ಬರಹಗಾರರಿಗೆ ಪ್ರೇರಣೆ ನೀಡುವಂತವರಾಗಿ

ಕೃತಿಯಲ್ಲಿನ‌ ವೈಚಾರಿಕತೆ-ಮೌಡ್ಯ ವಿರೋಧಿ ಧೋರಣೆ ಸ್ವಾಗತಾರ್ಹ: ಬಸವಶಾಂತಲಿಂಗ ಶ್ರೀ

Team Udayavani, May 7, 2019, 12:47 PM IST

ಹಾವೇರಿ: ಶ್ರೀದ್ವಯರು, ಗಣ್ಯರು, ಸಾಹಿತಿಗಳು ಕೃತಿ ಲೋಕಾರ್ಪಣೆಗೊಳಿಸಿದರು.

ಹಾವೇರಿ: ಸಮಕಾಲೀನ ಸಮಸ್ಯೆಗಳನ್ನು ಅರ್ಥೈಸಿ ಅವುಗಳಿಗೆ ತಕ್ಷಣದ ಪ್ರತಿಕ್ರಿಯೆ ನೀಡಿ ಚರ್ಚೆಗೊಡ್ಡುವ ಶಕ್ತಿ ಅಂಕಣ ಬರಹಗಳಿಗಿದೆ ಎಂದು ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ನುಡಿದರು.

ಇಲ್ಲಿಯ ಹೊಸಮಠದ ಆವರಣದಲ್ಲಿ ನಡೆದ ಜಿಲ್ಲೆಯ ಆರು ಯುವ ಬರಹಗಾರರು ಬರೆದ ‘ಆರಂಕಣಕಾರರು’ ಮತ್ತು ಕವಯತ್ರಿ ಗಾಯತ್ರಿ ರವಿಯವರ ‘ಕುರುಡನಿಗೆ ಕನ್ನಡಿ’ ಎಂಬೆರಡು ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಹಾವೇರಿ ನೆಲದ ಆರು ಯುವ ಬರಹಗಾರರ ಸಂಪಾದಿತ ‘ಆರಂಕಣಕಾರರು’ ಕೃತಿಯಲ್ಲಿ ವೈಚಾರಿಕತೆ ಮತ್ತು ಮೌಡ್ಯ ವಿರೋಧಿ ಧೋರಣೆಗಳಿರುವುದು ಸ್ವಾಗತಾರ್ಹ. ಇದೊಂದು ಸಾಮಾಜಿಕ ಜಾಗೃತಿಯ ಕೆಲಸ ಎಂದರು.

ತಮ್ಮ ಜೀವನದಲ್ಲಿ ಕಂಡುಂಡ ಸಹಜ ಅನುಭವಗಳನ್ನು ‘ಕುರುಡನಿಗೆ ಕನ್ನಡಿ’ ಕಾವ್ಯ ಸಂಕಲನದಲ್ಲಿ ಬಹಳ ಸೂಕ್ಷ ್ಮವಾಗಿ ಗಾಯತ್ರಿ ರವಿ ಚಿತ್ರಿಸಿದ್ದಾರೆ. ಇದು ಹೊಸ ಕವಿಗಳಿಗೆ ಕಾವ್ಯ ಪ್ರೀತಿ ಬೆಳೆಯಲು ಪ್ರೇರಣಾದಾಯಕವಾಗಿದೆ ಎಂದರು.

ಸಾನ್ನಿಧ್ಯವಹಿಸಿದ್ದ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ, ಬರಹಗಾರರಾಗಲು ಸಾಧ್ಯವಾಗದಿದ್ದರೆ ಬರಹಗಾರರಿಗೆ ಪ್ರೇರಣೆ ನೀಡುವಂತವರಾಗಬೇಕು. ಈ ಎರಡೂ ಕೆಲಸಗಳು ‘ಆರಂಕಣಕಾರರು’ ಮತ್ತು ‘ಕುರುಡನಿಗೆ ಕನ್ನಡಿ’ ಪುಸ್ತಕಗಳ ಸಂದರ್ಭದಲ್ಲಿ ಆಗಿರುವುದು ಶ್ಲಾಘನೀಯ. ಹಲವು ಹೊಸ ಬರಹಗಾರರಿಗೆ ನೆಲೆ ಕಲ್ಪಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕವಿಪ್ರ ನೌಕರರ ಸಂಘದ ನಾಯಕರಾದ ವಿಜಯಕುಮಾರ ಮುದಕಣ್ಣನವರ ಮಾತನಾಡಿ, ಹೊಸ ಕಾಲದಲ್ಲಿ ಪುಸ್ತಕದ ಸ್ವರೂಪ ಮತ್ತು ಅಸ್ತಿತ್ವ ತುಂಬ ಬೇರೆಯಾಗಿದೆ. ಕ್ಷಣಾರ್ಧದಲ್ಲಿ ನೂರಾರು ಪುಟಗಳ ಪುಸ್ತಕಗಳನ್ನು ಅಂತರ್ಜಾಲದಲ್ಲಿ ಮುಳಗಿಸಿ ಬಿಡುವ ಈ ದಿನಗಳಲ್ಲಿ ಪುಸ್ತಕಗಳು ಉಳಿಯಬೇಕು. ಪುಸ್ತಕದ ಓದು ಮಾತ್ರ ಸುಖ ಕೊಡಬಲ್ಲವು. ಪುಸ್ತಕ ಸಂಸ್ಕೃತಿ ನಾಶವಾಗಬಾರದು ಎಂದರು.

