ಕಾರವಾರ-ಯಶವಂತಪುರ ರೈಲು ಪ್ರಯಾಣಿಕರ ಕೊರತೆ; 3 ಬೋಗಿಗಳ ಕಡಿತ

Team Udayavani, Apr 12, 2017, 12:16 PM IST

train.jpg

ಮಂಗಳೂರು: ಪ್ರಯಾಣಿಕರ ಕೊರತೆಯಿಂದಾಗಿ  ಯಶವಂತಪುರ-ಕಾರವಾರ ನಡುವೆ ಸಂಚರಿಸುತ್ತಿರುವ ಹಗಲು ರೈಲಿನ (ನಂ. 16515/16516) ಮೂರು ಬೋಗಿಗಳನ್ನು ಕಡಿತಗೊಳಿಸಲಾಗಿದೆ. ಆ ಮೂಲಕ ಒಟ್ಟು  ಕೋಚ್‌ಗಳ ಸಂಖ್ಯೆಯನ್ನು ಈಗ 18ರಿಂದ 15ಕ್ಕೆ ಇಳಿಸಲಾಗಿದೆ. 

ಹಗಲು ಹೊತ್ತಿನಲ್ಲಿ ವಾರಕ್ಕೆ ಮೂರು ದಿನ ಈ ರೈಲು ಕಾರವಾರದಿಂದ ಮಂಗಳೂರು-ಸುಬ್ರಹ್ಮಣ್ಯ, ಹಾಸನ ಮಾರ್ಗವಾಗಿ ಯಶವಂತಪುರಕ್ಕೆ ಸಂಚರಿಸುತ್ತಿದೆ. ಪ್ರಸ್ತುತ ಈ ರೈಲು ಒಂದು ಎಸಿ ಚೆಯರ್‌ ಕಾರ್‌ ಬೋಗಿ, 9 ದ್ವಿತೀಯ ದರ್ಜೆ ರಿಸರ್ವೇಶನ್‌ ಬೋಗಿ, 6 ಸಾಮಾನ್ಯ ಬೋಗಿ ಹಾಗೂ 2  ಎಸ್‌ಎಲ್‌ಆರ್‌ (ಗಾರ್ಡ್‌) ಬೋಗಿಗಳನ್ನು ಹೊಂದಿವೆ. ಅಲ್ಲದೆ, ಈ ರೈಲಿನ ದ್ವಿತೀಯ ದರ್ಜೆ ರಿಸರ್ವೇಶನ್‌ನಲ್ಲಿ  2 ಬೋಗಿ ಕಡಿತಗೊಳಿಸಿ 7ಕ್ಕೆ ಇಳಿಸಲಾಗಿದೆ. ಸಾಮಾನ್ಯ ಬೋಗಿಗಳ ಪೈಕಿಯೂ 1 ಬೋಗಿ ಕಡಿತಗೊಳಿಸಲಾಗಿದ್ದು, ಆ ಮೂಲಕ ಅದರ ಸಂಖ್ಯೆಯನ್ನು 6ಕ್ಕೆ ಇಳಿಸಲಾಗಿದೆ. ಈ ಬದಲಾವಣೆಯೂ ಎ. 10ರಿಂದಲೇ ಜಾರಿಗೆ ಬಂದಿರುವುದಾಗಿ ನೈಋತ್ಯ ರೈಲ್ವೇ ವಲಯ ತಿಳಿಸಿದೆ.

ಪ್ರಯಾಣಿಕರ ಕೊರತೆ ಕಾರಣ
ಬೋಗಿಗಳನ್ನು ಕಡಿತಗೊಳಿಸಿರುವುದಕ್ಕೆ  ನೈಋತ್ಯ ರೈಲ್ವೇ ಕಾರಣ ನೀಡಿಲ್ಲ. ಆದರೆ  ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಕೆ ಆಗಿರುವುದರಿಂದಲೇ ಬೋಗಿಗಳನ್ನು ಕಡಿತಗೊಳಿಸಲು ಕಾರಣ ಎನ್ನಲಾಗಿದೆ. ಈಗ ಈ ರೈಲಿನಲ್ಲಿ ಸುಬ್ರಹ್ಮಣ್ಯದವರೆಗೆ ಮಾತ್ರ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರಿರುತ್ತಾರೆ.  

