ಕಂದಾವರ ಗ್ರಾಮ ಸಭೆ 


Team Udayavani, Jan 13, 2018, 11:26 AM IST

13-Jan-8.jpg

ಕಂದಾವರ: ತ್ಯಾಜ್ಯ ನಿರ್ವಹಣೆ ಯಲ್ಲಿ ವಾರ್ಡ್‌ ಸಮಿತಿಗಳು ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು. ಮಹಿಳೆಯರು ಈ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಸ್ವತ್ಛ ವಾರ್ಡ್‌ಗೆ ಬಹುಮಾನ ನೀಡುವ ಬಗ್ಗೆ ಪಂಚಾಯತ್‌ ಚಿಂತಿಸಬೇಕು ಎಂದು ಕಂದಾವರ ಗ್ರಾಮ ಸಭೆಯಲ್ಲಿ ಸಾಮಾಜಿಕ ಕಾರ್ಯಕರ್ತ ಭರತ್‌ ಎಸ್‌. ಕರ್ಕೇರಾ ಹೇಳಿದರು.

ಕಂದಾವರ ಗ್ರಾ.ಪಂ. ವ್ಯಾಪ್ತಿಯ ಕಂದಾವರ, ಕೊಳಂಬೆ, ಅದ್ಯಪಾಡಿ ಗ್ರಾಮಗಳ 2017- 18ನೇ ಸಾಲಿನ ದ್ವಿತೀಯ ಹಂತದ ಗ್ರಾಮಸಭೆಯು ಶುಕ್ರವಾರ ಕಂದಾವರ ಗ್ರಾ.ಪಂ.ಸಭಾಭವನದಲ್ಲಿ ಅಧ್ಯಕ್ಷೆ ವಿಜಯ ಗೋಪಾಲ ಸುವರ್ಣ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ತ್ಯಾಜ್ಯದಿಂದ ತೊಂದರೆ
ಮುರನಗರದಲ್ಲಿ ಹೊಸದಾಗಿ ಕೋಳಿ ಮಾಂಸದ ಅಂಗಡಿ ತೆರೆದಿದ್ದು, ಅದರ ತ್ಯಾಜ್ಯದಿಂದ ತೊಂದರೆಯಾಗುತ್ತಿದೆ. ಈ
ಬಗ್ಗೆ ಪಂಚಾಯತ್‌ಗೆ ದೂರು ನೀಡಿದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ ಎಂದು ಗ್ರಾಮಸ್ಥರು ಪಂಚಾಯತ್‌ ಆಡಳಿತವನ್ನು ತರಾಟೆಗೆ ತೆಗೆದುಕೊಂಡರು.

ಈ ಬಗ್ಗೆ ಪ್ರತಿಕ್ರಿಸಿದ ಅಧ್ಯಕ್ಷೆ, ಕೋಳಿ ಕೋಲ್ಡ್‌ ಸ್ಟೋರೆಜ್‌ಗೆ ಸಾಮಾನ್ಯ ಸಭೆಯಲ್ಲಿ ತೆಗೆದು ಕೊಂಡ ನಿರ್ಣಯದಂತೆ
ಶರತ್ತುಬದ್ದ ಪರವಾನಿಗೆ ನೀಡಲಾಗಿದೆ. ಇದನ್ನು ಮೀರಿದರೆ ಅಂಗಡಿಗೆ ಬೀಗ ಹಾಕಲಾಗುವುದು ಎಂದರು.

ವಿದ್ಯುತ್‌ ಇಲ್ಲ
ಮುರನಗರ ಅಂಗನವಾಡಿ ಕೇಂದ್ರಕ್ಕೆ ವಿದ್ಯುತ್‌ ಇಲ್ಲ. ಇದರಿಂದ ಅಂಗನವಾಡಿ ಮಕ್ಕಳಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಮೆಸ್ಕಾಂ ಅದಷ್ಟು ಬೇಗ ವಿದ್ಯುತ್‌ ಸಂಪರ್ಕ ಮಾಡಬೇಕು ಎಂದು ಸಭೆಯಲ್ಲಿ ವಿನಂತಿಸಲಾಯಿತು.

