Udayavni Special

ಮರಳುಗಾರಿಕೆ: 1 ಲಕ್ಷ ಚ.ಮೀ. ವ್ಯಾಪ್ತಿಯಲ್ಲಿ ಬೇಥಮೆಟ್ರಿ ಸರ್ವೆ

Team Udayavani, Jul 31, 2018, 7:25 AM IST

sand-mining-sybolic-pic-600.jpg

ಮಂಗಳೂರು: ಕರಾವಳಿಯಲ್ಲಿ ಇದೇ ಮೊದಲ ಬಾರಿಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಬೇಥಮೆಟ್ರಿ ಸರ್ವೆ ನಡೆಸಿದೆ. ನದಿಯ ತಳಭಾಗದ ಅಧ್ಯಯನವನ್ನು ಕೈಗೊಂಡು ಸೂಕ್ತ ಸ್ಥಳದಲ್ಲಿ ಮರಳುಗಾರಿಕೆ ನಡೆಸಲು ಅನುಮತಿ ನೀಡುವುದು ಇದರ ಉದ್ದೇಶ. ಈ ವರದಿ ಹಾಗೂ ಎನ್‌.ಐ.ಟಿ.ಕೆ.ಯ ತಾಂತ್ರಿಕ ವರದಿ ಪರಿಗಣಿಸಿ ಅರ್ಹ ಮರಳುಗಾರಿಕೆ ನಡೆಸುವವರಿಗೆ ಜಿಲ್ಲಾಡಳಿತ ಅನುಮತಿ ನೀಡಲಿದೆ. ಆ. 2ರಂದು ದ.ಕ. ಜಿಲ್ಲಾ ಮರಳು ನಿಗಾ ಸಮಿತಿ ಈ ಕುರಿತು ಅಂತಿಮ ಸಭೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.

ಸಿ.ಆರ್‌.ಝಡ್‌. ವ್ಯಾಪ್ತಿಯಲ್ಲಿನ ನದಿಗಳಲ್ಲಿ ಮರಳೆತ್ತುವ ಪ್ರದೇಶಗಳ ಅಧ್ಯಯನವನ್ನು ಜಿಯೊಮೆರೈನ್ಸ್‌ ಸಂಸ್ಥೆ ಕೈಗೊಂಡಿದ್ದು, ಇದರಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಇಲಾಖೆ, ಮೀನುಗಾರಿಕಾ ಇಲಾಖೆ ಸಿಬಂದಿ ಭಾಗವಹಿಸಿದ್ದಾರೆ. ಕರಾವಳಿ ನದಿ ಪಾತ್ರದ ಸುಮಾರು 1 ಲಕ್ಷ ಚ. ಮೀಟರ್‌ ಪ್ರದೇಶದಲ್ಲಿ ಎರಡು ದಿನಗಳ ಕಾಲ ಸರ್ವೆ ನಡೆಸಲಾಗಿದೆ. ಇದುವರೆಗೆ ಎನ್‌.ಐ.ಟಿ.ಕೆ. ನೀಡುವ ಉಪಗ್ರಹ ಆಧಾರಿತ ಅಧ್ಯಯನ ಹಾಗೂ ತಾಂತ್ರಿಕ ವರದಿ ಆಧಾರದಲ್ಲಿ ಸಿಆರ್‌ಝಡ್‌ ಮರಳು ತೆಗೆಯುವ ನಿರ್ಧಾರ ಕೈಗೊಳ್ಳಲಾಗುತ್ತಿತ್ತು. ದೋಣಿಯಲ್ಲಿ ತೆರಳಿ ಜಿ.ಪಿ.ಎಸ್‌. ಇಕೋ ಸೌಂಡರ್‌ ಮತ್ತಿತರ ಉಪಕರಣಗಳ ಸಹಾಯದಲ್ಲಿ ನದಿಯ ಆಳದಲ್ಲಿರುವ ಮರಳು, ಹೂಳು ಹಾಗೂ ಕಲ್ಲಿನ ಪ್ರಮಾಣವನ್ನು ಸರ್ವೆ ಮಾಡಲಾಗಿದೆ. ಯಾವ ಮರಳು ಯೋಗ್ಯವಾಗಿದೆ ಹಾಗೂ ಯಾವುದು ಅಲ್ಲ ಎಂಬುದನ್ನು ಸರ್ವೆ ಮೂಲಕ ಕಂಡುಕೊಳ್ಳಲಾಗಿದೆ. 

