ಕೊಡು-ಕೊಳ್ಳುವಿಕೆಯ ಉತ್ಸುಕತೆಗೆ ಅಡಿಪಾಯ ಹಾಕಿದ ಸಂವಾದ

ಉದಯವಾಣಿ ಕಚೇರಿಯಲ್ಲಿ ಅಕಾಡೆಮಿ ಅಧ್ಯಕ್ಷರೊಂದಿಗೆ ಮಾತುಕತೆ

Team Udayavani, Oct 23, 2019, 5:01 AM IST

t-7

ಉದಯವಾಣಿ ಮಂಗಳೂರು ಕಚೇರಿಯಲ್ಲಿ ಐದು ವಿವಿಧ ಭಾಷಿಕ ಸಾಹಿತ್ಯ ಅಕಾಡೆಮಿಗಳ ಅಧ್ಯಕ್ಷರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು.

ಮಹಾನಗರ: ಅವಿಭಜಿತ ದ. ಕ. ಸಹಿತ ಕರಾವಳಿ ಮತ್ತು ಮಲೆನಾಡಿನಲ್ಲಿ ತುಳು, ಕೊಂಕಣಿ, ಬ್ಯಾರಿ, ಅರೆಭಾಷೆ ಮತ್ತು ಕೊಡವ ಸಾಹಿತ್ಯ ಅಕಾಡೆಮಿಗಳನ್ನು ಒಂದೆಡೆ ಸೇರಿಸುವ ಮೂಲಕ ಪ್ರಾದೇಶಿಕ ನೆಲೆಗಟ್ಟಿನಲ್ಲಿ ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಉತ್ತೇಜಿಸುವುದಕ್ಕೆ “ಉದಯವಾಣಿ’ಯು ಮಂಗಳವಾರ ಏರ್ಪಡಿಸಿದ್ದ ಪಂಚ ಭಾಷಾ ಸಾಹಿತ್ಯ ಅಕಾಡೆಮಿಗಳ ಸಂವಾದವು ಒಂದು ಅಪೂರ್ವ ವೇದಿಕೆಯಾಯಿತು. “ಉದಯವಾಣಿ’ಯ ಮಂಗಳೂರು ಕಚೇರಿಯಲ್ಲಿ ಮಂಗಳವಾರ ನಡೆದ ಸಂವಾದದಲ್ಲಿ ಎಲ್ಲ ಐದು ಅಕಾಡೆಮಿ ಅಧ್ಯಕ್ಷರು ಪಾಲ್ಗೊಂಡು ತಮ್ಮ ಮುಂದಿನ ಕಾರ್ಯ ಯೋಚನೆ- ಯೋಜನೆಗಳನ್ನು ಹಂಚಿಕೊಂಡಿದ್ದಾರೆ.

“ತುಳು ಅಧಿಕೃತ ರಾಜ್ಯ ಭಾಷೆಯಾದರೆ ಮಾನ್ಯತೆ’
ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವ ನೆಲೆಯಲ್ಲಿ ಈ ಬಾರೀ ಯಶಸ್ವಿ ಹೋರಾಟ ನಡೆಯಬೇಕಿದೆ. ಪ್ರಮುಖವಾಗಿ ತುಳುವನ್ನು ಅಧಿಕೃತ ರಾಜ್ಯಭಾಷೆಯಾಗಿ ಸೇರಿಸುವ ಪ್ರಯತ್ನ ನಡೆಯಬೇಕು. ಇದು ಸಾಧ್ಯವಾದರೆ ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆಯಾಗಲು ಬಹಳ ಅನುಕೂಲವಾಗಲಿದೆ ಎಂದು ತುಳು ಸಾಹಿತ್ಯ ಅಕಾಡೆಮಿ ನೂತನ ಅಧ್ಯಕ್ಷ ದಯಾನಂದ ಕತ್ತಲಸಾರ್‌ ಅಭಿಪ್ರಾಯಪಟ್ಟರು. ಸಂವಿಧಾನದ ಮಾನ್ಯತೆ ತುಳು ಭಾಷೆಗೆ ದೊರೆಯಬೇಕು ಎಂಬ ನೆಲೆಯಲ್ಲಿ ಡಾ| ಡಿ. ವೀರೇಂದ್ರ ಹೆಗ್ಗಡೆ ಸೇರಿದಂತೆ ಪ್ರಮುಖರ ನೇತೃತ್ವದಲ್ಲಿ ಒಟ್ಟು ಕಾರ್ಯಯೋಜನೆ ರೂಪಿಸಲಾಗುವುದು. ಬಳಿಕ ಸಂಸದರು-ಶಾಸಕರ ಸಹಕಾರ ಪಡೆದು ರಾಜ್ಯಭಾಷೆಯ ಗೌರವ ಪಡೆಯಲು ಆದ್ಯತೆ ನೀಡಲಾಗುವುದು.

