Udayavni Special

ಅಭಿವೃದ್ಧಿಗಾಗಿ ಹೋರಾಟ,ಚಿಲ್ಲರೆ ರಾಜಕಾರಣ ಮಾಡಲ್ಲ


Team Udayavani, Oct 10, 2020, 4:02 PM IST

Hasan-tdy-2

ಹಾಸನ: “ನಾನು 8 ವರ್ಷ ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ಹಾಸನ ಅಷ್ಟೇ ಅಲ್ಲ. ಜಿಲ್ಲೆಯ ಎಲ್ಲಾ ಕ್ಷೇತ್ರಗಳ ಅಭಿವೃದ್ಧಿ ಬಗ್ಗೆಯೂ ಮಾತನಾಡುವ ನೈತಿಕತೆ ಇದೆ’ ಎಂದು ಜೆಡಿಎಸ್‌ ಮುಖಂಡ, ಮಾಜಿ ಸಚಿವ ಎಚ್‌.ಡಿ.ರೇವಣ್ಣ ಅವರು ಹಾಸನ ಕ್ಷೇತ್ರದ ಬಿಜೆಪಿ ಶಾಸಕ ಪ್ರೀತಂ ಜೆ.ಗೌಡ ಅವರಿಗೆ ತಿರುಗೇಟು ನೀಡಿದರು.

ಜನತೆಗೆ ಗೊತ್ತಿದೆ: ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಸನ ಜಿಲ್ಲೆಯ ಜನ ದೇವೇಗೌಡರು ಮತ್ತು ತನಗೆ ಅಧಿಕಾರ ಮತ್ತು ರಾಜಕೀಯ ಶಕ್ತಿ ಕೊಟ್ಟಿದ್ದಾರೆ. ಜನರ ಋಣ ತೀರಿಸುವ ಹೊಣೆಗಾರಿಕೆ ತನ್ನ ಮೇಲಿದೆ. ಹೊಣೆಗಾರಿಕೆ ನಿರ್ವಹಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಹಾಸನದ ಅಭಿವೃದ್ಧಿಗೆ ಏನೇನು ಮಾಡಿದ್ದೇನೆ ಎಂಬುದು ಜನರಿಗೆ ಗೊತ್ತಿದೆ ಎಂದರು.

ಹೊಣೆಯಾರು?: ತಾನು ಹಾಸನ ಜಿಲ್ಲಾ ಉಸ್ತುವಾರಿ ಸಚಿವನಾದಾಗಿದ್ದಾಗಲೇ ಹಾಸನದ ರೈಲ್ವೆ ಮೇಲ್ಸೇತುವೆನಿರ್ಮಾಣಕ್ಕೆ ಚಾಲನೆ ನೀಡಿದ್ದೆ. ಹಾಸನದ ಚನ್ನಪಟ್ಟಣ ಕೆರೆ ಅಭಿವೃದ್ಧಿ ಹಾಗೂ ಸೌಂದರ್ಯಿಕರಣಕ್ಕೆ 144ಕೋಟಿ ರೂ. ಯೋಜನೆ ರೂಪಿಸಿದ್ದೆ.ಕಾಮಗಾರಿ ಆರಂಭದ ಸಮಯದಲ್ಲಿ ಆ ಯೋಜನೆ ತಡೆ ಹಿಡಿಯಲು ಕಾರಣ ಯಾರು?. ಸಣ್ಣ – ಪುಟ್ಟ ಕೆಲಸಗಳಿಗೆಲ್ಲಾ ಹೆಸರು ಹಾಕಿಕೊಳ್ಳುವ ಚಿಲ್ಲರೆ ರಾಜಕಾರಣ  ಮಾಡುವುದಿಲ್ಲ ಎಂದು ಪ್ರೀತಂ ಜೆ.ಗೌಡ ಅವರ ಹೆಸರು ಹೇಳದೆ ತರಾಟೆಗೆ ತೆಗೆದುಕೊಂಡರು.

