Udayavni Special

ಕಬ್ಬಳಿ ಏತ ನೀರಾವರಿ ಯೋಜನೆ ಸರ್ವೆಗೆ ಶಾಸಕ ಚಾಲನೆ


Team Udayavani, Sep 23, 2020, 4:45 PM IST

ಕಬ್ಬಳಿ ಏತ ನೀರಾವರಿ ಯೋಜನೆ ಸರ್ವೆಗೆ ಶಾಸಕ ಚಾಲನೆ

ಚನ್ನರಾಯಪಟ್ಟಣ: ತಾಲೂಕಿನ ಹಿರೀಸಾವೆ ಹೋಬಳಿದಿಡಗ-ಕಬ್ಬಳಿ,ದಿಂಡಗೂರು-ಗೂಡೆಹೊಸ ಹಳ್ಳಿ ವ್ಯಾಪ್ತಿಯ ಕೆರೆಗಳಿಗೆ ನೀರು ತುಂಬಿಸುವ ಯೋಜನಾ ವರದಿ ತಯಾರಿಸಲು ಸರ್ವೆ ಕಾರ್ಯಕ್ಕೆ ಶಾಸಕ ಸಿ.ಎನ್‌.ಬಾಲಕೃಷ್ಣ ಚಾಲನೆ ನೀಡಿದರು.

ಈ ವೇಳೆ ಅವರು ಮಾತನಾಡಿ, ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಿಂದ ಸರ್ವೆ ಕಾರ್ಯ ನಡೆಸಲಾಗುತ್ತಿದೆ. ತಾಲೂಕಿನ ಬಾಗೂರು ಹೋಬಳಿಪಾಪನಘಟ್ಟ ಗ್ರಾಮದ ನಾಕನಕೆರೆ ಬಳಿ ದಿಡಗ ಹಾಗೂ ಕಬ್ಬಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ 22 ಕೆರೆಗಳಿಗೆ ನೀರು ತುಂಬಿಸುವ ದೃಷ್ಟಿಯಿದ ಈ ಏತನೀರಾವರಿ ಯೋಜನೆಗೆ ಪ್ರಾಮುಖ್ಯತೆ ನೀಡಲಾಗುತ್ತಿದೆ ಎಂದು ಹೇಳಿದರು.

ಹಸಿರು ನಿಶಾನೆ ತೋರಲಿ: ಈಗಾಗಲೇತಾಲೂಕಿನಲ್ಲಿ ಏಳು ಏತನೀರಾವರಿ ಯೋಜನೆಗಳು ಪ್ರಗತಿಯಲ್ಲಿವೆ, ಪೂರ್ಣಗೊಂಡಲ್ಲಿ ತಾಲೂಕಿನಲ್ಲಿ ನೀರಿನ ಸಮಸ್ಯೆ ಬಗೆ ಹರಿಸಲಿದೆ, ಇನ್ನು ಅಂಜರ್ತಲ ವೃದ್ಧಿಯಾಗಿ ರೈತರು ಸಮೃದ್ಧ ಜೀವನ ಮಾಡಬಹುದು, ಇನ್ನು ಕಬ್ಬಳಿ, ದಿಡಗ ಭಾಗಕ್ಕೆ ನೀರಿನ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ. ಕಬ್ಬಳಿ ಏತ ನೀರಾವರಿ ಯೋಜನೆಗೆ ಸರ್ಕಾರ ಹಸಿರು ನಿಶಾನೆ ತೋರಿದರೆ ಇಲ್ಲಿನ ಸಮಸ್ಯೆಯೂ ಬಗೆಹರಿಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಶ್ರೀಗಳಿಂದಒತ್ತಾಯ:ಈ ಯೊಜನೆಯಿಂದದಿಡಗ- ಕಬ್ಬಳಿ ಗ್ರಾಪಂ ವ್ಯಾಪ್ತಿಯ 22 ಕೆರೆ, ದಿಂಡಗೂರು ಗ್ರಾಪಂ ವ್ಯಾಪ್ತಿಯ 11 ಕೆರೆ ತುಂಬಿಸಲಾಗುವುದು, ಇದಕ್ಕಾಗಿ ಆದಿಚುಂಚನಗಿರಿ ಶ್ರೀಗಳು ಹಲವು ವರ್ಷದಿಂದ ಮಂತ್ರಿಗಳ ಗಮನಕ್ಕೆ ತಂದಿದ್ದರು. ಹಾಗಾಗಿ ಯೋಜನೆಗೆ ಸರ್ಕಾರ ಅನುಮೋದನೆ ನೀಡಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಜನಿವಾರ ಅಮಾನಿಕೆರೆ ಹೇಮಾವತಿ ಎಡದಂಡೆ ನಾಲೆಯಲ್ಲಿ ನೀರು ಹರಿಯುವಾಗ ಮಾತ್ರ ತುಂಬಲಿದೆ, ಬೇಸಿಗೆ ವೇಳೆ ನೀರಿನ ಸಮಸ್ಯೆ ಉಂಟಾಗಿ ಹಿರೀಸಾವೆ ಜುಟ್ಟನಹಳ್ಳಿ ಏತನೀರಾವರಿಗೆ ಅನುಕೂಲವಾಗಲಿದೆ, ಹಾಗಾಗಿ ಗೂಡೆಹೊಸಹಳ್ಳಿ ಗ್ರಾಮದ ಬಳಿ ಹೇಮಾವತಿ ನದಿಯಿಂದ ನೀರನ್ನು ಎತ್ತಿ ಜನಿವಾರ ಕೆರೆಗೆ ತುಂಬಿಸುವ ಯೋಜನೆಗೆ ಯೋಜನಾ ವರದಿ ತಯಾರಿಸಲು 2020-21ನೇ ಸಾಲಿನಲ್ಲಿ ಸರ್ವೆ ಕೆಲಸ, ಯೋಜನೇತರ ಲೆಕ್ಕ ಶೀರ್ಷಿಕೆಯಡಿ 15 ಲಕ್ಷ ರೂ. ಅಂದಾಜು ಮೊತ್ತ ಹಾಗೂ 5 ಲಕ್ಷ ರೂ. ಅನುದಾನ ಲಭ್ಯವಾಗಿದೆ ಎಂದು ವಿವರಿಸಿದರು.

