ನಮ್ಮದು ಎಂಬ ಚಿಂತನೆ ಅಭಿವೃದ್ಧಿಗೆ ಕಾರಣ: ಶಕುಂತಳಾ

Team Udayavani, Oct 30, 2017, 4:06 PM IST

30-Mng-13.jpg

ಪುತ್ತೂರು: ಸಿಬಂದಿ, ಆಹಾರ ಸರಕಾರದ್ದು. ಆದರೆ ಅಂಗನವಾಡಿ ನಮ್ಮದು ಎಂಬ ಕಳಕಳಿಯೇ ಅಂಗನವಾಡಿ
ಅಭಿವೃದ್ಧಿಗೆ ಕಾರಣವಾಯಿತು ಎಂದು ಶಾಸಕಿ ಶಕುಂತಳಾ ಶೆಟ್ಟಿ ಹೇಳಿದರು.

ಮಾದರಿ ವಾರ್ಡ್‌ ರಚನೆ 2017-18ರಡಿ ಕೆಮ್ಮಿಂಜೆ- ಚಿಕ್ಕಮುಟ್ನೂರು ವಾರ್ಡ್‌ನ ನೆಕ್ಕರೆ ಅಂಗನವಾಡಿಯ ಜೀರ್ಣೋದ್ಧಾರ ಕೆಲಸದ ಉದ್ಘಾಟನೆ ಹಾಗೂ ಇಲಾಖೆಗೆ ಹಸ್ತಾಂತರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸಮುದಾಯದ ಸ್ವತ್ತು ನಮ್ಮದು ಎಂಬ ಭಾವನೆ ಬಂದಾಗ, ಅಭಿವೃದ್ಧಿ ಕಾರ್ಯ ತನ್ನಿಂದ ತಾನಾಗೇ ನಡೆಯುತ್ತವೆ. ಜನರು ಸಹಕಾರ ನೀಡಿದಾಗ ಮಾತ್ರ, ಇಂತಹ ಮಾದರಿ ಕಾರ್ಯಗಳ ನಡೆಯಲು ಸಾಧ್ಯ. ಊರಿಗೇ ಮಾದರಿ ಅಂಗನವಾಡಿ ನಿರ್ಮಿಸಿದ್ದು, ಇತರರಿಗೂ ಮಾದರಿ. ಉಳಿದ ವಾರ್ಡ್ಗಳಲ್ಲೂ ಇಂತಹ ಕಾರ್ಯ ನಡೆದಾಗ, ಅಭಿವೃದ್ಧಿ ಕಾರ್ಯ ಹೆಚ್ಚು ನಡೆಯುತ್ತವೆ. ಮಾತ್ರವಲ್ಲ ಜನಪ್ರತಿನಿಧಿಗಳ ಹೊರೆಯೂ ಕಡಿಮೆಯಾಗುತ್ತದೆ ಎಂದರು.

ಇಚ್ಛಾಶಕ್ತಿ ತುಂಬಬೇಕು
ವಿದ್ಯಾರ್ಥಿ, ಪುಟಾಣಿಗಳಲ್ಲಿ ಆತ್ಮವಿಶ್ವಾಸ, ಇಚ್ಛಾಶಕ್ತಿ ತುಂಬುವ ಕೆಲಸ ಆಗಬೇಕು. ಸಮಾಜಕ್ಕೆ ಉತ್ತಮ ಕೆಲಸ
ಸಿಗುವ ಜತೆಗೆ ಮಕ್ಕಳಲ್ಲೂ ಇಂತಹ ಕೆಲಸದ ಜಾಗೃತಿ ಮೂಡಿಸಬೇಕು. ಆಗ ಸಮಾಜಕ್ಕೆ ಮಾದರಿಯಾಗುವ ಯುವಕರು ಮೂಡಿಬರುತ್ತಾರೆ. ಉತ್ತಮ ಸಂಸ್ಕೃತಿ, ಸಂಸ್ಕಾರ ಇರುವ ಯುವಜನತೆ ದೇಶಕ್ಕೆ ಬೇಕಾಗಿದೆ. ಈ ದಿಶೆಯಲ್ಲಿ ಅಂಗನವಾಡಿ ನವೀಕರಣ ಮಾಡಿರುವುದು ಆದರ್ಶ ಕೆಲಸ ಎಂದರು ಶ್ಲಾಘಿಸಿದರು.

