ಕೆರೆ ಏರಿಯಲ್ಲಿ ಜಿನುಗುತ್ತಿದೆ ನೀರು: ಆತಂಕ

Team Udayavani, Oct 11, 2020, 3:56 PM IST

HASAN-TDY-1

ಬೇಲೂರು: ತಾಲೂಕಿನ ಯಲಹಂಕ ಬ್ಯಾಡರಹಳ್ಳಿ ಕೆರೆ ಏರಿ ಕಳಪೆ ಕಾಮಗಾರಿಯಿಂದ ಒಡೆದು ಹೋಗುವ ಸ್ಥಿತಿಯಲ್ಲಿದ್ದು, ಕೂಡಲೇ ತಾಪಂ ಹಾಗೂ ತಾಲೂಕು ಆಡಳಿತ ಸೂಕ್ತ ಕ್ರಮಕೈಗೊಳ್ಳಬೇಕಿದೆ. ತಾಲೂಕಿನ ಯಲಹಂಕ ಹಾಗೂ ಬ್ಯಾಡರ ಹಳ್ಳಿಯ ದ್ಯಾವನಕೆರೆ 10 ವರ್ಷಗಳ ನಂತರ ಭರ್ತಿ ಆಗಿದೆ.

ಪ್ರಧಾನ ಮಂತ್ರಿ ಗ್ರಾಮ ಸಡಕ್‌ ಯೋಜನೆ(ಪಿಎಂಜಿಎಸ್‌ವೈ)ಯಲ್ಲಿ ಏರಿ ಮೇಲಿನ ರಸ್ತೆ ಅಗಲೀಕರಣ ಮಾಡುವ ಉದ್ದೇಶದಿಂದ ಮಣ್ಣು ಸುರಿಯಲಾಗಿತ್ತು. ಸ್ಥಳೀಯರಿಗೆ ತಿಳಿಯದಂತೆ ರಾತ್ರೋ ರಾತ್ರಿ ಸಂಬಂಧಪಟ್ಟ ಅಧಿಕಾರಿಗಳು ಜೆಸಿಬಿ ಯಂತ್ರದ ಮೂಲಕ ಏರಿ ಮಣ್ಣನ್ನುಅಗೆದಿದ್ದಾರೆ.ಇದರಿಂದ ಏರಿ ಒಡೆಯುವ ಸಂಭವವಿದೆ. ತಕ್ಷಣವೇ ದುರಸ್ತಿ ಮಾಡಿಸಬೇಕಿದೆ.

ಈ ವೇಳೆ ಮಾತನಾಡಿದ ಚಿಲ್ಕೂರು ಗ್ರಾಮದ ಮಂಜೇಗೌಡ, ಈ ಏರಿಯ ಮೇಲಿನ ರಸ್ತೆಯು 15 ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಹಿಂದೆ ಕೆರೆ ನೀರನ್ನು ಕೃಷಿ ಚಟುವಟಿಕೆಗಳಿಗೆ ಬಳಸುತ್ತಿದ್ದೆವು ಹತ್ತು ವರ್ಷಗಳ ನಂತರ ಕೆರೆ ಭರ್ತಿ ಆಗಿದೆ. ಪಿಎಂಜಿಎಸ್‌ವೈನಡಿಯಲ್ಲಿ ಅಧಿಕಾರಿಗಳು ಈ ಕೆರೆ ಏರಿ ರಸ್ತೆಗೆ ಡಾಂಬರೀಕರಣ ಮಾಡಿದ್ದಾರೆ. ಆದರೆ, ಅಧಿಕಾರಿಗಳ ಲೋಪದಿಂದಾಗಿ ಕೆರೆ ಏರಿಯಲ್ಲಿ ನೀರು ಜಿನುಗುತ್ತಿದ್ದು, ಒಡೆದು ಹೋಗುವ ಆತಂಕ ಎದುರಾಗಿದೆ.

