ಪಕ್ಕಡ ಹಿಡಿದ ಕೈ ಕಾರ್ಮಿಕರಿಗೆ ಪ್ರೇರಣೆ

•ಪ್ರತಿನಿತ್ಯ ಸ್ಮಾರಕಕ್ಕೆ ನಮಿಸಿಯೇ ಕರ್ತವ್ಯಕ್ಕೆ ಹಾಜರಿ •ಹಾವೇರಿಯಲ್ಲೊಂದು ಅಪರೂಪದ 'ಕಾರ್ಮಿಕ ಸ್ಮಾರಕ'

Team Udayavani, May 1, 2019, 12:41 PM IST

haveri-tdy-1..

ಹಾವೇರಿ: ಇಲ್ಲಿನ ಹೆಸ್ಕಾಂ ಕಚೇರಿ ಆವರಣದಲ್ಲಿರುವ ಕಾರ್ಮಿಕ ಸ್ಮಾರಕ.

ಹಾವೇರಿ: ನಮ್ಮ ದೇಶದಲ್ಲಿ ಸ್ಮಾರಕಗಳಿಗೇನೂ ಕಡಿಮೆ ಇಲ್ಲ. ಬೀದಿ ಬೀದಿಗೊಂದು ಸ್ಮಾರಕಗಳು ಕಾಣಲು ಸಿಗುತ್ತವೆ. ಆದರೆ, ಶ್ರಮಿಕ ವರ್ಗದ ಪ್ರತೀಕವಾಗಿ ಸ್ಮಾರಕ ಇರುವುದು ಬಲು ಅಪರೂಪ. ಇಂಥ ಅಪರೂಪದ ಸುಂದರ ಕಾರ್ಮಿಕ ಸ್ಮಾರಕ ನಗರದ ಹೆಸ್ಕಾಂ ಕಚೇರಿ ಆವರಣದಲ್ಲಿದೆ.

ಈ ಸ್ಮಾರಕ ಉಳ್ಳವರಿಂದ ಹಣ ಸಂಗ್ರಹಿಸಿ ನಿರ್ಮಿಸಿದ ಸ್ಮಾರಕವಲ್ಲ. ಈ ಸ್ಮಾರಕದ ಇಂಚಿಂಚಿನಲ್ಲಿಯೂ ಕಾರ್ಮಿಕರ ಶ್ರಮ ಇದೆ; ಶ್ರಮದ ಪ್ರತಿಫಲವಾಗಿ ಪಡೆದ ಹಣದ ವಿನಿಯೋಗವಿದೆ. ಈ ಕಾರಣದಿಂದಾಗಿಯೇ ಈ ಸ್ಮಾರಕ ಕಾರ್ಮಿಕರ ಶ್ರಮ, ದುಡಿಮೆಯ ಪ್ರತೀಕವಾಗಿದೆ.

ಕಾರ್ಮಿಕರಿಗೆ ಪ್ರೇರಣೆ ನೀಡುವ ಕಾರ್ಮಿಕರ ಸ್ಮಾರಕವೊಂದು ನಿರ್ಮಿಸಬೇಕೆಂದು ಮೊದಲು ಕನಸು ಕಂಡವರು ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮದ ನೌಕರರ ಸಂಘದ ಮಾಜಿ ಅಧ್ಯಕ್ಷ ಎನ್‌. ಜಯರಾಜ. ಈ ಕನಸು ನನಸಾಗಿಸಲು ಬಹಳ ಕಾಲ ಕಾಯಬೇಕಾದ ಪರಿಸ್ಥಿತಿ ಬರಲಿಲ್ಲ. ಏಕೆಂದರೆ ಎಲ್ಲ ಕಾರ್ಮಿಕರು ಸ್ಮಾರಕ ನಿರ್ಮಾಣಕ್ಕೆ ಭರಪೂರ ಬೆಂಬಲ ನೀಡಿದರು.