‘ಆರಂಕಣಕಾರರು’ ಕೃತಿ ಪರಿಚಯಿಸಿದ ಲೇಖಕಿ ರೇಖಾ ಭೈರಕ್ಕನವರ, ಸರಳ ಭಾಷೆ, ನಿತ್ಯದ ಜ್ವಲಂತ ಅನುಭವಗಳನ್ನು ಕಟ್ಟಿಕೊಡವ ಅಂಕಣ ಬರಹ ತುಂಬ ಕಠಿಣವಾದ ಕೆಲಸ. ಆದರೆ, ಹಾವೇರಿ ಆರು ಹೊಸ ಪ್ರತಿಭೆಗಳು ವಿಮರ್ಶೆ, ಲಲಿತ ಪ್ರಬಂಧ ಹಾಗೂ ಸಾಮಾಜಿಕ ಸಮಸ್ಯೆಗಳ ಬರೆದ ‘ಆರಂಕಣಕಾರರು’ ಓದಿಗೆ ಸೆಳೆಯುವ ಕೃತಿ ಎಂದರು.

ಲೇಖಕಿ ಗಾಯತ್ರಿ ರವಿ ಅವರ ‘ಕುರುಡನಿಗೆ ಕನ್ನಡಿ’ ಸಂಕಲನ ಪರಿಚಯ ಮಾಡಿಕೊಟ್ಟ ಪ್ರತಿಭಾವಂತ ಕವಿ ಶಿಗ್ಗಾವಿಯ ರಂಜಾನ್‌ ಕಿಲ್ಲೇದಾರ್‌, ಮಾತು ಮತ್ತು ಮೌನಗಳ ಮೌಲ್ಯಗೊತ್ತಿರುವ ಗಾಯತ್ರಿ ರವಿಯವರು ಅತ್ಯಂತ ಸೂಕ್ಷ ್ಮಗ್ರಾಹಿಯಾಗಿ ಕಾವ್ಯ ರಚಿಸಿದ್ದು ಹಾವೇರಿ ನೆಲದ ಹೆಮ್ಮೆಯಾಗಿದೆ ಎಂದರು.

ಈ ಸಂದರ್ಭದಲ್ಲಿ ‘ಆರಂಕಣಕಾರರು’ ಕೃತಿಯೊಳಗಿನ ಲೇಖಕರಾದ ವಾಗೀಶ ಬ. ಹೂಗಾರ, ಜಿ.ಎಂ. ಓಂಕಾರಣ್ಣನವರ, ಚಿನ್ನು ಎಸ. ರಾಗಿ (ಸವಣೂರು), ಗಾಯತ್ರಿ ರವಿ, ಲತಾ ರಮೇಶ ವಾಲಿ (ಸವಣೂರು) ಹಾಗೂ ರಾಜೇಶ್ವರಿ ರವಿ ಸಾರಂಗಮಠ ಅವರನ್ನು ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಗಣ್ಯರಾದ ಡಾ| ಜೆ.ಜಿ. ದೇವಧರ, ಮಾಧುರಿ, ನಾಗೇಂದ್ರ ಕಟಕೋಳ, ಎನ್‌.ಕೆ. ಮರೋಳ, ಕರಿಯಪ್ಪ ಹಂಚಿನಮನಿ, ವೈ.ಬಿ. ಆಲದಕಟ್ಟಿ, ಗಂಗಾಧರ ನಂದಿ, ಮಾರುತಿ ಶಿಡ್ಲಾಪೂರ, ದಾಕ್ಷಾಯಿಣಿ ಗಾಣಗೇರ, ಲಲಿತಕ್ಕ ಹೊರಡಿ, ರುದ್ರಪ್ಪ ಜಾಬೀನ್‌, ಸಿ.ಎ. ಕೂಡಲಮಠ, ಶಶಿಕಲಾ ಅಕ್ಕಿ, ಮುಂತಾದವರು ಭಾಗವಹಿಸಿದ್ದರು.

ವೈಷ್ಣವಿ ಪ್ರಾರ್ಥನೆ ಹಾಡಿದಳು. ನಾಗರಾಜ ನಡುವಿನಮಠ ಸ್ವಾಗತಿಸಿದರು. ಎಸ್‌.ಆರ್‌. ಹಿರೇಮಠ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮಲ್ಲಕಾರ್ಜುನ ಹಿಂಚಿಗೇರಿ ಕಾರ್ಯಕ್ರಮ ನಿರೂಪಿಸಿದರು. ಪೃಥ್ವಿರಾಜ ಬೆಟಗೇರಿಯವರು ವಂದಿಸಿದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