ಜನ ತೀರ್ಮಾನಿಸಲಿ: 2500 ಕೋಟಿ ರೂ. ವೆಚ್ಚದಲ್ಲಿ ಹಾಸನ – ಬೆಂಗಳೂರು ಚತುಷ್ಪಥ ರಸ್ತೆ ನಿರ್ಮಾಣ ವನ್ನು ತಾನು ಮಾಡಿಸಿದ್ದರಿಂದಲೇ ಈ ಗಿರಾಕಿ(ಪ್ರೀತಂ ಜೆ.ಗೌಡ) ಈಗ ಅರಾಮವಾಗಿ ಹಾಸನ-ಬೆಂಗಳೂರು ನಡುವೆ ತಿರುಗುತ್ತಿದ್ದಾರೆ. ಹಾಸನ-ಬೆಂಗಳೂರು ರೈಲು ಮಾರ್ಗ, ಹಾಸನದ ಸಾಲಗಾಮೆ ರಸ್ತೆ, ಹಾಸನ – ದುದ್ದ ಚತುಷ್ಪಥ ರಸ್ತೆ ಮತ್ತು ಹಲವು ಉನ್ನತ ಶೈಕ್ಷಣಿಕ ಸಂಸ್ಥೆಗಳನ್ನು ಹಾಸನದಲ್ಲಿ ಸ್ಥಾಪನೆ ಮಾಡಿಸಿದವರು ಯಾರು ಎಂಬುದನ್ನು ಜನರೇ ವಿಮರ್ಶೆ ಮಾಡಲಿ ಎಂದರು.

ಇತ್ತೀಚೆಗೆ ಸಿಎಂ ಯಡಿಯೂರಪ್ಪ ಅವರನ್ನು ಜಿಲ್ಲೆಯ ಎಲ್ಲಾ ಜೆಡಿಎಸ್‌ ಶಾಸಕರು ಭೇಟಿಯಾಗಿ ಜಿಲ್ಲೆಯ ಅಭಿವೃದ್ಧಿ ಕಾರ್ಯ ಸ್ಥಗಿತವಾಗಿರುವ ಬಗ್ಗೆ ಗಮನ ಸೆಳೆದಿದ್ದೇವೆ. ಅವರು ಸ್ಪಂದಿಸುವರೆಂಬನಂಬಿಕೆ ಇದೆ. ಸಿಎಂ ಭೇಟಿ ವೇಳೆ ಜಿಲ್ಲೆಯಲ್ಲಿ ಅಧಿಕಾರಿಗಳವರ್ಗಾವಣೆಯಲ್ಲಿದಂಧೆ ನಡೆಸುತ್ತಿರುವ ಬಗ್ಗೆ ಅಧಿಕಾರಿಗಳು, ಎಂಜಿನಿಯರ್‌ಗಳ ವರ್ಗಾವಣೆಗೆ30 ಲಕ್ಷದಿಂದ 1 ಕೋಟಿ ರೂ.ವರೆಗೂ ವಸೂಲಿ ಮಾಡಿರುವ ಬಗ್ಗೆ ಶಾಸಕರು ಮುಖ್ಯಮಂತ್ರಿ ಅವರ ಗಮನ ಸೆಳೆದಿದ್ದಾರೆ. ಆದರೆ ನಗರಸಭೆ ಮೀಸಲಾತಿಬಗ್ಗೆ ಮಾತನಾಡಲಿಲ್ಲ. ನಾವು ಅಂತಹ ಆತ್ಮಸಾಕ್ಷಿವಿರೋಧಿ ಕೆಲಸ ಮಾಡವುದಿಲ್ಲ ಎಂದರು. ಮಾಜಿ ಶಾಸಕ ಬಿ.ವಿ.ಕರೀಗೌಡ ಇದ್ದರು.