ಶ್ರಮದ ಹಣ: ಪ್ರತಿಯೊಬ್ಬ ಕಾರ್ಮಿಕರಿಂದ ಅವರ ಬೆವರಿನ ಬೆಲೆ ಸಂಗ್ರಹಿಸಲಾಯಿತು. ಕಾರ್ಮಿಕರಿಂದ ಸಂಗ್ರಹಿಸಿದ ಮೂರು ಲಕ್ಷ ರೂ.ಗಳಲ್ಲಿ ಕಾರ್ಮಿಕರ ಶ್ರಮದ ಪ್ರತೀಕವಾಗಿ (ಪಕ್ಕಡ್‌ ಹಿಡಿದ ಕೈ) ಇರುವ ಅರ್ಥಪೂರ್ಣ ಸ್ಮಾರಕ ನಿರ್ಮಾಣವಾಯಿತು. 2001 ಅಗಷ್ಟ 8ರಂದು ಕವಿಪ್ರ ನಿಗಮದ ಅಂದಿನ ಅಧ್ಯಕ್ಷ ವಿ.ಪಿ. ಬಳಿಗಾರ ಅರ್ಥಪೂರ್ಣ ಸ್ಮಾರಕವನ್ನು ನಾಡಿಗೆ ಸಮರ್ಪಿಸಿದರು. ಅಪರೂಪದ ಈ ಸ್ಮಾರಕ ಐದು ಅಡಿ ಎತ್ತರವಿದ್ದು, ಸಂಪೂರ್ಣ ಹೊಳಪಿನ ಕಪ್ಪು ಗ್ರ್ಯಾನೇಟ್ ಕಲ್ಲಿನಿಂದ ನಿರ್ಮಿಸಲಾಗಿದೆ. ಈ ಕಲ್ಲಿನ ಮೇಲೆ ಕನ್ನಡ, ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಕಾರ್ಮಿಕರ ಮೌಲ್ಯ ಸಾರುವ ನುಡಿಮುತ್ತಿನ ಅಕ್ಷರಗಳನ್ನು ಅಂದವಾಗಿ ಕೆತ್ತಲಾಗಿದೆ.

ದುಡಿಮೆಯ ಪ್ರತಿಬಿಂಬ: ಕಲ್ಲಿನ ಮೇಲೆ ಕೆತ್ತಲಾಗಿರುವ ‘ಮುಗಿವ ಕೈಗಳಿಗಿಂತ ದುಡಿಯುವ ಕೈಗಳೇ ಮೇಲು’ ಎಂಬ ಉಕ್ತಿ ಹಾಗೂ ‘ನಾಡಿಗೆ ಬೆಳಕು ಕೊಟ್ಟು ತಾವು ಕತ್ತಲೆ ಸೇರಿದ ಸಾವಿರಾರು ಕಾರ್ಮಿಕರ ಅಮರ ಸ್ಮಾರಕ’ ಎಂಬ ವಾಕ್ಯ ಕಾರ್ಮಿಕರ ಮಹತ್ವ, ಅವರ ಶ್ರಮದ ಮೌಲ್ಯವನ್ನು ಎತ್ತಿಹಿಡಿದಿವೆ. ಸ್ಮಾರಕ ಕಲ್ಲಿನ ಮೇಲೆ ಪಕ್ಕಡ್‌ ಹಿಡಿದಿರುವ ಕೈ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಇದು ವಿದ್ಯುತ್‌ ಇಲಾಖೆಯಲ್ಲಿ ದುಡಿಯುವ ಕಾರ್ಮಿಕರ ದುಡಿಮೆಯ ಪ್ರತಿಬಿಂಬವಾಗಿದೆ.

