ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್‌ ಬೃಹತ್‌ ಪ್ರತಿಭಟನೆ 


Team Udayavani, May 28, 2018, 5:23 PM IST

28-may-21.jpg

ಬಾಗಲಕೋಟೆ: ಕೇಂದ್ರದ ಬಿಜೆಪಿ ಸರ್ಕಾರ ಮಹಿಳೆ ಮತ್ತು ರೈತರ ವಿರೋ  ಅಲ್ಲದೇ ಅಗತ್ಯ ವಸ್ತುಗಳಾದ ಪೆಟ್ರೋಲ್‌, ಡಿಜೈಲ್‌, ಅಡುಗೆ ಅನಿಲದ ಬೆಲೆ ಏರಿಕೆಯನ್ನು ಖಂಡಿಸಿ ಜಿಲ್ಲಾ ಮಹಿಳಾ ಕಾಂಗ್ರೆಸ್‌ ಘಟಕದಿಂದ ಪ್ರತಿಭಟನೆ ನಡೆಸಿದರು.

ರವಿವಾರ ಜಿಲ್ಲಾ ಮಹಿಳಾ ಕಾಂಗ್ರೆಸ್‌ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಿವಿಧ ಘೋಷಣೆಗಳನ್ನು ಕೂಗುತ್ತಾ ನಗರದದ ಬಸವೇಶ್ವರ ವೃತ್ತಕ್ಕೆ ಆಗಮಿಸಿದ ಮಹಿಳೆಯರು ರಸ್ತೆಯೇ ಮದ್ಯದಲ್ಲೇ ಒಲೆ ಹಚ್ಚಿ ಅಡುಗೆ ಮಾಡಿ ಬೆಲೆ ಏರಿಕೆ ನೀತಿ ಖಂಡಿಸಿದರು. 

ಮಹಿಳಾ ಕಾಂಗ್ರೆಸ್‌ ಜಿಲ್ಲಾಧ್ಯಕ್ಷೆ ರಕ್ಷಿತಾ ಈಟಿ ಮಾತನಾಡಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರದ ಪೆಟ್ರೋಲ್‌, ಡೀಸೆಲ್‌, ಅಡುಗೆ ಅನಿಲದ ಬೆಲೆ ಏರಿಕೆ ತಡೆಯುವಲ್ಲಿ ನರೇಂದ್ರ ಮೋದಿ ಅವರು ವಿಫಲರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರಕಾರ ಚುನಾವಣೆಯಲ್ಲಿ ನೀಡಿದ್ದ ಎಲ್ಲ ಭರವಸೆಗಳು ಸುಳ್ಳಾಗಿದ್ದು,
ಬೇಟಿ ಬಚಾವೋ ಬೇಟಿ ಪಡಾವೋ ಕೇವಲ ಹೆಸರಿಗಷ್ಟೇ ಆಗಿದೆ. ಅಡುಗೆ ಅನಿಲ ಬೆಲೆ ಏರಿಕೆಯಿಂದಾಗಿ ಇಂದು ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳು ಕಾಲೇಜುಗಳತ್ತ ಬರುವುದನ್ನು ನಿಲ್ಲಿಸಿ ಮನೆಯಲ್ಲಿಯೇ ಅಡುಗೆ ಕಾರ್ಯಗಳಿಗೆ ಸೀಮಿತವಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.