ಮೀಸಲಾತಿ ಎಸ್ಟಿಗೆ ಮೀಸಲು ತಂದರೆ ಹೆದರಿ ಓಡುವುದಿಲ್ಲ :  ಹಾಸನ ನಗರಸಭೆ ಮೀಸಲಾತಿಯನ್ನು ಎಸ್ಟಿಗೆ ಮೀಸಲಾಗಿರಿಸಿರುವುದರಿಂದ ನಾವೇನೂ ಹೆದರಿ ಓಡುವುದಿಲ್ಲ. ಹೋರಾಟ ಮಾಡುವುದು ಗೊತ್ತಿದೆ. ನ್ಯಾಯಾಲಯಕ್ಕೂ ಸ್ಪಷ್ಟ ಮಾಹಿತಿ ನೀಡದೆ ಮೋಸ ಮಾಡಿ ಮೀಸಲಾತಿ ನಿಗದಿಮಾಡಿರುವ ಸರ್ಕಾರದಕ್ರಮವನ್ನು ಅಡ್ವೋಕೇಟ್‌ ಜನರಲ್‌ ಅವರು ಹೇಗೆ ಸಮರ್ಥಿಸಿಕೊಳ್ಳುತ್ತಾರೆ?. ನೈತಿಕತೆ ಇದ್ದರೆ ಅವರು ರಾಜೀನಾಮೆಕೊಟ್ಟು ಹೋಗಬೇಕು. ಮೀಸಲಾತಿ ನಿಗದಿ ಪ್ರಶ್ನಿಸಿ ಈಗಾಗಲೇನ್ಯಾಯಾಲಯದ ಮೆಟ್ಟಿಲು ಹತ್ತಿರುವ ಹಾಸನನಗರಸಭೆ ಸದಸ್ಯರಿಗೆ ನ್ಯಾಯ ಸಿಗುವುದೆಂಬವಿಶ್ವಾಸವಿದೆ ಎಂದೂ ಮಾಜಿ ಸಚಿವ ರೇವಣ್ಣ ಹೇಳಿದರು

ಟಾಪ್ ನ್ಯೂಸ್

ಈಶಾನ್ಯಕ್ಕೆ 6 ಆರು ಹೊಸ ವಾಯುಮಾರ್ಗ

ಈಶಾನ್ಯಕ್ಕೆ 6 ಆರು ಹೊಸ ವಾಯುಮಾರ್ಗ

ಆರ್ಯನ್‌ ಡ್ರಗ್‌ ಕೇಸ್‌: ಸುಪ್ರೀಂ ಮೆಟ್ಟಿಲೇರಿದ ಶಿವಸೇನೆ ನಾಯಕ

ಆರ್ಯನ್‌ ಡ್ರಗ್‌ ಕೇಸ್‌: ಸುಪ್ರೀಂ ಮೆಟ್ಟಿಲೇರಿದ ಶಿವಸೇನೆ ನಾಯಕ

ನ್ಯಾಯ ಒದಗಿಸುವಂತೆ ರೈತರಿಂದ ಆಗ್ರಹ

ನ್ಯಾಯ ಒದಗಿಸುವಂತೆ ರೈತರಿಂದ ಆಗ್ರಹ

ನೂತನ ನಗರ ಸ್ಥಳೀಯ ಸಂಸ್ಥೆಗಳ ವಾರ್ಡ್‌ ವಿಂಗಡನೆ ಶುರು

ನೂತನ ನಗರ ಸ್ಥಳೀಯ ಸಂಸ್ಥೆಗಳ ವಾರ್ಡ್‌ ವಿಂಗಡನೆ ಶುರು

ಪಶ್ಚಿಮ ಭಾಗದ ಹರಾಜು-ಮಾರಾಟದಲ್ಲಿ ಆದೇಶ ಉಲ್ಲಂಘನೆ

ಪಶ್ಚಿಮ ಭಾಗದ ಹರಾಜು-ಮಾರಾಟದಲ್ಲಿ ಆದೇಶ ಉಲ್ಲಂಘನೆ

ಚಿತ್ರಪಾಡಿ ಗ್ರಾಮಸ್ಥರ ಪಡಿತರ ಪರಿಪಾಟಲು ಅಂತ್ಯ

ಚಿತ್ರಪಾಡಿ ಗ್ರಾಮಸ್ಥರ ಪಡಿತರ ಪರಿಪಾಟಲು ಅಂತ್ಯ

ಆವರಣ ಗೋಡೆಯಿಲ್ಲದೆ ಗುಮ್ಮೆತ್ತು ಸ.ಕಿ.ಪ್ರಾ. ಶಾಲೆಗೆ ಅಭದ್ರತೆ

ಆವರಣ ಗೋಡೆಯಿಲ್ಲದೆ ಗುಮ್ಮೆತ್ತು ಸ.ಕಿ.ಪ್ರಾ. ಶಾಲೆಗೆ ಅಭದ್ರತೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

HASANA NEWS

ಯಗಚಿ ಜಲಾಶಯಕ್ಕೆ  ಕಾಯಕಲ್ಪ ಯಾವಾಗ?

