Haveri; ಸರ್ಕಾರಿ ಉದ್ಯೋಗ ತಂತಿ ಮೇಲಿನ ನಡಿಗೆ – ಎಂ.ಕೆ.ಮರಿಗೌಡರ

Team Udayavani, Oct 17, 2023, 6:20 PM IST

Haveri; ಸರ್ಕಾರಿ ಉದ್ಯೋಗ ತಂತಿ ಮೇಲಿನ ನಡಿಗೆ – ಎಂ.ಕೆ.ಮರಿಗೌಡರ

ಹಾನಗಲ್ಲ: ಸರಕಾರಿ ಉದ್ಯೋಗಗಳು ಹೆಚ್ಚು ಒತ್ತಡದ ಹಾಗೂ ಬಹಳಷ್ಟು ಜವಾಬ್ದಾರಿಯಲ್ಲಿ ಕಾರ್ಯ ನಿರ್ವಹಿಸುವ ಹಂತದಲ್ಲಿದ್ದು ತಂತಿಯ ಮೇಲಿನ ನಡಿಗೆಯಂತಾಗಿವೆ ಎಂದು ಕಲಘಟಗಿಯ ನಿವೃತ್ತ ಕ್ಷೇತ್ರ ಶಿಕ್ಷಣಾ ಧಿಕಾರಿ ಎಂ.ಕೆ.ಮರಿಗೌಡರ ಅಭಿಪ್ರಾಯಿಸಿದರು.

ಹಾನಗಲ್ಲಿನಲ್ಲಿ ಶ್ರೀ ಕುಮಾರೇಶ್ವರ ಶಿಕ್ಷಣ ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿಗಳ ಸಂಘ ಆಯೋಜಿಸಿದ ಗುರುವಂದನಾ
ಸಮಾರಂಭದಲ್ಲಿ ವಿದ್ಯಾರ್ಥಿಗಳಿಂದ ಗುರು ವಂದನೆ ಸ್ವೀಕರಿಸಿ ಮಾತನಾಡಿದ ಅವರು, ವೃತ್ತಿ ಪ್ರವೃತ್ತಿಗಳಲ್ಲಿ ಸಾಮರಸ್ಯ ಉಳಿಸಿಕೊಳ್ಳುವುದೇ ಕಷ್ಟದ ಕೆಲಸವಾಗಿದೆ.

ಅಧಿಕಾರಿಯಾಗಿ ಕೆಲಸ ಮಾಡುವವರಿಗೆ ಅದರ ಆಚೆ ನಿಂತು ನೋಡುವ ಸಮಯಾವಕಾಶವೇ ಇಲ್ಲ. ಇಂಥ ಸಂದಿಗ್ಧ ಸ್ಥಿತಿಯಲ್ಲಿಯೂ ಕೂಡ ವೃತ್ತಿಯನ್ನು ಪ್ರಾಮಾಣಿಕತೆಯಿಂದ ಪೂರ್ಣಗೊಳಿಸುವುದೇ ಹರ ಸಾಹಸದಂತಿದೆ. ಸರಕಾರಿ ಉದ್ಯೋಗಗಳು ಆರ್ಥಿಕ ಭದ್ರತೆ ಒದಗಿಸುತ್ತವೆ. ಅದರೊಂದಿಗೆ ಖಾಸಗಿಯಾಗಿ ಹತ್ತು ಹಲವು ಉದ್ಯಮಗಳಲ್ಲಿ ಸೇವೆ ಸಲ್ಲಿಸಿ ಯಶಸ್ವಿಯಾದ ಸಂದರ್ಭಗಳಿಗೇನೂ ಕಡಿಮೆ ಇಲ್ಲ. ಯಾವ ಉದ್ಯೋಗವೇ ಆಗಿರಲಿ ಅದು ನಿಷ್ಠೆಯಿಂದಿರಲಿ. ಪಾಲಿಗೆ ಬಂದದ್ದನ್ನು ಪ್ರಾಮಾಣಿಕವಾಗಿ ಸ್ವೀಕರಿಸುವ ಮನಸ್ಸು ಬೇಕು ಎಂದರು.