ಪ್ರಧಾನಿ ನರೇಂದ್ರ ಮೋದಿಯವರ ಸರಕಾರ ಅಧಿಕಾರಕ್ಕೆ ಬರುವ ಮುನ್ನ ನೀಡಿದ್ದ ಒಂದೇ ಒಂದು ಭರವಸೆಯನ್ನು ಈಡೇರಿಸಿಲ್ಲ. ಕೇವಲ ವಿದೇಶ ಪ್ರಯಾಣದಲ್ಲಿ ಕಾಲಹರಣ ಮಾಡುತ್ತ ರಾಷ್ಟ್ರದ ಜನತೆಗೆ ಬೆಲೆ ಏರಿಕೆಯ ಬಿಸಿಯನ್ನು ಮುಟ್ಟಿಸುತ್ತಿದ್ದಾರೆ. ವಿದೇಶದಲ್ಲಿರುವ ಕಪ್ಪು ಹಣ ತರುವುದಾಗಿ ಹೇಳಿದ್ದ ಪ್ರಧಾನಿಯವರು ಒಂದೇ-ಒಂದು ನಯಾಪೈಸೆ ಸಹ ತರಲಿಕ್ಕೆ ಆಗಲಿಲ್ಲ. ಬಡವರ ಖಾತೆಗೆ 15 ಲಕ್ಷ ನೀಡುವ ಭರವಸೆಯೂ ಬಡವರ ಖಾತೆಗೆ 15 ಪೈಸೆಯೂ ಜಮಾ ಆಗಲಿಲ್ಲ. ವೈರಿ ದೇಶ ಪಾಕಿಸ್ತಾನಕ್ಕೆ ಅದರದೆ ಮಾದರಿಯಲ್ಲಿ ತಕ್ಕ ಉತ್ತರ ನೀಡುತ್ತೇನೆ ಎಂದವರು ಅದೇ ರಾಷ್ಟ್ರದಿಂದ ಸಕ್ಕರೆ ಆಮದು ಮಾಡಿಕೊಳ್ಳುತ್ತಿದ್ದಾರೆ. ಒಟ್ಟಾರೆ ಎಲ್ಲ ರಂಗಗಳಲ್ಲೂ ಎನ್‌ಡಿಎ ಸರಕಾರ ಸಂಪುರ್ಣ ವೈಫಲ್ಯ ಕಂಡಿದೆ ಎಂದು ಟೀಕಿಸಿದ ಅವರು, ಮಹದಾಯಿ ನದಿ ನೀರಿನ ಸಮಸ್ಯೆ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸದೇ ರೈತ ವಿರೋ ಧಿ ಧೋರಣೆ ತಳೆದಿರುವುದನ್ನು ಖಂಡಿಸಿದರು.

ಪಕ್ಷದ ಜಿಲ್ಲಾ ವಕ್ತಾರ ಆನಂದ ಜಿಗಜಿನ್ನಿ ಮಾತನಾಡಿ, ಕೇಂದ್ರದ ಎನ್‌ಡಿಎ ಸರಕಾರ ಕೇವಲ ಬೆಲೆ ಏರಿಕೆಯನ್ನು ತನ್ನ ಸಾಧನೆಯನ್ನು ಬಣ್ಣಿಸುತ್ತಿದೆ. ಬಡವರ, ರೈತರ, ದೀನ ದಲಿತರ ವಿರೋಧಿ ಯಾಗಿದ್ದು, ಯುವಕರಿಗೆ ಉದ್ಯೋಗ ಸೃಷ್ಟಿಸುವುದಾಗಿ ನೀಡಿದ್ದ ಭರವಸೆ ಕೇವಲ ಭರವಸೆಯಾಗಿಯೇ ಉಳಿದಿದೆ ಎಂದರು.

ಕೇಂದ್ರ ಸರಕಾರದ ವಿರುದ್ಧ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಧಿ ಕ್ಕಾರ ಕೂಗಿದರು. ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಮಂಜುನಾಥ ವಾಸನದ, ಭರತ ಈಟಿ, ನಾಗರಾಜ ಹದ್ಲಿ, ರಾಜು ಮನ್ನಿಕೇರಿ, ನಗರಸಭೆ ಸದಸ್ಯರಾದ ಹನಮಂತ ರಾಕುಂಪಿ, ಮಹಾಬೂಬ್ಬಿ ತುರೇದ, ಜಿಪಂ ಸದಸ್ಯೆ ಹನಮವ್ವ ಕರಿಹೊಳಿ, ಸರಸ್ವತಿ ಈಟಿ, ಮಮತಾಜ ಸೌದಾಗರ, ಮಂಜುಳಾ ಭೂಸಾರೆ, ಜಮೇಲಾ ಮನಿಯಾರ, ಅನ್ನಪೂರ್ಣ ಜುಮನಾಳ, ಜಯಾ, ವೀರೇಶ ಹುಂಡೇಕಾರ, ಮುತ್ತು ಜೋಳದ, ಡಾ.ಎ.ಡಿ.ನದಾಫ್‌, ನೂರ ಪಟ್ಟೆವಾಲೆ, ಸುವರ್ಣ ಗೌಡರ ಸೇರಿದಂತೆ ಮಹಿಳಾ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಟಾಪ್ ನ್ಯೂಸ್

