ಅರಾಂದ್‌: ನದಿ ಬದಿಯಲ್ಲಿ ಸಂಚರಿಸುವುದೇ ಸಾಹಸ…! 

Team Udayavani, Aug 24, 2021, 3:15 AM IST

ಅರಾಂದ್‌: ನದಿ ಬದಿಯಲ್ಲಿ ಸಂಚರಿಸುವುದೇ ಸಾಹಸ…! 

ಪಾವಂಜೆ ನಂದಿನಿ ನದಿಗೆ ತಡೆಗೋಡೆ ನಿರ್ಮಾಣವಾಗಬೇಕಿರುವುದು ಅಗತ್ಯ. ಗ್ರಾಮದ ಸಂಪರ್ಕ ರಸ್ತೆಗಳನ್ನು ಅಭಿವೃದ್ಧಿಗೊಳಿಸಬೇಕಿದೆ. ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಅಗತ್ಯ ಯೋಜನೆಯನ್ನು ಆರಂಭಿಸಬೇಕಿದೆ. ಈ ಬಗ್ಗೆ ಸಂಬಂಧಪಟ್ಟವರನ್ನು ಗಮನಸೆಳೆಯಲು ಉದಯವಾಣಿ ಸುದಿನದ “ಒಂದು ಊರು-ಹಲವು ದೂರು’ ಅಭಿಯಾನದಲ್ಲಿ ಪ್ರಯತ್ನಿಸಲಾಗಿದೆ.

ಹಳೆಯಂಗಡಿ: ಬೆಳೆಯುತ್ತಿರುವ ಪಟ್ಟಣವಾಗಿರುವ ಹಳೆಯಂಗಡಿಯ ರಾ.ಹೆ. 66ರಲ್ಲಿ ವಿಭಜನೆಯಾಗಿರುವ ಪಾವಂಜೆ ಗ್ರಾಮ ಹೆಚ್ಚಾಗಿ ನಂದಿನಿ ನದಿಯ ತೀರ ಪ್ರದೇಶವಾಗಿದೆ. ನದಿ ಪಕ್ಕದಲ್ಲಿ ಕೃಷಿ ಭೂಮಿ ಹೆಚ್ಚಾಗಿ ಇದ್ದು ಉಪ್ಪು ನೀರಿನ ಹಾವಳಿಯಿಂದ ಆಗಾಗ ತೊಂದರೆಗೀಡಾಗುವ ಪರಿಸ್ಥಿತಿ ಹೆಚ್ಚಾಗಿದೆ.

ಗ್ರಾಮದ ಬಹುಮುಖ್ಯ ಸಮಸ್ಯೆಯಾಗಿರುವ ಪಾವಂಜೆ-ಅರಾಂದ್‌ ಪ್ರದೇಶದಲ್ಲಿನ ನಂದಿನಿ ರಸ್ತೆಯ ಬದಿಯಲ್ಲಿ ಯಾವುದೇ ಸುರಕ್ಷೆ ಇಲ್ಲದೇ ಸಂಚರಿಸುವುದೇ ಸಾಹಸವಾಗಿದೆ. ಕಾಂಕ್ರೀಟ್‌ ರಸ್ತೆಯ ಪಕ್ಕದಲ್ಲಿಯೇ ನಂದಿನಿ ನದಿ ಹರಿಯುತ್ತಿದ್ದು, ಇದೀಗ ರಸ್ತೆಯು ನದಿ ಬದಿಯಲ್ಲಿ ಸ್ವಲ್ಪ ಕುಸಿದಂತೆ ಕಂಡಿದೆ. ವಾಹನಗಳು ಆಯಾ ತಪ್ಪಿದಲ್ಲಿ ನೇರವಾಗಿ ಆಳದ ನದಿಗೆ ಇಳಿಯುವ ಪರಿಸ್ಥಿತಿ ಇದೆ. ಸುಮಾರು 700 ಮೀ. ನಷ್ಟು ಉದ್ದದಲ್ಲಿ ರಕ್ಷಣೆ ಗೋಡೆ ಅಥವಾ ಕನಿಷ್ಠ ಬೇಲಿಯಾದರೂ ಅಳವಡಿಸದಿದ್ದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ. ಅರಾಂದ್‌ ಪ್ರದೇಶದಲ್ಲಿ ಸುಮಾರು 50ಕ್ಕೂ ಹೆಚ್ಚು ಮನೆಗಳಿದ್ದು, ನಿವಾಸಿಗಳಿಗೆ ಹೆದ್ದಾರಿ ಮತ್ತು ಹಳೆಯಂಗಡಿ-ಮುಕ್ಕ ಪೇಟೆಯನ್ನು ತಲುಪಲು ಈ ರಸ್ತೆಯೇ ಏಕೈಕ ಸಂಪರ್ಕದ ರಸ್ತೆಯಾಗಿದೆ.