ಸೊರಬದ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎಂ. ಸತ್ಯನಾರಾಯಣ ಗುರುವಂದನೆ ಸ್ವೀಕರಿಸಿ ಮಾತನಾಡಿ, ಗುರುಗಳನ್ನು ಗೌರವಿಸುವ ಮನಸ್ಸಿನ ಹಿಂದೆ ಇರುವ ಶ್ರದ್ಧೆ, ಪ್ರೀತಿಗಳಿಗೆ ದೊಡ್ಡ ಶಕ್ತಿ ಇದೆ. ಭಾರತೀಯ ಸಂಸ್ಕೃತಿಯಲ್ಲಿ ಇದಕ್ಕೆ ದೊಡ್ಡ ಮೌಲ್ಯವಿದೆ. ಗುರು ಶಿಷ್ಯರ ಸಂಬಂಧಗಳೇ ಹಳಸುತ್ತಿರುವ ಕಾಲದಲ್ಲಿ ಗುರುವನ್ನು ಗೌರವಿಸುತ್ತಿರುವ ಈ ಕಾರ್ಯಕ್ರಮಕ್ಕೆ ಹೆಚ್ಚು ಮೌಲ್ಯ ಬಂದಿದೆ. ತಿಂಗಳಿಗೆ ಸಾವಿರದೊಳಗಿನ ಗೌರವ ಧನ ಪಡೆದು ಈ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸೇವೆ ಸಲ್ಲಿಸಿದಾಗಲೂ ನಮಗೆ ಸಂತೃಪ್ತಿ ಇತ್ತು. ಅದಕ್ಕೆ ಕಾರಣ ಈ ಕ್ಷೇತ್ರದ ಮಹಿಮೆ. ನಮ್ಮೊಳಗೆ ಆಧ್ಯಾತ್ಮಿಕ ಶೈಕ್ಷಣಿಕ ಚಿಂತನೆಗೆ ಲಿಂ.ಹಾನಗಲ್ಲ ಕುಮಾರಶಿವಯೋಗಿಗಳವರ ಆದರ್ಶಗಳು ಪ್ರೇರಣೆಯಾಗಿದ್ದವು ಎಂದರು.

ಗದಗಿನ ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆ ನಿರ್ದೇಶಕಿ ಮಂಗಳಾ ತಾಪಸ್ಕರ ಗೌರವ ಸಮ್ಮಾನ ಸ್ವೀಕರಿಸಿ ಮಾತನಾಡಿ, ಶಿಷ್ಯರು ನೀಡುವ ಗೌರವದ ಮುಂದೆ ಬೇರಾವ ಗೌರವವೂ ಸಾಟಿ ಅಲ್ಲ. ಪ್ರಶಸ್ತಿಗಳು ನಮ್ಮ ಕೆಲಸಕ್ಕೆ ಸಿಗುವ ಸಮ್ಮಾನಗಳು. ಆದರೆ ಶಿಷ್ಯರು ನೀಡುವ ಗೌರವ ವಿದ್ಯಾರ್ಥಿ ಶಿಷ್ಯರ ನಡುವಿನ ದೀರ್ಘ‌ ಸಂತೃಪ್ತಿಯ ಸಂದೇಶಗಳಾಗಿವೆ.

ವೃತ್ತಿಯಲ್ಲಿನ ಏರುಪೇರುಗಳು ಹಲವು ಬಾರಿ ಒತ್ತಡಕ್ಕೆ ಕಾರಣವಾಗುತ್ತವೆ. ಆದರೆ ಇಂಥ ಸೌಹಾರ್ದ ಪ್ರೀತಿಯ ಸಮಾರಂಭಗಳು ಎಲ್ಲ ಒತ್ತಡಗಳನ್ನು ಕಳೆದು ಹೊಸ ಚೈತನ್ಯ ನೀಡುತ್ತವೆ. ಅಲ್ಲದೇ ಧನ್ಯತಾ ಭಾವ ಜಾಗೃತಗೊಳಿಸುತ್ತವೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ವೈ. ಹೂಗಾರ, ಉಪನ್ಯಾಸಕಿ ತನುಜಾ ನಾಯಕ, ಎಸ್‌.ವೈ. ಬಗಲಿ, ಎಸ್‌.ಎಫ್‌. ಬಂಡಿ, ರವಿರಾಜ ಕೋಪರ್ಡೆ, ಸುರೇಶ ಅರಗಂಜಿ ಗೌರವ ಸ್ವೀಕರಿಸಿ ಮಾತನಾಡಿದರು.

