ಸಂಭ್ರಮದ ಶರನ್ನವರಾತ್ರಿ ಮಹೋತ್ಸವ, ವಿಜಯದಶಮಿ ಸಂಪನ್ನ


Team Udayavani, Oct 6, 2022, 12:13 AM IST

ಸಂಭ್ರಮದ ಶರನ್ನವರಾತ್ರಿ ಮಹೋತ್ಸವ, ವಿಜಯದಶಮಿ ಸಂಪನ್ನ

ಮಂಗಳೂರು/ ಉಡುಪಿ:ಒಂಬತ್ತು ದಿನಗಳ ಕಾಲ ನಡೆದ ಶರನ್ನವರಾತ್ರಿ ಮಹೋತ್ಸವ ಬುಧವಾರ ವಿಜಯದಶಮಿ ಉತ್ಸವದೊಂದಿಗೆ ಸಮಾಪನಗೊಂಡಿತು.

ವಿಶೇಷವಾಗಿ ದೇವಿ ದೇವಾಲಯ ಗಳಲ್ಲಿ ಒಂಬತ್ತೂ ದಿನಗಳ ಕಾಲ ಚಂಡಿಕಾ ಹವನ, ಸಪ್ತಶತಿ ಪಾರಾಯಣ, ದುರ್ಗಾ ಹವನ, ದುರ್ಗಾ ನಮಸ್ಕಾರ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು, ನಿತ್ಯವೂ ಅನ್ನದಾನ ನಡೆದವು.

ಮಂಗಳೂರು ನಗರದ ವಿವಿಧ ದೇವಸ್ಥಾನಗಳಲ್ಲಿ ಸೆ. 26ರಿಂದ ಆರಂಭಗೊಂಡ ವೈಭವದ ನವರಾತ್ರಿ ಮಹೋತ್ಸವ ಬುಧವಾರ ಸಂಪನ್ನಗೊಂಡಿತು. “ಮಂಗಳೂರು ದಸರಾ’ ಎಂದೇ ಪ್ರಸಿದ್ಧಿ ಪಡೆದಿರುವ ಕುದ್ರೋಳಿ ಕ್ಷೇತ್ರದ ನವರಾತ್ರಿ ಉತ್ಸವವು ಬುಧವಾರ ಭವ್ಯ ಶೋಭಾಯಾತ್ರೆಯೊಂದಿಗೆ ಸಂಪನ್ನ ಗೊಂಡಿತು.

ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ವಿಜಯ ದಶಮಿಯಂದು ವಿದ್ಯಾರಂಭ, ತುಲಾಭಾರ ನಡೆಯಿತು. ಮಧ್ಯಾಹ್ನ ರಥಾರೋಹಣ, ರಾತ್ರಿ ರಥೋತ್ಸವ ಜರಗಿತು. ಕಟೀಲು, ಪೊಳಲಿ, ಬಪ್ಪನಾಡು ಸಹಿತ ವಿವಿಧ ದೇವಾಲಯಗಳಲ್ಲಿ ನವರಾತ್ರಿ ಸಡಗರ ನಡೆದು ಬುಧವಾರ ಸಮಾಪನಗೊಂಡಿತು.

ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆಯ ದೇವೀ ದೇವಸ್ಥಾನಗಳಲ್ಲಿ ಕೂಡ ನವರಾತ್ರಿ ಆಚರಣೆ, ಶಾರದಾ ಪೂಜೆ ಶ್ರದ್ಧಾಭಕ್ತಿಗಳಿಂದ ನೆರವೇರಿತು.

ಉಡುಪಿ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿ ನಿಂದ ಆರಂಭಗೊಂಡ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ದಸರಾ ಅದ್ದೂರಿಯಾಗಿ ನಡೆಯಿತು. ಅಪಾರ ಸಂಖ್ಯೆಯ ಭಕ್ತರು ದರ್ಶನ ಪಡೆದಿದ್ದಾರೆ.

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಸೆ.26ರಿಂದ ಅ.5ರವರೆಗೆ ಮಹಾನವರಾತ್ರಿ ಉತ್ಸವವನ್ನು ವೈಭವದಿಂದ ಆಚರಿಸಲಾಯಿತು. ಉಡುಪಿ ಆಸುಪಾಸಿನ ದೇವಿ ದೇವ ಸ್ಥಾ ನ ಗ ಳಲ್ಲಿ ಮಹಾನವಮಿಯಂದು ಚಂಡಿಕಾಯಾಗ, ರಥೋತ್ಸವ, ವಿಜಯದಶಮಿಯಂದು ವಿದ್ಯಾರಂಭ ನವಾನ್ನಪ್ರಾಶನ ಜರಗಿತು.