ಈ ಮಧ್ಯೆ ಸಿ.ಆರ್‌.ಝಡ್‌. ಪ್ರದೇಶದಲ್ಲಿ ಸರ್ವೆ ಪ್ರಕ್ರಿಯೆ ಪೂರ್ಣಗೊಂಡು ರಾಜ್ಯಮಟ್ಟದ ಅನುಮೋದನಾ ಸಮಿತಿಯಿಂದ ಅನುಮತಿ ಸಿಗುವುದಕ್ಕೆ ಕೆಲವು ದಿನ ಕಾಯಬೇಕಾಗಬಹುದು ಎಂದು ಕೂಡ ಹೇಳಲಾಗುತ್ತಿದೆ. ಆದರೆ ನದಿಗಳ ಸಮೀಕ್ಷಾ ಪ್ರಕ್ರಿಯೆ ಪೂರ್ಣಗೊಂಡು ವರದಿ ಸಿಕ್ಕಿದ ಬಳಿಕ ಅಗತ್ಯವಿರುವ ಕಡೆಗಳಲ್ಲಿ ಮಾತ್ರ ಮರಳುಗಾರಿಕೆ ನಡೆಸಲು ಈ ಬಾರಿ ಅವಕಾಶ ನೀಡಲಾಗುವುದು ಎಂದು ದ.ಕ. ಜಿಲ್ಲಾಡಳಿತ ಈಗಾಗಲೇ ತಿಳಿಸಿದೆ ಎಂದು ಮೂಲಗಳು ಹೇಳಿವೆ.

ಏನಿದು ಬೇಥಮೆಟ್ರಿ ಸರ್ವೆ?
ಜಲಸಂಪನ್ಮೂಲಗಳಲ್ಲಿ ನೀರಿನ ತಳದ ನೆಲದ ಸಮೀಕ್ಷೆಯನ್ನು ಬೇಥಮೆಟ್ರಿ ಸರ್ವೆ ಎನ್ನುತ್ತಾರೆ. ಸಾಮಾನ್ಯವಾಗಿ ಸೋನಾರ್‌ ಉಪಕರಣದ ಮೂಲಕ ಇದನ್ನು ನಡೆಸುತ್ತಾರೆ. ಸೋನಾರ್‌ ಉಪಕರಣದ ಮೂಲಕ ಧ್ವನಿ ಅಥವಾ ಬೆಳಕನ್ನು ಹಾಯಿಸಿ, ಅದು ತಳದಿಂದ ಪ್ರತಿಫ‌ಲಿಸಿ ಹಿಂದಿರುಗಿ ಬರುವ ಸಮಯವನ್ನು ಆಧರಿಸಿ ಆಳ, ಅಲ್ಲಿರುವ ವಸ್ತುಗಳು ಇತ್ಯಾದಿ ಮಾಹಿತಿ ಪಡೆಯಲಾಗುತ್ತದೆ.

ಟಾಪ್ ನ್ಯೂಸ್

ನರೇಗಾ ಕೆಲಸದ‌ ವಿಷಯದಲ್ಲಿ ಎರಡು ಗುಂಪಿನ ಮಧ್ಯೆ ಘರ್ಷಣೆ : 10 ಜನರ ಬಂಧನ

ನರೇಗಾ ಕೆಲಸದ‌ ವಿಷಯದಲ್ಲಿ ಎರಡು ಗುಂಪಿನ ಮಧ್ಯೆ ಘರ್ಷಣೆ : 10 ಜನರ ಬಂಧನ

ಹೇರ್‌ಕಟ್‌ ಎಡವಟ್ಟು; 2 ಕೋಟಿ ರೂ. ಪರಿಹಾರ!