ರಸ್ತೆ ಅಗಲಗೊಳಿಸುವ ಸಂದರ್ಭದಲ್ಲಿ ನೂರು ಮೀಟರ್‌ನಷ್ಟು ಏರಿ ಮಣ್ಣು ತೆಗೆದಿರುವುದರಿಂದ ತಳಭಾಗದಲ್ಲಿ ಕೆರೆಯ ನೀರು ಜಿನುಗುತ್ತಿದೆ. ಸುತ್ತಲೂ ಮಣ್ಣು ಕಸಿದು ಬಿರುಕು ಕಾಣಿಸಿಕೊಂಡಿದೆ. ಸದ್ಯದಲ್ಲೇಕೆರೆಒಡೆಯುವಸಂಭವವಿದೆ.ತಕ್ಷಣವೇಸಂಬಂಧಪಟ್ಟ ಅಧಿಕಾರಿಗಳು ಕ್ರಮಕೈಗೊಳ್ಳದಿದ್ದರೆ ಮುಂದೆ ಸಂಭವಿಸುವ ಅನಾಹುತಕ್ಕೆ ಅವರೇ ಜವಾಬ್ದಾರರಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಅಲ್ಲದೆ, ಕೆರೆ ಸುತ್ತಮುತ್ತ 60 ಎಕರೆಗೂ ಹೆಚ್ಚು ಜೋಳ, ಅಡಕೆ, ಇನ್ನಿತರ ಬೆಳೆ ಇದ್ದು, ಏರಿ ಒಡೆದರೆ ಹಾಳಾಗುವ ಸಂಭವವಿದೆ. ತಕ್ಷಣವೇ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ತಾಪಂ ಮುಂಭಾಗದಲ್ಲಿ 10 ಗ್ರಾಮದ ಜನರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಗ್ರಾಮಸ್ಥರಾದ ಧರ್ಮೇಗೌಡ, ಚಂದ್ರಶೇಖರ್‌, ಶಾಂತೇಗೌಡ, ಜುಂಜೇಗೌಡ, ಮೋಹನ್‌,ಅರುಣ್‌, ಲೋಹಿತ್‌ ಮುಂತಾದವರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

Hejamady Port: ಭೂ ಸ್ವಾಧೀನ ತ್ವರಿತಗೊಳಿಸಲು ಸಂಸದ ಕೋಟ ಸೂಚನೆ

Hejamady Port: ಭೂ ಸ್ವಾಧೀನ ತ್ವರಿತಗೊಳಿಸಲು ಸಂಸದ ಕೋಟ ಸೂಚನೆ

Nellyadi ಶಿರಾಡಿ: ಕಾಡಾನೆ ದಾಳಿ, ಕೃಷಿ ಹಾನಿ

Nellyadi ಶಿರಾಡಿ: ಕಾಡಾನೆ ದಾಳಿ, ಕೃಷಿ ಹಾನಿ

ರಾಹುಲ್‌

NDA; ಸಣ್ಣ ಕಂಪನವೂ ಕೇಂದ್ರ ಸರ್ಕಾರವನ್ನೇ ಉರುಳಿಸಬಲ್ಲದು: ರಾಹುಲ್‌

Jaganmohan reddy

ಸದ್ದಾಂ, ಜನಾರ್ದನ ರೆಡ್ಡಿ ರೀತಿ ಜಗನ್‌ ಮನೆ ನಿರ್ಮಾ ಣ: ಟಿಡಿಪಿ

Theft Case ಬಿ.ಸಿ.ರೋಡಿನ ಕೈಕಂಬ: ಮನೆಯಿಂದ ಕಳವು

Theft Case ಬಿ.ಸಿ.ರೋಡಿನ ಕೈಕಂಬ: ಮನೆಯಿಂದ ಕಳವು

Kollur ಸಾರ್ವಜನಿಕ ಸ್ಥಳದಲ್ಲಿ ಹೊಡೆದಾಟ: ಇಬ್ಬರ ಬಂಧನ

Kollur ಸಾರ್ವಜನಿಕ ಸ್ಥಳದಲ್ಲಿ ಹೊಡೆದಾಟ: ಇಬ್ಬರ ಬಂಧನ

ರಿಯಾಯಿತಿ ಬೆಲೆಗೆ ಶೇರು ಮಾರಾಟ ಮಾಡುವುದಾಗಿ ಲಕ್ಷಾಂತರ ರೂ. ವಂಚನೆ

ರಿಯಾಯಿತಿ ಬೆಲೆಗೆ ಶೇರು ಮಾರಾಟ ಮಾಡುವುದಾಗಿ ಲಕ್ಷಾಂತರ ರೂ. ವಂಚನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Pen drive case: ಪ್ರಜ್ವಲ್‌ ಮಾಜಿ ಕಾರು ಚಾಲಕ ಕಾರ್ತಿಕ್‌ ಬಂಧನ

