Udayavni Special

ಧರ್ಮಾಚರಣೆಯಿಂದ ಜೀವನದಲ್ಲಿ ಚೈತನ್ಯ: ನರೇಗಲ್ಲ  ಶ್ರೀ


Team Udayavani, Jul 15, 2018, 4:53 PM IST

15-july-25.jpg

ಗದಗ: ಪ್ರತಿಯೊಬ್ಬರೂ ತನ್ನ ಸುಖಕ್ಕಾಗಿ ತನ್ನ ಒಳತಿಗಾಗಿ ಧರ್ಮಾಚರಣೆ ಮಾಡಿದರೆ ಧರ್ಮದ ವಿವಿಧ ಅನುಭವವಾಗಿ ಅವನ ಜೀವನ ಚೈತನ್ಯ ಪೂರ್ವಕವಾಗಿರುವುದು. ಅದಕ್ಕಾಗಿ ಶ್ರದ್ಧೆ, ಭಕ್ತಿಯಿಂದ ಧರ್ಮಾಚರಣೆ ಮಾಡಿದರೆ ನಿತ್ಯ ಜೀವನದಲ್ಲಿ ಚೈತನ್ಯ ಕಾಣಬಹುದು ಎಂದು ನರೇಗಲ್ಲ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯರು ಸ್ವಾಮೀಜಿ ಅಭಿಪ್ರಾಯಪಟ್ಟರು. ಜ. ಪಂಚಾಚಾರ್ಯ ಸೇವಾ ಸಂಘದಿಂದ ನಗರದ ಪಂಚಾಚಾರ್ಯರ ಮಾಂಗಲ್ಯ ಮಂದಿರದಲ್ಲಿ ಇತ್ತೀಚೆಗೆ ನಡೆದ ಅಮೃತ ವಾಹಿನಿ-53ರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

‘ಧರ್ಮೋ ರಕ್ಷಿತಿಃ, ರಕ್ಷಿತಾಹಃ’ ಎಂಬಂತೆ ನಾವು ಧರ್ಮವನ್ನು ರಕ್ಷಿಸಿದರೆ, ಧರ್ಮ ನಮ್ಮನ್ನು ರಕ್ಷಿಸುತ್ತದೆ. ಧರ್ಮದ ಅರ್ಥ ಬಹಳ ವಿಶಾಲವಾಗಿದೆ. ಧರ್ಮ ಎಂದರೆ ಜಾತಿಯಲ್ಲ. ನಮ್ಮ ಜೀವನ, ಸುಖ ಹಾಗೂ ಸಮಾಜದ ಹಿತಕ್ಕಾಗಿ ನಾವೇ ಹಾಕಿಕೊಂಡಿರುವ ಹಲವಾರು ಕಟ್ಟುಪಾಡುಗಳು. ಆಚರಣೆ, ಸಂಪ್ರದಾಯಗಳು ನಮ್ಮನ್ನು ನಿಯಂತ್ರಿಸುತ್ತವೆ. ಇದರಿಂದ ಜೀವನದಲ್ಲಿ ನೆಮ್ಮದಿ ಕಾಣಲು ಸಾಧ್ಯವಾಗುತ್ತದೆ ಎಂದರು.

ಸಕಲ ಜೀವಾತ್ಮಕ್ಕೆ ಲೇಸನ್ನೇ ಬಯಸುವ ವೀರಶೈವ ಧರ್ಮ ಮಾನವ ಧರ್ಮವನ್ನು ಎತ್ತಿ ಹಿಡಿದಿದೆ. ಸರ್ವ ಜನಾಂಗಕ್ಕೂ ಅನ್ವಯಿಸುವ ಧರ್ಮದ ಸೂತ್ರಗಳನ್ನು ಸಿದ್ಧಾಂತ ಶಿಖಾಮಣಿಯಲ್ಲಿ ತಿಳಿಸಲಾಗಿದೆ. ನಮ್ಮ ಮನೆ, ಹೊಲಗಳ ರಕ್ಷಣೆಗಾಗಿ ಬೇಲಿಯನ್ನು ಹಾಕಿಕೊಳ್ಳುತ್ತೇವೆ. ಆದರಿಂದ ನಮ್ಮ ಬೌದ್ಧಿಕ ಬದುಕು ರಕ್ಷಣೆಗೆ, ಶಾಂತಿ, ನೆಮ್ಮದಿ ಕಾಣಲು ಧರ್ಮಾಚರಣೆ ಎಂಬ ಬೇಲಿಯನ್ನು ನಿರ್ಮಿಸಿಕೊಳ್ಳಬೇಕು ಎಂದು ಹೇಳಿದರು.