ಶ್ರವಣಬೆಳಗೊಳ ಮಾರ್ಗ ಬಳಕೆಗೆ ಆಗ್ರಹ
ಕಾರವಾರ- ಯಶವಂತಪುರ- ಕಾರವಾರ (16515/16516) ರೈಲು ಗಾಡಿಯ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡುವ  ಮೂಲಕ ಶ್ರವಣಬೆಳಗೊಳ ಮಾರ್ಗವಾಗಿ ಓಡಿಸಬೇಕು. ಆಗ ಪ್ರಯಾಣದ ಅವಧಿಯು ಕಡಿಮೆಯಾಗುತ್ತದೆ ಎನ್ನುವುದು ಕರಾವಳಿ ಭಾಗದ ಜನತೆಯ ಒತ್ತಾಸೆಯಾಗಿದೆ.

ವೇಳಾಪಟ್ಟಿ  ಸಮಸ್ಯೆ
ಈ ರೈಲು ಕಾರವಾರದಿಂದ ಬೆಳಗ್ಗೆ  5.30ಕ್ಕೆ  ಹೊರಟು 10.55ಕ್ಕೆ ಮಂಗಳೂರಿನ ಕಂಕನಾಡಿ ಜಂಕ್ಷನ್‌ ತಲುಪುತ್ತದೆ. ಅನಂತರ 11.10ಕ್ಕೆ ಅಲ್ಲಿಂದ ನಿರ್ಗಮಿಸಿ  ರಾತ್ರಿ 10 ಗಂಟೆಗೆ ಯಶವಂತಪುರ ತಲುಪುತ್ತದೆ.  ಮಂಗಳವಾರ, ಗುರುವಾರ ಶನಿವಾರ ಸಂಚರಿಸುತ್ತದೆ. 

ಅದೇ ರೀತಿ, ಯಶವಂತ ಪುರದಿಂದ ಮತ್ತೂಂದು ರೈಲು ಮುಂಜಾನೆ 6.30ಕ್ಕೆ  ಹೊರಟು ಸಂಜೆ 5.40ಕ್ಕೆ ಕಂಕನಾಡಿ ತಲುಪುತ್ತ¤ದೆ. ಅಲ್ಲಿಂದ ಅದು 6 ಗಂಟೆಗೆ ಹೊರಟು ರಾತ್ರಿ 11 ಗಂಟೆಗೆ ಕಾರವಾರ ತಲುಪುತ್ತದೆ. ವಾರದಲ್ಲಿ ಈ ರೈಲು ಸೋಮವಾರ, ಬುಧವಾರ ಹಾಗೂ ಶುಕ್ರವಾರ ಸಂಚರಿಸುತ್ತದೆ.

ಈ ವೇಳಾಪಟ್ಟಿ ಕರಾವಳಿ  ಪ್ರಯಾಣಿಕರಿಗೆ ಹೊಂದಾಣಿಕೆಯಾಗುತ್ತಿಲ್ಲ ಎಂಬ ಬಗ್ಗೆ ದೂರುಗಳು ಹಲವು ತಿಂಗಳಿಂದ ಕೇಳಿಬರುತ್ತಿವೆ.  ಕಾರವಾರದಿಂದ ಬೆಳಗ್ಗೆ  5.30ಕ್ಕೆ  ಹೊರಟರೆ ಯಶವಂತಪುರಕ್ಕೆ  ತಲುಪುವಾಗ  ರಾತ್ರಿ 10 ಗಂಟೆಯಾಗುತ್ತದೆ. ಅಲ್ಲಿಂದ ಮತ್ತೆ  ಬಸ್‌ನಲ್ಲಿ ಅಥವಾ ಇತರ ವಾಹನಗಳಲ್ಲಿ ಬೇರೆ ಕಡೆಗಳಿಗೆ ಹೋಗುವುದಕ್ಕೆ ತೊಂದರೆಯಾಗುತ್ತದೆ. ಇದೇ ರೀತಿ ಬೆಂಗಳೂರಿನಿಂದ ಬೆಳಗ್ಗೆ 6.30ಕ್ಕೆ ಹೊರಟು ಕಂಕನಾಡಿ ಜಂಕ್ಷನ್‌ಗೆ ಬರುವಾಗ ಸಂಜೆ 5.30 ಆಗುತ್ತದೆ. ಮತ್ತೆ ಅದು ಕಾರವಾರ ತಲುಪುವಾಗಲೂ ರಾತ್ರಿ 11 ಗಂಟೆಯಾಗುತ್ತದೆ. ಅಲ್ಲಿಂದಲೂ ಬೇರೆ ಊರುಗಳಿಗೆ  ಪ್ರಯಾಣಿಸುವುದಕ್ಕೆ ಸೂಕ್ತ ಬಸ್‌ ಸೌಲಭ್ಯಗಳಿಲ್ಲ. 

