ನನ್ನ ಮಗ ಸೋನಿಯಾ ಗಾಂಧಿ ಅಲ್ಲ: ಸಚಿವ ರೇವಣ್ಣ
Team Udayavani, Oct 13, 2017, 6:30 AM IST
ದಾವಣಗೆರೆ: “ಯಾರೂ ಆಸೆಯಿಲ್ಲದೆ ರಾಜಕೀಯ ಮಾಡಲ್ಲ, ನನ್ನ ಮಗ ಅನೂಪ್ ಸಹ ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಚುನಾವಣೆ ಮೂಲಕ ಆಯ್ಕೆಯಾಗಿದ್ದಾನೆ. ಮುಂದೆ ಆತನೂ ಸಹ ಅವಕಾಶ ಸಿಕ್ಕರೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಾನೆ’ ಎಂದು ಸಾರಿಗೆ ಸಚಿವ ಎಚ್.ಎಂ. ರೇವಣ್ಣ ಹೇಳಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. “ನಿಮ್ಮ ಮಗ ಏನಾದರೂ ಈ ಬಾರಿ ಚುನಾವಣೆಗೆ ನಿಲ್ಲುತ್ತಾರಾ?’ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ಯಾರೂ ಸಹ ಆಸೆಯಿಲ್ಲದೆ ರಾಜಕಾರಣ ಮಾಡಲ್ಲ. ಆಸೆಯಿಲ್ಲದೆ ರಾಜಕಾರಣ ಮಾಡೋಕೆ ನನ್ನ ಮಗ ಸೋನಿಯಾ ಗಾಂಧಿ ತರಹ ಅಲ್ಲ. ನನ್ನ ಮಗ ಸಹ ಸಕ್ರಿಯ ರಾಜಕೀಯದಲ್ಲಿದ್ದಾನೆ. ಚುನಾವಣೆ ಮೂಲಕ ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾನೆ. ಆತನೂ ಸಹ ಚುನಾವಣೆಗೆ ಸ್ಪರ್ಧಿಸುತ್ತಾನೆ. ಆದರೆ, ಅವಕಾಶ ಸಿಗಬೇಕು, ಕ್ಷೇತ್ರ ನಿಗದಿಯಾಗಬೇಕು. ಆಗ ಚುನಾವಣೆಗೆ ನಿಲ್ಲುತ್ತಾನೆ’ ಎಂದು ಸ್ಪಷ್ಟಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ
Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ
Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ
Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್ ಪಂತ್
Amruthapura: ಅಮೃತಪುರವೆಂಬ ಅದ್ಭುತ ತಾಣ