ಉತ್ತಮ ವಾರ್ಡ್‌
ನಗರಸಭೆ ಅಧ್ಯಕ್ಷೆ ಜಯಂತಿ ಬಲ್ನಾಡು ಮಾತನಾಡಿ, ಕೆಮ್ಮಿಂಜೆ-ಚಿಕ್ಕಮುಟ್ನೂರು ನಗರಸಭೆಯ ಉತ್ತಮ ವಾರ್ಡ್‌. ಮಾದರಿ ವಾರ್ಡ್‌ನ ಅಡಿ ಹಲವು ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ರಸ್ತೆ ಬದಿ ಅಳವಡಿಸಿರುವ ಸೂಚನ ಫಲಕಗಳೇ ಇದಕ್ಕೆ ಸಾಕ್ಷಿ. ಹೆಚ್ಚಿನ ಅನುದಾನ ತರಿಸುವ ಜತೆಗೆ ಕೆಲಸಗಳು ನಡೆಯುತ್ತಿದೆ. ಊರವರೇ ಒಗ್ಗಟ್ಟಿನಿಂದ
ಅಂಗನವಾಡಿ ನಿರ್ಮಿಸಿರುವುದು ಉತ್ತಮ ಕಾರ್ಯ ಎಂದರು.

ಪೌರಾಯುಕ್ತೆ ರೂಪಾ ಶೆಟ್ಟಿ ಮಾತನಾಡಿ, ಮಾದರಿ ವಾರ್ಡ್‌ನ ಪ್ರೇರಕ ಶಕ್ತಿ ವಂ| ಫ್ರಾನ್ಸಿಸ್‌ ಅಸ್ಸಿಸಿ ಅಲ್ಮೇಡಾ. ಪುಟಾಣಿ ಮಕ್ಕಳು ಹೆಜ್ಜೆ ಇಡುವ ಈ ಅಂಗನವಾಡಿ ಉಜ್ವಲವಾಗಲಿ ಬೆಳಗಲಿ ಎಂದು ಆಶಿಸಿದರು.

ಸಹಭಾಗಿತ್ವ ಅಗತ್ಯ
ನಗರಸಭೆ ಸದಸ್ಯ ಮಹಮ್ಮದಾಲಿ ಮಾತನಾಡಿ, ಪುತ್ತೂರು ನಗರಸಭೆ ವ್ಯಾಪ್ತಿಯಲ್ಲಿ 38 ಅಂಗನವಾಡಿಗಳಿವೆ. ಇದರಲ್ಲಿ 34 ಅಂಗನವಾಡಿಗಳೂ ನಾದುರಸ್ತಿಯಲ್ಲಿದೆ. ಇದರ ಮೇಲ್ವಿಚಾರಣೆ ವಹಿಸಿಕೊಳ್ಳಬೇಕಾದ ಸಿಡಿಪಿಒ ಇಲಾಖೆಗೆ
ಅನುದಾನದ ಕೊರತೆಯಿದೆ. ಈ ಹಿನ್ನೆಲೆಯಲ್ಲಿ ಸರಕಾರ ಹಾಗೂ ಜನರ ಸಹಭಾಗಿತ್ವದಲ್ಲಿ ಅಭಿವೃದ್ಧಿ ಕಾರ್ಯ
ನಡೆಯಬೇಕಾಗಿದೆ. ಜನರ ಸಹಕಾರ ಸಿಕ್ಕಿದರೆ ಮಾತ್ರ, ಅಂಗನವಾಡಿ ಅಭಿವೃದ್ಧಿಯಾಗಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಸಮ್ಮಾನ
25 ವರ್ಷಗಳ ಹಿಂದೆ ಅಂಗನವಾಡಿ ನಿರ್ಮಾಣದ ಹೊಣೆ ಹೊತ್ತಿದ್ದ ಇಗ್ನೇಶಿಯಸ್‌ ಡಿಕುನ್ಹಾ, ಅಂಗನವಾಡಿ ಜೀರ್ಣೋದ್ಧಾರದ ಮುಂದಾಳತ್ವ ವಹಿಸಿದ್ದ ಸಿರಿಲ್‌ ರೋಡ್ರಿಗಸ್‌, ಕಾಮಗಾರಿ ವೇಳೆ 1 ವರ್ಷ ಎರಡು ತಿಂಗಳು ಅಂಗನವಾಡಿ ಪುಟಾಣಿಗಳಿಗೆ ಮನೆಯಲ್ಲೇ ವ್ಯವಸ್ಥೆ ಮಾಡಿದ ಜೋಸೆಫ್‌ ಸೆರಾವೊ ಅವರನ್ನು ಇದೇ ಸಂದರ್ಭ ಸಮ್ಮಾನಿಸಲಾಯಿತು. ಸ್ಥಳೀಯ ನಗರಸಭೆ ಸದಸ್ಯ ಮುಕೇಶ್‌ ಕೆಮ್ಮಿಂಜೆ ಅಧ್ಯಕ್ಷತೆ ವಹಿಸಿದ್ದರು.