bjp-tmc

ತ್ರಿಪುರಾ ನಗರ ಪಂಚಾಯತ್ ಚುನಾವಣೆ : ಬಿಜೆಪಿಗೆ ಸಿಹಿ, ಟಿಎಂಸಿಗೆ ಕಹಿ

ಹೆರಿಗೆ ನೋವಿನ ನಡುವೆಯೂ ಸೈಕಲ್ ನಲ್ಲೇ ಆಸ್ಪತ್ರೆಗೆ ತೆರಳಿ ಮಗುವಿಗೆ ಜನ್ಮ ನೀಡಿದ ಸಂಸದೆ

ಹೆರಿಗೆ ನೋವಿನ ನಡುವೆಯೂ ಸೈಕಲ್ ನಲ್ಲೇ ಆಸ್ಪತ್ರೆಗೆ ತೆರಳಿ ಮಗುವಿಗೆ ಜನ್ಮ ನೀಡಿದ ಸಂಸದೆ

1-asasa

4.2 ಕಿ.ಮೀ. ಸೈಕಲ್ ಚಾಲನೆ ಮಾಡಿದ ಸಚಿವ ಅಶ್ವತ್ಥ ನಾರಾಯಣ

dks

ಇಸ್ರೋ ಸ್ಥಳಾಂತರ: ಪ್ರಧಾನಿ ಮತ್ತು ಸಿಎಂಗೆ ಡಿಕೆಶಿ ಬರೆದ ಪತ್ರದ ಸಾರಾಂಶ

ಅಪ್ರಾಪ್ತ ವಯಸ್ಸಿನ ಬಾಲಕಿಗೆ ಕಿರುಕುಳ: ಪೋಕ್ಸೋ ಪ್ರಕರಣ ದಾಖಲು

ಅಪ್ರಾಪ್ತ ವಯಸ್ಸಿನ ಬಾಲಕಿಗೆ ಕಿರುಕುಳ: ಪೋಕ್ಸೋ ಪ್ರಕರಣ ದಾಖಲು

k s eshwarappa

ಯಾವುದೇ ಕಾರಣಕ್ಕೂ ರಮೇಶ್ ಜಾರಕಿಹೊಳಿ ಬಿಜೆಪಿಗೆ ಮೋಸ ಮಾಡಲ್ಲ: ಈಶ್ವರಪ್ಪ ಸಮರ್ಥನೆ

ಖಾಲಿ ಪತ್ರಕ್ಕೆ ಮೃತ ಅಜ್ಜಿಯ ಹೆಬ್ಬೆಟ್ಟಿನ ಒತ್ತಿಸಿಕೊಂಡ ಸಂಬಂಧಿಕರು! ವಿಡಿಯೋ ವೈರಲ್

ಖಾಲಿ ಪತ್ರಕ್ಕೆ ಮೃತ ಅಜ್ಜಿಯ ಹೆಬ್ಬೆಟ್ಟಿನ ಮುದ್ರೆ ಒತ್ತಿಸಿಕೊಂಡ ಸಂಬಂಧಿಕರು! ವಿಡಿಯೋ ವೈರಲ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಸ್ ಮತ್ತು ಕಾರಿನ ನಡುವೆ ಅಪಘಾತ: ಕಾರು ಚಾಲಕ ಸಾವು, ಇಬ್ಬರಿಗೆ ಗಾಯ