ವಿಶ್ವ ತುಳು ಸಮ್ಮೇಳನ
ತುಳು ಸಾಹಿತ್ಯ ಅಕಾಡೆಮಿಯ 25ನೇ ವರ್ಷದ ಸಂಭ್ರಮದ ಹಿನ್ನೆಲೆಯಲ್ಲಿ ಜಗತ್ತಿನಲ್ಲಿರುವ ಎಲ್ಲ ತುಳುಭಾಷಿಗರನ್ನು ಒಟ್ಟು ಸೇರಿಸಿ ವಿಶ್ವ ತುಳು ಸಮ್ಮೇಳನ ಆಯೋಜಿಸುವ ಯೋಚನೆಯಿದೆ. ಸದ್ಯ ಕೆಲವು ತುಳು ಕಲಾವಿದರಿಗೆ ಮಾತ್ರ ಮಾಸಾಶನ ಸಿಗುತ್ತಿದ್ದು, ಅದನ್ನು ಇನ್ನಷ್ಟು ಕಲಾವಿದರಿಗೆ ವಿಸ್ತರಿಸುವ ಹಾಗೂ ಆ ಮೊತ್ತವನ್ನು ಏರಿಸುವ ನೆಲೆಯಲ್ಲಿ ವಿಶೇಷ ಕ್ರಮ ಕೈಗೊಳ್ಳಲಾಗುವುದು. ಮುಂದಿನ ದಿನದಲ್ಲಿ ಮಕ್ಕಳ ತುಳು ಸಮ್ಮೇಳನ, ಶಾಲೆಯ ಪುಟಾಣಿಗಳಿಗೆ ತುಳುನಾಡಿನ ಆಟೋಟಗಳನ್ನು ಪರಿಚಯಿಸುವ ಕ್ರೀಡಾಕೂಟ, ತುಳು ಪಠ್ಯವನ್ನು ದ್ವಿತೀಯ ಪಿಯುಸಿವರೆಗೆ ವಿಸ್ತರಿಸುವ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು.ಬಹುತೇಕ ಭಾಗದಲ್ಲಿ ತುಳು ಲಿಪಿಯ ಶಿಲಾ ಶಾಸನಗಳು ಇಂದು ಮೆಟ್ಟಿಲುಗಳಾಗಿ, ಬಟ್ಟೆ ಒಗೆಯುವ ಕಲ್ಲುಗಳಾಗಿ ಬಳಕೆಯಾಗುತ್ತಿವೆ.

ಇಂತಹ ಪರಿಸ್ಥಿತಿಯಿಂದ ಹೊರಬಂದು ತುಳುಲಿಪಿಯನ್ನು ಕಾಪಿಡುವ ಪ್ರಯತ್ನ ನಡೆಯಬೇಕಿದೆ. ತುಳುವಿನ ನಿಜವಾದ ಸತ್ವ ಪಾಡªನವಾದ್ದರಿಂದ ಆ ಕ್ಷೇತ್ರದ ಎಲ್ಲ ವಿದ್ವತ್‌ ಶ್ರೇಷ್ಠರನ್ನು ಸಮಾಜಕ್ಕೆ ಪರಿಚಯಿಸುವ ಹಾಗೂ ಅವರ ಸಾಹಿತ್ಯವನ್ನು ದಾಖಲೀಕರಿಸುವ ಪ್ರಯತ್ನ ನಡೆಯಬೇಕಿದೆ. ಅಕಾಡೆಮಿಯ ತುಳು ಭವನದಲ್ಲಿ 3 ಕೋ.ರೂ. ವೆಚ್ಚದಲ್ಲಿ ತೌಳವ ಲೋಕದ ಒಟ್ಟು ಚಿತ್ರಣವನ್ನು ಬಿತ್ತರಿಸುವ ಕಲಾಲೋಕ ಅನಾವರಣ ಕಾರ್ಯ ಮುಂದುವರಿಯಲಿದೆ. ತುಳು ಭಾಷೆ-ಸಾಹಿತ್ಯದ ಉನ್ನತಿಯ ದೃಷ್ಟಿಯಲ್ಲಿ ಹಾಗೂ ತುಳು ಮಾತನಾಡುವ ಎಲ್ಲರನ್ನು ಜತೆಯಾಗಿ ಕರೆದುಕೊಂಡು ಭಾಷಾ ಪ್ರೇಮದ ಜತೆಗೆ ಒಂದಿಷ್ಟು ಕಾರ್ಯಗಳನ್ನು ನಡೆಸಲು ಅಕಾಡೆಮಿ ವಿಶೇಷ ಆದ್ಯತೆ ನೀಡಲಿದೆ.