250 cases in a single day: Rs 1.25 lakh Fine

ಒಂದೇ ದಿನಕೆ 250 ಕೇಸ್‌: 1.25 ಲಕ್ಷ ರೂ. ದಂಡ

14

ಅಧಿಕಾರ ದುರುಪಯೋಗ: ಎಫ್ಐಆರ್‌

ಅರಕಲಗೂಡು: ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಪೊಲೀಸರ ದಾಳಿ

ಅರಕಲಗೂಡು: ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಪೊಲೀಸರ ದಾಳಿ

ಜಿಲ್ಲಾ ಕಸಾಪ ಚುನಾವಣೆ ಪ್ರಚಾರ ಶುರು

ಜಿಲ್ಲಾ ಕಸಾಪ ಚುನಾವಣೆ ಪ್ರಚಾರ ಶುರು

MUST WATCH

udayavani youtube

ನಮ್ಮ ಸೇನೆಗೊಂದು ಸಲಾಂ

udayavani youtube

ಮೋದಿ ಹೆಬ್ಬೆಟ್ಟ್ ಗಿರಾಕಿ ಟ್ವಿಟ್‍ಗೆ ಶಿವಕುಮಾರ್ ವಿಷಾದ

udayavani youtube

ಗೋವಿನಲ್ಲಿ ಶ್ರೇಷ್ಠ ‘ಕಪಿಲಾ’ ಗೋವಿನ ವಿಶೇಷತೆಗಳೇನು ?

udayavani youtube

‘ಡೀಮ್ಡ್ ಫಾರೆಸ್ಟ್’ ಎಂದು ಈ ಕಾರಣಗಳಿಗೆ ಘೋಷಣೆಯಾಗುತ್ತೆ

udayavani youtube

ಚಿಂತಾಮಣಿಯಲ್ಲೊಂದು ದುರಂತ : ಕುರಿ ತೊಳೆಯಲು ಹೋದ ಮೂವರು ಯುವಕರು ನೀರು ಪಾಲು

ಹೊಸ ಸೇರ್ಪಡೆ

ಈಶಾನ್ಯಕ್ಕೆ 6 ಆರು ಹೊಸ ವಾಯುಮಾರ್ಗ

ಈಶಾನ್ಯಕ್ಕೆ 6 ಆರು ಹೊಸ ವಾಯುಮಾರ್ಗ

ಎಂಆರ್‌ಪಿಎಲ್‌ಗೆ ಒಎನ್‌ಜಿಸಿ ಅಧ್ಯಕ್ಷರ ಭೇಟಿ

ಎಂಆರ್‌ಪಿಎಲ್‌ಗೆ ಒಎನ್‌ಜಿಸಿ ಅಧ್ಯಕ್ಷರ ಭೇಟಿ

ಡೆನ್ಮಾರ್ಕ್‌ ಓಪನ್‌ ಬ್ಯಾಡ್ಮಿಂಟನ್‌: ಸಿಂಧು, ಶ್ರೀಕಾಂತ್‌, ಚಿರಾಗ್‌ ಮುನ್ನಡೆ

ಡೆನ್ಮಾರ್ಕ್‌ ಓಪನ್‌ ಬ್ಯಾಡ್ಮಿಂಟನ್‌: ಸಿಂಧು, ಶ್ರೀಕಾಂತ್‌, ಚಿರಾಗ್‌ ಮುನ್ನಡೆ

ಆರ್ಯನ್‌ ಡ್ರಗ್‌ ಕೇಸ್‌: ಸುಪ್ರೀಂ ಮೆಟ್ಟಿಲೇರಿದ ಶಿವಸೇನೆ ನಾಯಕ

ಆರ್ಯನ್‌ ಡ್ರಗ್‌ ಕೇಸ್‌: ಸುಪ್ರೀಂ ಮೆಟ್ಟಿಲೇರಿದ ಶಿವಸೇನೆ ನಾಯಕ

ಬ್ರಹ್ಮಾವರದ ಸಾಧಕಿ ಗೌರಿ ಕೊರಗ ಅವರಿಗೆ ವಾಲ್ಮೀಕಿ ಪ್ರಶಸ್ತಿ

ಬ್ರಹ್ಮಾವರದ ಸಾಧಕಿ ಗೌರಿ ಕೊರಗ ಅವರಿಗೆ ವಾಲ್ಮೀಕಿ ಪ್ರಶಸ್ತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.