ಟಾಪ್ ನ್ಯೂಸ್

Election Commission; ಪದವೀಧರ, ಶಿಕ್ಷಕರ ಮತಪಟ್ಟಿಗೆ ಹೆಸರು ಸೇರಿಸಲು ಅವಕಾಶ

Election Commission; ಪದವೀಧರ, ಶಿಕ್ಷಕರ ಮತಪಟ್ಟಿಗೆ ಹೆಸರು ಸೇರಿಸಲು ಅವಕಾಶ

Hassan Pen Drive Case ರೇವಣ್ಣಗೆ ಕಿಡ್ನಾಪ್‌ ಕೇಸ್‌, ಲುಕ್‌ಔಟ್‌ ನೋಟಿಸ್‌ ಕಂಟಕ

Hassan Pen Drive Case ರೇವಣ್ಣಗೆ ಕಿಡ್ನಾಪ್‌ ಕೇಸ್‌, ಲುಕ್‌ಔಟ್‌ ನೋಟಿಸ್‌ ಕಂಟಕ

HD Revanna ಫಾರ್ಮ್ ಹೌಸ್‌ನಲ್ಲಿ ಎಸ್‌ಐಟಿ ತಂಡ ಪರಿಶೀಲನೆ

HD Revanna ಫಾರ್ಮ್ ಹೌಸ್‌ನಲ್ಲಿ ಎಸ್‌ಐಟಿ ತಂಡ ಪರಿಶೀಲನೆ

Hassan Pen Drive Case; ಹೊಸ ನಿರೀಕ್ಷಣ ಜಾಮೀನು ಅರ್ಜಿ ಸಲ್ಲಿಸಿದ ರೇವಣ್ಣ

Hassan Pen Drive Case; ಹೊಸ ನಿರೀಕ್ಷಣ ಜಾಮೀನು ಅರ್ಜಿ ಸಲ್ಲಿಸಿದ ರೇವಣ್ಣ

Vijayapura ಮರ್ಯಾದಾ ಹತ್ಯೆ: ಇಬ್ಬರಿಗೆ ಗಲ್ಲು,ಐವರಿಗೆ ಜೀವಾವಧಿ ಶಿಕ್ಷೆ

Vijayapura ಮರ್ಯಾದಾ ಹತ್ಯೆ: ಇಬ್ಬರಿಗೆ ಗಲ್ಲು,ಐವರಿಗೆ ಜೀವಾವಧಿ ಶಿಕ್ಷೆ

Dharwad; ವಾರಂಟಿ ಇಲ್ಲದ ಕಾಂಗ್ರೆಸ್ ನ‌ ಗ್ಯಾರಂಟಿ ನಂಬಬೇಡಿ: ಅಣ್ಣಾಮಲೈ

Dharwad; ವಾರಂಟಿ ಇಲ್ಲದ ಕಾಂಗ್ರೆಸ್ ನ‌ ಗ್ಯಾರಂಟಿ ನಂಬಬೇಡಿ: ಅಣ್ಣಾಮಲೈ

Shobha Karandlaje; 60 ವರ್ಷ ದೇಶವನ್ನಾಳಿದ ಕಾಂಗ್ರೆಸ್‌ಗೆ ಪ್ರಧಾನಿ ಅಭ್ಯರ್ಥಿ ಸಿಗ್ತಿಲ್ಲ

Shobha Karandlaje; 60 ವರ್ಷ ದೇಶವನ್ನಾಳಿದ ಕಾಂಗ್ರೆಸ್‌ಗೆ ಪ್ರಧಾನಿ ಅಭ್ಯರ್ಥಿ ಸಿಗ್ತಿಲ್ಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-sampaje