ಶೋಭಾ ಗಾಳಿ ಮಾತನಾಡಿ, ಜೀವನದಲ್ಲಿ ಸದ್ಗುಣ, ಸದಾಚಾರಗಳೊಂದಿಗೆ ಜೀವನ ಕಟ್ಟಿಕೊಳ್ಳಬೇಕು. ಮನುಷ್ಯತ್ವದ ಇತಿಮಿತಿಗಳಿಂದ ಬದುಕುವುದೇ ಧರ್ಮ. ಮಾನವ ನಿರ್ಮಿತ ಜಾತಿ, ಮತ, ಅನಂತ. ಜನರ ಆಚಾರ, ವಿಚಾರ ಹಾಗೂ ಸಂಪ್ರದಾಯ, ಪದ್ಧತಿಗಳು ಭಿನ್ನವಾಗಿದ್ದರೂ, ಎಲ್ಲ ಧರ್ಮಗಳ ಸಾರ ಒಂದೇ ಎಂದು ವಿವರಿಸಿದರು.

ಇದೇ ವೇಳೆ ರೋಟರಿ ಸೆಂಟ್ರಲ್‌ ಕ್ಲಬ್‌ನ ನೂತನ ಅಧ್ಯಕ್ಷ ಮಂಜುನಾಥ ಬೇಲೇರಿ, ರೋಟರಿ ಸೆಂಟ್ರಲ್‌ ಕ್ಲಬ್‌ ಕಾರ್ಯದರ್ಶಿ ದಶರಥರಾಜ ಕೊಳ್ಳಿ, ಉದ್ಯಮಿ ಅಶೋಕ ಹೊನ್ನಳ್ಳಿ ದಂಪತಿಯನ್ನು ಸನ್ಮಾನಿಸಲಾಯಿತು. ಬಳಿಕ ಮಲ್ಲಯ್ಯಸ್ವಾಮಿ ಹಿರೇಮಠ ಸಂಗಡಿಗರು ಭಕ್ತಿ ಸಂಗೀತ ಸುಧೆ ಹರಿಸಿದರು. ಚನಬಸಯ್ಯ ಹೇಮಗಿರಿಮಠ, ಬಸಣ್ಣ ಮಲ್ಲಾಡದ, ಚಂದ್ರು ಬಾಳಿಹಳ್ಳಿಮಠ, ವಿ.ಕೆ. ಗುರುಮಠ, ಪ್ರಕಾಶ ಬೇಲಿ, ಉಮಾಪತಿ ಭೂಸನೂರಮಠ, ಮಲ್ಲಿಕಾರ್ಜುನ ಶಿಗ್ಲಿ, ಸದಾನಂದ ಹೊನ್ನಳ್ಳಿ, ಎಂ.ಸಿ.ಐಲಿ, ಬಸವರಾಜ ಕೂಗು, ಪಂಚಾಕ್ಷರಯ್ಯ ಹಿರೇಮಠ, ವಿ.ಎಲ್‌. ಪಾಟೀಲ ಇದ್ದರು.

ಟಾಪ್ ನ್ಯೂಸ್

fgfytr6

ಐಷಾರಾಮಿ ಮಲ್ಟಿಪ್ಲೆಕ್ಸ್ ಗೆ ವಿಜಯ್ ದೇವರಕೊಂಡ ಒಡೆಯ  

ಉಳ್ಳಾಲ : ರಸ್ತೆ ದಾಟುವ ವೇಳೆ ಕಾರಿನಡಿ ಬಿದ್ದ ಬಾಲಕ ಪವಾಡಸದೃಶ ಪಾರು

ಉಳ್ಳಾಲ : ರಸ್ತೆ ದಾಟುವ ವೇಳೆ ಕಾರಿನಡಿ ಬಿದ್ದ ಬಾಲಕ ಪವಾಡಸದೃಶ ಪಾರು

hyt

ಹುಬ್ಬಳ್ಳಿ: ಅರಣ್ಯ ಇಲಾಖೆ ನಿದ್ದೆಗೆಡಿಸಿದ ಚಿರತೆ

ಚಾಲಕನ ನಿಯಂತ್ರಣ ತಪ್ಪಿ ಮೋರಿಗೆ ಢಿಕ್ಕಿ ಹೊಡೆದ ಕಾರು : ಮೂವರಿಗೆ ಗಾಯ

ಕೊಪ್ಪಲಂಗಡಿ : ಚಾಲಕನ ನಿಯಂತ್ರಣ ತಪ್ಪಿ ಮೋರಿಗೆ ಢಿಕ್ಕಿ ಹೊಡೆದ ಕಾರು ; ಮೂವರಿಗೆ ಗಾಯ

ಇಸ್ಲಾಂಗೆ ವಿರುದ್ಧವೆಂದು ಐಪಿಎಲ್ ಪ್ರಸಾರಕ್ಕೆ ನಿಷೇಧ ಹೇರಿದ ಅಫ್ಘಾನ್ ನ ತಾಲಿಬಾನ್ ಸರ್ಕಾರ

ಇಸ್ಲಾಂಗೆ ವಿರುದ್ಧವೆಂದು ಐಪಿಎಲ್ ಪ್ರಸಾರಕ್ಕೆ ನಿಷೇಧ ಹೇರಿದ ಅಫ್ಘಾನ್ ನ ತಾಲಿಬಾನ್ ಸರ್ಕಾರ

ನವಜೋತ್ ಸಿಧು ಪಾಕ್ ಪ್ರೇಮಿ, ದೇಶದ್ರೋಹಿ: ಸಿಂಗ್ ಆರೋಪಕ್ಕೆ ಸೋನಿಯಾ, ರಾಹುಲ್ ಮೌನವೇಕೆ?