“ಕೊಂಕಣಿ ವಿದ್ಯಾರ್ಥಿಗಳಿಗೆ ವೃತ್ತಿ ಭದ್ರತೆ ಕಲ್ಪಿಸಿ’
ಕೊಂಕಣಿ ಕಲಿಯುವ ವಿದ್ಯಾರ್ಥಿಗಳ ಮುಂದಿನ ಜೀವನಕ್ಕೆ ಮಾರ್ಗೋಪಾಯ ಆಗುವ ರೀತಿಯಲ್ಲಿ ಉದ್ಯೋಗಾವಕಾಶ ಮತ್ತು ಇತರ ಆರ್ಥಿಕ ಭದ್ರತೆ ಕಲ್ಪಿಸುವ ಬಗ್ಗೆ ಅಕಾಡೆಮಿಯಲ್ಲಿ ಚರ್ಚಿಸಿ ಸೂಕ್ತ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗುವುದು ಎಂದು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಜಗದೀಶ್‌ ಪೈ ಹೇಳಿದರು.

6ರಿಂದ 10ನೇ ತರಗತಿ ವರೆಗೆ (ತೃತೀಯ ಭಾಷೆಯಾಗಿ) ಹಾಗೂ ಕಾಲೇಜು ಮಟ್ಟದಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿ ತರಗತಿಯಲ್ಲಿ ಕೊಂಕಣಿಯನ್ನು ಒಂದು ಭಾಷೆಯಾಗಿ ಕಲಿಯಲು ಈಗ ಅವಕಾಶವಿದೆ. ಪಿಯುಸಿ ಹಂತದಲ್ಲಿ ಮಾತ್ರ ಇಲ್ಲ. ಕೊಂಕಣಿ ಕಲಿಕೆಯಿಂದ ಪ್ರಯೋಜನವೇನು ಎಂಬ ಪ್ರಶ್ನೆ ಎದುರಾಗುವ ಕಾರಣ ಮಕ್ಕಳು ಮಾತ್ರವಲ್ಲದೆ ಹೆತ್ತವರು ಕೂಡ ಹಿಂದೇಟು ಹಾಕುತ್ತಿರುವುದರಿಂದ ಕೊಂಕಣಿ ಕಲಿಯುವ ವಿದ್ಯಾರ್ಥಿಗಳ ಸಂಖ್ಯೆ ಕುಸಿಯುತ್ತಿದೆ. ಇದನ್ನು ಗಮನಿಸಿ ಕೊಂಕಣಿ ಕಲಿಯಲು ಇಚ್ಛಿಸುವ ಮಕ್ಕಳಿಗೆ ಬದುಕಿನಲ್ಲಿ ಆರ್ಥಿಕ ಭದ್ರತೆ ಒದಗಿಸುವ ಬಗ್ಗೆ ಚಿಂತನೆ ನಡೆದಿದೆ.
ಅಕಾಡೆಮಿಯಲ್ಲಿ ಕೆಲವು ಸಮುದಾಯದವರಿಗೆ ಪ್ರಾತಿನಿಧ್ಯ ದೊರೆತಿಲ್ಲ ಎಂಬ ಅಪಸ್ವರ ಕೇಳಿ ಬಂದಿರುವುದು ಗಮನಕ್ಕೆ ಬಂದಿದೆ.