ಮಂಗಳೂರಿನಿಂದ ಬೆಂಗಳೂರಿಗೆ ಹೋಗುವ ಪ್ರಯಾಣಿಕರಿಗೂ ಈ ರೀತಿಯ ವೇಳಾಪಟ್ಟಿ  ಹೊಂದಿಕೆಯಾಗುತ್ತಿಲ್ಲ. ಅದರಲ್ಲಿಯೂ ಈ ರೈಲು ಅರಸೀಕೆರೆ ಮಾರ್ಗವಾಗಿ ಸುತ್ತಿ ಬಳಸಿಕೊಂಡು ಯಶವಂತಪುರ ತಲುಪಲು ಸುಮಾರು 11 ತಾಸುಗಳು ಬೇಕಾಗುತ್ತವೆ. 

ಟಾಪ್ ನ್ಯೂಸ್

ಪರಿಷತ್‌: 17 ನೂತನ ಶಾಸಕರಿಂದ ಪ್ರಮಾಣ ವಚನ ಸ್ವೀಕಾರ

Karnataka ಪರಿಷತ್‌: 17 ನೂತನ ಶಾಸಕರಿಂದ ಪ್ರಮಾಣ ವಚನ ಸ್ವೀಕಾರ

HD Revanna ಕುಟುಂಬದ ವಿರುದ್ಧ ಷಡ್ಯಂತ್ರವಿಲ್ಲ: ಪರಮೇಶ್ವರ್‌

HD Revanna ಕುಟುಂಬದ ವಿರುದ್ಧ ಷಡ್ಯಂತ್ರವಿಲ್ಲ: ಪರಮೇಶ್ವರ್‌

Kunigal ಹಾಸ್ಟೆಲ್‌ಗಳಿಗೆ ದಿಢೀರ್​ ಭೇಟಿ ಕೊಟ್ಟ ತಹಶೀಲ್ದಾರ್

Kunigal ಹಾಸ್ಟೆಲ್‌ಗಳಿಗೆ ದಿಢೀರ್​ ಭೇಟಿ ಕೊಟ್ಟ ತಹಶೀಲ್ದಾರ್

Siruguppa ಜೆಸ್ಕಾಂ ಸಿಬ್ಬಂದಿ ಎಡವಟ್ಟು; ಗ್ರಾಮಸ್ಥರಿಂದ ತರಾಟೆ

Siruguppa ಜೆಸ್ಕಾಂ ಸಿಬ್ಬಂದಿ ಎಡವಟ್ಟು; ಗ್ರಾಮಸ್ಥರಿಂದ ತರಾಟೆ

ವೇಗದೂತ ಬಸ್‌ಗಳನ್ನು ನಿಲುಗಡೆ ಮಾಡುವಂತೆ ಒತ್ತಾಯಿಸಿ ರಸ್ತೆ ತಡೆ ನಡೆಸಿದ ವಿದ್ಯಾರ್ಥಿಗಳು

ವೇಗದೂತ ಬಸ್‌ಗಳನ್ನು ನಿಲುಗಡೆ ಮಾಡುವಂತೆ ಒತ್ತಾಯಿಸಿ ರಸ್ತೆ ತಡೆ ನಡೆಸಿದ ವಿದ್ಯಾರ್ಥಿಗಳು

1-BP

BJP vs BJP; ವಿಜಯೇಂದ್ರ ವಿರುದ್ಧ ಕಿಡಿ ಕಾರಿದ ಹರಿಹರ ಶಾಸಕ ಬಿ.ಪಿ.ಹರೀಶ್

Mamatha

West Bengal: ಬಾಂಗ್ಲಾ ಜೊತೆ ನೀರು ಹಂಚಿಕೆ ಮಾತುಕತೆಗೆ ಸಿಎಂ ಮಮತಾ ಆಕ್ಷೇಪ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಾಗರೋತ್ಪನ್ನ ರಫ್ತು: ದೇಶದಲ್ಲಿ ಏರಿಕೆ; ರಾಜ್ಯದಲ್ಲಿ ಇಳಿಕೆ!

ಸಾಗರೋತ್ಪನ್ನ ರಫ್ತು: ದೇಶದಲ್ಲಿ ಏರಿಕೆ; ರಾಜ್ಯದಲ್ಲಿ ಇಳಿಕೆ!

Kudremukha ವಲಯದಲ್ಲಿ ಇನ್ನಷ್ಟು ಸೂಕ್ಷ್ಮ ಪ್ರದೇಶಗಳು ಚಾರಣಕ್ಕೆ ಮುಕ್ತ?

Kudremukha ವಲಯದಲ್ಲಿ ಇನ್ನಷ್ಟು ಸೂಕ್ಷ್ಮ ಪ್ರದೇಶಗಳು ಚಾರಣಕ್ಕೆ ಮುಕ್ತ?

