ಜ್ಞಾನವೊಂದೇ ಬದುಕಿನ ನಿಜವಾದ ಆಸ್ತಿ

| ಭ್ರಷ್ಟಾಚಾರದ ಬದುಕಿಗೆ ಮುಂದಾಗಬೇಡಿ | ಅನುಭವವೇ ಜೀವನದ ಶ್ರೇಷ್ಠ ಶಿಕ್ಷಕ: ಸುಧಾಮೂರ್ತಿ

Team Udayavani, Sep 1, 2019, 9:51 AM IST

huballi-tdy-4

ಹುಬ್ಬಳ್ಳಿ: ಹಣ, ಅಧಿಕಾರ, ಪದವಿಗಳು ಆಸ್ತಿಯಲ್ಲ. ಜ್ಞಾನವೇ ನಿಜವಾದ ಆಸ್ತಿ. ಜ್ಞಾನಕ್ಕಾಗಿ ಆಸಕ್ತಿ ಬೇಕು, ಕಠಿಣ ಪರಿಶ್ರಮ ಇರಬೇಕು. ಜ್ಞಾನದಿಂದ ಸಾಧನೆ ಸಾಧ್ಯ. ಯಾವುದೇ ಕಾರಣಕ್ಕೂ ಭ್ರಷ್ಟಾಚಾರ ಬದುಕಿಗೆ ಮುಂದಾಗಬೇಡಿ ಎಂದು ಇನ್ಫೋಸಿಸ್‌ ಪ್ರತಿಷ್ಠಾನದ ಮುಖ್ಯಸ್ಥೆ ಡಾ| ಸುಧಾಮೂರ್ತಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ಹಣ ಮತ್ತು ಪದವಿಗಳಿಂದ ಆತ್ಮವಿಶ್ವಾಸ ಖರೀದಿ ಮಾಡಲು ಸಾಧ್ಯವಿಲ್ಲ. ಆತ್ಮವಿಶ್ವಾಸ ನಾವೇ ರೂಪಿಸಿಕೊಳ್ಳಬೇಕು. ನಮ್ಮ ಬದುಕಿನಲ್ಲಿ ಸರಿ ಯಾವುದು, ತಪ್ಪು ಯಾವುದು ಎಂಬುದನ್ನು ನಿರ್ಧರಿಸುವುದೇ ಆತ್ಮವಿಶ್ವಾಸವಾಗಿದೆ. ಆತ್ಮವಿಶ್ವಾಸವೇ ನಮ್ಮ ಭವಿಷ್ಯ ನಿರ್ಧರಿಸುತ್ತದೆ ಎಂದರು.

ಪದವಿ ಪಡೆದ ನೀವೆಲ್ಲರೂ ಇದೀಗ ದೊಡ್ಡ ವಿಶ್ವಕ್ಕೆ ಪ್ರವೇಶ ಪಡೆಯುತ್ತಿದ್ದೀರಿ. ಇಲ್ಲಿ ಪಠ್ಯ, ಶಿಕ್ಷಕರು, ಪರೀಕ್ಷೆ ದಿನಾಂಕ ಇರದು. ಆದರೆ, ಅನುಭವವೇ ಜೀವನದ ಶ್ರೇಷ್ಠ ಶಿಕ್ಷಕನಾಗುತ್ತಾನೆ. ಜೀವನದಲ್ಲಿ ಏರಿಳಿತಗಳು ಸಾಮಾನ್ಯ. ಏರಿಳಿತ ನಿರ್ವಹಿಸುವ ಶಕ್ತಿ ಪ್ರತಿಯೊಬ್ಬರಿಗೂ ಇರಬೇಕು. ಬದುಕಿನಲ್ಲಿ ಹಣ ಸೀಮಿತ ಮಾತ್ರ. ಅದೇ ಬದುಕಲ್ಲ. ಸಕಾರಾತ್ಮಕವಾಗಿ ಚಿಂತಿಸಿ ಮುನ್ನಡೆದಲ್ಲಿ ಬದುಕು ಸಂತೋಷಮಯವಾಗಿರುತ್ತದೆ. ಪರೋಪಕಾರ ಮತ್ತು ಪರಸ್ಪರರನ್ನು ಪ್ರೀತಿಸುವ ಗುಣ ಹೊಂದಬೇಕಾಗಿದೆ ಎಂದು ಕಿವಿಮಾತು ಹೇಳಿದರು.

ಕಂಪೆನಿಗಳು ತನಗೆ ಉತ್ತಮ ಆಸ್ತಿ ಆಗಬಲ್ಲ ಮಾನವ ಸಂಪನ್ಮೂಲವನ್ನು ನೋಡುತ್ತವೆ. ಅಂತಹವರಿಗೆ ಉದ್ಯೋಗಾವಕಾಶ ನೀಡುತ್ತದೆ ಎಂಬುದನ್ನು ವಿದ್ಯಾರ್ಥಿಗಳು ಅರಿಯಬೇಕೆಂದರು.

