ರೈತರಿಗೆ ಬೀಜ-ಗೊಬ್ಬರ ತೊಂದರೆಯಾಗದಿರಲಿ

Team Udayavani, May 11, 2019, 2:52 PM IST

haveri-tdy-4..

ಹಾನಗಲ್ಲ: ಮಿನಿ ವಿಧಾನಸೌಧ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಕೃಷಿ ಅಧಿಕಾರಿ ಸಂಗಮೇಶ ಹಕ್ಲಪ್ಪನವರ ಮತನಾಡಿದರು.

ಹಾನಗಲ್ಲ: ಮುಂಗಾರು ಹಂಗಾಮು ಆರಂಭಗೊಳ್ಳುತ್ತಿದ್ದು, ಜೂನ್‌ ಆರಂಭದಲ್ಲಿ ಮಳೆ ಬರುವ ನಿರೀಕ್ಷೆ ಇದೆ. ರಸಗೊಬ್ಬರ, ಬಿತ್ತನೆ ಬೀಜ ಮಾರಾಟಗಾರರು ಕೃತಕ ಅಭಾವ ಸೃಷ್ಟಿಸದೇ ರೈತರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ತಹಶೀಲ್ದಾರ್‌ ಎಂ.ಗಂಗಪ್ಪ ಹೇಳಿದರು.

ಶುಕ್ರವಾರ ಮಿನಿ ವಿಧಾನಸೌಧ ಸಭಾಂಗಣದಲ್ಲಿ ಕೃಷಿ ಇಲಾಖೆ, ಕಂದಾಯ ಇಲಾಖೆ ಆಯೋಜಿಸಿದ್ದ ಬೀಜ-ಗೊಬ್ಬರಗಳ ಮಾರಾಟಗಾರರ ಮುಂಗಾರು ಹಂಗಾಮಿನ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಹೆಚ್ಚಿನ ಹಣ ಮಾರಾಟ ಬೇಡ: ಐಎಸ್‌ಐ ಮಾರ್ಕ್‌ ಇಲ್ಲದ, ಪ್ರಮಾಣೀಕರಿಸಲಾರದಂತಹ ನಕಲಿ ಕಂಪನಿಗಳ ಯಾವುದೇ ಬಿತ್ತನೆ ಬೀಜ ಮಾರುವಂತಿಲ್ಲ. ಅಭಾವ ಸೃಷ್ಟಿಸಿ ಬೀಜ-ಗೊಬ್ಬರಗಳನ್ನು ಬೇರೆ ಸ್ಥಳಗಳಲ್ಲಿ ಸಂಗ್ರಹಿಸುವುದು, ಹೆಚ್ಚಿನ ಹಣಕ್ಕೆ ಮಾರಾಟ ಮಾಡುವಂತಿಲ್ಲ. ಪರವಾನಗಿ ಇಲ್ಲದೇ ಅನಧಿಕೃತವಾಗಿ ಮಾರಾಟ ಮಾಡಬಾರದು. ಒಂದು ವೇಳೆ ಮಾರಿದರೆ ಅಂಥವರ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

ಬೇಡಿಕೆ-ದಾಸ್ತಾನು ಮಾಹಿತಿ: ಸಹಾಯಕ ಕೃಷಿ ನಿರ್ದೇಶಕ ಸಂಗಮೇಶ ಹಕ್ಲಪ್ಪನವರ ಮಾತನಾಡಿ, ಈಗಾಗಲೇ ಮಾರಾಟಗಾರರಿಗೆ ರಸಗೊಬ್ಬರ ಬೇಡಿಕೆ ಹಾಗೂ ದಾಸ್ತಾನುಗಳ ಮಾಹಿತಿ ನೀಡಲಾಗಿದೆ. ರೈತರು ಬೀಜ, ಗೊಬ್ಬರ ಖರೀದಿಸುವ ಸಂದರ್ಭದಲ್ಲಿ ತಮ್ಮ ಆಧಾರ್‌ ಕಾರ್ಡ್‌ ಸಂಖ್ಯೆ ಕಡ್ಡಾಯವಾಗಿ ಹಾಜರುಪಡಿಸಬೇಕು ಎಂದು ತಿಳಿಸಿದರು.

