ಎಟಿಎಂಗಳಲ್ಲಿ ಹಣದ ಕೊರತೆ ಇಲ್ಲ 

Team Udayavani, Apr 19, 2018, 6:00 AM IST

ಮಂಗಳೂರು/ಉಡುಪಿ: ರಾಜ್ಯಾದ್ಯಂತ ಪ್ರಮುಖ ನಗರಗಳ ಎಟಿಎಂಗಳಲ್ಲಿ ನಗದು ಖಾಲಿಯಾಗಿ ಜನರು ಪರದಾಡುವ ಪರಿಸ್ಥಿತಿ ಎದು ರಾಗಿದೆ ಎನ್ನುವ ಮಾಹಿತಿ ಹರಿ ದಾಡುತ್ತಿರುವ ಹಿನ್ನೆಲೆಯಲ್ಲಿ ಗ್ರಾಹಕರು ಆತಂಕಕ್ಕೆ ಒಳಗಾಗಿದ್ದಾರೆ. ಈ ಹಿನ್ನೆಲೆಯಲ್ಲಿ “ಉದಯ ವಾಣಿ’ಯು ಮಂಗಳೂರು ಮತ್ತು ಉಡುಪಿಯ ಹಲವು ಕಡೆ ವಾಸ್ತವ ಪರಿಸ್ಥಿತಿ ಬಗ್ಗೆ ಅವಲೋಕನ ನಡೆ ಸಿದ್ದು, ಎಲ್ಲಿಯೂ ನಗದು ಕೊರತೆ ಕಂಡು ಬಂದಿಲ್ಲ. ಜತೆಗೆ ಲೀಡ್‌ ಬ್ಯಾಂಕ್‌ ಸಹಿತ ಕೆಲವು ಬ್ಯಾಂಕ್‌ಗಳ ಹಿರಿಯ ಅಧಿಕಾರಿಗಳನ್ನು ಕೂಡ ಸಂಪರ್ಕಿಸಿದ್ದು, ಜನರು ಆತಂಕಕ್ಕೆ ಒಳಗಾಗುವ ಅಗತ್ಯ ವಿಲ್ಲ ಎಂದಿದ್ದಾರೆ.

ದೂರು ಬಂದಿಲ್ಲ
ದಕ್ಷಿಣ ಕನ್ನಡ ಜಿಲ್ಲೆಯ ಯಾವುದೇ ಬ್ಯಾಂಕ್‌ಗಳ ಎಟಿಎಂಗಳಲ್ಲಿ ನಗದು ಹಣದ ಕೊರತೆ ಕಂಡುಬಂದ ಬಗ್ಗೆ ಲೀಡ್‌ ಬ್ಯಾಂಕಿಗೆ ಯಾವುದೇ ದೂರು ಬಂದಿಲ್ಲ ಎಂದು ದ.ಕ. ಜಿಲ್ಲೆಯ ಲೀಡ್‌ ಬ್ಯಾಂಕ್‌ ಹಾಗೂ ಸಿಂಡಿಕೇಟ್‌ ಬ್ಯಾಂಕಿನ ಮ್ಯಾನೇಜರ್‌ ರಾಘವ ಯಜಮಾನ್ಯ ತಿಳಿಸಿದ್ದಾರೆ.

ಎಸ್‌ಬಿಐಗೆ ಸಂದೇಶ
ಎಟಿಎಂಗಳಲ್ಲಿ ಹಣ ಖಾಲಿಯಾಗದಂತೆ ನೋಡಿಕೊಳ್ಳಬೇಕು ಹಾಗೂ ಬುಧ ವಾರ ರಜೆಯಿದ್ದರೂ ಎಲ್ಲ ಎಟಿಎಂಗಳಿಗೆ ನೋಟು ತುಂಬಿಸಬೇಕು ಎಂದು ಎಸ್‌ಬಿಐ ಕಾರ್ಪೊರೇಟ್‌ ಕಚೇರಿ ಯಿಂದ ಸಂದೇಶ ಬಂದಿದ್ದು, ಈ ಹಿನ್ನೆಲೆಯಲ್ಲಿ ಬುಧವಾರ ಬೆಳಗ್ಗೆ ಮಂಗಳೂರಿನ ಎಲ್ಲ ಎಟಿಎಂಗಳಿಗೆ ನೋಟುಗಳನ್ನು ಪೂರೈಕೆ ಮಾಡಲಾಗಿದೆ ಎಂದು ಎಸ್‌ಬಿಐ ಮಂಗಳೂರು ಕಚೇರಿಯ ಮೂಲಗಳು ತಿಳಿಸಿವೆ.