ಬಸ್ ಮತ್ತು ಕಾರಿನ ನಡುವೆ ಅಪಘಾತ: ಕಾರು ಚಾಲಕ ಸಾವು, ಇಬ್ಬರಿಗೆ ಗಾಯ

ರೈತರಿಗೆ ಸೂಕ್ತ ನೆರವು ನೀಡಲು ಸಿದ್ಧ: ದೇಸಾಯಿ

ರೈತರಿಗೆ ಸೂಕ್ತ ನೆರವು ನೀಡಲು ಸಿದ್ಧ: ದೇಸಾಯಿ

ಎಸ್‌ಡಿಎಂ ದೇಶದ ಪ್ರತಿಷ್ಠಿತ ಸಂಸ್ಥೆ: ಡಾ| ಹೆಗ್ಗಡೆ

ಎಸ್‌ಡಿಎಂ ದೇಶದ ಪ್ರತಿಷ್ಠಿತ ಸಂಸ್ಥೆ: ಡಾ| ಹೆಗ್ಗಡೆ

1-fdf

ಅಣ್ಣಿಗೇರಿಯ ಪಾರ್ಶ್ವನಾಥ ಬಸದಿಯಲ್ಲಿ ಪಾದಪೀಠ ಶಾಸನ ಪತ್ತೆ

ಮನೆ-ಬೆಳೆ ಹಾನಿ ಪರಿಶೀಲಿಸಿದ ನಿಂಬಣ್ಣವರ

ಮನೆ-ಬೆಳೆ ಹಾನಿ ಪರಿಶೀಲಿಸಿದ ನಿಂಬಣ್ಣವರ

MUST WATCH

udayavani youtube

ದಾಂಡೇಲಿ: ಗಬ್ಬು ನಾರುತ್ತಿದೆ ಸಂಡೆ ಮಾರ್ಕೆಟ್ ಹೊರ ಆವರಣ

udayavani youtube

ನೀರಿನಿಂದ ಮಲ್ಲಿಗೆ ಗಿಡವನ್ನು ಬೆಳೆಯಬಹುದೇ ?

udayavani youtube

ಎರೆಹುಳು ಸಾಕಾಣಿಕೆ ಮಾಡಿ ಭೂಮಿಯ ಫಲವತ್ತತೆ ಹೆಚ್ಚಿಸಿ, ಕೈತುಂಬಾ ಆದಾಯವೂ ಗಳಿಸಿ

udayavani youtube

ಬೆಂಗಳೂರಿನಿಂದ ಪಾಟ್ನಾಕ್ಕೆ 139 ಪ್ರಯಾಣಿಕರನ್ನು ಹೊತ್ತ ವಿಮಾನ ತುರ್ತು ಭೂಸ್ಪರ್ಶ

udayavani youtube

Shree Chamundeshwari Kshetra Arikodi

ಹೊಸ ಸೇರ್ಪಡೆ

Untitled-1

ತರಬೇತಿಯಲ್ಲಿ ವೃತ್ತಿ ನೈಪುಣ್ಯತೆ ಹೆಚ್ಚಿಸಿಕೊಳ್ಳಿ

bjp-tmc

ತ್ರಿಪುರಾ ನಗರ ಪಂಚಾಯತ್ ಚುನಾವಣೆ : ಬಿಜೆಪಿಗೆ ಸಿಹಿ, ಟಿಎಂಸಿಗೆ ಕಹಿ

ವಾರಸುದಾರರಿಗೆ ಪೊಲೀಸರಿಂದ ವಸ್ತು ಹಸ್ತಾಂತರ

ವಾರಸುದಾರರಿಗೆ ಪೊಲೀಸರಿಂದ ವಸ್ತು ಹಸ್ತಾಂತರ

16growers

ತೊಗರಿ ಬೆಳೆಗಾರರ ಸಹಾಯಕ್ಕೆ ಧಾವಿಸಿ

ಹೆರಿಗೆ ನೋವಿನ ನಡುವೆಯೂ ಸೈಕಲ್ ನಲ್ಲೇ ಆಸ್ಪತ್ರೆಗೆ ತೆರಳಿ ಮಗುವಿಗೆ ಜನ್ಮ ನೀಡಿದ ಸಂಸದೆ

ಹೆರಿಗೆ ನೋವಿನ ನಡುವೆಯೂ ಸೈಕಲ್ ನಲ್ಲೇ ಆಸ್ಪತ್ರೆಗೆ ತೆರಳಿ ಮಗುವಿಗೆ ಜನ್ಮ ನೀಡಿದ ಸಂಸದೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.