ವಿದ್ಯುತ್‌ ಬಿಲ್‌ ಪಾವತಿಸಿ
ಅಂಗನವಾಡಿ ಕೇಂದ್ರದ ವಿದ್ಯುತ್‌ ಬಿಲ್‌ ಪಂಚಾಯತ್‌ ಪಾವತಿಸಬೇಕು ಎಂದು ಸಭೆಯಲ್ಲಿ ಹೇಳಿದಾಗ ಉತ್ತರಿಸಿದ ಪಂ. ಅಧ್ಯಕ್ಷರು ಅಂಗನವಾಡಿಗೆ ಯಾವುದೇ ಖರ್ಚು ಪಂಚಾಯತ್‌ ಮಾಡುವಂತಿಲ್ಲ. ಆಡಿಟ್‌ ರಿಪೋರ್ಟ್‌ನಲ್ಲಿ ವಿರೋಧ ಬರುತ್ತದೆ. ಅದನ್ನು ತಾಲೂಕು ಪಂಚಾಯತ್‌ ಅಥವಾ ಇಲಾಖೆಯೇ ನೋಡಬೇಕು ಎಂದರು. ಅಂಗನವಾಡಿ ಕೇಂದ್ರಗಳಿಗೆ ಸರಕಾರ ಉಚಿತ ವಿದ್ಯುತ್‌ ನೀಡಬೇಕು ಎಂದು ಅಂಗನವಾಡಿ ಕಾರ್ಯಕರ್ತೆಯರು
ಸಭೆಯಲ್ಲಿ ಕೇಳಿದಾಗ ಉತ್ತರಿಸಿದ ಮೆಸ್ಕಾಂ ಅಧಿಕಾರಿ ಈ ಬಗ್ಗೆ ಸರಕಾರವೇ ನಿರ್ಧಾರ ಮಾಡಬೇಕು ಎಂದರು.

ಪಶುವೈದ್ಯರಿಗೆ ಮಾಹಿತಿ ನೀಡಿ
ಮೇಕೆ ಮೃತಪಟ್ಟರೆ 5 ಸಾವಿರ ರೂ., ದನ ಮೃತಪಟ್ಟರೆ 10 ಸಾವಿರ ರೂ.ಸರಕಾರ ಕೊಡುತ್ತದೆ. ಸತ್ತಾಗ ಪಶುವೈದ್ಯರಿಗೆ ತಿಳಿಸಬೇಕು. ಈ ಬಗ್ಗೆ ವರದಿ ತಯಾರಿಸಬೇಕಾಗುತ್ತದೆ ಎಂದು ಪಶು ವೈದ್ಯಾಧಿಕಾರಿ ಸಭೆಯಲ್ಲಿ ಮಾಹಿತಿ ನೀಡಿದರು.

ಕದ್ದ ದನಕ್ಕೆ ಪರಿಹಾರ ಸಿಗುತ್ತದೆ ಎಂದು ಸಭೆಯಲ್ಲಿ ಗ್ರಾಮಸ್ಥರು ಕೇಳಿದಾಗ ಈ ಬಗ್ಗೆ ಉತ್ತರಿಸಿದ ಪಶುವೆದ್ಯಾಧಿಕಾರಿ ಇನ್ಸೂರೆನ್ಸ್‌ ಮಾಡಿಸಿದರೆ ಸರಕಾರ ಶೇ. 50ಸಹಾಯಧನ ನೀಡುತ್ತದೆ ಎಂದರು.

ಸಿಬಂದಿ ಕೊರತೆ
ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬಂದಿ ಕೊರತೆ ಇದೆ. ಹೊಸ ನೇಮಕಾತಿ ಆಗಿಲ್ಲ. ಈ ಬಗ್ಗೆ ಸರಕಾರಕ್ಕೆ ಪಂಚಾಯತ್‌ ಮನವಿ ಮಾಡಬೇಕು ಎಂದು ಸಭೆಯಲ್ಲಿ ಗ್ರಾಮಸ್ಥರು ಮನವಿ ಮಾಡಿದರು. ನೋಡೆಲ್‌ ಅಧಿಕಾರಿಯಾಗಿ ಶಿಕ್ಷಣ ಇಲಾಖೆಯ ನಾಗೇಶ್‌ ಆಗಮಿಸಿದ್ದರು. ಗ್ರಾ.ಪಂ.ಉಪಾಧ್ಯಕ್ಷ ದೇವೇಂದ್ರ, ಜಿ.ಪಂ. ಸದಸ್ಯ ಯು.ಪಿ.ಇಬ್ರಾಹಿಂ, ಗ್ರಾ.ಪಂ. ಸದಸ್ಯರು, ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು. ಪಿಡಿಒ ರೋಹಿಣಿ ನಿರ್ವಹಿಸಿದರು.

