಸೆಂಟ್ರಲ್‌

- ದಿನೇಶ್‌ ಇರಾ

ಟಾಪ್ ನ್ಯೂಸ್

Dakshina Kannada ಚೆಕ್‌ಪೋಸ್ಟ್‌ ಕಾರ್ಯ ನಿರ್ವಹಣೆಗೆ ಡಿಸಿ ಸೂಚನೆ

Modi (2)

PM Modi ಸ್ಪರ್ಧೆಗೆ ನಿರ್ಬಂಧ: ದಿಲ್ಲಿ ಹೈಕೋರ್ಟ್‌ ನಕಾರ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

Mangaluru; ಪ್ರಯಾಣಿಕರ ಗಮನಕ್ಕೆ; ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ

Mangaluru; ಪ್ರಯಾಣಿಕರ ಗಮನಕ್ಕೆ; ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ

1-wewqwq-eqw

Amit Shah ನಕಲಿ ವೀಡಿಯೋ :ತೆಲಂಗಾಣ ಸಿಎಂಗೆ ಪೊಲೀಸ್‌ ಸಮನ್ಸ್‌

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dakshina Kannada ಚೆಕ್‌ಪೋಸ್ಟ್‌ ಕಾರ್ಯ ನಿರ್ವಹಣೆಗೆ ಡಿಸಿ ಸೂಚನೆ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

Mangaluru; ಪ್ರಯಾಣಿಕರ ಗಮನಕ್ಕೆ; ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ

Mangaluru; ಪ್ರಯಾಣಿಕರ ಗಮನಕ್ಕೆ; ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

UGC

UGC;ಉಪನ್ಯಾಸಕರ ಅರ್ಹತಾ ಪರೀಕ್ಷೆ ಜೂ.18ಕ್ಕೆ

drowned

Kenya; ಭಾರೀ ಮಳೆಗೆ ಒಡೆದ ಡ್ಯಾಮ್‌: ಕನಿಷ್ಠ 40 ಸಾವು!

Dakshina Kannada ಚೆಕ್‌ಪೋಸ್ಟ್‌ ಕಾರ್ಯ ನಿರ್ವಹಣೆಗೆ ಡಿಸಿ ಸೂಚನೆ

Modi (2)

PM Modi ಸ್ಪರ್ಧೆಗೆ ನಿರ್ಬಂಧ: ದಿಲ್ಲಿ ಹೈಕೋರ್ಟ್‌ ನಕಾರ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.