ಹೇರ್‌ಕಟ್‌ ಎಡವಟ್ಟು; 2 ಕೋಟಿ ರೂ.ನಷ್ಟ ತುಂಬಬೇಕಾದ ಸೆಲೂನ್‌

gvhytytuy

ಯುಪಿಎಸ್‌ಸಿ ಮುಖ್ಯ ಪರೀಕ್ಷೆ ಫಲಿತಾಂಶ ಪ್ರಕಟ | ಶುಭಮ್ ಕುಮಾರ್ ಪ್ರಥಮ ರ್‍ಯಾಂಕ್‌

ಯೋಗಿ ಹೆಸರಿಂದ ಅಪರಾಧಿಗಳಿಗೆ ನಡುಕ: ರಾಜನಾಥ್‌ ಸಿಂಗ್‌

ಯೋಗಿ ಹೆಸರಿಂದ ಅಪರಾಧಿಗಳಿಗೆ ನಡುಕ: ರಾಜನಾಥ್‌ ಸಿಂಗ್‌

dandeli

ದಾಂಡೇಲಿ : ಹಂದಿ, ನಾಯಿಗಳಿಗೆ ಹಬ್ಬದೂಟ ನೀಡುವ ಕಸದ ಡಬ್ಬಗಳು

fcgdgr

ಕೋವಿಡ್ : ರಾಜ್ಯದಲ್ಲಿಂದು  789 ಪ್ರಕರಣ|1050 ಸೋಂಕಿತರು ಗುಣಮುಖ

dxfre

ಆನೆ ರಕ್ಷಣೆ ಕಾರ್ಯಾಚರಣೆ ವರದಿಗೆ ತೆರಳಿದ್ದ ಪತ್ರಕರ್ತ ಸಾವು ! ವಿಡಿಯೋ ನೋಡಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಉಳ್ಳಾಲ: ಕ್ರೈಸ್ತ ಧರ್ಮ ಪ್ರಚೋದಿಸುವ ಪತ್ರಗಳು ಪತ್ತೆ, ಮತಾಂತರ ಕುಮ್ಮಕ್ಕು ಆರೋಪ

ಉಳ್ಳಾಲ: ಕ್ರೈಸ್ತ ಧರ್ಮ ಪ್ರಚೋದಿಸುವ ಪತ್ರಗಳು ಪತ್ತೆ, ಮತಾಂತರ ಕುಮ್ಮಕ್ಕು ಆರೋಪ

ತಿರುಗಾಟಕ್ಕೆ ಯಕ್ಷಗಾನ ಮೇಳಗಳು ಸನ್ನದ್ಧ

ಕೋವಿಡ್ ಪರಿಣಾಮ: ಬಡವಾದ ತುಳು ರಂಗಭೂಮಿ-ತಿರುಗಾಟಕ್ಕೆ ಯಕ್ಷಗಾನ ಮೇಳಗಳು ಸನ್ನದ್ಧ

ವಿಶ್ವದರ್ಜೆ ರೈಲು ನಿಲ್ದಾಣ ಯೋಜನೆ ಮತ್ತೆ ಮಂಗಳೂರು ಸೆಂಟ್ರಲ್‌ನತ್ತ

ವಿಶ್ವದರ್ಜೆ ರೈಲು ನಿಲ್ದಾಣ ಯೋಜನೆ ಮತ್ತೆ ಮಂಗಳೂರು ಸೆಂಟ್ರಲ್‌ನತ್ತ

ಅಮೃತ ಗ್ರಾಮ ಪಂಚಾಯತ್‌ ಯೋಜನೆಗೆ ಚಾಲನೆ:ಮಂಗಳೂರು,ಮೂಡುಬಿದಿರೆ ತಾ|:ಏಳು ಗ್ರಾ.ಪಂಗಳಲ್ಲಿ ಜಾರಿ

ಅಮೃತ ಗ್ರಾಮ ಪಂಚಾಯತ್‌ ಯೋಜನೆಗೆ ಚಾಲನೆ:ಮಂಗಳೂರು,ಮೂಡುಬಿದಿರೆ ತಾ|:ಏಳು ಗ್ರಾ.ಪಂಗಳಲ್ಲಿ ಜಾರಿ

ವಿಶೇಷ ಅಗತ್ಯವುಳ್ಳ ಮಕ್ಕಳು ವಿದೇಶಿ ದಂಪತಿಯ ಮಡಿಲಿಗೆ!