ನಿತ್ಯಾರಾಧನೆ: ಹಲವರು ಹಲವು ರೀತಿಯ ಸ್ಮಾರಕಗಳನ್ನು ನಿರ್ಮಿಸುತ್ತಾರೆ. ಕಟ್ಟಲೆಂದೇ ಹೋರಾಡುತ್ತಾರೆ; ಹಾರಾಡುತ್ತಾರೆ. ಆದರೆ, ಅದು ಉದ್ಘಾಟನೆಯಾದ ಮೇಲೆ ಸ್ಮಾರಕ ಅಕ್ಷರಶಃ ಅನಾಥವಾಗುತ್ತದೆ. ಮತ್ತೆ ಆ ಸ್ಮಾರಕ ನೆನಪಿಗೆ ಬರುವುದು ವರ್ಷಕ್ಕೊಮ್ಮೆ ಬರುವ ವಿಶೇಷ ದಿನದಂದು ಮಾತ್ರ. ಆದರೆ, ಹೆಸ್ಕಾಂನ ಈ ಕಾರ್ಮಿಕ ಸ್ಮಾರಕ ನಿತ್ಯ ಕಾರ್ಮಿಕರಿಗೆ ಅವರ ಶ್ರಮದ ಮಹತ್ವ ಜಾಗೃತಿಗೊಳಿಸುತ್ತಿದೆ.

ಕಚೇರಿಗೆ ಬರುವ ಪ್ರತಿಯೊಬ್ಬ ಕಾರ್ಮಿಕ ಒಮ್ಮೆ ಈ ಸ್ಮಾರಕಕ್ಕೆ ನಮಿಸಿಯೇ ತನ್ನ ಕರ್ತವ್ಯಕ್ಕೆ ಅಣಿಯಾಗುತ್ತಾನೆ. ತನ್ಮೂಲಕ ಈ ಸ್ಮಾರಕ ಕಾರ್ಮಿಕರಿಂದ ನಿತ್ಯಾರಾಧನೆಗೊಳ್ಳುತ್ತದೆ. ಅದರಲ್ಲೊಂದು ಶ್ರಮದ ಶಕ್ತಿಯನ್ನು ಕಾರ್ಮಿಕರು ಕಾಣುತ್ತಿರುವುದು ಮತ್ತೂಂದು ವಿಶೇಷ.

•’ಮುಗಿವ ಕೈಗಳಿಗಿಂತ ದುಡಿಯುವ ಕೈಗಳೇ ಮೇಲು’

