ಆಂಗ್ಲ ಶಿಕ್ಷಣ ಅಪ್ಪಿ(ಒಪ್ಪಿ)ಕೊಂಡ ಪೋಷಕರು

Team Udayavani, May 30, 2019, 1:08 PM IST

30-May-28

ಬಸವರಾಜ ಹೊಂಗಲ್
ಧಾರವಾಡ:
ನನ್ನ ಮಗನನ್ನು ಇಂಗ್ಲಿಷ್‌ ಮಾಧ್ಯಮದಲ್ಲೇ ಸೇರಿಸಿಕೊಳ್ಳಿ… ನನ್ನ ಮಗಳು ಇಂಗ್ಲಿಷ್‌ ಕಲಿಯಲಿ, ಹಳ್ಳಿಗರೇನು ಇಂಗ್ಲಿಷ್‌ ಕಲಿಯಬಾರದೇ?… ದಯಮಾಡಿ ಬೇಗ ಸೇರಿಸಿಕೊಳ್ಳಿ ಆ ಮೇಲೆ ಸೀಟಿಲ್ಲ ಎಂದು ಹೇಳಬೇಡಿ..

ಹೀಗೆಂದು ಶಾಲಾ ಮುಖ್ಯೋಪಾಧ್ಯಾಯರಿಗೆ ದುಂಬಾಲು ಬೀಳುತ್ತಿದ್ದಾರೆ ಪಾಲಕರು. ಹೌದು. ಪ್ರಸಕ್ತ ವರ್ಷದಿಂದ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್‌ ಕಲಿಕೆಗೆ ವಿದ್ಯಾನಗರಿ ಧಾರವಾಡ ಜಿಲ್ಲೆಯಲ್ಲಿನ ಪೋಷಕರು ಹೆಚ್ಚು ಉತ್ಸುಕತೆ ತೋರಿದ್ದು, ತಮ್ಮ ಮಕ್ಕಳು ಇಂಗ್ಲಿಷ್‌ ಮಾಧ್ಯಮದಲ್ಲೇ ಓದಬೇಕೆಂದು ಶಾಲಾ ಮುಖ್ಯೋಪಾಧ್ಯಾಯರಿಗೆ ಬೆನ್ನು ಬಿದ್ದಿದ್ದಾರೆ.

ಜಿಲ್ಲೆಯಾದ್ಯಂತ ಸರ್ಕಾರ ಈ ವರ್ಷದಿಂದ ಆರಂಭಿಸಿರುವ 28 ಶಾಲೆಗಳಲ್ಲಿನ 1ನೇ ತರಗತಿಯ ಇಂಗ್ಲಿಷ್‌ ಮಾಧ್ಯಮ ಕಲಿಕೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು,ನಾಲ್ಕೇ ದಿನದಲ್ಲಿ ಸಾವಿರಕ್ಕೂ ಅಧಿಕ ಮಕ್ಕಳನ್ನು ಪೋಷಕರು ಇಂಗ್ಲಿಷ್‌ ಮಾಧ್ಯಮದಲ್ಲಿ ಕಲಿಸುವುದಕ್ಕೆ ಹೆಸರು ನೋಂದಾಯಿಸಿದ್ದಾರೆ.

ಜಿಲ್ಲೆಯಲ್ಲಿನ 28 ಶಾಲೆಗಳಲ್ಲೂ ತಲಾ 30-50 ವಿದ್ಯಾರ್ಥಿಗಳಿಗೆ ಅವಕಾಶ ನೀಡಲು ಯೋಜಿಸಲಾಗಿದ್ದು, ಜೂನ್‌ ಮೊದಲ ವಾರದಿಂದಲೇ ಈ ಶಾಲೆಗಳಲ್ಲಿ ಇಂಗ್ಲಿಷ್‌ ಕಲಿಕೆ ಆರಂಭಗೊಳ್ಳಲಿದೆ. ಸದ್ಯಕ್ಕೆ ಇಂಗ್ಲಿಷ್‌ ಮಾಧ್ಯಮದ ನೂರಕ್ಕೂ ಹೆಚ್ಚು ಖಾಸಗಿ ಶಾಲೆಗಳಿದ್ದು, ಇಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಸಾವಿರಾರು ಇದ್ದು ಇದೀಗ ಸರ್ಕಾರವೇ ಅಧಿಕೃತವಾಗಿ ಬಡ ಮಕ್ಕಳು ಇಂಗ್ಲಿಷ್‌ ಕಲಿಯಬೇಕೆಂದು ಯೋಜನೆ ರೂಪಿಸಿದ್ದು, ಈ ಯೋಜನೆಗೆ ಆರಂಭದಲ್ಲೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

