ಸಂದೀಪ್ ಶೆಟ್ಟಿ “ಸೂಪರ್ಸ್ಟಾರ್ ಮಿಸ್ಟರ್ ಇಂಡಿಯಾ’
Team Udayavani, Mar 11, 2018, 6:50 AM IST
ಮಂಗಳೂರು: ಬೆಂಗಳೂರಿನಲ್ಲಿ ಮಾ. 2ರಿಂದ 4ರ ತನಕ ಇಂಟರ್ನ್ಯಾಶನಲ್ ಬ್ರಾಂಡ್ಫ್ಯಾಶನ್ ಎಬಿಸಿಡಿ ಮತ್ತು ಸಿಝಿಗ್ ಗೈಸ್ ಪ್ರಾಯೋಜಕತ್ವದಲ್ಲಿ ನಡೆದ ಮಿಸ್ಟರ್ ಇಂಡಿಯಾ ಸ್ಪರ್ಧೆಯಲ್ಲಿ ಮಂಗಳೂರಿನ ಸಂದೀಪ್ ಪಿ. ಶೆಟ್ಟಿ “ಸೂಪರ್ಸ್ಟಾರ್ ಮಿಸ್ಟರ್ ಇಂಡಿಯಾ’ ಹಾಗೂ ಸೌರಭ್ ಶೆಟ್ಟಿ ಅವರು ಪ್ರಥಮ ರನ್ನರ್ ಮಿಸ್ಟರ್ ಇಂಡಿಯಾ ಪ್ರಶಸ್ತಿ ಗಳಿಸಿದ್ದಾರೆ.
ಮಂಗಳೂರಿನ ಪತ್ರಿಕಾಭವನದಲ್ಲಿ ಶನಿವಾರ ಪತ್ರಿಕಾ ಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಸಂದೀಪ್ ಪಿ. ಶೆಟ್ಟಿ ಅವರು, ನನಗೆ “ಮಿಸ್ಟರ್ ಎನರ್ಜೆಟಿಕ್’ ಎಂಬ ಸಬ್ಟೈಟಲ್ ಪುರಸ್ಕಾರ ಕೂಡ ಲಭಿಸಿದೆ. ಸುಮಾರು 12 ರಾಜ್ಯಗಳ 800 ಸ್ಪರ್ಧಿಗಳ ಪೈಕಿ ಕೊನೆಯ ಸುತ್ತಿಗೆ 18 ಸ್ಪರ್ಧಿಗಳು ಆಯ್ಕೆಯಾಗಿದ್ದೆವು. 2017ರಲ್ಲಿ ನಡೆದಿದ್ದ ಸ್ಪರ್ಧೆಯಲ್ಲಿ “ಮಿಸ್ಟರ್ ಕರ್ನಾಟಕ ಇಂಟರ್ನ್ಯಾಶನಲ್ 2017′ ಪ್ರಶಸ್ತಿ ಲಭ್ಯವಾಗಿತ್ತು ಎಂದರು.
ಸೌರಭ್ ಶೆಟ್ಟಿ ಅವರು ಮಾತನಾಡಿ, ಪ್ರಥಮ ರನ್ನರ್ ಮಿಸ್ಟರ್ ಇಂಡಿಯಾ ಪ್ರಶಸ್ತಿ ದೊರಕಿರುವುದು ಸಂತಸ ತಂದಿದೆ ಎಂದು ಹೇಳಿದರು.
ಕಾಟಿಪಳ್ಳ ನಿವಾಸಿ ಸಂದೀಪ್ ಶೆಟ್ಟಿ ಯುವ ಉದ್ಯಮಿ ಯಾಗಿದ್ದಾರೆ. ಸೌರಭ್ ಶೆಟ್ಟಿ ಬಿಬಿಎಂ ದ್ವಿತೀಯ ವರ್ಷದ ವಿದ್ಯಾರ್ಥಿ.ಪತ್ರಿಕಾಗೋಷ್ಠಿಯಲ್ಲಿ ಚರಣ್ ಉಪಸ್ಥಿತರಿದ್ದರು.