ಫಾಸ್ಟಾಗ್‌ಗೆ ಜಿಲ್ಲೆಯ ಟೋಲ್‌ ಸಜ್ಜು


Team Udayavani, Nov 24, 2019, 1:06 PM IST

hv-tdy-2

ಹಾವೇರಿ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಗದುರಹಿತ ಶುಲ್ಕ ಪಾವತಿಗಾಗಿ “ಫಾಸ್ಟಾಗ್‌’ ಎಂಬ ಇ-ಟೋಲ್‌ ವ್ಯವಸ್ಥೆಯನ್ನು ಡಿಸೆಂಬರ್‌ 1ರಿಂದ ಕಡ್ಡಾಯಗೊಳಿಸಿದ್ದು, ಈ ವ್ಯವಸ್ಥೆ ಅನುಷ್ಠಾನಕ್ಕೆ ಜಿಲ್ಲೆಯಲ್ಲಿರುವ ಎರಡು ಟೋಲ್‌ ಕೇಂದ್ರಗಳು ಸಜ್ಜಾಗಿವೆ.

ಜಿಲ್ಲೆಯಲ್ಲಿ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ನಂ. 4 ಹಾದು ಹೋಗಿದ್ದು, ಶಿಗ್ಗಾವಿ ತಾಲೂಕು ಬಂಕಾಪುರ ಹಾಗೂ ರಾಣಿಬೆನ್ನೂರು ತಾಲೂಕು ಚಳಗೇರಿಗಳಲ್ಲಿ ಟೋಲ್‌ ಕೇಂದ್ರಗಳನ್ನು ಹೊಂದಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮೂರು ವರ್ಷಗಳ ಹಿಂದೆಯೇ ಮೊದಲ ಹಂತವಾಗಿ

ದೇಶದ 275 ಟೋಲ್‌ ಕೇಂದ್ರಗಳಲ್ಲಿ, ರಾಜ್ಯದ 31 ಕೇಂದ್ರಗಳಲ್ಲಿ ಈ ವ್ಯವಸ್ಥೆ ಅನುಷ್ಠಾನಗೊಳಿಸಿತ್ತು. ಇದರಲ್ಲಿ ಜಿಲ್ಲೆಯ ಈ ಎರಡೂ ಟೋಲ್‌ ಕೇಂದ್ರಗಳೂ ಸೇರಿದ್ದವು. ಆದರೆ, ಈ ವ್ಯವಸ್ಥೆ ಕಡ್ಡಾಯ ಮಾಡದೆ ಇರುವುದರಿಂದ ಕೆಲವೇ ಕೆಲವುವಾಣಿಜ್ಯ ವಾಹನಗಳ ಮಾಲೀಕರು ಮಾತ್ ಈ ವ್ಯವಸ್ಥೆ ಅಳವಡಿಸಿಕೊಂಡಿದ್ದರು. ಹೀಗಾಗಿ ಈ ವ್ಯವಸ್ಥೆ ಇದ್ದೂ ಇಲ್ಲದಂತಿತ್ತು. ಜನರು ಸರದಿಯಲ್ಲಿ ನಿಂತು ಹಣ ಕೊಟ್ಟು ರಸೀದಿ ಪಡೆದುಕೊಂಡೇ ಮುಂದೆ ಸಾಗುತ್ತಿದ್ದರು. ಈಗ “ಫಾಸ್ಟಾಗ್‌’ ಕಡ್ಡಾಯಗೊಳಿಸುತ್ತಿರುವುದರಿಂದ ಈ ವ್ಯವಸ್ಥೆಯಲ್ಲಿ ಅತಿಹೆಚ್ಚು ಜನರು ಅಳವಡಿಸಿಕೊಳ್ಳುವ ನಿರೀಕ್ಷೆ ಹೊಂದಲಾಗಿದೆ. ಇದರಿಂದ ಟೋಲ್‌ ಗಳಲ್ಲಿ ಸರದಿ ಸಾಲಿನ ತಲೆಬಿಸಿ ಇಲ್ಲದೇ ವಾಹನಗಳು ಸರಾಗವಾಗಿ ಸಂಚರಿಸಲಿವೆ.