ಟಾಪ್ ನ್ಯೂಸ್

ನಾಡಿದ್ದಿನಿಂದ 5 ದಿನ ರಾಜ್ಯಕ್ಕೆ ಬಿಜೆಪಿ ದಿಗ್ಗಜ ನಾಯಕರ ದಂಡು

ನಾಡಿದ್ದಿನಿಂದ 5 ದಿನ ರಾಜ್ಯಕ್ಕೆ ಬಿಜೆಪಿ ದಿಗ್ಗಜ ನಾಯಕರ ದಂಡು

Dakshina Kannada: ವಾರದಲ್ಲಿ ಐವರು ಯುವಜನರ ದಿಢೀರ್‌ ಸಾವು

Dakshina Kannada: ವಾರದಲ್ಲಿ ಐವರು ಯುವಜನರ ದಿಢೀರ್‌ ಸಾವು

Temperature; ರಾಜ್ಯದಲ್ಲಿ ಮತ್ತೆ ದಿಢೀರ್‌ ಏರಿದ ತಾಪಮಾನ

Temperature; ರಾಜ್ಯದಲ್ಲಿ ಮತ್ತೆ ದಿಢೀರ್‌ ಏರಿದ ತಾಪಮಾನ

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

1-S-M

TIME’s : 100 ಪ್ರಭಾವಿಗಳ ಪಟ್ಟಿಯಲ್ಲಿ ಸಾಕ್ಷಿ

ರಾಜ್ಯದಲ್ಲಿ ಇಂದು, ನಾಳೆ ಸಿಇಟಿ; ದಾಖಲೆಯ ಮೂರೂವರೆ ಲಕ್ಷ ವಿದ್ಯಾರ್ಥಿಗಳ ನೋಂದಣಿ

ರಾಜ್ಯದಲ್ಲಿ ಇಂದು, ನಾಳೆ ಸಿಇಟಿ; ದಾಖಲೆಯ ಮೂರೂವರೆ ಲಕ್ಷ ವಿದ್ಯಾರ್ಥಿಗಳ ನೋಂದಣಿ

Mandya Lok Sabha Constituency; ಸ್ಟಾರ್‌ ಚಂದ್ರು ಪರ ಇಂದು ನಟ ದರ್ಶನ್‌ ಪ್ರಚಾರ

Mandya Lok Sabha Constituency; ಸ್ಟಾರ್‌ ಚಂದ್ರು ಪರ ಇಂದು ನಟ ದರ್ಶನ್‌ ಪ್ರಚಾರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ls polls: ರಾಜ್ಯದಲ್ಲಿ ನಾವು 18 -20 ಸೀಟ್‌ ಗೆಲ್ಲುತ್ತೇವೆ; ಸಚಿವ ಶಿವಾನಂದ ಪಾಟೀಲ ವಿಶ್ವಾಸ

Ls polls: ರಾಜ್ಯದಲ್ಲಿ ನಾವು 18 -20 ಸೀಟ್‌ ಗೆಲ್ಲುತ್ತೇವೆ; ಸಚಿವ ಶಿವಾನಂದ ಪಾಟೀಲ ವಿಶ್ವಾಸ

ಲೋಕಸಭೆ ಚುನಾವಣೆ ಫಲಿತಾಂಶ ರಾಜ್ಯ ರಾಜಕಾರಣದ ಮೇಲೆ ದೊಡ್ಡ ಪರಿಣಾಮ ಬೀರಲಿದೆ: ಬೊಮ್ಮಾಯಿ

ಲೋಕಸಭೆ ಚುನಾವಣೆ ಫಲಿತಾಂಶ ರಾಜ್ಯ ರಾಜಕಾರಣದ ಮೇಲೆ ದೊಡ್ಡ ಪರಿಣಾಮ ಬೀರಲಿದೆ: ಬೊಮ್ಮಾಯಿ

ಹಾವೇರಿ- ಸತ್ಯದ ಸತ್ಪಥದಿಂದ ಜೀವನ ಪರಿವರ್ತನೆ: ರಂಭಾಪುರಿ ಶ್ರೀ

ಹಾವೇರಿ- ಸತ್ಯದ ಸತ್ಪಥದಿಂದ ಜೀವನ ಪರಿವರ್ತನೆ: ರಂಭಾಪುರಿ ಶ್ರೀ

ಬಸವರಾಜ ಬೊಮ್ಮಾಯಿ

LokSabha Election; ಕಾಂಗ್ರೆಸ್ ನ ಬಹುಮತ ಹೇಳಿಕೆಯೇ ಹಾಸ್ಯಾಸ್ಪದ: ಬಸವರಾಜ ಬೊಮ್ಮಾಯಿ

Haveri; ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ

Haveri; ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ನಾಡಿದ್ದಿನಿಂದ 5 ದಿನ ರಾಜ್ಯಕ್ಕೆ ಬಿಜೆಪಿ ದಿಗ್ಗಜ ನಾಯಕರ ದಂಡು

ನಾಡಿದ್ದಿನಿಂದ 5 ದಿನ ರಾಜ್ಯಕ್ಕೆ ಬಿಜೆಪಿ ದಿಗ್ಗಜ ನಾಯಕರ ದಂಡು

Dakshina Kannada: ವಾರದಲ್ಲಿ ಐವರು ಯುವಜನರ ದಿಢೀರ್‌ ಸಾವು

Dakshina Kannada: ವಾರದಲ್ಲಿ ಐವರು ಯುವಜನರ ದಿಢೀರ್‌ ಸಾವು

Temperature; ರಾಜ್ಯದಲ್ಲಿ ಮತ್ತೆ ದಿಢೀರ್‌ ಏರಿದ ತಾಪಮಾನ

Temperature; ರಾಜ್ಯದಲ್ಲಿ ಮತ್ತೆ ದಿಢೀರ್‌ ಏರಿದ ತಾಪಮಾನ

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

1-S-M

TIME’s : 100 ಪ್ರಭಾವಿಗಳ ಪಟ್ಟಿಯಲ್ಲಿ ಸಾಕ್ಷಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.