ಪ್ರೇಮಿಗಳಿಗೆ ವಿವಾಹ ಭಾಗ್ಯ : ಮನವೊಲಿಸಿದ ದಲಿತ್ ಸೇವಾ ಸಮಿತಿ
Team Udayavani, Sep 13, 2018, 4:10 AM IST
ಪುತ್ತೂರು: ಪ್ರೀತಿಸಿ ದೂರವಾಗಿದ್ದ ಪ್ರೇಮಿಗಳನ್ನು ಒಂದು ಗೂಡಿಸುವಲ್ಲಿ ದಲಿತ್ ಸೇವಾ ಸಮಿತಿ ಯಶಸ್ವಿಯಾಗಿದೆ. ಪೇರಮೊಗ್ರು ದೇಂತಡ್ಕ ಶ್ರೀ ವನದುರ್ಗೆ ದೇವಸ್ಥಾನದಲ್ಲಿ ಸೆ. 11ರಂದು ಈ ಪ್ರೇಮಿಗಳ ಸರಳ ವಿವಾಹ ನೆರವೇರಿತು.
ನಾಪತ್ತೆಯಾಗಿದ್ದ ಯುವಕ
ಎಂಟು ವರ್ಷಗಳಿಂದ ಮೊಟ್ಟೆತ್ತಡ್ಕ ನಿವಾಸಿ ಲಲಿತಾ ನಾಯ್ಕ ಹಾಗೂ ಸಿಂಹವನ ಪಂಜಳ ನಿವಾಸಿ ಅಶೋಕ್ ಕುಮಾರ್ ಪ್ರೀತಿಸುತ್ತಿದ್ದರು. ಮದುವೆಗೆ ಹುಡುಗನ ಮನೆಯವರು ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಹುಡುಗ ಮದುವೆಗೆ ನಿರಾಕರಿಸಿದ್ದು, ಒಂದು ವರ್ಷದಿಂದ ನಾಪತ್ತೆಯಾಗಿದ್ದ. ನೊಂದ ಯುವತಿ ದಲಿತ್ ಸೇವಾ ಸಮಿತಿಗೆ ದೂರು ನೀಡಿದ್ದರು.
ಸಮಿತಿಯಿಂದ 11ನೇ ವಿವಾಹ
ನಾಪತ್ತೆಯಾಗಿದ್ದ ಹುಡುಗನನ್ನು ಪತ್ತೆ ಹಚ್ಚಿದ ದಲಿತ್ ಸೇವಾ ಸಮಿತಿಯವರು ಆತನ ಮನವೊಲಿಸಿ ಸರಳವಾಗಿ ವಿವಾಹ ನೆರವೇರಿಸಿಕೊಟ್ಟಿದ್ದಾರೆ. ಇದು ದಲಿತ್ ಸೇವಾ ಸಮಿತಿ ವತಿಯಿಂದ ನಡೆದ 11ನೇ ವಿವಾಹವಾಗಿದೆ. ದಲಿತ್ ಸೇವಾ ಸಮಿತಿಯ ಪದಾಧಿಕಾರಿಗಳಾದ ರಾಜು ಹೊಸ್ಮಠ, ಜಿಲ್ಲಾ ಉಪಾಧ್ಯಕ್ಷ ಪ್ರಸಾದ್ ಬೊಳ್ಮಾರ್, ಧನಂಜಯ ಬಲ್ನಾಡ್, ಮೋಹನ ನಾಯ್ಕ, ಸಾಂತಪ್ಪ ನರಿಮೊಗರು, ಮನೋಹರ್ ಕೋಡಿಜಾಲ್, ಲೋಕಯ್ಯ ನಾಯ್ಕ, ಲೋಕೇಶ್ ತೆಂಕಿಲ, ಅಣ್ಣಪ್ಪ ಕಾರೆಕ್ಕಾಡು, ಕೇಶವ ಪಡೀಲ್, ವೇದಾಕ್ಷಿ ಕುಂಬುರ್ಗ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪುತ್ತೂರು ಜಿಲ್ಲೆಯಾದರೆ ಬೆಳ್ತಂಗಡಿಗೂ ಅನುಕೂಲ: ಪ್ರದೇಶವಾರು ಮೂಲ ಸೌಕರ್ಯ ಅಭಿವೃದ್ಧಿ ಸಾಧ್ಯ
ಹಸಿ ತ್ಯಾಜ್ಯದಿಂದ ಗೊಬ್ಬರ ತಯಾರಿ : ಬಂಟ್ವಾಳ ಪುರಸಭೆಯಿಂದ ಮಾರಾಟಕ್ಕೆ ಸಿದ್ಧತೆ
ಬೈರಿಕಟ್ಟೆ-ಕಲ್ಲಜೇರ-ನೆಕ್ಕಿತ್ತಪುಣಿ ರಸ್ತೆ ವಿಸ್ತರಣೆಗೆ ಆಗ್ರಹ
ಸಂಪಾಜೆ: ಕಾಡಾನೆ ದಾಳಿಗೆ 40 ಅಡಿಕೆ ಮರ, 2 ತೆಂಗಿನಮರ ನಾಶ; ಶಾಶ್ವತ ಪರಿಹಾರಕ್ಕೆ ರೈತರ ಆಗ್ರಹ
ಕರ್ತವ್ಯದ ಜೊತೆಗೆ ಸಮಾಜ ಸೇವೆ: ಜಿನ್ನು ಅಜ್ಜಿಗೆ ನೆರವಾದ ಬಂಟ್ವಾಳದ ಆರಕ್ಷಕರು