ತ್ಯಾಜ್ಯ ಎಸೆಯುವವರ ವಿರುದ್ಧ ಕ್ರಮ
ವಸತಿ ಸಮುತ್ಛಯಕ್ಕೆ ಪರವಾನಿಗೆ ನೀಡುವಾಗ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳಿ. ಅದರಿಂದಲೇ ಹೆಚ್ಚು ತ್ಯಾಜ್ಯಗಳು ಸಂಗ್ರಹವಾಗುತ್ತದೆ. ತ್ಯಾಜ್ಯ ಬಿಸಾಡುವವರ ಮೇಲೆ ಕ್ರಮ ಯಾರೂ ತೆಗೆದುಕೊಳ್ಳುತ್ತಾರೆ? ಈ ಬಗ್ಗೆ ನಾವು ಏನೂ ಮಾಡಬೇಕು ಎಂದು ಸಭೆಯಲ್ಲಿ ಗ್ರಾಮಸ್ಥರು ಪ್ರಶ್ನೆಸಿದರು. ಇದಕ್ಕೆ ಉತ್ತರಿಸಿದ ಪಿಡಿಒ ರೋಹಿಣಿ, ತ್ಯಾಜ್ಯ ಬಿಸಾಡು
ವಾಗ ಫೋಟೋ ತೆಗೆದು ಪಂಚಾಯತ್‌ಗೆ ತಿಳಿಸಿ, ಪಂಚಾಯತ್‌ ಪೊಲೀಸರಿಗೆ ದೂರು ನೀಡಿ ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದರು.

ರೇಷನ್‌ ಅಂಗಡಿ ಬೇಕು
ಕಂದಾವರಕ್ಕೆ ರೇಷನ್‌ ಅಂಗಡಿ ಬೇಕು ಎಂದು ಗ್ರಾಮಸ್ಥರು ಆಹಾರ ಮತ್ತು ಪಡಿ ತರ ಪೂರೈಕೆಯ ಉಪತಹಶೀಲ್ದಾರ ವಾಸು ಶೆಟ್ಟಿ ಯವರಲ್ಲಿ ಮನವಿ ಮಾಡಿದರು. ಈ ಬಗ್ಗೆ ಉತ್ತರಿಸಿದ ಅವರು ಹಾಲು ಉತ್ಪಾದಕರ ಸಹಕಾರಿ ಸಂಘವಿದ್ದರೆ ಅದಕ್ಕೆ ಅಲ್ಲಿ ಬೇಗನೆ ರೇಷನ್‌ ಅಂಗಡಿಗೆ ಅನುಮೋದನೆ ಸಿಗುತ್ತದೆ. 2 ಲೀಟರ್‌ ಸೀಮೆ ಎಣ್ಣೆ ಮನವಿಯ
ಬಗ್ಗೆ ಸರಕಾರಕ್ಕೆ ತಿಳಿಸಲಾಗುವುದು ಎಂದರು. ಫೆ. 2017ರಿಂದ ಜೂ. 2017 ಪಡಿತರ ಚೀಟಿಗೆ ಅರ್ಜಿ
ಹಾಕಿದ 58 ಮಂದಿಗೆ ಅಂಚೆಯಲ್ಲಿ ಪಡಿತರ ಚೀಟಿ ಬಂದಿದೆ. ಬಾಕಿ ಪಡಿತರ ಚೀಟಿ ಇನ್ನೂಳಿದ ದಿನಗಳಲ್ಲಿ ಬರಲಿದೆ ಎಂದರು.