ಕೆಎಲ್ಇ ತಾಂತ್ರಿಕ ವಿವಿ ಕುಲಪತಿ ಡಾ| ಅಶೋಕ ಶೆಟ್ಟರ ವಿವಿಯ ಸಾಧನೆ ಕುರಿತಾಗಿ ವಿವರಿಸಿದರು. ಇಂದಿನ ಘಟಿಕೋತ್ಸವದಲ್ಲಿ ಸುಮಾರು 1062 ಪದವಿ ವಿದ್ಯಾರ್ಥಿಗಳು ಹಾಗೂ 186 ಸ್ನಾತಕೋತ್ತರ ವಿದ್ಯಾರ್ಥಿಗಳು ಪದವಿ ಪಡೆಯುತ್ತಿದ್ದು, ವಿವಿಯ ಮೊದಲ ತಂಡ ಇದಾಗಿದೆ. ಬಿವಿಬಿ ಎಂಜಿನಿಯರಿಂಗ್‌ ಕಾಲೇಜು ಇದೀಗ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯವಾಗಿದ್ದು, ರಾಷ್ಟ್ರ-ಅಂತಾರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆಯುವ ಸಾಧನೆ ತೋರಿದೆ ಎಂದು ವಿವರಿಸಿದರು.

ಎಂಐಟಿ ಗುರುತಿಸಿದ ಭವಿಷ್ಯದ ಎಂಜಿನಿಯರಿಂಗ್‌ ಶಿಕ್ಷಣದ ಜಾಗತಿಕ ನಾಯಕತ್ವದ ಐದು ಶಿಕ್ಷಣ ಸಂಸ್ಥೆಗಳ ಪಟ್ಟಿಯಲ್ಲಿ ಬಿವಿಬಿ-ಕೆಎಲ್ಇ ತಾಂತ್ರಿಕ ವಿವಿ ಒಂದಾಗಿದೆ. ಈ ಪಟ್ಟಿಯಲ್ಲಿ ಸ್ಥಾನ ಪಡೆದ ದೇಶದ ಏಕೈಕ ಸಂಸ್ಥೆ ಎಂಬುದು ಹೆಮ್ಮೆಯ ಸಂಗತಿ. ಅದೇ ರೀತಿ ಎಐಸಿಟಿ ಪರೀಕ್ಷಾ ಪದ್ಧತಿಯಲ್ಲಿ ಅನೇಕ ಸುಧಾರಣೆಗಳನ್ನು ತಂದಿದೆ. ಕೆಎಲ್ಇ ತಾಂತ್ರಿಕ ವಿವಿ ಪರೀಕ್ಷಾ ವ್ಯವಸ್ಥೆ ದೇಶದ ಅನೇಕ ವಿವಿಗಳಿಗೆ ಮಾದರಿಯಾಗಿದೆ ಎಂದರು.

ಉಕ ಸಾಮಾಜಿಕ, ಆರ್ಥಿಕ ಅಭಿವೃದ್ಧಿ ನಿಟ್ಟಿನಲ್ಲಿ ಕೆಎಲ್ಇ ತಾಂತ್ರಿಕ ವಿವಿ ತನ್ನದೇ ಕೊಡುಗೆಗೆ ಮುಂದಾಗಿದೆ. ನವೋದ್ಯಮ ಉತ್ತೇಜನಕ್ಕೆ ಆರಂಭಿಸಿರುವ ಇನ್‌ಕ್ಯುಬೇಷನ್‌ ಕೇಂದ್ರದಲ್ಲಿ 38 ಕಂಪೆನಿಗಳಿಗೆ ಅವಕಾಶ ನೀಡಲಾಗಿದ್ದು, 2 ಕಂಪೆನಿಗಳು 200 ಕೋಟಿಗೂ ಅಧಿಕ ವಹಿವಾಟು ನಡೆಸುತ್ತಿವೆ. 2ನೇ ಹಂತದ ನಗರಗಳಲ್ಲಿ ದೇಶಕ್ಕೆ ಮಾದರಿಯಾಗಿದೆ ಎಂದರು.

ರಾಜ್ಯಸಭಾ ಸದಸ್ಯ ಹಾಗೂ ಕೆಎಲ್ಇ ತಾಂತ್ರಿಕ ವಿವಿ ಕುಲಾಧಿಪತಿ ಡಾ| ಪ್ರಭಾಕರ ಕೋರೆ, ವಿವಿಯ ವಿವಿಧ ವಿಭಾಗಗಳ ಮುಖ್ಯಸ್ಥರು ಇದ್ದರು.

