ಪೊಲೀಸರು ದುಶ್ಚಟಕ್ಕೆ ಬಲಿಯಾಗಬೇಡಿ

Team Udayavani, Jun 5, 2017, 1:08 PM IST

dvg1.jpg

ದಾವಣಗೆರೆ: ಪೊಲೀಸರು ಯಾವುದೇ ಕಾರಣಕ್ಕೂ ದುಶ್ಚಟಕ್ಕೆ ಬಲಿಯಾಗಿ ಆರೋಗ್ಯ ಕೆಡಿಸಿಕೊಳ್ಳಬಾರದು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ| ಭೀಮಾಶಂಕರ್‌ ಎಸ್‌. ಗುಳೇದ್‌ ಸಲಹೆನೀಡಿದ್ದಾರೆ. ನಗರದ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್‌ ಕಚೇರಿಯ ಪೊಲೀಸ್‌ ಕಲ್ಯಾಣ ಕೇಂದ್ರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ, ಮಾತನಾಡಿದರು.

ಪೊಲೀಸ್‌ ಕೆಲಸ ಒತ್ತಡದ ಕೆಲಸ, ಸಾಮಾನ್ಯವಾಗಿ ಪೊಲೀಸರಿಗೆ ಕೆಲಸದ ಒತ್ತಡ ಮತ್ತು ಕೆಲಸ ಜಾಸ್ತಿಯಾಗಿರುವುದರಿಂದ ಅವರ ಮತ್ತು ತಮ್ಮ ಕುಟುಂಬದ ಸದಸ್ಯರಿಗೆ ಆನಾರೋಗ್ಯದ ಸಂಧರ್ಭದಲ್ಲಿ ಚಿಕಿತ್ಸೆಗೆ ಹೋಗಲು ಸಾಧ್ಯವಾಗದಿರಬಹುದು ಎಂದರು. 

ಆರೋಗ್ಯದ ದೃಷ್ಠಿಯಿಂದ ನಮ್ಮ ಜೀವನ ವಿಧಾನದಲ್ಲಿ ಉತ್ತಮವಾದ ಬದಲಾವಣೆ ಮಾಡಿಕೊಳ್ಳುವ ಅವಶ್ಯಕತೆ ಇದೆ. ಅನಾರೋಗ್ಯಕ್ಕೆ ಕಾರಣವಾಗುವ ಕುಡಿತ, ಧೂಮಪಾನ ಇತರೆ ಕೆಟ್ಟ ಚಟಗಳಿಂದ ದೂರವಿದ್ದು ಆರೋಗ್ಯವನ್ನು ಕಾಪಾಡಿಕೊಳ್ಳಲು ಮುಂದಾಗಬೇಕು ಎಂದರು. 

ಪೊಲೀಸರ ನಿರಂತರ ಕೆಲಸದ ಹಿನ್ನೆಲೆಯಲ್ಲಿ ಇಲಾಖೆ  ಮತ್ತು ಸ್ಪೆಷಲಿಸ್ಟ್‌ ವೈದ್ಯರ ಸಹಾಯೋಗದೊಂದಿಗೆ ಇಂತಹ ಆರೋಗ್ಯ ತಪಾಸಣಾ ಶಿಬಿರಗಳನ್ನು ಹಮ್ಮಿಕೊಳ್ಳುವುದರಿಂದ ಪೊಲೀಸರಿಗೆ ಮತ್ತು ಅವರ ಕುಟುಂಬ ಸದಸ್ಯರಿಗೆ ಅನುಕೂಲವಾಗುತ್ತದೆ. 

ವರ್ಷಕ್ಕೊಮ್ಮೆಯಾದರೂ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ. ಪ್ರತಿ ವರ್ಷ ಪೊಲೀಸ್‌ ಇಲಾಖೆಯಿಂದ ಅ ಧಿಕಾರಿ ಮತ್ತು ಸಿಬ್ಬಂದಿಗೆ ಉಚಿತ ಆರೋಗ್ಯ ತಪಾಸಣೆ ಮಾಡಿಸಲಾಗುತ್ತದೆ. ಆರೋಗ್ಯಕ್ಕೆ ಸಂಬಂಧಿಸಿದ ವಿಚಾರಗಳನ್ನು ತಿಳಿದುಕೊಂಡು ಅದನ್ನು ಇತರೆ ಜನರಿಗೆ ತಿಳಿಹೇಳಿದರೆ ಇದರಿಂದ ಎಲ್ಲರಿಗೂ ಅನುಕೂಲವಾಗುತ್ತದೆ ಎಂದು  ತಿಳಿಸಿದರು. 