‘ಅನಗತ್ಯ ವಿದ್ಯುತ್‌ ತೆಗೆಯುವುದಿಲ್ಲ’
ನಾವು ಅನಗತ್ಯವಾಗಿ ವಿದ್ಯುತ್‌ ತೆಗೆಯುವುದಿಲ್ಲ. ವಿದ್ಯುತ್‌ ತಂತಿ ಕಡಿತವಾದಲ್ಲಿ ಕೆಲಕಾಲ ವಿದ್ಯುತ್‌ ಸರಬರಾಜು ವ್ಯತ್ಯಯ ಮಾಡುತ್ತೇವೆ. ಹೊಗೆ ಪದವಿನಲ್ಲಿ ಹೊಸ ಪರಿವರ್ತಕ ಲಗತ್ತಿಸಿದ್ದೇವೆ. ಕಳೆದ ಗ್ರಾಮ ಸಭೆಯ ದೂರುಗಳಿಗೆ ಸ್ಪಂದಿಸಿದ್ದೇವೆ. ಕಂದಾವರ ಗ್ರಾಮ ಮಾದರಿ ವಿದ್ಯುತ್‌ ಗ್ರಾಮ ಯೋಜನೆಯಡಿಯಲ್ಲಿ ವಿವಿಧ ಕಾಮಗಾರಿಗಳಿಗೆ 40ಲಕ್ಷ ರೂ.ಅಂದಾಜು ವೆಚ್ಚ ಈಗಾಗಲೇ ಸಲ್ಲಿಸಲಾಗಿದೆ. ದೀನ್‌ ದಯಾಳ್‌ ಯೋಜನೆಯಡಿ ಮನೆಗಳಿಗೆ ವಿದ್ಯುತ್‌ ಸಂಪರ್ಕ ಕಾರ್ಯ ಪ್ರಗತಿಯಲ್ಲಿದೆ ಎಂದು ಕೈಕಂಬ ಮೆಸ್ಕಾಂ ಅಧಿಕಾರಿ ಸಭೆಯಲ್ಲಿ ಹೇಳಿದರು.

ಟಾಪ್ ನ್ಯೂಸ್

4

IPL: ಆಟ ಮೆರೆದಾಟ; ಬ್ಯಾಟಿಂಗ್‌ ಅಷ್ಟೇ ಕ್ರಿಕೆಟ್ಟಾ?

2

Bengaluru: ಬಿಸಿಲು; ಹೋಟೆಲ್‌ ವ್ಯಾಪಾರ ಶೇ.30 ಕುಸಿತ

Mahadev Betting App Case; Actor Sahil Khan arrested by Mumbai police

Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ

2-baikampady

Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

by-raghavendra

Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-baikampady

Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ

Congress 1.20 ಲಕ್ಷಕ್ಕೂ ಅಧಿಕ ಮತಗಳ ಗೆಲುವು: ಪದ್ಮರಾಜ್‌ ಆರ್‌.

Congress 1.20 ಲಕ್ಷಕ್ಕೂ ಅಧಿಕ ಮತಗಳ ಗೆಲುವು: ಪದ್ಮರಾಜ್‌ ಆರ್‌.

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

4

IPL: ಆಟ ಮೆರೆದಾಟ; ಬ್ಯಾಟಿಂಗ್‌ ಅಷ್ಟೇ ಕ್ರಿಕೆಟ್ಟಾ?

Bengaluru: ಬ್ರೇಕ್‌ ಬದಲು ಆ್ಯಕ್ಸಿಲೇಟರ್‌ ಒತ್ತಿದ ಆ್ಯಂಬುಲೆನ್ಸ್‌ ಚಾಲಕ: ಸರಣಿ ಅಪಘಾತ

Bengaluru: ಬ್ರೇಕ್‌ ಬದಲು ಆ್ಯಕ್ಸಿಲೇಟರ್‌ ಒತ್ತಿದ ಆ್ಯಂಬುಲೆನ್ಸ್‌ ಚಾಲಕ: ಸರಣಿ ಅಪಘಾತ

2

Bengaluru: ಬಿಸಿಲು; ಹೋಟೆಲ್‌ ವ್ಯಾಪಾರ ಶೇ.30 ಕುಸಿತ

Bengaluru: ನಗರದಲ್ಲಿ ಕಸದ ಬ್ಲಾಕ್‌ ಸ್ಪಾಟ್‌ ಹೆಚ್ಚಳ

Bengaluru: ನಗರದಲ್ಲಿ ಕಸದ ಬ್ಲಾಕ್‌ ಸ್ಪಾಟ್‌ ಹೆಚ್ಚಳ

Mahadev Betting App Case; Actor Sahil Khan arrested by Mumbai police

Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.