ಕೋಟಿ ರೂ. ತುಂಬಿಸಲು ಗೋಣಿಚೀಲ ತಂದಿದ್ದರು?

Mangaluru; ಕೋಟಿ ರೂ. ತುಂಬಿಸಲು ಗೋಣಿಚೀಲ ತಂದಿದ್ದರು?

ಪೊಲೀಸರಿಗೆ ಸವಾಲಾಗುತ್ತಿರುವ ಪ್ರಚೋದನಕಾರಿ ಪೋಸ್ಟ್‌

ಪೊಲೀಸರಿಗೆ ಸವಾಲಾಗುತ್ತಿರುವ ಪ್ರಚೋದನಕಾರಿ ಪೋಸ್ಟ್‌

Surathkal ಕುಳಾಯಿ ಕಿರು ಜೆಟ್ಟಿಯ ಬ್ರೇಕ್‌ವಾಟರ್‌ ಕಲ್ಲು ಸಮುದ್ರಪಾಲು

Surathkal ಕುಳಾಯಿ ಕಿರು ಜೆಟ್ಟಿಯ ಬ್ರೇಕ್‌ವಾಟರ್‌ ಕಲ್ಲು ಸಮುದ್ರಪಾಲು

MUST WATCH

udayavani youtube

ಹರ್ನಿಯಾ ಸಮಸ್ಯೆಗೆ ಕಾರಣವೇನು?ಚಿಕಿತ್ಸಾ ವಿಧಾನಗಳು ಯಾವುವು?

udayavani youtube

ಮಾವುತನನ್ನು ಕಾಲಿನಿಂದ ತುಳಿದು ಅಪ್ಪಚ್ಚಿ ಮಾಡಿದ ಆನೆ!

udayavani youtube

“ನನ್ನಿಂದ ತಪ್ಪಾಗಿದೆ ಸರ್‌ ಆದರೆ..” | ಸಪ್ತಮಿ ಅವರದ್ದು ಎನ್ನಲಾದ Audio

udayavani youtube

ಹುಣಸೂರು ತಾಲೂಕಿನ ಸಮಗ್ರ ಅಭಿವೃದ್ದಿಗೆ ಬದ್ದ: ಸಂಸದ ಯದುವೀರ್‌ ಒಡೆಯರ್

udayavani youtube

ಈಕೆ ಭಾರತದ ಮೊದಲ ಸರಣಿ ಕೊಲೆಗಾರ್ತಿ | ಸೈನೈಡ್ ಮಲ್ಲಿಕಾ

ಹೊಸ ಸೇರ್ಪಡೆ

ಪರಿಷತ್‌: 17 ನೂತನ ಶಾಸಕರಿಂದ ಪ್ರಮಾಣ ವಚನ ಸ್ವೀಕಾರ

Karnataka ಪರಿಷತ್‌: 17 ನೂತನ ಶಾಸಕರಿಂದ ಪ್ರಮಾಣ ವಚನ ಸ್ವೀಕಾರ

HD Revanna ಕುಟುಂಬದ ವಿರುದ್ಧ ಷಡ್ಯಂತ್ರವಿಲ್ಲ: ಪರಮೇಶ್ವರ್‌

HD Revanna ಕುಟುಂಬದ ವಿರುದ್ಧ ಷಡ್ಯಂತ್ರವಿಲ್ಲ: ಪರಮೇಶ್ವರ್‌

Kunigal ಹಾಸ್ಟೆಲ್‌ಗಳಿಗೆ ದಿಢೀರ್​ ಭೇಟಿ ಕೊಟ್ಟ ತಹಶೀಲ್ದಾರ್

Kunigal ಹಾಸ್ಟೆಲ್‌ಗಳಿಗೆ ದಿಢೀರ್​ ಭೇಟಿ ಕೊಟ್ಟ ತಹಶೀಲ್ದಾರ್

1–ncxcx.

Bantwal; ಧಾರ್ಮಿಕ ಕೇಂದ್ರಗಳು, ಶಿಶುಮಂದಿರದಿಂದ ಸಾವಿರಾರು ರೂ. ಕಳವು

Siruguppa ಜೆಸ್ಕಾಂ ಸಿಬ್ಬಂದಿ ಎಡವಟ್ಟು; ಗ್ರಾಮಸ್ಥರಿಂದ ತರಾಟೆ

Siruguppa ಜೆಸ್ಕಾಂ ಸಿಬ್ಬಂದಿ ಎಡವಟ್ಟು; ಗ್ರಾಮಸ್ಥರಿಂದ ತರಾಟೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.