ಬಾಪೂಜಿ ವೈದ್ಯಕೀಯ ಕಾಲೇಜಿನ ಡಾ| ನಂದೀಶ, ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯ ಕ್ಯಾನ್ಸರ್‌ ತಜ್ಞ ಡಾ|  ರುದ್ರೇಶ್‌, ಸುನೈನಾ ಅಪ್ಟಿಕಲ್ಸ್‌ ನಿರ್ವಾಹಕ ಜುನೈದ್‌ ಪಾಷಾ, ನಗರದ ಉಪಾಧೀಕ್ಷಕ ಅಶೋಕ ಕುಮಾರ್‌, ಪೊಲೀಸ್‌ ನಿರೀಕ್ಷಕರಾದ ಜಿ.ಬಿ. ಉಮೇಶ್‌, ದುರುಗಪ್ಪ,  ಬಸವರಾಜ, ಪಿಎಸ್‌ಐ ಕಿರಣ್‌ ಕುಮಾರ್‌ ಇತರರು ಶಿಬಿರದಲ್ಲಿ ಪಾಲ್ಗೊಂಡರು. 

ಟಾಪ್ ನ್ಯೂಸ್

ಬಸವರಾಜ ಬೊಮ್ಮಾಯಿ

Gadag; ಕಾನೂನು ಸುವ್ಯವಸ್ಥೆ ಹದಗೆಡಲು ಸರ್ಕಾರದ ವ್ಯವಸ್ಥೆಯೇ ಕಾರಣ: ಬಸವರಾಜ ಬೊಮ್ಮಾಯಿ

1

Tollywood: ಬಹುನಿರೀಕ್ಷಿತ ʼಪುಷ್ಪ-2ʼ ರಿಲೀಸ್‌ ಡೇಟ್‌ ಮುಂದೂಡಿಕೆ?

ಮಗುವನ್ನು ಕಾರಿನಲ್ಲಿ ಬಿಟ್ಟು ಮದುವೆಗೆ ಹೋದ ಕುಟುಂಬ… ನೆನಪಾಗುವಷ್ಟರಲ್ಲಿ ಮಿಂಚಿತ್ತು ಕಾಲ

ಮಗುವನ್ನು ಕಾರಿನಲ್ಲಿ ಬಿಟ್ಟು ಮದುವೆಗೆ ಹೋದ ಕುಟುಂಬ… ನೆನಪಾಗುವಷ್ಟರಲ್ಲಿ ಮಿಂಚಿತ್ತು ಕಾಲ

Hassan; ಕೆರೆಯಲ್ಲಿ ಈಜಲು ಹೋಗಿ ನೀರು ಪಾಲಾದ ನಾಲ್ವರು ಮಕ್ಕಳು

Hassan; ಕೆರೆಯಲ್ಲಿ ಈಜಲು ಹೋಗಿ ನೀರು ಪಾಲಾದ ನಾಲ್ವರು ಮಕ್ಕಳು

ಈಶ್ವರ್ ಖಂಡ್ರೆ

Bidar; ಯುವಕರ‌ ಬದುಕು‌ ಹಾಳು ಮಾಡಿದ‌ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ: ಈಶ್ವರ್ ಖಂಡ್ರೆ