ಹಲವು ವರ್ಷಗಳ ಹೋರಾಟ ಹಾಗೂ ಪರಿ ಶ್ರಮಕ್ಕೆ ಸದ್ಯ ಪ್ರತಿಫ‌ಲ ಸಿಕ್ಕಿದೆ. ಡಿಪಿಆರ್‌ ಸಿದ್ಧಗೊಂಡ ತಕ್ಷಣ ಅನುಮೋದನೆಗೆ ಕಳುಹಿಸಲಾಗುವುದು, ಈ ಯೋಜನೆಯು ಕಲ್ಲಹಳ್ಳಿ ಗುಡ್ಡದಲ್ಲಿವಿಭಾಗಗೊಂಡು ಎಲ್ಲೂ ಕೆರೆಗಳಿಗೂ ಪೈಪ್‌ಲೈನ್‌ ಮೂಲಕವೇ ನೀರು ಹರಿಸಲಾಗುವುದು ಎಂದರು.

ತಾಪಂ ಸದಸ್ಯ ಎಂ.ಆರ್‌.ವಾಸು, ಮಾಜಿ ಸದಸ್ಯ ಪುಟ್ಟರಾಜು, ಎಪಿಎಂಸಿ ಮಾಜಿ ಅಧ್ಯಕ್ಷ ರಘುರಾಮ್‌, ಪಿಕಾರ್ಡ್‌ ಬ್ಯಾಂಕ್‌ ನಿರ್ದೇಶಕ ನಟೇಶ್‌, ಗುತ್ತಿಗೆದಾರ ರಾಮಚಂದ್ರ, ದಿಡಗ ಹಾಗೂ ಕಬ್ಬಳಿ ಗ್ರಾಪಂ ವ್ಯಾಪ್ತಿಯ ರೈತರು ಪಾಲ್ಗೊಂಡಿದ್ದರು.