ಕೊಂಕಣಿ ಭಾಷೆ ಮಾತನಾಡುವ 42 ಸಮುದಾಯಗಳಿದ್ದು, ವಿವಿಧ ಕಾರ್ಯಕ್ರಮಗಳನ್ನು ನಡೆಸುವಾಗ ಎಲ್ಲರನ್ನು ವಿಶ್ವಾಸಕ್ಕೆ ತೆಗದುಕೊಳ್ಳಲಾಗುವುದು. ಕೊಂಕಣಿ ಅಕಾಡೆಮಿ ರಚನೆಯಾಗಿ 25 ವರ್ಷಗಳಾಗಿದ್ದು, ಬೆಳ್ಳಿ ಹಬ್ಬ ಆಚರಿಸುವ ಉದ್ದೇಶವಿದೆ. ಕೊಂಕಣಿ ಭವನ ನಿರ್ಮಾಣ ಮಾಡುವ ಕನಸನ್ನು ನನಸಾಗಿಸಲು ಪ್ರಯತ್ನಿಸುತ್ತೇನೆ.
ಮಣಿಪಾಲದ ಪೈ ಸಮೂಹ ಸಂಸ್ಥೆ, ಕೆನರಾ ಸಂಸ್ಥೆಗಳ ಸ್ಥಾಪಕ ಅಮ್ಮೆಂಬಳ ಸುಬ್ಬರಾವ್‌ ಪೈ ಮತ್ತಿತರರು ಕೊಂಕಣಿ ಭಾಷಿಗರಾಗಿದ್ದು, ಅವರ ಸಾಧನೆ ಮತ್ತು ದೇಶಕ್ಕೆ ನೀಡಿದ ದೇಣಿಗೆ ಅಪಾರ. ಇದೆಲ್ಲವನ್ನೂ ದಾಖಲಿಸಿ ಸಮಾಜಕ್ಕೆ ತಿಳಿಸ ಬೇಕಾಗಿದೆ.

ಯೋಜನೆಗಳ ಕಿರು ನೋಟ
ಕೊಂಕಣಿಯಲ್ಲಿ ಶಿಶು ಸಾಹಿತ್ಯ ರಚನೆ, ಸಾಧಕರ ಜೀವನದ ಕಿರುಚಿತ್ರ ನಿರ್ಮಾಣ, ಕೊಂಕಣಿ ಶಬ್ದ ಭಂಡಾರ ರಚನೆ,  ಭಾಷೆ, ಲಿಪಿ ಮತ್ತು ಕೊಂಕಣಿಗರ ಜೀವನದ ಬಗ್ಗೆ ಸಂಶೋಧನೆ, ಅನ್ಯ ಭಾಷೆಗಳ ಉತ್ತಮ ಗ್ರಂಥಗಳನ್ನು ಕೊಂಕಣಿಗೆ ಭಾಷಾಂತರ, ಆಗಿಂದಾಗ್ಗೆ  ವಿಚಾರ ಸಂಕಿರಣ ಮತ್ತು ವರ್ಷಕ್ಕೊಮ್ಮೆ ಕೊಂಕಣಿ ಸಮ್ಮೇಳನ, ವಿವಿಧ ಕ್ಷೇತ್ರಗಳ ಕೊಂಕಣಿ ಸಾಧಕರನ್ನು ಮತ್ತು ಸಂಸ್ಥೆಗಳನ್ನು ಗುರುತಿಸಿ ಪ್ರಶಸ್ತಿ ನೀಡುವುದು.

“ಕೊಡವ ಸಾಂಸ್ಕೃತಿಕ ಸಂಪತ್ತು ಪಸರಿಸುವೆ’
ಕೊಡವ ಭಾಷೆಯನ್ನಾಡುವ ಪ್ರದೇಶದಲ್ಲಿ ಹೇರಳವಾಗಿರುವ ಸಾಂಸ್ಕೃತಿಕ ಸಂಪತ್ತನ್ನು ಉಳಿದೆಡೆ ಪಸರಿಸುವ ನಿಟ್ಟಿನಲ್ಲಿ ಭಾಷಿಕ ಮೂಲ ನಿವಾಸಿಗಳ ಜೀವನಾಧಾರಿತ ಇತಿಹಾಸ ಸಾರುವ ಪುರಾತತ್ವ ಪರಿಕರಗಳ ದಾಖಲೆಗಳ ದಾಖಲಿಕರಣ, ಕೊಡವ ಭಾಷೆಯಲ್ಲಿರುವ ಕೃತಿಗಳನ್ನು ದೇಶದ ನಾನಾ ಭಾಷೆಗಳಿಗೆ ಅನುವಾದಿಸುವಿಕೆ, ಭಾಷಿಕ ನೆಲದಲ್ಲಿನ ಇತಿಹಾಸ ಸಂಗ್ರಹಕ್ಕೆ ಅಧ್ಯಯನ ಮತ್ತು ಸಂಶೋಧನೆಗೆ ಪ್ರೋತ್ಸಾಹ ಕೊಡುವುದಕ್ಕೆ ಪ್ರಯತ್ನಿಸುವುದಾಗಿ ರಾಜ್ಯ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಡಾ| ಪಾರ್ವತಿ ಅಪ್ಪಯ್ಯ ಹೇಳಿದ್ದಾರೆ.