ಸಮಸ್ಯೆ ಇಲ್ಲ
ಮಂಗಳೂರಿನಲ್ಲಿ ಕಾರ್ಪೊರೇಶನ್‌ ಬ್ಯಾಂಕ್‌ ಅಧಿಕ ಸಂಖ್ಯೆಯಲ್ಲಿ ಎಟಿಎಂ ಹೊಂದಿದ್ದು, ಯಾವುದೇ ಈ ಎಟಿಎಂಗಳಲ್ಲಿ ನೋಟ್‌ಗಳ ಅಭಾವ ಕಂಡು ಬಂದಿಲ್ಲ. ಬುಧವಾರ ಬೆಳಗ್ಗೆ ಎಲ್ಲ ಎಟಿಎಂಗಳಿಗೆ ಹಣ ತುಂಬಿಸಲಾಗಿದೆ. ಉತ್ತರ ಭಾರತದ ಕೆಲವೆಡೆ ಕೆಲವು ಬ್ಯಾಂಕ್‌ಗಳಲ್ಲಿ ನಗದು ಸಮಸ್ಯೆ ಇತ್ತು. ಮಂಗಳೂರಿನಲ್ಲಿ ಆ ಸಮಸ್ಯೆ ಇಲ್ಲ ಎಂದು ಕಾರ್ಪ್‌ ಬ್ಯಾಂಕ್‌ ಐಟಿ ವಿಭಾಗದ ಡಿಜಿಎಂ ಶ್ರೀಧರ್‌ ತಿಳಿಸಿದ್ದಾರೆ.

3 ದಿನಗಳ ನಗದು ಏಜೆನ್ಸಿಗೆ
ಸರಣಿ ರಜೆ ಸಂದರ್ಭದಲ್ಲಿ ಆ ದಿನಗಳಿಗೆ ಅಗತ್ಯವಿರುವ ನಗದನ್ನು ಮುಂಗಡವಾಗಿಯೇ ಎಟಿಎಂಗಳಿಗೆ ಹಣ ತುಂಬಿಸುವ ಏಜೆನ್ಸಿಗಳಿಗೆ ನೀಡಲಾಗುತ್ತದೆ ಎನ್ನುತ್ತಾರೆ ಕಾರ್ಪೊರೇಶನ್‌ ಬ್ಯಾಂಕ್‌ ಅಧಿಕಾರಿಗಳು.

ಕ್ಯಾಶ್‌ಗೆ ತೊಂದರೆ ಇಲ್ಲ
ವಿಜಯ ಬ್ಯಾಂಕಿನ ಎಟಿಎಂಗಳಲ್ಲಿ ನಗದು ತುಂಬಿಸಲಾಗಿದೆ. ಯಾವುದೇ ಕೊರತೆ ಇಲ್ಲ ಎಂದು ಬ್ಯಾಂಕಿನ ಪ್ರಾದೇ ಶಿಕ ಕಚೇರಿಯ ಅಧಿಕಾರಿ ತಿಳಿಸಿದ್ದಾರೆ.

ಗಾಬರಿ ಬೇಡ
ಕರ್ಣಾಟಕ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಎಂ.ಎಸ್‌. ಮಹಾಬಲೇಶ್ವರ ಅವರು, ಸಾಮಾನ್ಯವಾಗಿ ಅಖೀಲ ಭಾರತ ಮಟ್ಟದಲ್ಲಿ ಶೇ. 10ರಿಂದ 20ರಷ್ಟು ಎಟಿಎಂಗಳಲ್ಲಿ ಸಮಸ್ಯೆ ಇದ್ದೇ ಇರುತ್ತದೆ. ನಗದು ವಿತರಣೆಯಲ್ಲಿ ಆಗುತ್ತಿರುವ ಏರು-ಪೇರು ಇದಕ್ಕೆ ಒಂದು ಕಾರಣ. ಕೆಲವು ರಾಜ್ಯಗಳ ಎಟಿಎಂಗಳಲ್ಲಿ ಯಾವತ್ತೂ ಹಣದ ಕೊರತೆ ಕಂಡು ಬರುವುದೇ ಇಲ್ಲ. ನಗದು ವಿತರಣೆ ಯನ್ನು ಪರಿಣಾಮ ಕಾರಿಯಾಗಿ ಮಾಡಿದರೆ ಈ ಸಮಸ್ಯೆ ಬರಲಾರದು’ ಎಂದು ತಿಳಿಸಿದ್ದಾರೆ.