ನವಜೋತ್ ಸಿಧು ಪಾಕ್ ಪ್ರೇಮಿ, ದೇಶದ್ರೋಹಿ: ಸಿಂಗ್ ಆರೋಪಕ್ಕೆ ಸೋನಿಯಾ, ರಾಹುಲ್ ಮೌನವೇಕೆ?

ಮೂಲಸೌಕರ್ಯಗಳ ಕೊರತೆ ಮತ್ತು ನವೀಕರಣ ಮಾಡದ ಹಿನ್ನೆಲೆ : ಅಧಿಕಾರಿಗಳಿಂದ ಸಿಟಿ ಆಸ್ಪತ್ರೆಗೆ ಬೀಗ

ಮೂಲಸೌಕರ್ಯಗಳ ಕೊರತೆ : ಅಧಿಕಾರಿಗಳಿಂದ ಗಂಗಾವತಿಯ ಸಿಟಿ ಆಸ್ಪತ್ರೆಗೆ ಬೀಗ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

hyt

ಹುಬ್ಬಳ್ಳಿ: ಅರಣ್ಯ ಇಲಾಖೆ ನಿದ್ದೆಗೆಡಿಸಿದ ಚಿರತೆ

hftyrty

ಕೇಂದ್ರೀಯ ವಿದ್ಯಾಲಯದ ಸನಿಹ ಪ್ರತ್ಯಕ್ಷವಾದ ಚಿರತೆ

fgrt55r

ಬಳಕೆಯಾಗದ ಕೋಟಿ ವೆಚ್ಚದ ಸಿಮ್ಯುಲೇಟರ್‌

fgtyht

ಧಾರವಾಡ: ಅನ್ನದ ಬಟ್ಟಲಿಗೆ ನಶೆ ಪೀಡೆಯ ಹುಣ್ಣು| ಗಾಂಜಾ ಬೆಳೆ ಅವ್ಯಾಹತ

2 ಲಕ್ಷ ಮೊತ್ತದ ಅಕ್ರಮ ಗಾಂಜಾ ಬೆಳೆ ಪತ್ತೆ; ಮೂವರು ಆರೋಪಿಗಳ ಬಂಧನ

2 ಲಕ್ಷ ಮೊತ್ತದ ಅಕ್ರಮ ಗಾಂಜಾ ಬೆಳೆ ಪತ್ತೆ; ಮೂವರು ಆರೋಪಿಗಳ ಬಂಧನ

MUST WATCH

udayavani youtube

ಹೆಚ್ಚುತ್ತಿರುವ ಮಧುಮೇಹ ಪ್ರಕರಣಗಳು: ಇದಕ್ಕೆ ಕಾರಣವೇನು?

udayavani youtube

ಗಿಡಗಳಿಗೆ “ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಕಾರು ಖರೀದಿಸಿ ತರುತ್ತಿದ್ದ ವೇಳೆ ಅಗ್ನಿ ಅವಘಡ ಕಣ್ಣೆದುರೇ ಹೊತ್ತಿ ಉರಿದ ಕಾರು

udayavani youtube

ನದಿಗೆ ಹಾರಿ ಎರಡು ದಿನ ಕಳೆದರೂ ಪತ್ತೆಯಾಗದ ದೇಹ : ಶೋಧ ಕಾರ್ಯ ಮುಂದುವರಿಕೆ

udayavani youtube

ಚರಣ್ ಜಿತ್ ಸಿಂಗ್ ಛನ್ನಿ ಪಂಜಾಬ್ ನೂತನ ಮುಖ್ಯಮಂತ್ರಿ|UDAYAVANI NEWS BULLETIN|19/9/2021

ಹೊಸ ಸೇರ್ಪಡೆ

Traffic problem

ಟ್ರಾಫಿಕ್‌ ಸಮಸ್ಯೆಗೆ ಪರಿಹಾರ ಯಾವಾಗ?

protest

ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ವರ್ಗಾವಣೆ ವಿಳಂಬ ಖಂಡಿಸಿ ಧರಣಿ

hasana news

ಪದವೀಧರರ ಕ್ಷೇತ್ರಕ್ಕೆಆಕಾಂಕ್ಷಿಗಳ ಸಿದ್ಧತೆ

hugara

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇಲಾಖೆ ಬೆಳಗಾವಿ ವಲಯದ ಜಂಟಿ ನಿರ್ದೇಶಕರಿಂದ ಅಧಿಕಾರ ಸ್ವೀಕಾರ

chikkaballapura news

ಮೇಕೆದಾಟು ಯೋಜನೆ ಶೀಘ್ರ ಪ್ರಾರಂಭಿಸಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.