ಯುವ ಬ್ರಿಗೇಡ್‌ನಿಂದ ಸೇವಾಕುಂಭ ಕಾರ್ಯಕ್ರಮ

Team Udayavani, Dec 28, 2020, 3:21 PM IST

ಯುವ ಬ್ರಿಗೇಡ್‌ನಿಂದ ಸೇವಾಕುಂಭ ಕಾರ್ಯಕ್ರಮ

ಹುಬ್ಬಳ್ಳಿ: 28 ಶಾಲೆಗಳನ್ನು ಅಭಿವೃದ್ಧಿ ಪಡಿಸುವ ಮೂಲಕ ಮುನ್ನುಡಿ ಬರೆದಿರುವುದು ನಮ್ಮ ಹೆಮ್ಮೆ ಎಂದುಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಹೇಳಿದರು.

ಯುವ ಬ್ರಿಗೇಡ್‌ನಿಂದ ಸ್ವಾತಂತ್ರ್ಯೋತ್ಸವಕ್ಕೆ 75ನೇ ಸಂಭ್ರಮದ ನಿಮಿತ್ತ ಆಯೋಜಿಸಿದ್ದ ಸೇವಾಕುಂಭ ಕಾರ್ಯಕ್ರಮದಲ್ಲಿ ಮಾತನಾಡಿ ದಅವರು, ಒಂದು ಶಾಲೆ ಹೇಗಿರಬೇಕು ಎನ್ನುವ ಪರಿಕಲ್ಪನೆ ಅಡಿಯಲ್ಲಿ ಶಾಲೆಯ ಅಭಿವೃದ್ಧಿಗೆ ಮುಂದಾದೆ. ಅದೇ ನಾನು ಮಾಡಿರುವ ಕಾರ್ಯವಾಗಿದ್ದು, ನಾನು ಮಾಡಿರುವುದು ಏನೂ ಅಲ್ಲ. ಹಣ್ಣುಮಾರಿ ಬರುವ ಆದಾಯದಲ್ಲಿ ಒಂದಿಷ್ಟು ಹಣವನ್ನು ಶಾಲೆಯ ಅಭಿವೃದ್ಧಿಗೆನೀಡಿದ್ದೇನೆ ಅಷ್ಟೆ ಎಂದು ಹೇಳಿದರು. ರೇಷನ್‌ ಪಡೆಯಲು ಅಂಗಡಿಯ ಸರದಿಯಲ್ಲಿ ನಿಂತಾಗ ಪ್ರಧಾನಮಂತ್ರಿಗಳಕಚೇರಿಯಿಂದ ಬಂದ ದೂರವಾಣಿ ಕರೆ ನನ್ನನ್ನು ಚಕಿತಗೊಳಿಸಿತು. ಕನ್ನಡವೇ ಸರಿಯಾಗಿ ಬಾರದ ನನಗೆ ಹಿಂದಿಹೇಗೆ ಅರ್ಥವಾದೀತು. ಅಲ್ಲಿಯೇ ಪಕ್ಕದಲ್ಲಿದ್ದ ನಮ್ಮವರ ಕೈಯಲ್ಲಿ ಫೋನು ಕೊಟ್ಟು ಮಾತನಾಡಿಸಿದೆ. ಅವಾಗ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಿರುವ ಸುದ್ದಿ ತಿಳಿಯಿತು. ಅವರಿಗೆ ಧನ್ಯವಾದ ತಿಳಿಸಲು ಹೇಳಿದೆ ಎಂದರು.