ಸಕಲ ವ್ಯವಸ್ಥೆ: “ಫಾಸ್ಟಾಗ್‌’ ಇ-ಟೋಲ್‌ ವ್ಯವಸ್ಥೆಗಾಗಿ ಈ ಎರಡೂ ಟೋಲ್‌ ಕೇಂದ್ರಗಳಲ್ಲಿ ಎರಡೂ ಕಡೆ ಈಗಾಗಲೇ ಮಾರ್ಗ ಮೀಸಲಿಟ್ಟಿದ್ದು, ಕ್ಯಾಮೆರಾ, ಸೆನ್ಸಾರ್‌, ಸರ್ವರ್‌ ಹಾಗೂ ಇ- ಟೋಲ್‌ ಕಾರ್ಡ್‌ ಸೇವಾ ಕೇಂದ್ರ ತೆರೆದಿವೆ. ಈ ವ್ಯವಸ್ಥೆಯನ್ನು ಡಿ. 1ರಿಂದ ಕಡ್ಡಾಯಗೊಳಿಸುತ್ತಿರುವುದರಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವೇ ಉಚಿತವಾಗಿ “ಫಾಸ್ಟಾಗ್‌’ ನೀಡಲು ನಿರ್ಧರಿಸಿದೆ. ಜತೆಗೆ ಈ “ಫಾಸ್ಟಾಗ್‌’ ವ್ಯವಸ್ಥೆ ಅಳವಡಿಸಿಕೊಂಡವರಿಗೆ ರಿಯಾಯಿತಿಯೂ ಇರುವುದರಿಂದ ಈ ವ್ಯವಸ್ಥೆಯನ್ನು ಹೆಚ್ಚಿನ ವಾಹನ ಮಾಲೀಕರು ಅಳವಡಿಸಿಕೊಳ್ಳುವ ನಿರೀಕ್ಷೆ ಹೊಂದಲಾಗಿದೆ.

“ಫಾಸ್ಟಾಗ್‌’ ಇ-ಟೋಲ್‌ ವ್ಯವಸ್ಥೆಯಿಂದಾಗಿ ಇನ್ನು ಮುಂದೆ ಹೆದ್ದಾರಿಯ ಟೋಲ್‌ಗ‌ಳಲ್ಲಿ ಸುಂಕ ಪಾವತಿಸಲು ಚಾಲಕರು ನಗದು ಹಣ ಇಟ್ಟುಕೊಳ್ಳುವ ಅಗತ್ಯತೆ ಇಲ್ಲ. ಜತೆಗೆ ಟೋಲ್‌ ಕೇಂದ್ರಗಳಲ್ಲಿ ಸುಂಕ ಕಟ್ಟಲು ಸಾಲುಗಟ್ಟಿ ನಿಲ್ಲುವ ಪ್ರಮೇಯವೂ ಇಲ್ಲ. ಹೆದ್ದಾರಿಯಲ್ಲಿ ವಾಹನಗಳು ಸರಾಗವಾಗಿ ಸಾಗುವ ಮೂಲಕ ಸಮಯ ಉಳಿತಾಯಕ್ಕೆಈ ವ್ಯವಸ್ಥೆ ಅನುಕೂಲವಾಗಲಿದೆ. ಇದು “ಫಾಸ್ಟಾಗ್‌’ ಉದ್ದೇಶವೂ ಆಗಿದೆ. ಒಟ್ಟಾರೆ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಎರಡೂ ಟೋಲ್‌ ಕೇಂದ್ರಗಳು ಫಾಸ್ಟಾಗ್‌ ವ್ಯವಸ್ಥೆ ಅನುಷ್ಠಾನಕ್ಕೆ ಸಜ್ಜಾಗಿದ್ದು ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುವ ನಿರೀಕ್ಷೆಯೂ ಹೊಂದಿವೆ.