ವಿದ್ಯಾರ್ಥಿಗಳನ್ನು ಮುಖ್ಯವಾಗಿಟ್ಟುಕೊಂಡು ಕೊಡವ ಜಾನಪದ ನಾಟಕ, ಆಟ್‌ಪಾಟ್‌ ಪ್ರದರ್ಶನ, ಜನಪದೀಯ ಸೊಗಡಿನ ಪದ್ಯಗಳನ್ನು ಪರಿಚಯಿಸಬೇಕಿದೆ. ಕೊಡವ ಭಾಷಿಕರ ಆಚಾರ-ವಿಚಾರ, ಸಾಂಸ್ಕೃತಿಕ, ಸಾಹಿತ್ಯ ಹಿನ್ನೆಲೆಗಳಲ್ಲಿ ಕೃತಿರೂಪದಲ್ಲಿ ಪ್ರಕಟಿಸಿ ಭಾಷಿಕರಲ್ಲದವರಿಗೂ ವಿಚಾರ ತಿಳಿಸಿ ಭಾಷಾ ಬೆಳವಣಿಗೆ ದೃಷ್ಟಿಯಿಂದ ಶ್ರಮಿಸಬೇಕಿದೆ. ಆಕಾಡೆಮಿ ಮೂಲಕ ಇಂತಹ ಕಾರ್ಯಚಟುವಟಿಕೆಗಳಿಗೆ ಆದ್ಯತೆ ನೀಡಲು ಆಸ್ಥೆ ವಹಿಸುವುದಾಗಿ ನುಡಿದರು. ಕೊಡವರು ಮಾತ್ರವಲ್ಲದೆ ಉಪಪಂಗಡಗಳ 20 ಭಾಷಿಕ ಮೂಲ ನಿವಾಸಿಗಳು ಕೊಡವ ಭಾಷಿಕರಾಗಿದ್ದಾರೆ.

ಕೊಡವ ಭಾಷೆಯನ್ನಾಡುವ ಪ್ರದೇಶದಲ್ಲಿ ವಿಪುಲವಾದ ಸಾಂಸ್ಕೃತಿಕ ಸಂಪತ್ತು ಇದೆ. ಇದರ ಬಗ್ಗೆ ಸಂಶೋಧನೆ, ಅಧ್ಯಯನ ಮಾಡುವವರಿಗೆ ಆಕಾಡೆಮಿಯಿಂದ ನೆರವಾಗಲು ಯೋಜನೆ ರೂಪಿಸುತ್ತೇನೆ. ಈ ಮೂಲಕ ಕೊಡವ ಭಾಷಿಕ ನೆಲದ ಮಹತ್ವ ಎಲ್ಲೆಡೆ ಪಸರಿಸಲು ಅವಕಾಶ ಸೃಷ್ಟಿಸಲು ಅಕಾಡೆಮಿ ಮೂಲಕ ಕಾರ್ಯನ್ಮುಖನಾಗುವೆ.
ಕೊಡವ ಭಾಷೆ, ಸಾಹಿತ್ಯ, ರಂಗಭೂಮಿ, ಜಾನಪದ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದವರನ್ನು ಗುರುತಿಸಿ ಪ್ರಶಸ್ತಿ ನೀಡಿದಾಗ ಹೆಚ್ಚು ಸಹಕಾರಿಯಾಗಲಿದೆ. ಭಾಷಿಕ ಜನಾಂಗದ ಇತಿಹಾಸ ಸಾರುವ ಪಾರಂಪರಿಕ ಹಿನ್ನೆಲೆ, ಆಚಾರ-ವಿಚಾರ, ಪದ್ಧತಿ ಪರಂಪರೆ ಜನಪದೀಯ ಸಂಸ್ಕೃತಿ ಅನಾವರಣೆಗೆ ವಿಶಿಷ್ಟತೆಯನ್ನು ಯುವ ಪೀಳಿಗೆಗೆ ಪರಿಚಯಿಸುವುದು, ಪ್ರಾಥಮಿಕ ಹಂತದಿಂದಲೇ ವಿದ್ಯಾರ್ಥಿಗಳಿಗೆ ಜನಪದೀಯ ಕಲೆ, ನೃತ್ಯ, ನಾಟಕ, ಕಲಿಕಾ ಪಠ್ಯಪುಸ್ತಕ ರಚನೆ, ಯುವ ಪೀಳಿಗೆಗೆ ತರಬೇತಿ ಕಾರ್ಯ ಇವುಗಳನ್ನು ಹಮ್ಮಿಕೊಳ್ಳಲಾಗುವುದು.