Aranthodu: ಚಾಲಕನ ನಿಯಂತ್ರಣ ತಪ್ಪಿ ಹೋಟೆಲ್ ಗೆ ಢಿಕ್ಕಿ ಹೊಡೆದ ಕಾರು

Uppinangady: ತೀವ್ರ ಜ್ವರ; ಅರ್ಚಕ ಸಾವು

Uppinangady: ತೀವ್ರ ಜ್ವರ; ಅರ್ಚಕ ಸಾವು

Bantwala: ಫರಂಗಿಪೇಟೆ; ಬೈಕ್‌ ಢಿಕ್ಕಿಯಾಗಿ ಗಾಯ

Bantwala: ಫರಂಗಿಪೇಟೆ; ಬೈಕ್‌ ಢಿಕ್ಕಿಯಾಗಿ ಗಾಯ

B.C.Road ನೇತ್ರಾವತಿ ಸೇತುವೆಯಲ್ಲಿ ಟಿಪ್ಪರ್- ಸ್ಕೂಟರ್ ಢಿಕ್ಕಿ; ಸವಾರ ಮೃತ್ಯು

B.C.Road ನೇತ್ರಾವತಿ ಸೇತುವೆಯಲ್ಲಿ ಟಿಪ್ಪರ್- ಸ್ಕೂಟರ್ ಢಿಕ್ಕಿ; ಸವಾರ ಮೃತ್ಯು

16-uv-fusion

Aranthodu: ವಾಹನಗಳ ಮಧ್ಯೆ ಸರಣಿ ಅಪಘಾತ; ಬೈಕ್ ಸವಾರ ಗಂಭೀರ ಗಾಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Election Commission; ಪದವೀಧರ, ಶಿಕ್ಷಕರ ಮತಪಟ್ಟಿಗೆ ಹೆಸರು ಸೇರಿಸಲು ಅವಕಾಶ

Election Commission; ಪದವೀಧರ, ಶಿಕ್ಷಕರ ಮತಪಟ್ಟಿಗೆ ಹೆಸರು ಸೇರಿಸಲು ಅವಕಾಶ

Hubli ಅನ್ಯಕೋಮಿನ ಯುವಕನಿಂದ ಅತ್ಯಾಚಾರ

Hubli ಅನ್ಯಕೋಮಿನ ಯುವಕನಿಂದ ಅತ್ಯಾಚಾರ

Minchu

Madikeri: ಸಿಡಿಲು ಬಡಿದು ಅಸ್ಸಾಂ ಮೂಲದ ಕಾರ್ಮಿಕ ಮೃತ್ಯು

Hassan Pen Drive Case ರೇವಣ್ಣಗೆ ಕಿಡ್ನಾಪ್‌ ಕೇಸ್‌, ಲುಕ್‌ಔಟ್‌ ನೋಟಿಸ್‌ ಕಂಟಕ

Hassan Pen Drive Case ರೇವಣ್ಣಗೆ ಕಿಡ್ನಾಪ್‌ ಕೇಸ್‌, ಲುಕ್‌ಔಟ್‌ ನೋಟಿಸ್‌ ಕಂಟಕ

HD Revanna ಫಾರ್ಮ್ ಹೌಸ್‌ನಲ್ಲಿ ಎಸ್‌ಐಟಿ ತಂಡ ಪರಿಶೀಲನೆ

HD Revanna ಫಾರ್ಮ್ ಹೌಸ್‌ನಲ್ಲಿ ಎಸ್‌ಐಟಿ ತಂಡ ಪರಿಶೀಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.