ಕಡಿಯಾಳಿ ಮಹಿಷ ಮರ್ದಿನಿ ದೇವಸ್ಥಾನದಲ್ಲಿ ಶ್ರೀಕೃ ಷ್ಣಮಠದಿಂದ ಮೆರವಣಿಗೆ ಬಂದು ಶಮೀ ವೃಕ್ಷದ ಪೂಜೆಯ ಪ್ರಸಾದವನ್ನು ಸ್ವೀಕರಿಸಿ ದರು. ಶ್ರೀಕೃಷ್ಣಮಠದಲ್ಲಿ ಕದಿರು ಕಟ್ಟುವ ಹಬ್ಬ ಆಚರಿಸಲಾಯಿತು. ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಕಾರ್ಕಳದ ಕುಕ್ಕೂಂದೂರು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ, ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನ, ಸೌಕೂರು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನ, ಉಡುಪಿಯ ಕಡಿಯಾಳಿ, ಇಂದ್ರಾಳಿ, ಬೈಲೂರು, ಅಂಬಲಪಾಡಿ, ಪುತ್ತೂರು, ಕನ್ನರ್ಪಾಡಿ ಸಹಿತ ದೇವಿಯ ದೇವಸ್ಥಾನಗಳ ವೈಭವದಿಂದ ನವರಾತ್ರಿಯ ಆಚರಣೆ ನಡೆಯಿತು.

ರಥಬೀದಿ; ಇಂದು ಶೋಭಾಯಾತ್ರೆ
ರಥಬೀದಿಯ ಸಾರ್ವಜನಿಕ ಮಂಗಳೂರು ಶ್ರೀ ಶಾರದಾ ಮಹೋತ್ಸವ ಶತಮಾನೋತ್ಸವ ಸಂಭ್ರಮವನ್ನು ಆಚರಿಸುತ್ತಿದ್ದು, ಅ. 6ರಂದು ಸಮಾಪನಗೊಳ್ಳಲಿದೆ. ರಾತ್ರಿ 10 ಗಂಟೆಗೆ ಶ್ರೀ ಶಾರದಾ ಮಾತೆಯ ಬೃಹತ್‌ ವಿಸರ್ಜನಾ ಶೋಭಾಯಾತ್ರೆಯು ನಗರದಲ್ಲಿ ನಡೆಯಲಿದೆ.

ಟಾಪ್ ನ್ಯೂಸ್

ಕ್ಯಾಬ್ ನಲ್ಲಿ ಒಂದು ಕೋಟಿ ರೂ.ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ಮರೆತುಬಿಟ್ಟ NRI…ಮುಂದೇನಾಯ್ತು…

bjp-congress

ಇಡೀ ರಾಜ್ಯಾದ್ಯಂತ 60 ರೌಡಿಗಳು ಬಿಜೆಪಿ ಸೇರುತ್ತಿದ್ದಾರಂತೆ : ಕಾಂಗ್ರೆಸ್ ಆರೋಪ

17

ಮಹಿಳಾ ಕ್ರಿಕೆಟರ್ ರಾಜೇಶ್ವರಿ ವಿರುದ್ಧ ಸೂಪರ್ ಮಾರ್ಕೆಟ್ ನಲ್ಲಿ ದಾಂದಲೆ ಆರೋಪ

ಮೂಡಿಗೆರೆ: ಮುಂದುವರಿದ ಕಾಡಾನೆ ಸೆರೆ ಕಾರ್ಯಾಚರಣೆ, ಡ್ರೋನ್ ಕ್ಯಾಮರಾ ಬಳಕೆ

ಮೂಡಿಗೆರೆ: ಮೂರನೇ ದಿನವೂ ಮುಂದುವರಿದ ಕಾಡಾನೆ ಸೆರೆ ಕಾರ್ಯಾಚರಣೆ, ಡ್ರೋನ್ ಕ್ಯಾಮರಾ ಬಳಕೆ

16

ಡಿ. 24 ರಿಂದ ದಾವಣಗೆರೆಯಲ್ಲಿ ವೀರಶೈವ-ಲಿಂಗಾಯತ ಮಹಾಸಭಾ ಅಧಿವೇಶನ; ಉದ್ಘಾಟನೆಗೆ ರಾಷ್ಟ್ರಪತಿಗೆ ಆಹ್ವಾನ

1-dsdsadasd

2030ಕ್ಕೆ ರಾಜ್ಯ ಎಚ್ಐವಿ ಮುಕ್ತವಾಗಲು ಶ್ರಮಿಸಿ: ಸಚಿವ ಡಾ.ಕೆ.ಸುಧಾಕರ್ ಕರೆ

1-wqweqwe

ರಾಮನ ಅಸ್ತಿತ್ವವನ್ನು ನಂಬದವರು ರಾವಣನನ್ನು ತಂದಿದ್ದಾರೆ : ಪ್ರಧಾನಿ ಮೋದಿ ತಿರುಗೇಟುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7