ಮಳೆಯ ಪ್ರಮಾಣ ಗಮನಿಸಿ ರೈತರು ಬಿತ್ತನೆ ಬೀಜಗಳ ಆಯ್ಕೆ ಮಾಡುತ್ತಾರೆ. ಅದಕ್ಕನುಗುಣವಾಗಿ ಬೀಜಗಳ ದಾಸ್ತಾನು ಕೈಗೊಳ್ಳಿ. ಪ್ರತಿ ಸೋಮವಾರ ಕೃಷಿ ಇಲಾಖೆಗೆ ಮಾರಾಟದ ಮಾಹಿತಿ ಸಲ್ಲಿಸಬೇಕು. ಅವಧಿ ಮೀರಿದ ಬೀಜ, ಕ್ರಿಮಿನಾಶಕ ಮಾರಬಾರದು. ಯಾವುದೇ ತಾಂತ್ರಿಕ ಸಮಸ್ಯೆಗಳಿದ್ದಲ್ಲಿ ಕೃಷಿ ಅಧಿಕಾರಿಗಳನ್ನು ಸಂಪರ್ಕಿಸಿ ಪರಿಹರಿಸಿಕೊಳ್ಳಬೇಕು ಎಂದರು.

ಯಂತ್ರ ನಿರ್ವಹಣೆ ಮಾಹಿತಿ: ಸ್ಪಿಕ್‌ ಕಂಪನಿ ಅಧಿಕಾರಿ ಅಮರನಾಥ ಮಾತನಾಡಿ, ರಸಗೊಬ್ಬರ ಮಾರಾಟಗಾರರಿಗೆ ಪಾಸ್‌ ಮಷೀನ್‌ ನೀಡಲಾಗಿದ್ದು, ಅವುಗಳ ನಿರ್ವಹಣೆ ಕುರಿತು ಮಾಹಿತಿ ನೀಡಲಾಗಿದೆ. ಅದರಲ್ಲಿ ಗೊಬ್ಬರ ಮಾರಾಟ ದಾಖಲಿಸಿ, ರೈತರ ಹೆಬ್ಬೆಟ್ಟು ಗುರುತು ಸಂಗ್ರಹಿಸಿಕೊಳ್ಳಬೇಕು. ಇದರ ಮೂಲಕ ರಸಗೊಬ್ಬರ ಮಾರಾಟ ವಿವರ ದೊರಕಲಿದೆ. ಹಾವೇರಿ ಜಿಲ್ಲೆಗೆ 470 ಮಷೀನ್‌ ವಿತರಿಸಲಾಗಿದ್ದು, ಹಾನಗಲ್ಲ ತಾಲೂಕಿಗೆ 78 ನೀಡಲಾಗಿದೆ. ಇವುಗಳಲ್ಲಿ 30 ನಿಷ್ಕ್ರಿಯವಾಗಿವೆ. ಅವುಗಳನ್ನು ಮಾರಾಟಗಾರರು ಬಳಸಿಕೊಳ್ಳದಿದ್ದಲ್ಲಿ ಕೃಷಿ ಅಧಿಕಾರಿಗಳು ಹಿಂಪಡೆದು ಬೇರೆಯವರಿಗೆ ಹಸ್ತಾಂತರಿಸಲಿದ್ದಾರೆ ಎಂದರು.

ಮಾರಾಟಗಾರರ ಸಂಘದ ಅಧ್ಯಕ್ಷ ಎಸ್‌.ಎಚ್. ಕೋಟಿ, ದ್ಯಾಮಣ್ಣ ಬೆಟಗೇರಿ, ರಾಜಣ್ಣ ಗೌಳಿ, ಜಗದೀಶ ಸಿಂಧೂರ ಸೇರಿದಂತೆ 40ಕ್ಕೂ ಅಧಿಕ ಮಾರಾಟಗಾರರು ಸಭೆಯಲ್ಲಿ ಇದ್ದರು.