40 ಶಿಕ್ಷಕರಿಗೆ ತರಬೇತಿ: ಜಿಲ್ಲೆಯಲ್ಲಿನ 28 ಶಾಲೆಗಳಲ್ಲಿನ 1ನೇ ತರಗತಿ ವಿದ್ಯಾರ್ಥಿಗಳಿಗೆ ಇಂಗ್ಲಿಷ್‌ ಮಾಧ್ಯಮದಲ್ಲಿಯೇ ಬೋಧನೆ ಮಾಡಲು ಶಿಕ್ಷಣ ಇಲಾಖೆ ಇಲ್ಲಿನ ಡಯಟ್‌ನಲ್ಲಿ ಈಗಾಗಲೇ ಶಿಕ್ಷಕರಿಗೆ ತರಬೇತಿ ನೀಡಿದೆ. 15 ದಿನಗಳ ಕಾಲ ಆಯ್ದ 40 ಜನ ಶಿಕ್ಷಕರಿಗೆ ನೂತನ ಪಠ್ಯಪುಸ್ತಕದಲ್ಲಿನ ಮಾದರಿ ಮತ್ತು ಬೋಧನೆ ತಂತ್ರಗಳ ಕುರಿತು ಸಮಗ್ರ ತರಬೇತಿ ನೀಡಲಾಗಿದೆ.

ಮಕ್ಕಳಿಗೆ ಮೊದಲ ವರ್ಷವೇ ಪಠ್ಯಪುಸ್ತಕಗಳು ಇರಲಿದ್ದು, ಇವುಗಳಲ್ಲಿ ಇಂಗ್ಲಿಷ್‌ ಜತೆಗೆ ಕನ್ನಡದ ಬರಹ ಮತ್ತು ತಿಳಿವಳಿಕೆ ನೀಡುವ ಅಂಶಗಳು ಸೇರಿಕೊಂಡಿವೆ. ಇದನ್ನು ಮಕ್ಕಳಿಗೆ ಮನಮುಟ್ಟುವಂತೆ ಬೋಧಿಸಲು ವಿಶೇಷ ತರಬೇತಿದಾರರಿಂದ ಶಿಕ್ಷಕರಿಗೆ ತರಬೇತಿ ನೀಡಲಾಗಿದೆ. 28ಶಾಲೆಗಳಿಗೂ ತಲಾ ಒಬ್ಬರಂತೆ ಶಿಕ್ಷಕರನ್ನು ನಿಯೋಜಿಸಲಾಗಿದೆ. ಆದರೆ ರಜೆ, ವರ್ಗಾವಣೆ ಮತ್ತು ಅನಾರೋಗ್ಯ ಸಮಸ್ಯೆಗಳಾದಾಗ ಪರ್ಯಾಯ ಶಿಕ್ಷಕರು ಇರಲೆಂದು ಹೆಚ್ಚುವರಿ 12 ಜನ ಶಿಕ್ಷಕರಿಗೂ ಈಗಾಗಲೇ ತರಬೇತಿ ನೀಡಲಾಗಿದೆ.

ಮಾತೃಭಾಷೆಗೂ ಆದ್ಯತೆ: ಇನ್ನು ಈ ವರ್ಷದಿಂದಲೇ ಮಕ್ಕಳು ನೂತನವಾಗಿ ಇಂಗ್ಲಿಷ್‌ ಮಾಧ್ಯಮಕ್ಕೆ ಸೇರಿದರೂ, ಅವರಿಗೆ ಅಧಿಕೃತವಾಗಿ ಕನ್ನಡ ಮಾತೃಭಾಷೆ ಬಗ್ಗೆಯೂ ಹೆಚ್ಚು ಆಸಕ್ತಿ ಮತ್ತು ಶ್ರದ್ಧೆ ಬರುವಂತೆ ಕನ್ನಡವನ್ನೂ ಕಲಿಸುವುದಕ್ಕೆ ಜಿಲ್ಲಾ ಶಿಕ್ಷಣ ಇಲಾಖೆ ವ್ಯವಸ್ಥೆ ಮಾಡಿದೆ. ಬರೀ ಇಂಗ್ಲಿಷ್‌ ವ್ಯಾಮೋಹ ಸಲ್ಲದು, ಬದಲಿಗೆ ಕನ್ನಡ-ಇಂಗ್ಲಿಷ್‌ ಎರಡೂ ಭಾಷೆಗಳಲ್ಲೂ ಈ ಮಕ್ಕಳು ಹೆಚ್ಚು ಜ್ಞಾನ ಪಡೆಯಬೇಕು. ಅದಕ್ಕಾಗಿ ಶಿಕ್ಷಕರಿಗೆ ಈ ವಿಚಾರವಾಗಿ ಮೊದಲೇ ಹೇಳಿದ್ದೇವೆ ಎನ್ನುತ್ತಾರೆ ಧಾರವಾಡದ ಡಿಡಿಪಿಐ ಗಜಾನನ ಮನ್ನಿಕೇರಿ.