ಕಿಮ್ಸ್‌ ನಿರ್ದೇಶಕ ಡಾ| ರಾಮಲಿಂಗಪ್ಪ ಅಂಟರತಾನಿ ಮಾತನಾಡಿ, ಯುವಾ ಬ್ರಿಗೇಡ್‌ 6ನೇ ವರ್ಷದಲ್ಲಿ ಮುನ್ನಡೆಯುತ್ತಿದ್ದು, ಇದರ ಜೊತೆಯಲ್ಲಿ ಅದೇ ಸಂಘಟನೆಯ ಮೂಲಕ ಸೇವಾಕುಂಭ ಮಾಡುವ ಮೂಲಕ ಸಮಾಜದಲ್ಲಿ ಸೇವಾ ಕಾರ್ಯಮಾಡುತ್ತಿದ್ದಾರೆ. ಇಂತಹ ಸಂಘಟನೆಗಳುಹೆಚ್ಚು ಹೆಚ್ಚು ಬೆಳೆಯಬೇಕೆಂದರು. ಯುವಾ ಬ್ರಿಗೇಡ್‌ನ‌ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲಿ ಮಾತನಾಡಿ, ಯುವ ಬ್ರಿಗೇಡ್‌ನಿಂದ ಸೇವಾ ಕುಂಭದವಿನೂತನ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ. ಸಂಘಟನೆಗಳಪ್ರಮುಖರನ್ನು ಕರೆದು ಅವರಿಗೆ ಸೂಕ್ತಮಾರ್ಗದರ್ಶನ ನೀಡಲಾಗುವುದು. ಸದ್ಯ 20ಕ್ಕೂ ಹೆಚ್ಚು ಸಂಸ್ಥೆಗಳ ಪ್ರಮುಖರು ಬಂದಿದ್ದು, ಸೇವೆ ಎಂದರೆಏನು, ಹೇಗೆ ಮಾಡಬೇಕು ಎಂಬುದರ ಕುರಿತು ತಿಳಿಸಿಕೊಡಲಾಗುವುದು ಎಂದು ಹೇಳಿದರು.  ಉ.ಕ ಯುವಾ ಬ್ರಿಗೇಡ್‌ ಸಂಚಾಲಕ ಕಿರಣರಾಮ್‌ ಮಾತನಾಡಿದರು.

ಮಾಹಿತಿ ಹಂಚಿಕೊಂಡ ಸೇವಾಕರ್ತರು  :

ಬುದ್ಧಿಮಾಂದ್ಯ ಮಕ್ಕಳಿಗಾಗಿ ಶ್ರೀಕಾಂತ ಬೆಟಗೇರಿಯವರು ಬೆಂಗಳೂರಿನ ದಾಬಸ್‌ ಪೇಟೆಯಲ್ಲಿ ಧರಿತ್ರೀ ಟ್ರಸ್ಟ್‌ ಅನ್ನು ಆರಂಭಿಸಿದ್ದು, ಮಾಹಿತಿ ಹಂಚಿಕೊಂಡರು. ಗೋಶಾಲೆಯ ಬುದ್ಧಿಮಾಂದ್ಯ ಮಕ್ಕಳು ಬೆರಣಿ ತಟ್ಟುತ್ತಾರೆ. ಗೋ ಸೇವೆ ಮಾಡ್ತಾರೆ.ಹಾಲು ಹಿಂಡುತಾರೆ. ಪ್ರತಿದಿನ ಲಕ್ಷ್ಮೀ ಎನ್ನುವ ಬುದ್ಧಿಮಾಂದ್ಯ ಹುಡುಗಿ ಅಡುಗೆಗೆ ಬೇಕಾದ ನಾಲ್ಕು ತೆಂಗಿನಕಾಯಿಗಳನ್ನು ತುರಿಯುತ್ತಾಳೆ ಎಂಬಿತ್ಯಾದಿ ವಿಷಯ ಹಂಚಿಕೊಂಡರು. ಶರಣ್ಯ ಗ್ರಾಮೀಣ ನೋವು ನಿವಾರಕ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಿ.ಎಲ್‌. ಮಂಜುನಾಥ ಮಾತನಾಡಿ, 2004ರಲ್ಲಿ ಸಂಸ್ಥೆ ಶುರುವಾಗಿದೆ. ಕ್ಯಾನ್ಸರ್‌ ಗುಣವಾಗದೇ ಕೊನೆ ದಿನಗಳನ್ನೆಣಿಸುವವರ ಶುಶ್ರೂಷಾ ಸಂಸ್ಥೆ ಇದಾಗಿದೆ. ಪ್ರಸ್ತುತ 10.5 ಎಕರೆ ಜಾಗದಲ್ಲಿ 20 ಜನ ರೋಗಿಗಳಿದ್ದಾರೆ. ಅಡ್ವಾನ್ಸಡ್‌ ಸ್ಟೇಜ್‌ನಲ್ಲಿರೋ ರೋಗಿಗಳಿಗೆ ಶರಣ್ಯದಲ್ಲಿ ಸೇವೆ ನಡೆದಿದೆ. ಮೊದಲು ಮನೆ ಮನೆಗೆ ಹೋಗಿ ಸೇವೆ ಸಲ್ಲಿಸಲಾಗುತ್ತಿತ್ತು. ಕೋವಿಡ್‌ ಕಾರಣದಿಂದ ಅದೀಗ ಇಲ್ಲ ಎಂದು ತಿಳಿಸಿದರು. ನಂತರ ಕೃಷಿ ಸೇವೆ ಉದ್ದಿಮೆ ಹಾಗೂ ಸಾವಯವ ಕೃಷಿಯ ಕುರಿತು ಕಾಳಪ್ಪನವರ, ವಿಶಾಲ ಪಾಟೀಲ, ಆಶಾ, ಕುಮಾರ ತಮ್ಮ ಕಾರ್ಯದ ಬಗ್ಗೆ ಮಾತನಾಡಿದರು.