ಟಾಪ್ ನ್ಯೂಸ್

pPrajwal Revanna Case; ಬಿಜೆಪಿ ನಾಯಕ ಪ್ರೀತಂ ಗೌಡಗೆ ಪೆನ್‌ಡ್ರೈವ್‌ ಕುಣಿಕೆ!

Prajwal Revanna Case; ಬಿಜೆಪಿ ನಾಯಕ ಪ್ರೀತಂ ಗೌಡಗೆ ಪೆನ್‌ಡ್ರೈವ್‌ ಕುಣಿಕೆ!

PUC ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: ಪ್ರಕರಣ ದಾಖಲು

PUC ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: ಪ್ರಕರಣ ದಾಖಲು

Subramanya; ಮಂಗಳೂರಿಗರ ಮೇಲೆ ಹಲ್ಲೆ ಪ್ರಕರಣ: ನಾಲ್ವರ ಸೆರೆ

Subramanya; ಮಂಗಳೂರಿಗರ ಮೇಲೆ ಹಲ್ಲೆ ಪ್ರಕರಣ: ನಾಲ್ವರ ಸೆರೆ

Pratap Simha; ಕಾಂಗ್ರೆಸ್‌ನಿಂದಲೇ ಹೆಚ್ಚು ಸಂವಿಧಾನ ತಿದ್ದುಪಡಿ

Pratap Simha; ಕಾಂಗ್ರೆಸ್‌ನಿಂದಲೇ ಹೆಚ್ಚು ಸಂವಿಧಾನ ತಿದ್ದುಪಡಿ

Uppinangady ಅಂಗಡಿಗೆ ನುಗ್ಗಿದ ಲಾರಿ; ಭಾರೀ ಹಾನಿ

Uppinangady ಅಂಗಡಿಗೆ ನುಗ್ಗಿದ ಲಾರಿ; ಭಾರೀ ಹಾನಿ

Uppinangady ಚರಂಡಿಗೆ ಇಳಿದ ಕಂಟೈನರ್‌ ಲಾರಿ: ವಾಹನ ಸಂಚಾರ ಅಸ್ತವ್ಯಸ್ತ

Uppinangady ಚರಂಡಿಗೆ ಇಳಿದ ಕಂಟೈನರ್‌ ಲಾರಿ: ವಾಹನ ಸಂಚಾರ ಅಸ್ತವ್ಯಸ್ತ

DCM DK Shivakumar ನಂಬಿದ ಜನರ ಎಂದೂ ಕೈ ಬಿಡಲಾಗದು

DCM DK Shivakumar ನಂಬಿದ ಜನರ ಎಂದೂ ಕೈ ಬಿಡಲಾಗದು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಾಣಿಬೆನ್ನೂರ: ಭಾರತ ವಿಶ್ವಕ್ಕೆ ಕೊಟ್ಟ ದೊಡ್ಡ ಪರಂಪರೆ ಯೋಗ-ಪ್ರಕಾಶಾನಂದ ಮಹಾರಾಜ

ರಾಣಿಬೆನ್ನೂರ: ಭಾರತ ವಿಶ್ವಕ್ಕೆ ಕೊಟ್ಟ ದೊಡ್ಡ ಪರಂಪರೆ ಯೋಗ-ಪ್ರಕಾಶಾನಂದ ಮಹಾರಾಜ

Haveri; ಜನರನ್ನು ಸಂಕಷ್ಟಕ್ಕೆ ನೂಕಿ ಅದ್ಯಾವ ಅಭಿವೃದ್ಧಿ ಮಾಡುತ್ತಾರೆ?: ಬೊಮ್ಮಾಯಿ

Haveri; ಜನರನ್ನು ಸಂಕಷ್ಟಕ್ಕೆ ನೂಕಿ ಅದ್ಯಾವ ಅಭಿವೃದ್ಧಿ ಮಾಡುತ್ತಾರೆ?: ಬೊಮ್ಮಾಯಿ

crime (2)