ನಂದಿನಿ ನದಿಯ ಮತ್ತೂಂದು ಬದಿಯಲ್ಲಿ ಸೂಕ್ತವಾದ ತಡೆಗೋಡೆ ನಿರ್ಮಾಣವಾಗಬೇಕಿದೆ. ಇದೇ ಭಾಗದ ಕೊಳುವೈಲು ಪ್ರದೇಶದಲ್ಲಿಯೂ ನದಿ ಬದಿಯಲ್ಲಿ ರಸ್ತೆಯನ್ನು ಇತ್ತೀಚೆಗೆ ನಿರ್ಮಾಣ ಮಾಡಲಾಗಿದ್ದು ಅಭಿವೃದ್ಧಿಯೊಂದಿಗೆ ಸಂಚಾರಿಗಳಿಗೆ ಸುರಕ್ಷಿತ ತಡೆಬೇಲಿಯೂ ಅಗತ್ಯವಾಗಿದೆ.

ಕುಡಿಯುವ ನೀರಿನ ಸಮಸ್ಯೆ :

ಇತ್ತೀಚೆಗೆ ತೌಖೆ¤à ಚಂಡಮಾರುತದ ಪರಿಣಾಮ ಕೊಳುವೈಲು ಪ್ರದೇಶದಲ್ಲಿ ಉಪ್ಪು ನೀರು ನುಗ್ಗಿ ಫಲವತ್ತಾದ ಕೃಷಿ ಭೂಮಿ ಹಾನಿಯಾಗಿದೆ. ಇಲ್ಲಿನ ಬಾವಿಗಳಲ್ಲಿಯೂ ಉಪ್ಪು ನೀರು ತುಂಬಿ ಇಲ್ಲಿನ ಜನರಿಗೆ ಕುಡಿಯುವ ನೀರಿಗೆ ತತ್ವಾರ ಉಂಟಾಗಿದ್ದು, ಇದಕ್ಕೆ ಪೂರಕವಾಗಿ ಟ್ಯಾಂಕ್‌ ನಿರ್ಮಿಸಿ ನೀರು ಸರಬರಾಜು ಮಾಡಬೇಕಾಗಿದೆ. ಮಳೆಗಾಲದಲ್ಲಿ ಈ ಸಮಸ್ಯೆ ನಿವಾರಣೆಯಾಗಬಹುದು. ಉಪ್ಪು ನೀರಿನ ಹಾವಳಿಯಿಂದ ಕನಿಷ್ಠ ಎರಡು ವರ್ಷಗಳ ಕಾಲ ಕೃಷಿ ಕಾಯಕ ಮಾಡದ ಪರಿಸ್ಥಿತಿ ಉಂಟಾಗಿದೆ ಎನ್ನುತ್ತಾರೆ ಸ್ಥಳೀಯ ಕೃಷಿಕರು.

ಇತರ ಸಮಸ್ಯೆಗಳೇನು? :

  • ಅರಾಂದ್‌-ಸಸಿಹಿತ್ಲು ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣ ಅಗತ್ಯವಿದೆ.
  • ಅರಾಂದ್‌, ಕೊಳುವೈಲು ಪ್ರದೇಶದಲ್ಲಿರುವ ಕಿಂಡಿ ಅಣೆಕಟ್ಟಿನ ನಿರ್ವಹಣೆಯಾಗಬೇಕಿದೆ.
  • ಪಾವಂಜೆ ಮೂರು ದೇವಸ್ಥಾನಗಳ ವಠಾರದಲ್ಲಿರುವ ಕೆರೆಯ ಅಭಿವೃದ್ಧಿಯಾಗಬೇಕಿದೆ.
  • ಪಾವಂಜೆ ಜಂಕ್ಷನ್‌ವರೆಗೆ ಸರ್ವಿಸ್‌ ರಸ್ತೆ ನಿರ್ಮಾಣವಾಗಬೇಕಿದೆ.
  • ಕೊಳುವೈಲು ಬದಿ ಬದಿಯ ಸಮಸ್ಯೆಗೆ ಪರಿಹಾರ ಅಗತ್ಯ.
  • ರಾಮನಗರದಲ್ಲಿ ರಸ್ತೆಯ ಪ್ರಗತಿ.
  • ಹೆದ್ದಾರಿ ಸೇತುವೆಯ ಅಡಿಯಲ್ಲಿ ಕಿಡಿಗೇಡಿಗಳಿಂದ ನಡೆಯುವ ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕಬೇಕಿದೆ.

-ನರೇಂದ್ರ ಕೆರೆಕಾಡು

ಟಾಪ್ ನ್ಯೂಸ್

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

3-

LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

2-baikampady

Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

8

Devanahalli: ಬೇಸಿಗೆ ಬಿಸಿ; ಹುರುಳಿಕಾಯಿ ದರ ದುಬಾರಿ

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.