ಭಾಷಾ ರಕ್ಷಣೆಗ ಒತ್ತು
ಅಕಾಡೆಮಿಗಳು ಭಾಷೆಯ ಬೆಳವಣಿಗೆ, ಸಂಸ್ಕೃತಿ ಪಸರಿಸುವಿಕೆ ಉದ್ದೇಶ ಹೊಂದಿರುವ ಕಾರಣ ಎಲ್ಲ ಅಕಾಡೆಮಿಗಳು ಒಂದಾಗಿ ಈ ಬಗ್ಗೆ ಯೋಚಿಸಿ ಕಾರ್ಯಪ್ರವೃತರಾಗುವ ಅಭಿಪ್ರಾಯಕ್ಕೆ ನನ್ನ ಬೆಂಬಲವಿದೆ. ಕೊಡವ ಭಾಷಿಕರು ಆಂಗ್ಲಭಾಷೆಯತ್ತ ಮಾರು ಹೋಗುತ್ತಿರುವ ಕಾರಣ ಭಾಷಾ ರಕ್ಷಣೆಗೆ ಒತ್ತು ನೀಡಲು ಪ್ರಯತ್ನಿಸುವೆ. ಕೊಡವ ಭಾಷಿಕರ ಸಂಸ್ಕೃತಿಯನ್ನು ಬಿಂಬಿಸುವ ಮುಂದುಮನೆ, ಐನ್‌ಮನೆಗಳಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳುವುದು ಇತ್ಯಾದಿ ಯೋಚನೆಗಳನ್ನು ಅಕಾಡೆಮಿ ಸದಸ್ಯರ ಮುಂದಿರಿಸಿ ಕಾರ್ಯಗತಗೊಳಿಸಲು ಯೋಚಿಸಿದ್ದೇನೆ.

“ಶಿಕ್ಷಣದಲ್ಲಿ ಬ್ಯಾರಿ ಭಾಷೆ ಸೇರ್ಪಡೆಗೆ ಪ್ರಯತ್ನ’
ಶಿಕ್ಷಣದಲ್ಲಿ ಐಚ್ಛಿಕ ಭಾಷೆಯಾಗಿ ಬ್ಯಾರಿಯನ್ನು ಮಕ್ಕಳು ಕಲಿಯುವುದಕ್ಕಾಗಿ ಸರಕಾರಕ್ಕೆ ಬೇಡಿಕೆ ಮಂಡಿಸಿ ಮುಂದಿನ ವರ್ಷದಿಂದ ಅನುಷ್ಠಾನಕ್ಕೆ ಪ್ರಯತ್ನಿಸಲಾಗುವುದು ಎಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ನೂತನ ಅಧ್ಯಕ್ಷ ರಹೀಂ ಉಚ್ಚಿಲ ಹೇಳಿದ್ದಾರೆ. ಬ್ಯಾರಿ ಭಾಷೆಯನ್ನು ಐಚ್ಛಿಕ ಭಾಷೆಯಾಗಿ ಕಲಿಯಲು ಅವಕಾಶ ದೊರೆತರೆ ಭಾಷೆಯ ಬೆಳವಣಿಗೆ ಮತ್ತು ಸಂರಕ್ಷಣೆಗೆ ಸಹಕಾರಿಯಾಗುತ್ತದೆ. 6ನೇ ತರಗತಿಯಿಂದಲೇ ಬ್ಯಾರಿಯನ್ನು ಐಚ್ಛಿಕ ಭಾಷೆಯಾಗಿ ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸಲಾಗುವುದು.