ಹೊಸ ವ್ಯವಸ್ಥೆಗೆ ಸಿದ್ಧ :  ಬಂಕಾಪುರ ಹಾಗೂ ಚಳಗೇರಿ ಟೋಲ್‌ ಕೇಂದ್ರದಲ್ಲಿ “ಫಾಸ್ಟಾಗ್‌’ ಇ-ಟೋಲ್‌ಗಾಗಿ ಮೂರು ವರ್ಷಗಳ ಹಿಂದೆಯೇ ಎಲ್ಲ ವ್ಯವಸ್ಥೆ ಮಾಡಲಾಗಿದೆ. ಕ್ಯಾಮೆರಾ, ಸೆನ್ಸಾರ್‌ಗಳೆಲ್ಲ ಇದೆ. ಕೆಲವೇ ಕೆಲವು ವಾಹನ ಮಾಲೀಕರು ಈ ವ್ಯವಸ್ಥೆ ಅಳವಡಿಸಿಕೊಂಡಿದ್ದರು. ಈಗ ಕಡ್ಡಾಯ ಹಾಗೂ ರಿಯಾಯಿತಿ ಎರಡೂ ಇರುವುದರಿಂದ ಈ ಎಲ್ಲರೂ ಈ ವ್ಯವಸ್ಥೆ ಅಳವಡಿಸಿಕೊಳ್ಳುವ ನಿರೀಕ್ಷೆ ಇದೆ.  ಅನಿಲ ಜೆ., ಟೋಲ್‌ ಕೇಂದ್ರ ನಿರ್ವಹಣೆ ಅಧಿಕಾರಿ.