ವಿಶೇಷ ಅಗತ್ಯವುಳ್ಳ ಮಕ್ಕಳು ವಿದೇಶಿ ದಂಪತಿಯ ಮಡಿಲಿಗೆ!

MUST WATCH

udayavani youtube

ದಾಂಡೇಲಿ : ಹಂದಿ, ನಾಯಿಗಳಿಗೆ ಹಬ್ಬದೂಟ ನೀಡುವ ಕಸದ ಡಬ್ಬಗಳು

udayavani youtube

ಕೊಂಬು ಕಹಳೆ ವಾಧ್ಯ ತಯಾರಿಸುವ ಚಿಕ್ಕೋಡಿ ಕಲೈಗಾರ ಕುಟುಂಬ

udayavani youtube

ಆಧುನಿಕ ಭರಾಟೆಗೆ ಸಿಲುಕಿ ನಲುಗಿದ ಕುಲುಮೆ ಕೆಲಸಗಾರರ ಬದುಕು

udayavani youtube

ರಾತ್ರೋರಾತ್ರಿ ಕೋಟ್ಯಧಿಪತಿಯಾದ ಆಟೋ ಚಾಲಕ

udayavani youtube

ಕುಣಬಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ವಿಧಾನ ಪರಿಷತ್ ಸದಸ್ಯ ಘೋಟ್ನೇಕರ್ ಆಗ್ರಹ

ಹೊಸ ಸೇರ್ಪಡೆ

ನರೇಗಾ ಕೆಲಸದ‌ ವಿಷಯದಲ್ಲಿ ಎರಡು ಗುಂಪಿನ ಮಧ್ಯೆ ಘರ್ಷಣೆ : 10 ಜನರ ಬಂಧನ

ನರೇಗಾ ಕೆಲಸದ‌ ವಿಷಯದಲ್ಲಿ ಎರಡು ಗುಂಪಿನ ಮಧ್ಯೆ ಘರ್ಷಣೆ : 10 ಜನರ ಬಂಧನ

ಹೇರ್‌ಕಟ್‌ ಎಡವಟ್ಟು; 2 ಕೋಟಿ ರೂ. ಪರಿಹಾರ!

ಹೇರ್‌ಕಟ್‌ ಎಡವಟ್ಟು; 2 ಕೋಟಿ ರೂ.ನಷ್ಟ ತುಂಬಬೇಕಾದ ಸೆಲೂನ್‌

gvhytytuy

ಯುಪಿಎಸ್‌ಸಿ ಮುಖ್ಯ ಪರೀಕ್ಷೆ ಫಲಿತಾಂಶ ಪ್ರಕಟ | ಶುಭಮ್ ಕುಮಾರ್ ಪ್ರಥಮ ರ್‍ಯಾಂಕ್‌

ಯೋಗಿ ಹೆಸರಿಂದ ಅಪರಾಧಿಗಳಿಗೆ ನಡುಕ: ರಾಜನಾಥ್‌ ಸಿಂಗ್‌

ಯೋಗಿ ಹೆಸರಿಂದ ಅಪರಾಧಿಗಳಿಗೆ ನಡುಕ: ರಾಜನಾಥ್‌ ಸಿಂಗ್‌

dandeli

ದಾಂಡೇಲಿ : ಹಂದಿ, ನಾಯಿಗಳಿಗೆ ಹಬ್ಬದೂಟ ನೀಡುವ ಕಸದ ಡಬ್ಬಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.