ಜಮ್ಮು – ಕಾಶ್ಮೀರದಲ್ಲಿ ಭದ್ರತಾ ಪಡೆಗಳಿಂದ ಎನ್‌ಕೌಂಟರ್‌… ಇಬ್ಬರು ಉಗ್ರರು ಹತ

ಜಮ್ಮು – ಕಾಶ್ಮೀರದಲ್ಲಿ ಭದ್ರತಾ ಪಡೆಗಳಿಂದ ಎನ್‌ಕೌಂಟರ್‌… ಇಬ್ಬರು ಉಗ್ರರು ಹತ

Virat kohli spoke about his post-retirement life

Virat Kohli; ನಿವೃತ್ತಿಯ ಬಗ್ಗೆ ಮಾತನಾಡಿದ ವಿರಾಟ್..; ಫ್ಯಾನ್ಸ್ ಗೆ ಆತಂಕತಂದ ಕೊಹ್ಲಿ ಮಾತು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

crime

Davanagere; ಪಾರ್ಟಿ ಮಾಡಲು ಹೋಗಿದ್ದ ಯುವಕನ ಕೊಲೆ!

Davanagere: ಕೆರೆಗೆ ವಿಷ ಹಾಕಿದ ದುಷ್ಕರ್ಮಿಗಳು… ಸಾವಿರಾರು ಮೀನುಗಳ ಮಾರಣಹೋಮ

Davanagere: ಕೆರೆಗೆ ವಿಷ ಹಾಕಿದ ದುಷ್ಕರ್ಮಿಗಳು… ಸಾವಿರಾರು ಮೀನುಗಳ ಮಾರಣಹೋಮ

Davanagere; ಅಪರೂಪದ ಮದುವೆಗೆ ಸಾಕ್ಷಿಯಾದ ಗೋವಿನಕೋವಿ

Davanagere; ಅಪರೂಪದ ಮದುವೆಗೆ ಸಾಕ್ಷಿಯಾದ ಗೋವಿನಕೋವಿ

Davanagere; ಅಡಕೆ ಮರ ಕಡಿದಿದ್ದಕ್ಕೆ ಮಹಿಳೆಯ ಕೊಲೆ; ಇಬ್ಬರು ಆರೋಪಿಗಳ ಬಂಧನ

Davanagere; ಅಡಕೆ ಮರ ಕಡಿದಿದ್ದಕ್ಕೆ ಮಹಿಳೆಯ ಕೊಲೆ; ಇಬ್ಬರು ಆರೋಪಿಗಳ ಬಂಧನ

Davangere: ಪಕ್ಷ ಗಳ ಗೆಲುವಿನ ಮತ ಲೆಕ್ಕಾಚಾರ ಚುನಾವಣಾ ಫಲಿತಾಂಶದ ಕಾತರ

Davangere: ಪಕ್ಷ ಗಳ ಗೆಲುವಿನ ಮತ ಲೆಕ್ಕಾಚಾರ ಚುನಾವಣಾ ಫಲಿತಾಂಶದ ಕಾತರ

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

Manipal: ಕೆಎಂಸಿಯಲ್ಲಿ ನ್ಯೂಟ್ರಿಷನ್ ಸ್ಟೀವರ್ಡ್‌ಶಿಪ್ ಕಾರ್ಯಕ್ರಮ

Sandalwood: ‘ಇದು ನಮ್‌ ಶಾಲೆ’ಯ ಹಾಡುಗಳು ಬಂತು

Sandalwood: ‘ಇದು ನಮ್‌ ಶಾಲೆ’ಯ ಹಾಡುಗಳು ಬಂತು

ಬಸವರಾಜ ಬೊಮ್ಮಾಯಿ

Gadag; ಕಾನೂನು ಸುವ್ಯವಸ್ಥೆ ಹದಗೆಡಲು ಸರ್ಕಾರದ ವ್ಯವಸ್ಥೆಯೇ ಕಾರಣ: ಬಸವರಾಜ ಬೊಮ್ಮಾಯಿ

8-bng

17 ಕೋಟಿ ರೂ. ವಿದ್ಯುತ್‌ ಬಿಲ್‌ ಕಂಡು ಮನೆ ಮಾಲೀಕನಿಗೆ ಶಾಕ್‌!

1

Tollywood: ಬಹುನಿರೀಕ್ಷಿತ ʼಪುಷ್ಪ-2ʼ ರಿಲೀಸ್‌ ಡೇಟ್‌ ಮುಂದೂಡಿಕೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.