ಎಲೆಕ್ಟ್ರಾನಿಕ್‌ ತೂಕದ ಯಂತ್ರ ಬಳಕೆ ಕಡ್ಡಾಯ


Team Udayavani, May 11, 2019, 3:01 PM IST

haveri-tdy-5..

ಹಾವೇರಿ: ಎಪಿಎಂಸಿ ಅಧ್ಯಕ್ಷ ರಮೇಶ ಚಾವಡಿ ಅಧ್ಯಕ್ಷತೆಯಲ್ಲಿ ಹೂವಿನ ವ್ಯಾಪಾರಸ್ಥರ ಸಭೆ ನಡೆಯಿತು.

ಹಾವೇರಿ: ಹೂವಿನ ವ್ಯಾಪಾರಸ್ಥರು ಕಡ್ಡಾಯವಾಗಿ ಎಲೆಕ್ಟ್ರಾನಿಕ್‌ ತೂಕದ ಯಂತ್ರ ಬಳಸಬೇಕು. ಇಲ್ಲದಿದ್ದರೆ ಅಂಥ ವ್ಯಾಪಾರಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಪಿಎಂಸಿ ಅಧ್ಯಕ್ಷ ರಮೇಶ ಚಾವಡಿ ಎಚ್ಚರಿಕೆ ನೀಡಿದರು.

ಹೂವಿನ ಮಾರುಕಟ್ಟೆಗೆ ಹೂ ಮಾರಾಟಕ್ಕೆ ಬರುವ ರೈತರಿಗೆ ತೂಕದಲ್ಲಿ ಮೋಸವಾಗುತ್ತಿರುವ ಕುರಿತು ರೈತರಿಂದ ದೂರು ಬಂದ ಹಿನ್ನೆಲೆಯಲ್ಲಿ ಶುಕ್ರವಾರ ಎಪಿಎಂಸಿ ಸಭಾಭವನದಲ್ಲಿ ಹೂವಿನ ವ್ಯಾಪಾರಸ್ಥರೊಂದಿಗೆ ನಡೆಸಿದ ಸಭೆಯಲ್ಲಿ ಅವರು ಮಾತನಾಡಿದರು.

ಹೂವಿನ ವ್ಯಾಪಾರದಲ್ಲಿ ಎಲೆಕ್ಟ್ರಾನಿಕ್‌ ತೂಕದ ಯಂತ್ರ ಬಳಸಲು ನಿಯಮವಿದೆ. ಆದರೂ ನಗರದಲ್ಲಿ ತೂಕದ ಕಲ್ಲಿನ ಯಂತ್ರ ಉಪಯೋಗಿಸುತ್ತಿರುವ ಹಾಗೂ ತೂಕದ ವೇಳೆಯಲ್ಲಿ 20 ಕೆ.ಜಿ ಹೂವಿಗೆ 5ರಿಂದ 7ಕೆಜಿಯಷ್ಟು ಕಡಿತವಾಗುವ ದೂರು ಬಂದಿದೆ. ಈ ಕುರಿತು ಎಪಿಎಂಸಿ ಅಧಿಕಾರಿಗಳು ಪರಿಶೀಲನೆ ಮಾಡಿದ ವೇಳೆಯಲ್ಲಿಯೂ ವ್ಯಾಪಾರಸ್ಥರು ಕಲ್ಲಿನ ಕಾಟಾ ಬಳಕೆ ಮಾಡಿರುವುದು ಕಂಡುಬಂದಿದೆ. ಎಪಿಎಂಸಿ ಕಾಯ್ದೆ ಪ್ರಕಾರ ಕೃಷಿ ಉತ್ಪನ್ನ ಮಾರಾಟದಲ್ಲಿ ಪಾರದರ್ಶಕತೆ ತರಲು 30-6-2018 ರಲ್ಲಿಯೇ ಎಲೆಕ್ಟ್ರಾನಿಕ್‌ ತೂಕದ ಯಂತ್ರ ಬಳಸಬೇಕೆಂದು ತಿಳಿವಳಿಕೆ ಪತ್ರವನ್ನು ವ್ಯಾಪಾರಸ್ಥರಿಗೆಲ್ಲ ನೀಡಲಾಗಿದೆ. ಆದರೂ ನೀವು ಕಲ್ಲಿನ ಕಾಟಾ ಬಳಸುವುದು ಅಪರಾಧವಾಗುತ್ತದೆ ಎಂದರು.