ಆಂಗ್ಲ ಮಾಧ್ಯಮಕ್ಕೆ ಮುನ್ನುಡಿ ಬರೆದ ಶಾಲೆಗಳು: ಧಾರವಾಡ ನಗರದ ಕಮಲಾಪೂರ ಸರ್ಕಾರಿ ಶಾಲೆ, ಕರಡಿಗುಡ್ಡ,ಲೋಕೂರು,ಕುರುಬಗಟ್ಟಿ, ನವಲೂರು, ಧಾರವಾಡದ ಟಿಟಿಐ ಉರ್ದುಶಾಲೆ ಸೇರಿ ಒಟ್ಟು 6 ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ ತರಗತಿ ಆರಂಭಗೊಳ್ಳಲಿವೆ. ಹುಬ್ಬಳ್ಳಿಯಲ್ಲಿ 10 ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ ತರಗತಿ ಆರಂಭಗೊಂಡಿದ್ದು, ಆನಂದನಗರ ಸರ್ಕಾರಿ ಶಾಲೆ, ನವನಗರ, ನಾಗಶೆಟ್ಟಿಕೊಪ್ಪ, ಬೈರಿದೇವರಕೊಪ್ಪ, ಗೋಪನಕೊಪ್ಪ, ಉಣಕಲ್, ಕಸಬಾಪೇಟ್ ಉರ್ದುಶಾಲೆ, ನೇಕಾರ ನಗರ, ನಂ.10 ಬಿಡ್ನಾಳ, ಎಸ್‌.ಎಂ.ಕೃಷ್ಣ ನಗರ ಉರ್ದುಶಾಲೆ ಸೇರಿವೆ.

ಕಲಘಟಗಿ ತಾಲೂಕಿನ 4 ಕಡೆಗಳಲ್ಲಿ ಬಮ್ಮಿಗಟ್ಟಿ, ಬೀರವಳ್ಳಿ, ಬೆಲವಂತರ, ಕುರುವಿನಕೊಪ್ಪ ಗ್ರಾಮದ ಶಾಲೆಗಳು ಸೇರಿವೆ. ಇನ್ನು ಕುಂದಗೋಳ ತಾಲೂಕಿನ ರಾಯನಾಳ, ಕುರುಡಿಕೇರಿ, ಗುಡಗೇರಿ ಮತ್ತು ಕುಂದಗೋಳ ಪಟ್ಟಣದ ಜಿಎಚ್ಎಸ್‌ ಶಾಲೆ ಸೇರಿದೆ. ಇನ್ನು ನವಲಗುಂದ ತಾಲೂಕಿನ ಅಣ್ಣಿಗೇರಿ, ಶಲವಡಿ, ಅಮರಗೋಳ ಮತ್ತು ನವಲಗುಂದ ಪಟ್ಟಣದ ಉರ್ದು ಶಾಲೆಯಲ್ಲಿ ಇಂಗ್ಲಿಷ್‌ ತರಗತಿಗಳು ಆರಂಭಗೊಳ್ಳಲಿವೆ.

ಕನ್ನಡ ಮತ್ತು ಇಂಗ್ಲಿಷ್‌ ಎರಡೂ ಭಾಷೆನೂ ಅಗತ್ಯ. ಆದ್ರ ಖಾಸಗಿ ಇಂಗ್ಲಿಷ್‌ ಶಾಲೆಗಳಲ್ಲಿ ಸಾವಿರಾರು ರೂ. ಹಣ ಕೊಟ್ಟು ನಮ್ಮ ಮಕ್ಕಳಿಗೆ ಇಂಗ್ಲಿಷ್‌ ಕಲಿಸೋದು ಕಷ್ಟವಾಗಿತ್ತು. ಸರ್ಕಾರವೇ ಇಂಗ್ಲಿಷ್‌ ಕಲಿಸುತ್ತಿರುವುದು ಉತ್ತಮ ವಿಚಾರ.
• ಅನೀಲ ಮೆಣಸಿನಕಾಯಿ,ಉಣಕಲ್ ನಿವಾಸಿ

ಜಿಲ್ಲೆಯಲ್ಲಿ ಇಂಗ್ಲಿಷ್‌ ಮಾಧ್ಯಮದ ಕಲಿಕೆಗೆ ಪೋಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆಯ್ದ 28 ಶಾಲೆಗಳಲ್ಲೂ ಪೋಷಕರು ತಮ್ಮ ಮಕ್ಕಳನ್ನು ಇಂಗ್ಲಿಷ್‌ ಮಾಧ್ಯಕ್ಕೆ ಕಳುಹಿಸುವುದಕ್ಕೆ ಉತ್ಸುಕತೆ ತೋರಿಸುತ್ತಿದ್ದಾರೆ. ಶೇ.70 ಪ್ರವೇಶಾತಿ ಮುಗಿದಿದ್ದು ಇನ್ನೊಂದು ವಾರದಲ್ಲಿ ತರಗತಿಗಳು ಪೂರ್ಣ ಪ್ರಮಾಣದಲ್ಲಿ ಆರಂಭಗೊಳ್ಳಲಿವೆ.
• ಗಜಾನನ ಮನ್ನಿಕೇರಿ,ಡಿಡಿಪಿಐ, ಧಾರವಾಡ

ಟಾಪ್ ನ್ಯೂಸ್

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

1-qweqweqw

Chennai ಅಪಾರ್ಟ್‌ಮೆಂಟ್‌ನ ಟಿನ್ ರೂಫ್‌ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ

1-weweqwe

Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು

Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.