ಪಾಲಿಕೆಯಿಂದ ವಾಹನ ಬಾಡಿಗೆ ಬಾಕಿ; ಭರವಸೆಯ ಬೆನ್ನಲ್ಲೇ ಹೋರಾಟ ಅಂತ್ಯ

Team Udayavani, Jun 12, 2019, 9:21 AM IST

ಹುಬ್ಬಳ್ಳಿ: ಜಿಲ್ಲಾ ವಾಹನ ಚಾಲಕರು ಹಾಗೂ ಮಾಲೀಕರ ಕ್ಷೇಮಾಭಿವೃದ್ಧಿ ಸಂಘದಿಂದ ಪಾಲಿಕೆ ಆವರಣದಲ್ಲಿ ಪ್ರತಿಭಟನೆ ನಡೆಸಲಾಯಿತು.

ಹುಬ್ಬಳ್ಳಿ: ಮಹಾನಗರ ಪಾಲಿಕೆ ಸೇವೆಗೆ ನೀಡಲಾದ ವಾಹನಗಳ ಬಾಡಿಗೆ ಹಣ ಪಾವತಿ ಮಾಡದಿರುವುದನ್ನು ಖಂಡಿಸಿ ಜಿಲ್ಲಾ ವಾಹನ ಚಾಲಕರು ಹಾಗೂ ಮಾಲೀಕರ ಕ್ಷೇಮಾಭಿವೃದ್ಧಿ ಸಂಘದಿಂದ ವಾಹನ ಸೇವೆ ಸ್ಥಗಿತಗೊಳಿಸಿ ನಡೆಸುತ್ತಿದ್ದ ಪ್ರತಿಭಟನೆಯನ್ನು ಅಧಿಕಾರಿಗಳ ಭರವಸೆ ಮೇಲೆ ಮಂಗಳವಾರ ಹಿಂಪಡೆಯಲಾಗಿದೆ.

ಕಳೆದ ಹಲವಾರು ವರ್ಷಗಳಿಂದ ಮಹಾನಗರ ಪಾಲಿಕೆಗೆ ಮಾಸಿಕ ಬಾಡಿಗೆ ಆಧಾರದ ಮೇಲೆ ವಾಹನಗಳನ್ನು ನೀಡಲಾಗಿದ್ದು, ಕಳೆದ ಮೂರ್‍ನಾಲ್ಕು ತಿಂಗಳಿಂದ ವಾಹನಗಳ ಬಾಡಿಗೆ ಹಣ ಸಂದಾಯ ಮಾಡಲಾಗಿಲ್ಲ. ಒಟ್ಟು 38 ವಾಹನಗಳು ಬಾಡಿಗೆ ಆಧಾರಿತ ಸೇವೆ ನೀಡುತ್ತಿದ್ದು, ಸುಮಾರು 30 ಲಕ್ಷ ರೂ. ಹಣ ಪಾವತಿಯಾಗಬೇಕಾಗಿತ್ತು. ಆದರೆ ಕಳೆದ ವಾರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದ್ದರೂ ಸ್ಪಂದನೆ ನೀಡಿರಲಿಲ್ಲ. ಆದ್ದರಿಂದ ಸೋಮವಾರದಿಂದ ವಾಹನ ಸಂಚಾರ ಸ್ಥಗಿತಗೊಳಿಸಿ ಹೋರಾಟ ಆರಂಭಿಸಲಾಗಿತ್ತು.

ಮಂಗಳವಾರ ಮಧ್ಯಾಹ್ನ ಪಾಲಿಕೆ ಉಪ ಆಯುಕ್ತ ಹಾಗೂ ಮುಖ್ಯ ಲೆಕ್ಕಾಧಿಕಾರಿಗಳು ಸಂಜೆಯೊಳಗೆ ಬಾಕಿ ಇರುವ ಹಣ ಸಂದಾಯ ಮಾಡಲಾಗುವುದು ಪ್ರತಿಭಟನೆ ಹಿಂಪಡೆಯಿರಿ ಎಂದು ಮೌಖೀಕವಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಹೋರಾಟ ಹಿಂಪಡೆಯಲಾಗಿದೆ. ಪ್ರೇಮನಾಥ ಚಿಕ್ಕತುಂಬಳ, ಸತೀಶ ಬಳ್ಳಾರಿ, ಬಸಪ್ಪ ದೊಡ್ಡಮನಿ, ಪರಶುರಾಮ ಸೋನಿಕರ, ಹನುಮಂತ, ಈರಪ್ಪ ಜೋಗಿ, ಪ್ರಕಾಶ ಅತ್ತಿಗೇರಿ, ಅಶೋಕ ಲಮಾಣಿ, ರವಿ ವಗ್ಗರ, ಶ್ರೀನಿವಾಸ ಹಿರೇಮನಿ ಮೊದಲಾದವರು ಇದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