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

Swana

ಮಾದಕ ವ್ಯಸನ ಪತ್ತೆಗೂ ಶ್ವಾನದಳ ; ಪೊಲೀಸ್‌ ಇಲಾಖೆಗೆ ಮತ್ತಷ್ಟು ಬಲ

ಕೋವಿಡ್: ಮುಂದಿನ 3 ತಿಂಗಳು ನಿರ್ಣಾಯಕ

ಕೋವಿಡ್: ಮುಂದಿನ 3 ತಿಂಗಳು ನಿರ್ಣಾಯಕ

ಗ್ರಾ.ಪಂ. ಚುನಾವಣೆ: ತೀರ್ಪು ಕಾಯ್ದಿರಿಸಿದ ಹೈಕೋರ್ಟ್‌

ಗ್ರಾ.ಪಂ. ಚುನಾವಣೆ: ತೀರ್ಪು ಕಾಯ್ದಿರಿಸಿದ ಹೈಕೋರ್ಟ್‌

ರಾಜ್ಯ ಹೂಡಿಕೆದಾರರ ಆದ್ಯತೆಯ ತಾಣ: ಸಿಎಂ

ರಾಜ್ಯ ಹೂಡಿಕೆದಾರರ ಆದ್ಯತೆಯ ತಾಣ: ಸಿಎಂ

Rajyostva

ರಾಜ್ಯೋತ್ಸವ ಪ್ರಶಸ್ತಿ ಪಟ್ಟಿ; ಮುಖ್ಯಮಂತ್ರಿ ನಿರ್ಧಾರ ಅಂತಿಮ

IPLಬೌಲ್ಟ್, ಬುಮ್ರಾ ಭಯಾನಕ ಬೌಲಿಂಗ್‌; ಚೆನ್ನೈ ಬೌಲ್ಡ್‌

ಬೌಲ್ಟ್, ಬುಮ್ರಾ ಭಯಾನಕ ಬೌಲಿಂಗ್‌; ಚೆನ್ನೈ ಬೌಲ್ಡ್‌

ರಾಜ್ಯದಲ್ಲಿ ಇಳಿಮುಖದತ್ತ ಕೋವಿಡ್ ಸೋಂಕು

ರಾಜ್ಯದಲ್ಲಿ ಇಳಿಮುಖದತ್ತ ಕೋವಿಡ್ ಸೋಂಕು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

HASAN-TDY-2

ವೀರಗಲ್ಲು ಧ್ವಂಸ: ಕಿಡಿಗೇಡಿಗಳ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ

hasan-tdy-1

ಏತನೀರಾವರಿ ಯೋಜನೆಯಿಂದ ರೈತರ ಬದುಕು ಹಸನು

Hasan-tdy-2

ಕಾಫಿ ಬೆಳೆಗಾರನ ಬದುಕು ಕಸಿದ ಮಳೆ

HASAN-TDY-1

ಮಳೆಗೆ ಕಳೆಕಟ್ಟಿದ ರಾಗಿ ಬೆಳೆ

hasan-tdy-2

ಅಂಗನವಾಡಿ ಕಾರ್ಯಕರ್ತೆಯರ ಸೇವೆ ಕಾಯಂ ಮಾಡಿ

MUST WATCH

udayavani youtube

450 ಕ್ಕೂ ಅಧಿಕ ಬೀದಿ ಬದಿ ಶ್ವಾನಗಳಿಗೆ ನಿತ್ಯ ಆಹಾರ ನೀಡುತ್ತಾರೆ ರಜನಿ ಶೆಟ್ಟಿ!

udayavani youtube

The Sharada statue embodied in the artist’s finesse | Navaratri Special

udayavani youtube

ಮಲ್ಪೆ: ಬಲೆಗೆ ಬಿತ್ತು ಭಾರಿ ಗಾತ್ರದ ಎರಡು ಕೊಂಬು ತೊರಕೆ ಮೀನು

udayavani youtube

ಉಡುಪಿಯಲ್ಲಿ ಪ್ರಪ್ರಥಮ ಬಾರಿಗೆ ಪ್ರಾರಂಭವಾಗಿರುವ ದೇಶಿ ಉತ್ಪನ್ನಗಳ ಮಳಿಗೆ

udayavani youtube

ಸ್ವಾಮಿತ್ವ: ಹೊಸ ಯೋಜನೆಯಿಂದ ನಮಗೆ ಏನು ಲಾಭ ?ಹೊಸ ಸೇರ್ಪಡೆ

Swana

ಮಾದಕ ವ್ಯಸನ ಪತ್ತೆಗೂ ಶ್ವಾನದಳ ; ಪೊಲೀಸ್‌ ಇಲಾಖೆಗೆ ಮತ್ತಷ್ಟು ಬಲ

ಗ್ರಾ. ಪಂ.ಗಳಿಗೆ ಪರಮಾಧಿಕಾರ: ದೇವಿಪ್ರಸಾದ್‌ ಶೆಟ್ಟಿ

ಗ್ರಾ. ಪಂ.ಗಳಿಗೆ ಪರಮಾಧಿಕಾರ: ದೇವಿಪ್ರಸಾದ್‌ ಶೆಟ್ಟಿ

ಅಸ್ತಿಮಜ್ಜೆ, ಕಸಿ ಸೇವೆ ಆರಂಭಕ್ಕೆ ಚಿಂತನೆ: ಡಾ| ಬಲ್ಲಾಳ್‌

ಅಸ್ತಿಮಜ್ಜೆ, ಕಸಿ ಸೇವೆ ಆರಂಭಕ್ಕೆ ಚಿಂತನೆ: ಡಾ| ಬಲ್ಲಾಳ್‌

ಕೋವಿಡ್: ಮುಂದಿನ 3 ತಿಂಗಳು ನಿರ್ಣಾಯಕ

ಕೋವಿಡ್: ಮುಂದಿನ 3 ತಿಂಗಳು ನಿರ್ಣಾಯಕ

ಗ್ರಾ.ಪಂ. ಚುನಾವಣೆ: ತೀರ್ಪು ಕಾಯ್ದಿರಿಸಿದ ಹೈಕೋರ್ಟ್‌

ಗ್ರಾ.ಪಂ. ಚುನಾವಣೆ: ತೀರ್ಪು ಕಾಯ್ದಿರಿಸಿದ ಹೈಕೋರ್ಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.