Pen drive case: ಪ್ರಜ್ವಲ್‌ ಮಾಜಿ ಕಾರು ಚಾಲಕ ಕಾರ್ತಿಕ್‌ ಬಂಧನ

Prajwal Revanna: ಹೊಳೆನರಸೀಪುರಕ್ಕೆ ಪ್ರಜ್ವಲ್‌; ಲೈಂಗಿಕ ದೌರ್ಜನ್ಯ ಕೇಸಲ್ಲಿ ಸ್ಥಳ ಮಹಜರು

Prajwal Revanna: ಹೊಳೆನರಸೀಪುರಕ್ಕೆ ಪ್ರಜ್ವಲ್‌; ಲೈಂಗಿಕ ದೌರ್ಜನ್ಯ ಕೇಸಲ್ಲಿ ಸ್ಥಳ ಮಹಜರು

Hassan: ಸಿಡಿಲು ಬಡಿದು ಇಬ್ಬರು ಮಹಿಳೆಯರು ಮೃತು, ಮೂವರಿಗೆ ಗಾಯ

Hassan: ಸಿಡಿಲು ಬಡಿದು ಇಬ್ಬರು ಮಹಿಳೆಯರು ಮೃತ್ಯು, ಮೂವರಿಗೆ ಗಾಯ

1-hasana’

Hasana Crime: ರೌಡಿಶೀಟರ್ ಚೈಲ್ಡ್ ರವಿ ಬರ್ಬರ ಹತ್ಯೆ

HD Revanna: ಸಂಕಷ್ಟದ ನಡುವೆಯೂ ರಾಜಕೀಯ ಚಟುವಟಿಕೆಗಳಲ್ಲಿ ವ್ಯಸ್ತರಾದ ಎಚ್‌.ಡಿ.ರೇವಣ್ಣ

HD Revanna: ಸಂಕಷ್ಟದ ನಡುವೆಯೂ ರಾಜಕೀಯ ಚಟುವಟಿಕೆಗಳಲ್ಲಿ ವ್ಯಸ್ತರಾದ ಎಚ್‌.ಡಿ.ರೇವಣ್ಣ

MUST WATCH

udayavani youtube

Udupi ತಲವಾರಿನಿಂದ ಹಲ್ಲೆ: ಸೆಲೂನ್‌ ಸಿಬ್ಬಂದಿಯ ಕೊ*ಲೆ ಯತ್ನ

udayavani youtube

ಕಮಲಶಿಲೆ ದೇಗುಲದಿಂದ ಗೋ ಕಳವು ಯತ್ನ ವಿಫಲ

udayavani youtube

ಈದ್ಗಾ ಮೈದಾನದಲ್ಲಿ ನಡೆದ ಬಕ್ರೀದ್ ಆಚರಣೆಯಲ್ಲಿ ಪ್ರಾರ್ಥನೆ ಸಲ್ಲಿಸಿದ ಆರ್ ಬಿ ತಿಮ್ಮಾಪುರ

udayavani youtube

ಮಾನಸಿಕ ಸಮಸ್ಯೆಯ ಲಕ್ಷಣಗಳೇನು?

udayavani youtube

ಈ ಇಳಿವಯಸ್ಸಿನಲ್ಲಿ ಇಂತದ್ದೆಲ್ಲ ಒಳ್ಳೆಯದಲ್ಲ… BSY ಕುರಿತು ಸಚಿವ ತಿಮ್ಮಾಪುರ ಹೇಳಿಕೆ

ಹೊಸ ಸೇರ್ಪಡೆ

Modi Krishi Sakhi Certificate for 30 thousand women

Krishi Sakhi; 30 ಸಾವಿರ ಸ್ತ್ರೀಯರಿಗೆ ಮೋದಿ ಕೃಷಿ ಸಖಿ ಪತ್ರ

Hejamady Port: ಭೂ ಸ್ವಾಧೀನ ತ್ವರಿತಗೊಳಿಸಲು ಸಂಸದ ಕೋಟ ಸೂಚನೆ

Hejamady Port: ಭೂ ಸ್ವಾಧೀನ ತ್ವರಿತಗೊಳಿಸಲು ಸಂಸದ ಕೋಟ ಸೂಚನೆ

Nellyadi ಶಿರಾಡಿ: ಕಾಡಾನೆ ದಾಳಿ, ಕೃಷಿ ಹಾನಿ

Nellyadi ಶಿರಾಡಿ: ಕಾಡಾನೆ ದಾಳಿ, ಕೃಷಿ ಹಾನಿ

ಬೈಕಿಗೆ ಹಿಂದಿನಿಂದ ಕಾರು ಢಿಕ್ಕಿ: ಸಹಸವಾರ ಗಾಯ

ಬೈಕಿಗೆ ಹಿಂದಿನಿಂದ ಕಾರು ಢಿಕ್ಕಿ: ಸಹಸವಾರ ಗಾಯ

ರಾಹುಲ್‌

NDA; ಸಣ್ಣ ಕಂಪನವೂ ಕೇಂದ್ರ ಸರ್ಕಾರವನ್ನೇ ಉರುಳಿಸಬಲ್ಲದು: ರಾಹುಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.