Haveri ; ಮಚ್ಚಿನಿಂದ ಹಲ್ಲೆ ನಡೆಸಿ ಯುವಕನ ಕೊಲೆ ಯತ್ನ

ವರ್ಷದೊಳಗೆ ವಿಧಾನಸಭಾ ಚುನಾವಣೆ: ಬೊಮ್ಮಾಯಿ ಬಾಂಬ್‌

ವರ್ಷದೊಳಗೆ ವಿಧಾನಸಭಾ ಚುನಾವಣೆ: ಬೊಮ್ಮಾಯಿ ಬಾಂಬ್‌

ರೈತನ ಕೈ ಹಿಡಿದ ತೈವಾನ್‌ ಪಿಂಕ್‌: ಒಂದು ಎಕರೆಯಲ್ಲಿ ಲಕ್ಷ ರೂ. ಆದಾಯ

ರೈತನ ಕೈ ಹಿಡಿದ ತೈವಾನ್‌ ಪಿಂಕ್‌: ಒಂದು ಎಕರೆಯಲ್ಲಿ ಲಕ್ಷ ರೂ. ಆದಾಯ

MUST WATCH

udayavani youtube

ಡಿಸಿಎಂ ವಿಚಾರ ಇನ್ನೊಮ್ಮೆ ಮಾತನಾಡೋಣ; ಕುಕ್ಕೆಯಲ್ಲಿ ಡಿ.ಕೆ.ಶಿವಕುಮಾರ್

udayavani youtube

ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ಅಂಗಾರ ಸಂಕಷ್ಟಹರ ಚತುರ್ಥಿ|

udayavani youtube

ಬಸ್ಸೇರಿ ಸಮಸ್ಯೆ ಆಲಿಸಿದ ಶಾಸಕ ರೈ

udayavani youtube

ಹರ್ನಿಯಾ ಸಮಸ್ಯೆಗೆ ಕಾರಣವೇನು?ಚಿಕಿತ್ಸಾ ವಿಧಾನಗಳು ಯಾವುವು?

udayavani youtube

ಮಾವುತನನ್ನು ಕಾಲಿನಿಂದ ತುಳಿದು ಅಪ್ಪಚ್ಚಿ ಮಾಡಿದ ಆನೆ!

ಹೊಸ ಸೇರ್ಪಡೆ

pPrajwal Revanna Case; ಬಿಜೆಪಿ ನಾಯಕ ಪ್ರೀತಂ ಗೌಡಗೆ ಪೆನ್‌ಡ್ರೈವ್‌ ಕುಣಿಕೆ!

Prajwal Revanna Case; ಬಿಜೆಪಿ ನಾಯಕ ಪ್ರೀತಂ ಗೌಡಗೆ ಪೆನ್‌ಡ್ರೈವ್‌ ಕುಣಿಕೆ!

PUC ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: ಪ್ರಕರಣ ದಾಖಲು

PUC ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: ಪ್ರಕರಣ ದಾಖಲು

Subramanya; ಮಂಗಳೂರಿಗರ ಮೇಲೆ ಹಲ್ಲೆ ಪ್ರಕರಣ: ನಾಲ್ವರ ಸೆರೆ

Subramanya; ಮಂಗಳೂರಿಗರ ಮೇಲೆ ಹಲ್ಲೆ ಪ್ರಕರಣ: ನಾಲ್ವರ ಸೆರೆ

Pratap Simha; ಕಾಂಗ್ರೆಸ್‌ನಿಂದಲೇ ಹೆಚ್ಚು ಸಂವಿಧಾನ ತಿದ್ದುಪಡಿ

Pratap Simha; ಕಾಂಗ್ರೆಸ್‌ನಿಂದಲೇ ಹೆಚ್ಚು ಸಂವಿಧಾನ ತಿದ್ದುಪಡಿ

Uppinangady ಅಂಗಡಿಗೆ ನುಗ್ಗಿದ ಲಾರಿ; ಭಾರೀ ಹಾನಿ

Uppinangady ಅಂಗಡಿಗೆ ನುಗ್ಗಿದ ಲಾರಿ; ಭಾರೀ ಹಾನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.