ಟಾಪ್ ನ್ಯೂಸ್

Kalaburagi; ಮತದಾನ ಮಾಡಿ ವಿಡಿಯೋ ವೈರಲ್ ಮಾಡಿದ ಚಿಂಚೋಳಿ ಮತದಾರ

Kalaburagi; ಮತದಾನ ಮಾಡಿ ವಿಡಿಯೋ ವೈರಲ್ ಮಾಡಿದ ಚಿಂಚೋಳಿ ಮತದಾರ

16-

ಮೂಡುಬಿದಿರೆ: ಹಿಟಾಚಿಗಳ ಬ್ಯಾಟರಿ ಕಳವು

yuzvendra Chahal

IPL 2024; ಹೊಸ ಭಾರತೀಯ ದಾಖಲೆ ಬರೆದ ಯುಜುವೇಂದ್ರ ಚಾಹಲ್

14-

Kundapura ಭಾಗದ ಅಪರಾಧ ಸುದ್ದಿಗಳು

ಮತ ಚಲಾವಣೆ ಮಾಡದಿದ್ದಕ್ಕೆ ಬೇಸರ ವ್ಯಕ್ತಪಡಿಸಿದ ಪದ್ಮಶ್ರೀ ಸುಕ್ರಿ ಗೌಡ

ಮತ ಚಲಾವಣೆ ಮಾಡದಿದ್ದಕ್ಕೆ ಬೇಸರ ವ್ಯಕ್ತಪಡಿಸಿದ ಪದ್ಮಶ್ರೀ ಸುಕ್ರಿ ಗೌಡ

13

Byndoor: ಬಾವಿಗೆ ಬಿದ್ದ ವ್ಯಕ್ತಿಯ ರಕ್ಷಣೆ

11-

Sulya: ಕಾರು-ಬೈಕ್‌ ಅಪಘಾತ; ಸವಾರನಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dharwad; ಮತದಾನಕ್ಕಾಗಿ ತವರಿಗೆ ಮರಳಿದ ವಿನಯ್ ಕುಲಕರ್ಣಿ; ಸಪ್ತಾಪೂರದಲ್ಲಿ ಕಿಕ್ಕಿರದ ಜನರು

Dharwad; ಮತದಾನಕ್ಕಾಗಿ ತವರಿಗೆ ಮರಳಿದ ವಿನಯ್ ಕುಲಕರ್ಣಿ; ಸಪ್ತಾಪೂರದಲ್ಲಿ ಕಿಕ್ಕಿರಿದ ಜನರು

ಕುಸಿದು ಬಿದ್ದ ಚುನಾವಣಾ ಸಿಬ್ಬಂದಿ: ಮತದಾನ ಮಾಡಲು ಬಂದ ಡಾ.ನಿತಿನ್‌ಚಂದ್ರ ಅವರಿಂದ ಚಿಕಿತ್ಸೆ

ಕುಸಿದು ಬಿದ್ದ ಚುನಾವಣಾ ಸಿಬ್ಬಂದಿ: ಮತದಾನ ಮಾಡಲು ಬಂದ ಡಾ.ನಿತಿನ್‌ಚಂದ್ರ ಅವರಿಂದ ಚಿಕಿತ್ಸೆ

11

Hubballi: ಒಂದೇ ಕುಟುಂಬದ 96 ಸದಸ್ಯರಿಂದ ಮತದಾನ

ಪ್ರಜ್ವಲ್ ಪ್ರಕರಣ ಸಿಬಿಐಗೆ ನೀಡಬೇಕೆಂಬ ಕೆಲವರ ಒತ್ತಾಯಕ್ಕೆ ನನ್ನ ಸಹಮತ ಇದೆ: ಜೋಶಿ

ಪ್ರಜ್ವಲ್ ಪ್ರಕರಣ ಸಿಬಿಐಗೆ ನೀಡಬೇಕೆಂಬ ಕೆಲವರ ಒತ್ತಾಯಕ್ಕೆ ನನ್ನ ಸಹಮತ ಇದೆ: ಜೋಶಿ

1-wqewqewqe

Hubli: ಇಲ್ಲಿ ಮತ ಚಲಾಯಿಸಿ ಬಂದವರಿಗೆ ಸಿಗುತ್ತೆ ಫ್ರೀ ಐಸ್ ಕ್ರೀಮ್!

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

Kalaburagi; ಮತದಾನ ಮಾಡಿ ವಿಡಿಯೋ ವೈರಲ್ ಮಾಡಿದ ಚಿಂಚೋಳಿ ಮತದಾರ

Kalaburagi; ಮತದಾನ ಮಾಡಿ ವಿಡಿಯೋ ವೈರಲ್ ಮಾಡಿದ ಚಿಂಚೋಳಿ ಮತದಾರ

16-

ಮೂಡುಬಿದಿರೆ: ಹಿಟಾಚಿಗಳ ಬ್ಯಾಟರಿ ಕಳವು

yuzvendra Chahal

IPL 2024; ಹೊಸ ಭಾರತೀಯ ದಾಖಲೆ ಬರೆದ ಯುಜುವೇಂದ್ರ ಚಾಹಲ್

14-

Kundapura ಭಾಗದ ಅಪರಾಧ ಸುದ್ದಿಗಳು

ಮತ ಚಲಾವಣೆ ಮಾಡದಿದ್ದಕ್ಕೆ ಬೇಸರ ವ್ಯಕ್ತಪಡಿಸಿದ ಪದ್ಮಶ್ರೀ ಸುಕ್ರಿ ಗೌಡ

ಮತ ಚಲಾವಣೆ ಮಾಡದಿದ್ದಕ್ಕೆ ಬೇಸರ ವ್ಯಕ್ತಪಡಿಸಿದ ಪದ್ಮಶ್ರೀ ಸುಕ್ರಿ ಗೌಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.