 ಏನಿದು ಫಾಸ್ಟಾಗ್‌?:  “ಫಾಸ್ಟಾಗ್‌’ ಎಂದರೆ ಇದು ಇ- ಟೋಲ್‌ ವ್ಯವಸ್ಥೆಗೆ ಇಟ್ಟ ಹೆಸರು. ರೇಡಿಯೋ ತರಂಗಾಂತರಗಳನ್ನು ಗುರುತಿಸಬಲ್ಲ ಪಟ್ಟಿಯೊಂದು ವಾಹನಗಳಿಗೆ ಅಳವಡಿಸಲಾಗುತ್ತದೆ. ಈ ಪಟ್ಟಿಯನ್ನೇ “ಫಾಸ್ಟಾಗ್‌’ ಕಾರ್ಡ್‌ ಎನ್ನಲಾಗುತ್ತದೆ. ನಾಲ್ಕು ಚಕ್ರ ಅಥವಾ ಅದಕ್ಕೂ ಮೀರಿದ ವಾಹನಗಳ ಮುಂಭಾಗದ ಗಾಜಿಗೆ ಅಂಟಿಸಲಾಗುತ್ತದೆ. ಮೊಬೈಲ್‌ನ ಪ್ರಿಪೇಯ್ಡ ಸಿಮ್‌ನಂತೆ ಇದೊಂದು ಪೂರ್ವ ಹಣ ಪಾವತಿಯ ವ್ಯವಸ್ಥೆಯಾಗಿದೆ. ವಾಹನ ಟೋಲ್‌ ಕೇಂದ್ರದಲ್ಲಿರುವ “ಫಾಸ್ಟಾಗ್‌’ ಮಾರ್ಗದಲ್ಲಿ ಸಂಚರಿಸಿದಾಗ ಅಲ್ಲಿ ಅಳವಡಿಸಿರುವ ಯಂತ್ರ “ಫಾಸ್ಟಾಗ್‌’ ಕಾರ್ಡ್‌ನಲ್ಲಿರುವ ಮಾಹಿತಿ ಗ್ರಹಿಸಿ, “ಫಾಸ್ಟಾಗ್‌’ಗೆ ಸಂಯೋಜಿತ ಖಾತೆಯಿಂದ ಶುಲ್ಕದ ಹಣ ಕಡಿತಗೊಂಡು ಮೊಬೈಲ್‌ಗೆ ಸಂದೇಶ ಬರುತ್ತದೆ. “ಫಾಸ್ಟಾಗ್‌’ ಬ್ಯಾಂಕ್‌ ಖಾತೆಗೆ ಲಿಂಕ್‌ ಆಗಿರುವುದರಿಂದ ಖಾತೆಯಿಂದಲೇ ಹಣ ಸಂದಾಯವಾಗುತ್ತದೆ. ಇಲ್ಲವೇ ಇತರ ಪೇಮೆಂಟ್‌ ವ್ಯವಸ್ಥೆ ಮೂಲಕ ರಿಚಾರ್ಜ್‌ ಮಾಡಬಹುದಾಗಿದೆ. ವಾಹನಗಳ ಸಂಖ್ಯೆಯ ಆಧಾರದಲ್ಲಿ ಹಣ ರಿಚಾರ್ಜ್‌ ಮಾಡಬಹುದಾಗಿದೆ. ಇ-ಟೋಲ್‌ಗೆ ಹಣ ಸಂದಾಯ ಮಾಡಲು ಖಾತೆಯಲ್ಲಿ ಹಣ ಕಡಿಮೆಯಾದರೆ ಬಳಕೆದಾರರಿಗೆ ಎಸ್‌ಎಂಎಸ್‌ ಸಂದೇಶ ಬರುತ್ತದೆ. ಈ ವ್ಯವಸ್ಥೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ರಿಯಾಯಿತಿಯನ್ನೂ ಕಲ್ಪಿಸಲಾಗಿದೆ. “ಫಾಸ್ಟ್‌ಟ್ಯಾಗ್‌’ ಮಾರ್ಗದಲ್ಲಿ ಈ ಫಾಸ್ಟ್‌ಟ್ಯಾಗ್‌ ಕಾರ್ಡ್‌ ಇಲ್ಲದ ಮಾರ್ಗ ಬಂದರೆ ಸ್ವಲ್ಪ ದೂರ ಬಂದ ತಕ್ಷಣ ಸೈರನ್‌, ರೆಡ್‌ ಸಿಗ್ನಲ್‌ ಬರುತ್ತದೆ. ಜತೆಗೆ ಅಲ್ಲಿರುವ ಒಬ್ಬ ನಿರ್ವಾಹಕ ಸಹ ಆಗ ಆ ವಾಹನ ಪಕ್ಕದ ಶುಲ್ಕ ಪಾವತಿ ಮಾರ್ಗಕ್ಕೆ ತಿರುಗಿಸಿಕೊಳ್ಳುವಂತೆ ಸೂಚನೆ ನೀಡುತ್ತಾನೆ.

 

-ಎಚ್‌.ಕೆ. ನಟರಾಜ

ಟಾಪ್ ನ್ಯೂಸ್

priyanka gandhi (2)

Modi ಮದುವೆ ಮನೆಯಲ್ಲಿ ಕೂತ ಮಾವ ಇದ್ದಂತೆ: ಪ್ರಿಯಾಂಕಾ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ

ಹಾವೇರಿ: ಕಾಂಗ್ರೆಸ್‌ ಗ್ಯಾರಂಟಿಗೆ ಬೆಲೆ ಇಲ್ಲ- ಬಸವರಾಜ ಬೊಮ್ಮಾಯಿ

ಹಾವೇರಿ: ಕಾಂಗ್ರೆಸ್‌ ಗ್ಯಾರಂಟಿಗೆ ಬೆಲೆ ಇಲ್ಲ- ಬಸವರಾಜ ಬೊಮ್ಮಾಯಿ

ರಾಣಿಬೆನ್ನೂರ: ಸನ್ಮಾರ್ಗ ತೋರುತ್ತಿವೆ ಮಠ-ಮಾನ್ಯಗಳು: ಹರಳಯ್ಯ ಶ್ರೀ

ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ

ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

priyanka gandhi (2)

Modi ಮದುವೆ ಮನೆಯಲ್ಲಿ ಕೂತ ಮಾವ ಇದ್ದಂತೆ: ಪ್ರಿಯಾಂಕಾ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.