ಎಪಿಎಂಸಿ ಕಾರ್ಯದರ್ಶಿ ಪರಮೇಶ ನಾಯಕ ಮಾತನಾಡಿ, ಇನ್ಮುಂದೆ ಎಲ್ಲರೂ ಕಡ್ಡಾಯವಾಗಿ ಎಲೆಕ್ಟ್ರಾನಿಕ್‌ ತೂಕದ ಯಂತ್ರಗಳ ಮೂಲಕವೇ ರೈತರ ಉತ್ಪನ್ನ ಖರೀದಿಸಬೇಕು. ತೂಕದಲ್ಲಿ ರೈತರಿಗೆ ಯಾವುದೇ ವ್ಯತ್ಯಾಸವಾಗದಂತೆ ನೋಡಿಕೊಳ್ಳಬೇಕು. ವ್ಯಾಪಾರಸ್ಥರೆಲ್ಲರೂ ಎಲೆಕ್ಟ್ರಾನಿಕ್‌ ಹಾಗೂ ಕಲ್ಲಿನ ಕಾಟಾದ ತೂಕದ ಯಂತ್ರಗಳ ಸತ್ಯಾಪನೆ ಪ್ರಮಾಣಪತ್ರಗಳನ್ನು ಎಪಿಎಂಸಿಗೆ ನೀಡಬೇಕು. ಸತ್ಯಾಪನೆ ಪ್ರಮಾಣ ಪತ್ರ ಪಡೆಯದೇ ಇದ್ದವರೂ ಕೂಡಲೇ ತೂಕ ಮತ್ತು ಮಾಪನ ಇಲಾಖೆ ನಿರೀಕ್ಷಕರಿಂದ ಪ್ರಮಾಣ ಪತ್ರ ಪಡೆದು ಎಪಿಎಂಸಿಗೆ ನೀಡಬೇಕು ಎಂದರು.

ಈ ವೇಳೆ ವ್ಯಾಪಾರಸ್ಥರು ಮಾತನಾಡಿ, ರೈತರು ತರುವ ಉತ್ಪನ್ನ ಎಲೆಕ್ಟ್ರಾನಿಕ್‌ ಯಂತ್ರದ ಮೂಲಕ ತೂಕ ಮಾಡುತ್ತೇವೆ. ಆದರೆ, ಕೆಲವು ರೈತರು ಹೂವಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಸಿಂಪಡಿಸಿಕೊಂಡು ಮಾರಾಟಕ್ಕೆ ತರುತ್ತಾರೆ. ಇಂತಹ ಉತ್ಪನ್ನ ಎಲೆಕ್ಟ್ರಾನಿಕ್‌ ಯಂತ್ರದಲ್ಲಿ ಖರೀದಿಸುವುದರಿಂದ ನಮಗೆ ನಷ್ಟವಾಗುತ್ತದೆ. ಹೆಚ್ಚಿನ ನೀರು ಸಿಂಪಡಿಸಿರುವ ಹೂವುಗಳನ್ನು ಕಲ್ಲಿನ ಕಾಟಾದಲ್ಲಿ ತೂಕ ಮಾಡುತ್ತಿದ್ದೆವು. ಇನ್ಮುಂದೆ ತಮ್ಮ ಸೂಚನೆಯಂತೆ ಕಡ್ಡಾಯವಾಗಿ ಎಲೆಕ್ಟ್ರಾನಿಕ್‌ ತೂಕದ ಯಂತ್ರಗಳನ್ನೇ ಬಳಕೆ ಮಾಡುತ್ತೇವೆ ಎಂದರು.

ಎಪಿಎಂಸಿ ಉಪಾಧ್ಯಕ್ಷ ಸಣ್ಣಪ್ಪ ಮಾಳಿ, ಸಹ ಕಾರ್ಯದರ್ಶಿ ಮನೋಹರ ಬಾರ್ಕಿ, ಮಾರುಕಟ್ಟೆ ಮೇಲ್ವಿಚಾರಕ ಪಿ.ಜಿ. ಛತ್ರದಮಠ ಹಾಗೂ ವ್ಯಾಪಾರಸ್ಥರು ಸಭೆಯಲ್ಲಿದ್ದರು.

ಟಾಪ್ ನ್ಯೂಸ್

Mehabooba

POCSO ಪ್ರಕರಣದಲ್ಲಿ ಬಿಎಸ್‌ವೈಗೆ ಕೋರ್ಟ್‌ ರಕ್ಷಣೆ ಸರಿಯಲ್ಲ: ಮುಫ್ತಿ

1-imek-22

Controversy ನಡುವೆ “ಪ್ರೇರಣಾ ಸ್ಥಳ’ ಉದ್ಘಾಟನೆ

1-imek

ನಮ್ಮ ‘ಐಮೆಕ್‌’ ಪ್ರಾಜೆಕ್ಟ್ ಗೆ ಜಿ7 ನಾಯಕರ ಬೆಂಬಲ!

vande bharat

ಜೂ.20ಕ್ಕೆ ಬೆಂಗಳೂರು-ಮಧುರೈ ವಂದೇ ಭಾರತ್‌: ಕರ್ನಾಟಕಕ್ಕೆ 9ನೇ ರೈಲು

1-sugopi

ಇಂದಿರಾ ಗಾಂಧಿ ಕಾಂಗ್ರೆಸ್‌ ಮಾತೆ: ಉಲ್ಟಾ ಹೊಡೆದ ಸುರೇಶ್‌ ಗೋಪಿ

ಶಕ್ತಿ ಯೋಜನೆಯಿಂದ ಪ್ರವಾಸೋದ್ಯಮ ಚುರುಕು: ಸಚಿವ ಎಚ್‌.ಕೆ. ಪಾಟೀಲ್‌

ಶಕ್ತಿ ಯೋಜನೆಯಿಂದ ಪ್ರವಾಸೋದ್ಯಮ ಚುರುಕು: ಸಚಿವ ಎಚ್‌.ಕೆ. ಪಾಟೀಲ್‌

ಎಚ್‌ಡಿಕೆ ಕಾಲದಲ್ಲೂ ತೈಲ ದರ ಏರಿಸಿದ್ದರು: ಸಿದ್ಧರಾಮಯ್ಯ

ಎಚ್‌ಡಿಕೆ ಕಾಲದಲ್ಲೂ ತೈಲ ದರ ಏರಿಸಿದ್ದರು: ಸಿದ್ಧರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Anandswamy Gaddadevarmath on haveri defeat