ಜಾತಿ, ಧರ್ಮದ ನೆರಳು ಬೀಳಬಾರದು
ಬ್ಯಾರಿ ಸಾಹಿತ್ಯ ಅಕಾಡೆಮಿ ಬ್ಯಾರಿ ಸಮುದಾಯಕ್ಕೆ ಸೇರಿದ್ದು. ಬ್ಯಾರಿ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿಯ ಸೇವೆಗಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ಕಾರ್ಯನಿರ್ವಹಿಸುತ್ತದೆ. ಇದಕ್ಕೆ ಜಾತಿ,ಧರ್ಮದ ನೆರಳು ಬೀಳಬಾರದು. ಆಕಾಡೆಮಿಗೆ ಸದಸ್ಯರ ನೇಮಕ ಕುರಿತು ಅಪಸ್ವರಗಳು ಬಂದಿವೆ. ಬ್ಯಾರಿ ಭಾಷೆ, ಸಾಹಿತ್ಯ, ಕಲೆಗೆ ಯಾರೆಲ್ಲ ಸೇವೆ ಮಾಡಿದ್ದಾರೋ ಅವರು ನೇಮಕಗೊಳ್ಳುವುದರಲ್ಲಿ ತಪ್ಪಿಲ್ಲ. ರೂಪಾ ವರ್ಕಾಡಿ ಅನೇಕ ಬ್ಯಾರಿ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ನೇಮಕಗೊಂಡಿರುವ ಸದಸ್ಯರಲ್ಲಿ ಇಬ್ಬರು ರಾಜೀನಾಮೆ ನೀಡಿದ್ದಾರೆ. ಈ ಸ್ಥಾನಗಳು ಸೇರಿದಂತೆ ಪೂರ್ಣ ಪ್ರಮಾಣದ ನೇಮಕ ಸದ್ಯದಲ್ಲೇ ಆಗಲಿದೆ.

ಅಕಾಡೆಮಿಗೆ ಸುಂದರ ಭವನ ನಿರ್ಮಿಸುವ ಗುರಿ ಇದೆ. ಇದು ಬ್ಯಾರಿ ಭಾಷೆ, ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಗೆ ಸಂಬಂಧಪಟ್ಟ ಚಟುವಟಿಕೆಗಳಿಗೆ ಮೀಸಲಾಗಿರಬೇಕು. ಇತರ ಭಾಷೆಗಳ ಕಾರ್ಯಕ್ರಮಗಳಿಗೂ ಅವಕಾಶವಿರಬೇಕು. ಉದ್ದೇಶಿತ ಬ್ಯಾರಿ ಭವನ ಯಾವುದೇ ಧಾರ್ಮಿಕ, ರಾಜಕೀಯ ಚಟುವಟಿಕೆಗಳಿಗೆ ಬಳಕೆಯಾಗದೆ ಸಾಂಸ್ಕೃತಿಕ ಭವನವಾಗಿಯೇ ಉಳಿಯಬೇಕು.

ವಿಶ್ವಬ್ಯಾರಿ ಸಮ್ಮೇಳನ
ವಿಶ್ವ ಬ್ಯಾರಿ ಸಮ್ಮೇಳನ ನಡೆಸುವ ಉದ್ದೇಶವಿದೆ. ದೇಶ ವಿದೇಶಗಳಲ್ಲಿರುವ ಬ್ಯಾರಿ ಭಾಷಿಕರನ್ನು ಒಟ್ಟು ಸೇರಿಸಿ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿಯ ಬಗ್ಗೆ ಚಿಂತನಮಂಥನ ನಡೆಸುವ ಆಶಯವಿದೆ. ಎಲೆಮರೆಯ ಕಾಯಿಗಳಂತಿರುವ ಬ್ಯಾರಿ ಸಾಹಿತಿಗಳಿಗೆ ಪ್ರೋತ್ಸಾಹ, ಬ್ಯಾರಿ ಸಾಹಿತಿ, ಕಲಾವಿದರ ಪರಿಚಯ ಪುಸ್ತಕ ಮುಂತಾದ ಯೋಜನೆಗಳಿವೆ.

ಬ್ಯಾರಿ ಅಧ್ಯಯನ ಪೀಠಕ್ಕೆ ಶಕ್ತಿ
ಮಂಗಳೂರು ವಿವಿಯಲ್ಲಿ ಬ್ಯಾರಿ ಅಧ್ಯಯನ ಪೀಠ ಸ್ಥಾಪನೆಯಾಗಿದೆ. ಇದಕ್ಕೆ ಅವಶ್ಯ ಅನುದಾನ ದೊರಕುವಂತೆ ಮಾಡಿ ಶಕ್ತಿ ತುಂಬಲು ಸರಕಾರದ ಮಟ್ಟದಲ್ಲಿ ಕ್ರಮ ಕೈಗೊಳ್ಳಲಾಗುವುದು.