ನಗದು ಪೂರೈಕೆ ವಿಳಂಬ
ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಬ್ಯಾಂಕ್‌ಗಳಿಗೆ ಭಾರತೀಯ ರಿಸರ್ವ್‌ ಬ್ಯಾಂಕ್‌ನಿಂದ ನಗದು ಪೂರೈಕೆಯಲ್ಲಿ ವಿಳಂಬವಾಗುತ್ತಿದೆ. ಕೆಲವೊಮ್ಮೆ ನಗದು ಕೊರತೆ ಉಂಟಾಗುವ ಆತಂಕ ಎದುರಾಗಿದ್ದುಂಟು. ಆದರೂ ಅದನ್ನು ಸಮತೋಲನ  ಗೊಳಿಸಲಾಗಿದೆ. ಮತ್ತೆ ಪೂರೈಕೆಯಲ್ಲಿ ಹೆಚ್ಚಳವಾಗಬಹುದೆಂಬ ನಿರೀಕ್ಷೆ ಇದೆ ಎಂದು ಜಿಲ್ಲೆಯ ಪ್ರಮುಖ ಬ್ಯಾಂಕ್‌ಗಳ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಪುದುಚ್ಚೇರಿ: ಸಚಿವ ಸಂಪುಟದ ನಿರ್ಧಾರಗಳನ್ನು ರಾಜ್ಯಪಾಲರಾದ ಕಿರಣ್‌ ಬೇಡಿ ಅವರು ತಿರಸ್ಕರಿಸಿದ ಹಿನ್ನೆಲೆಯಲ್ಲಿ ಅವರ ವಿರುದ್ಧ ಟೀಕೆ ಮಾಡಿರುವ ಪುದುಚೇರಿ ಮುಖ್ಯಮಂತ್ರಿ...

  • ಇಂದೋರ್‌: ತಮ್ಮ ಮನೆ ಮಗನನ್ನೇ ಕೊಂದ ಪ್ರಕರಣದಲ್ಲಿ ಪೊಲೀಸರು ಒಂದೇ ಕುಟುಂಬದ ನಾಲ್ವರನ್ನು ಬಂಧಿಸಿರುವ ಘಟನೆ ಮಧ್ಯಪ್ರದೇಶದ ದಾಟಿಯಾದಲ್ಲಿ ನಡೆದಿದೆ. 24 ವರ್ಷದ...

  • ಕಡಬ: ಪುತ್ತೂರಿನಿಂದ ನೆಟ್ಟಣಕ್ಕೆ ಸಂಚರಿಸುತ್ತಿದ್ದ ಲೋಕಲ್‌ ರೈಲಿನಲ್ಲಿ ಪುತ್ತೂರಿನಿಂದ ಎಡಮಂಗಲಕ್ಕೆ ಪ್ರಯಾಣಿಸುತ್ತಿದ್ದ ಮಹಿಳೆಯ ಕುತ್ತಿಗೆ ಒತ್ತಿ ಹಿಡಿದು...

  • ಹೊಸದಿಲ್ಲಿ: ಮನವಿ ಪರಿಶೀಲಿಸ ಬೇಕೆಂಬ ಪಾಕಿಸ್ಥಾನದ ಬೇಡಿಕೆಯನ್ನು ತಳ್ಳಿ ಹಾಕಿರುವ ಇಂಟರ್‌ನ್ಯಾಶನಲ್‌ ಟೆನಿಸ್‌ ಫೆಡರೇಶನ್‌ (ಐಟಿಎಫ್) ಭಾರತ ಮತ್ತು ಪಾಕಿಸ್ಥಾನ...

  • ಉಡುಪಿ/ಕುಂದಾಪುರ: ತನ್ನದೇ ಶೈಲಿಯ ಹಾಡುಗಳಿಂದ ಜನರನ್ನು ಮನರಂಜಿಸುತಿದ್ದ ಕುಂದಾಪುರದ "ಸ್ಟ್ರೀಟ್‌ ಸಿಂಗರ್‌' ವೈಕುಂಠ (32) ಸೋಮವಾರ ರಾತ್ರಿ ಅಜ್ಜರಕಾಡಿನ ಜಿಲ್ಲಾಸ್ಪತ್ರೆಯಲ್ಲಿ...