Haveri; ಮೋದಿ‌ ಅಲೆಗಿಂತ ಬಿಜೆಪಿ ಅಲೆ ಹೆಚ್ಚಿತ್ತು: ಆನಂದಸ್ವಾಮಿ ಗಡ್ಡದೇವರಮಠ

ಪರಿಸರ ಉಳಿದರೆ ಮನುಕುಲ ಉಳಿದೀತು: ಬಸವಶಾಂತಲಿಂಗ ಸ್ವಾಮೀಜಿ

ಪರಿಸರ ಉಳಿದರೆ ಮನುಕುಲ ಉಳಿದೀತು: ಬಸವಶಾಂತಲಿಂಗ ಸ್ವಾಮೀಜಿ

Bribe: ಬಾಂಡ್ ನೀಡಲು ಫಲಾನುಭವಿಗಳಿಂದ ಲಂಚ… ಸರ್ಕಾರಿ ನೌಕರ ಲೋಕಾಯುಕ್ತ ಬಲೆಗೆ

Bribe: ಬಾಂಡ್ ನೀಡಲು ಫಲಾನುಭವಿಗಳಿಂದ ಲಂಚ… ಸರ್ಕಾರಿ ನೌಕರ ಲೋಕಾಯುಕ್ತ ಬಲೆಗೆ

Bommai BJP

Modi 3ನೇ ಸಲ ಪ್ರಧಾನಿಯಾದ 3 ತಿಂಗಳಲ್ಲಿ ಕಾಂಗ್ರೆಸ್‌ ಇಬ್ಭಾಗ: ಬೊಮ್ಮಾಯಿ ಭವಿಷ್ಯ

ಸತೀಶ ಜಾರಕಿಹೊಳಿ ಮಾದರಿ ರಾಜಕಾರಣಿ: ನೀರಲಗಿ

ಸತೀಶ ಜಾರಕಿಹೊಳಿ ಮಾದರಿ ರಾಜಕಾರಣಿ: ನೀರಲಗಿ

MUST WATCH

udayavani youtube

ಕೆ‌ಎಸ್‌ಆರ್‌ಟಿಸಿ‌ ಬಸ್- ಬೈಕ್ ಮುಖಾಮುಖಿ ಢಿಕ್ಕಿ ; ಸವಾರ ಮೃತ್ಯು

udayavani youtube

ಇಡ್ಲಿ, ವಡೆ, ಚಟ್ನಿ ಗೆ ತುಂಬಾ ಫೇಮಸ್ ಈ ಹೋಟೆಲ್

udayavani youtube

ಕಾಪು ಸರ್ವೀಸ್ ರಸ್ತೆಯಲ್ಲಿ ರಿಕ್ಷಾ ಚಾಲಕ ಮತ್ತು ಬೈಕ್ ಸವಾರನ ನಡುವೆ ಹೊಡೆದಾಟ

udayavani youtube

ದರ್ಶನ್ ಗ್ಯಾಂಗ್ ಕ್ರೌರ್ಯ ಹೇಗಿತ್ತು ಗೊತ್ತಾ..? ವೈರಲ್ ಆಡಿಯೋ ಇಲ್ಲಿದೆ

udayavani youtube

Udupi: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

ಹೊಸ ಸೇರ್ಪಡೆ

1-asdsadsad

T 20 WC; ಸೂಪರ್‌-8 ಗಡಿಯಲ್ಲಿ ಬಾಂಗ್ಲಾ: ನೇಪಾಲ ಕೊನೆಯ ಎದುರಾಳಿ

Mehabooba

POCSO ಪ್ರಕರಣದಲ್ಲಿ ಬಿಎಸ್‌ವೈಗೆ ಕೋರ್ಟ್‌ ರಕ್ಷಣೆ ಸರಿಯಲ್ಲ: ಮುಫ್ತಿ

1-imek-22

Controversy ನಡುವೆ “ಪ್ರೇರಣಾ ಸ್ಥಳ’ ಉದ್ಘಾಟನೆ

police crime

ಗೇಮಿಂಗ್‌ ಜೋನ್‌ ದುರಂತ: ಇನ್ನೂ ಇಬ್ಬರು ಪೊಲೀಸ್‌ ವಶಕ್ಕೆ

police USA

ಅಮೆರಿಕದಲ್ಲಿ 2 ಪ್ರತ್ಯೇಕ ಶೂಟೌಟ್‌: ಇಬ್ಬರು ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.