ಕೋವಿಡ್‌-19 ಹಿನ್ನೆಲೆಯಲ್ಲಿ ಹುಬ್ಬಳ್ಳಿ ಕಿಮ್ಸ್‌ ಆಸ್ಪತ್ರೆಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಂದ ಅಪಾರ ಕೊಡುಗೆಗಳು ಸಿಕ್ಕಿವೆ. ಕಿಮ್ಸ್‌ ಆಸ್ಪತ್ರೆ ಖಾಸಗಿ ಆಸ್ಪತ್ರೆಗಳಿಗೆ ಸಡ್ಡು ಹೊಡೆಯುವಂತೆ ನಿರ್ಮಾಣಗೊಂಡಿದೆ. 1200 ಹಾಸಿಗೆಯ ಆಸ್ಪತ್ರೆ ಇದೀಗ 2400 ಹಾಸಿಗೆಗಳ ಆಸ್ಪತ್ರೆಯಾಗಲಿದೆ. ಶೀಘ್ರದಲ್ಲಿಯೇ ಹೃದಯ ಚಿಕಿತ್ಸೆ, ಕ್ಯಾನ್ಸರ್‌ ಚಿಕಿತ್ಸೆ ಸೇರಿದಂತೆ ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯಗಳನ್ನು ಹೊಂದಲಿದೆ. ಡಾ| ರಾಮಲಿಂಗಪ್ಪ ಅಂಟರತಾನಿ, ಕಿಮ್ಸ್‌ ನಿರ್ದೇಶಕ

ಟಾಪ್ ನ್ಯೂಸ್

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qwqweqwe

Navalgund:ರಾಜಾಹುಲಿ ಭರ್ಜರಿ ರೋಡ್ ಶೋ: ಜೋಶಿ ಗೆಲುವು ನಿಶ್ಚಿತ ಎಂದ ಮಾಜಿ ಸಿಎಂ

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ

Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ

Lok Sabha Elections: ರಾಜ್ಯಕ್ಕೆ ಮೋದಿ ಆಗಮನ: ಇಂದು ನಾಲ್ಕು ಕಡೆ ಪ್ರಚಾರ

Lok Sabha Elections: ರಾಜ್ಯಕ್ಕೆ ಮೋದಿ ಆಗಮನ: ಇಂದು ನಾಲ್ಕು ಕಡೆ ಪ್ರಚಾರ

Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ

Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.