ತಗ್ಗಿದ ಡಿವೈಡರ್‌ ಎತ್ತರ: ಅಪಘಾತ ಹೆಚ್ಚಳ

6

ಇಂದು ವಿಶ್ವ ಏಡ್ಸ್‌ ದಿನಾಚರಣೆ; ದ.ಕ. ಜಿಲ್ಲೆಯಲ್ಲಿ ಎಚ್‌ಐವಿ ಸೋಂಕಿತರ ಪ್ರಮಾಣ ಗಣನೀಯ ಇಳಿಮುಖ

2

ಸುರತ್ಕಲ್: ಟೋಲ್‌ ಗೇಟ್‌ ಬಂದ್;‌ ಉದ್ಯೋಗ ವಂಚಿತರಾದ 50ಕ್ಕೂ ಅಧಿಕ ಮಂದಿ

ಮರಡೋನ ಚಿನ್ನದ ಮೂರ್ತಿ ಇಂದು ಮಂಗಳೂರಿಗೆ

ಮರಡೋನ ಚಿನ್ನದ ಮೂರ್ತಿ ಇಂದು ಮಂಗಳೂರಿಗೆ

ಮಂಗಳೂರು ಕುಕ್ಕರ್‌ ಪ್ರಕರಣ: ಶಾರೀಕ್‌ ಖಾತೆಗೆ ವಿದೇಶದಿಂದ ಹಣ ವರ್ಗಾವಣೆ

ಮಂಗಳೂರು ಕುಕ್ಕರ್‌ ಪ್ರಕರಣ: ಶಾರೀಕ್‌ ಖಾತೆಗೆ ವಿದೇಶದಿಂದ ಹಣ ವರ್ಗಾವಣೆ

MUST WATCH

udayavani youtube

Oxygen Cylinder ಇಲ್ಲದಿದ್ದರೂ ಉಪಯೋಗಕ್ಕೆ ಬರುತ್ತದೆ ಈ machine ! | Girija Surgicals

udayavani youtube

ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ದೊಡ್ಡಣಗುಡ್ಡೆ ಕ್ಷೇತ್ರದಲ್ಲಿ ‘ದೀಪೋತ್ಸವ’ ಸಂಭ್ರಮ

udayavani youtube

ಅಸ್ತಮಾ ರೋಗಿಗಳು ಮನೆಯಲ್ಲಿಯೇ ಚಿಕಿತ್ಸೆ ಪಡೆಯುವುದು ಹೇಗೆ ? |Girija Surgicals

udayavani youtube

ಕುಕ್ಕೆ ಸುಬ್ರಹ್ಮಣ್ಯಕ್ಕೆ ಕ್ರಿಕೆಟಿಗ ಕೆ.ಎಲ್.ರಾಹುಲ್ ಭೇಟಿ

udayavani youtube

ಶಾರೀಕ್ ಜೊತೆಗಿದ್ನಾ ಇನ್ನೋರ್ವ ವ್ಯಕ್ತಿ ? ಪೊಲೀಸ್ ಆಯುಕ್ತರು ಹೇಳಿದ್ದೇನು..

ಹೊಸ ಸೇರ್ಪಡೆ

ಕ್ಯಾಬ್ ನಲ್ಲಿ ಒಂದು ಕೋಟಿ ರೂ.ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ಮರೆತುಬಿಟ್ಟ NRI…ಮುಂದೇನಾಯ್ತು…

bjp-congress

ಇಡೀ ರಾಜ್ಯಾದ್ಯಂತ 60 ರೌಡಿಗಳು ಬಿಜೆಪಿ ಸೇರುತ್ತಿದ್ದಾರಂತೆ : ಕಾಂಗ್ರೆಸ್ ಆರೋಪ

17

ಮಹಿಳಾ ಕ್ರಿಕೆಟರ್ ರಾಜೇಶ್ವರಿ ವಿರುದ್ಧ ಸೂಪರ್ ಮಾರ್ಕೆಟ್ ನಲ್ಲಿ ದಾಂದಲೆ ಆರೋಪ

ಮೂಡಿಗೆರೆ: ಮುಂದುವರಿದ ಕಾಡಾನೆ ಸೆರೆ ಕಾರ್ಯಾಚರಣೆ, ಡ್ರೋನ್ ಕ್ಯಾಮರಾ ಬಳಕೆ

ಮೂಡಿಗೆರೆ: ಮೂರನೇ ದಿನವೂ ಮುಂದುವರಿದ ಕಾಡಾನೆ ಸೆರೆ ಕಾರ್ಯಾಚರಣೆ, ಡ್ರೋನ್ ಕ್ಯಾಮರಾ ಬಳಕೆ

16

ಡಿ. 24 ರಿಂದ ದಾವಣಗೆರೆಯಲ್ಲಿ ವೀರಶೈವ-ಲಿಂಗಾಯತ ಮಹಾಸಭಾ ಅಧಿವೇಶನ; ಉದ್ಘಾಟನೆಗೆ ರಾಷ್ಟ್ರಪತಿಗೆ ಆಹ್ವಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.