![modi (4)](https://www.udayavani.com/wp-content/uploads/2024/07/modi-4-4-415x256.jpg)
ದಾವಣಗೆರೆ ಬೆಣ್ಣೆದೋಸೆ ಸವಿದ ಸ್ಯಾಂಡಲ್ವುಡ್ನ ಮೋಹಕ ತಾರೆ ರಮ್ಯ
Team Udayavani, Oct 18, 2022, 8:05 AM IST
![ದಾವಣಗೆರೆ ಬೆಣ್ಣೆದೋಸೆ ಸವಿದ ಸ್ಯಾಂಡಲ್ವುಡ್ನ ಮೋಹಕ ತಾರೆ ರಮ್ಯ](https://www.udayavani.com/wp-content/uploads/2022/10/ramya-620x349.jpg)
ದಾವಣಗೆರೆ: ದಾವಣಗೆರೆಯ ಬೆಣ್ಣೆದೋಸೆ ರುಚಿಗೆ ಮನಸೋಲದವರೇ ಇಲ್ಲ. ಅದಕ್ಕೆ ಸ್ಯಾಂಡಲ್ವುಡ್ನ ಮೋಹಕ ತಾರೆ ರಮ್ಯ ಸಹ ಹೊರತಾಗಿಲ್ಲ.
ಭಾನುವಾರ ರಾತ್ರಿ ಎಂಬಿಎ ಕಾಲೇಜು ಮೈದಾನದಲ್ಲಿ ನಡೆದ ಡಾಲಿ ಧನಂಜಯ ಅಭಿನಯದ ಹೆಡ್ಬುಷ್… ಚಿತ್ರದ ಪ್ರಿ ರಿಲೀಸ್ ಇವೆಂಟ್ಗೆ ಬಂದಿದ್ದಂತಹ ರಮ್ಯ ವೇದಿಕೆಯಲ್ಲೇ ನನಗೆ ಬೆಣ್ಣೆ ದೋಸೆ ಎಂದರೆ ಬಹಳ ಇಷ್ಟ. ಡಯಟ್ ಮಾಡುತ್ತಿದ್ದರೂ ಸೋಮವಾರ ಬೆಳಗ್ಗೆ ಬ್ರೇಕ್ಫಾಸ್ಟ್ ಮಾಡಿಕೊಂಡೇ ಬೆಂಗಳೂರಿಗೆ ಹೋಗುತ್ತೇನೆ. ಯಾವ ಹೋಟೆಲ್ ಫೇಮಸ್ ಎಂದು ಪ್ರೇಕ್ಷಕರನ್ನೇ ಕೇಳಿದ್ದರು.
ಶ್ರೀ ಗುರು ಕೊಟ್ಟೂರೇಶ್ವರ ಬೆಣ್ಣೆದೋಸೆ… ಹೋಟೆಲ್ ಎಂದು ಅನೇಕರು ಉತ್ತರಿಸಿದ್ದರು. ಅದರಂತೆ ಸೋಮವಾರ ಬೆಳಗ್ಗೆ ಬಾಪೂಜಿ ಡೆಂಟಲ್ ಕಾಲೇಜು ರಸ್ತೆಯಲ್ಲಿರುವ ಶ್ರೀ ಗುರು ಕೊಟ್ಟೂರೇಶ್ವರ ಬೆಣ್ಣೆದೋಸೆ ಹೋಟೆಲ್ಗೆ ಆಗಮಿಸಿದ ರಮ್ಯ ಖಾಲಿ ಮತ್ತು ಬೆಣ್ಣೆದೋಸೆ ಸವಿದರು. ದೋಸೆಯ ರುಚಿಗೆ ಮಾರು ಹೋದರು. ರಮ್ಯ ಹೋಟೆಲ್ಗೆ ಬಂದಿರುವುದು ಗೊತ್ತಾಗುತ್ತಿದ್ದಂತೆ ಜನರು ರಮ್ಯ ನೋಡಲು, ಸೆಲ್ಫಿಗೆ ಮುಗ್ಗಿ ಬಿದ್ದ ಪರಿಣಾಮ ಟ್ರಾಫಿಕ್ ಜಾಮ್ ಆಗಿತ್ತು. ರಮ್ಯ ಬರುವತನಕ ಕಾದಂತಹ ಕೆಲವರು ಹ್ಯಾಂಡ್ ಶೇಕ್ ಮಾಡಿ, ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.
ಇದನ್ನೂ ಓದಿ : ಶೋಪಿಯಾನ್ನಲ್ಲಿ ಉಗ್ರರಿಂದ ಗ್ರೆನೇಡ್ ದಾಳಿ: ಉತ್ತರ ಪ್ರದೇಶದ ಇಬ್ಬರು ವಲಸೆ ಕಾರ್ಮಿಕರು ಸಾವು
ಟಾಪ್ ನ್ಯೂಸ್
![modi (4)](https://www.udayavani.com/wp-content/uploads/2024/07/modi-4-4-415x256.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![modi (4)](https://www.udayavani.com/wp-content/uploads/2024/07/modi-4-4-150x92.jpg)
NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!
![Exam](https://www.udayavani.com/wp-content/uploads/2024/07/Exam-8-150x84.jpg)
NEET ಟಾಪರ್ಗಳ ಸಂಖ್ಯೆ 67ರಿಂದ ಈಗ 17ಕ್ಕೆ ಇಳಿಕೆ!
![1-assam](https://www.udayavani.com/wp-content/uploads/2024/07/1-assam-150x84.jpg)
UNESCO ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ‘ದಿಬ್ಬ ಸಮಾಧಿಗಳು’: ಏನಿದು ಮೊಯಿಡಮ್ಸ್?
![New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್ ಗ್ಯಾಂಗ್’](https://www.udayavani.com/wp-content/uploads/2024/07/POLICE-5-12-150x79.jpg)
New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್ ಗ್ಯಾಂಗ್’
![1-kanwar-msid](https://www.udayavani.com/wp-content/uploads/2024/07/1-kanwar-msid-150x84.jpg)
Uttara Khand; ಕನ್ವರ್ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.