ಸಂಘಟಕರಾದ ಸಿದ್ದಲಿಂಗೇಶ ಒಳಸಂಗದ ಡಾ| ಬಿ.ಎಸ್‌. ರುದ್ರೇಶ, ಆರ್‌.ಎನ್‌.ಪಾಟೀಲ, ಸುನಿತಾ ಉಪ್ಪಿನ ಇದ್ದರು. ಹುಬ್ಬಳ್ಳಿ ಮೂರುಸಾವಿರಮಠದ ಜಗದ್ಗುರು ಗುರುಸಿದ್ಧರಾಜಯೋಗೀಂದ್ರ ಶ್ರೀಗಳು, ಗಣ್ಯರಾದ ಗುರುಸಿದ್ದಪ್ಪ ಕೊಂಡೋಜಿ, ಸಾಹಿತಿ ಪ್ರೊ| ಮಾರುತಿ ಶಿಡ್ಲಾಪೂರ, ಎಸ್‌.ಸಿ.ವಿರಕ್ತಮಠ ಇದ್ದರು.

ಟಾಪ್ ನ್ಯೂಸ್

1-wewqwq-eqw

Amit Shah ನಕಲಿ ವೀಡಿಯೋ :ತೆಲಂಗಾಣ ಸಿಎಂಗೆ ಪೊಲೀಸ್‌ ಸಮನ್ಸ್‌

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

ಬಿಜೆಪಿ-ಜೆಡಿಎಸ್‌ ಮೈತ್ರಿ ಮುಂದುವರಿಯುತ್ತದಾ?: ತೇಜಸ್ವಿನಿ ಗೌಡ

BJP-JDS ಮೈತ್ರಿ ಮುಂದುವರಿಯುತ್ತದಾ?: ತೇಜಸ್ವಿನಿ ಗೌಡ

Hassan Pen Drive Case: ಕಾಂಗ್ರೆಸ್‌ ಪ್ರತಿಭಟನಕಾರರ ವಿರುದ್ಧ ಜೆಡಿಎಸ್‌ ದೂರು

Hassan Pen Drive Case: ಕಾಂಗ್ರೆಸ್‌ ಪ್ರತಿಭಟನಕಾರರ ವಿರುದ್ಧ ಜೆಡಿಎಸ್‌ ದೂರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ

ಹಾವೇರಿ: ಕಾಂಗ್ರೆಸ್‌ ಗ್ಯಾರಂಟಿಗೆ ಬೆಲೆ ಇಲ್ಲ- ಬಸವರಾಜ ಬೊಮ್ಮಾಯಿ

ಹಾವೇರಿ: ಕಾಂಗ್ರೆಸ್‌ ಗ್ಯಾರಂಟಿಗೆ ಬೆಲೆ ಇಲ್ಲ- ಬಸವರಾಜ ಬೊಮ್ಮಾಯಿ

ರಾಣಿಬೆನ್ನೂರ: ಸನ್ಮಾರ್ಗ ತೋರುತ್ತಿವೆ ಮಠ-ಮಾನ್ಯಗಳು: ಹರಳಯ್ಯ ಶ್ರೀ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wewqwq-eqw

Amit Shah ನಕಲಿ ವೀಡಿಯೋ :ತೆಲಂಗಾಣ ಸಿಎಂಗೆ ಪೊಲೀಸ್‌ ಸಮನ್ಸ್‌

supreem

ಬಂಗಾಲ ಶಿಕ್ಷಕರ ನೇಮಕ ಸಿಬಿಐ ತನಿಖೆಗೆ ಮಾತ್ರ ತಡೆ: ಸುಪ್ರೀಂ ಕೋರ್ಟ್‌

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

Exam

NEET; ಕೋಟಾದಲ್ಲಿ ಮತ್ತೊಬ್ಬ ಆಕಾಂಕ್ಷಿ ಆತ್ಮಹತ್ಯೆ: ಇದು 8ನೇ ಪ್ರಕರಣ

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.