ಪಂಚಭಾಷಾ ಸಮ್ಮೇಳನ
ಬ್ಯಾರಿ, ತುಳು, ಕೊಂಕಣಿ, ಅರೆ ಭಾಷೆ ಮತ್ತು ಕೊಡವ ಭಾಷಾ ಅಕಾಡೆಮಿಗಳನ್ನು ಒಟ್ಟು ಸೇರಿಸಿ ಪಂಚ ಭಾಷಾ ಸಮ್ಮೇಳನವನ್ನು ಆಯೋಜಿಸಲಾಗುವುದು.

ಬ್ಯಾರಿ ಕಲಾವಿದರಿಗೆ ಮಾಸಾಶನ
ಬ್ಯಾರಿ ಕಲೆ, ಸಾಹಿತ್ಯ, ಸಂಸ್ಕೃತಿಯ ಸೇವೆಯಲ್ಲಿ ತೊಡಗಿಸಿಕೊಂಡು ಅಮೂಲ್ಯ ಸೇವೆ ಸಲ್ಲಿಸಿದ ಕಲಾವಿದರಲ್ಲಿ ಬಹುತೇಕ ಮಂದಿ ಸರಕಾರದ ಮಾಸಾಶನದಿಂದ ವಂಚಿತರಾಗಿದ್ದಾರೆ. ಅವರಿಗೆ ಮಾಸಾಶನ ದೊರಕುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು.

“ಮೌಖಿಕವಾಗಿ ಅರೆ ಭಾಷಾ ಪ್ರಸರಣಕ್ಕೆ ಒತ್ತು’
ಸಾಹಿತ್ಯ ರಚನೆಯೊಂದಿಗೆ ಮೌಖೀಕವಾಗಿಯೂ ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಜನಮಾನಸಕ್ಕೆ ತಲುಪಿಸುವ ಪ್ರಾಮಾಣಿಕ ಪ್ರಯತ್ನವನ್ನು ಕೈಗೊಳ್ಳಲಾಗುವುದು ಎಂದು ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಅಕಾಡೆಮಿಯ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ ಹೇಳಿದರು.

2012ರಲ್ಲಿ ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಅಕಾಡೆಮಿ ರಚನೆಯಾಗಿದ್ದು, ಇನ್ನೂ ಬಾಲ್ಯಾವಸ್ಥೆಯಲ್ಲಿದೆ. ಭಾಷೆಯ ಉಳಿವು ಮತ್ತು ಪ್ರಸರಣೆಗೆ ಅಕಾಡೆಮಿ ಪ್ರಾಮಾಣಿಕ ಪ್ರಯತ್ನ ಮಾಡಲಿದೆ. ಭಾಷೆ ಬೆಳವಣಿಗೆಯಾಗಬೇಕಾದರೆ ಸಮುದಾಯದ ಚೌಕಟ್ಟಿನಿಂದ ಆಚೆಗೂ ಅದರ ಪರಿಚಯವಾಗಬೇಕು. ಅದಕ್ಕಾಗಿ ಇತರ ಅಕಾಡೆಮಿಗಳೊಂದಿಗೆ ಸೇರಿ ಜಂಟಿ ಕಾರ್ಯಕ್ರಮಗಳನ್ನು ನಡೆಸಿ ಪರಸ್ಪರ ಸಂಸ್ಕೃತಿ ವಿನಿಮಯಕ್ಕೆ ಪ್ರಯತ್ನಿಸಲಾಗುವುದು ಅರೆಭಾಷಿಕರ ಸಂಪರ್ಕ
ಅರೆಭಾಷಿಕರು ಉದ್ಯೋಗ ನಿಮಿತ್ತ ವಿಶ್ವದ ನಾನಾ ಕಡೆಗಳಲ್ಲಿ ನೆಲೆಸಿದ್ದಾರೆ. ಅಂತಹವರನ್ನು ಒಳಗೊಂಡು ಭಾಷಾವರ್ಧನೆ ಸವಾಲಾಗುತ್ತದೆ. ಮುಂದಿನ ತಲೆಮಾರಿಗೆ ಭಾಷೆಯನ್ನು ಉಳಿಸುವ ಕರ್ತವ್ಯವೂ ನಮ್ಮ ಮುಂದಿದೆ.

ಟಾಪ್ ನ್ಯೂಸ್

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ, ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

ಕಾಂಗ್ರೆಸ್‌ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್

ಕಾಂಗ್ರೆಸ್‌ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು

Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್ ವಾಹನ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ, ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.