2 ಸಾವಿರ ಫಲಾನುಭವಿಗಳಿಗೆ ಮನೆ ನಿರ್ಮಾಣ


Team Udayavani, Mar 7, 2019, 11:02 AM IST

7-mach-17.jpg

ಶಿಗ್ಗಾವಿ: ರಾಜ್ಯದಲ್ಲಿಯೇ ಪ್ರಥಮವೆನ್ನಲಾದ ಪೈಲೆಟ್‌ ಗ್ರೌಂಡ್‌+1 ಗುಂಪುಮನೆ ಯೋಜನೆಯಾಗಿದ್ದು, ಇದು ಕ್ಷೇತ್ರದ ಮೂರು ಪುರಸಭೆಯ ವ್ಯಾಪ್ತಿಯಲ್ಲಿನ 2 ಸಾವಿರ ಬಡ ಕುಟುಂಬಗಳಿಗೆ ಸುಸಜ್ಜಿತವಾದ ಮನೆ ನೀಡುವಲ್ಲಿ ಸಫಲತೆ ಕಾಣುವಂತಾಗಿದೆ ಎಂದು ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.

ಪಟ್ಟಣದ ಆಶ್ರಯ ಬಡಾವಣೆ ವಾಜಪೇಯಿ ನಗರ ವಸತಿ ಯೋಜನೆ ಮತ್ತು ಪ್ರಧಾನಮಂತ್ರಿ ಆವಾಸ ಯೋಜನೆಯಡಿ ನಿರ್ಮಿಸಲಾಗಿರುವ ಗುಂಪು ಮನೆಗಳ ಫಲಾನುಭವಿಗಳಿಗೆ ಸ್ವಾಧೀನ ಪತ್ರಗಳ ವಿತರಣೆ ಹಾಗೂ ಪುರಸಭೆ ವ್ಯಾಪ್ತಿಯ ನಗರೊತ್ಥಾನ ಯೋಜನೆಯಡಿ ವಿವಿಧ ವಿಭಾಗಗಳಲ್ಲಿ ಅಳವಡಿಸಿರುವ ಬೀದಿ ದೀಪಗಳ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಮೂರು ಪುರಸಭೆಯ ಶಿಗ್ಗಾವಿ 361 ಸವಣೂರು 1200 ಹಾಗೂ ಬಂಕಾಪುರ 604 ಗುಂಪು ಮನೆ ಜಿ+1 ಮನೆಗಳ ನಿರ್ಮಾಣದ ಕಾಮಗಾರಿ ನಡೆಯುತ್ತಿದ್ದು, ಆದಷ್ಟು ಬೇಗ ಹಂತ ಹಂತವಾಗಿ ಬಡ ಫಲಾನುಭವಿಗಳಿಗೆ ಸ್ವಾ ಧೀನಪತ್ರ ನೀಡಲಾಗುವುದು. 2012ರಲ್ಲಿ ಆರಂಭವಾದ ಯೋಜನೆ ಫಲಾನುಭವಿಗಳಿಗೆ
ಬ್ಯಾಂಕ್‌ ಸಾಲ ನೀಡಲು ಮುಂದೆ ಬರದ ಕಾರಣ ತಾಂತ್ರಿಕ ತೊಡಕುಗಳಿಂದ ಕಾರ್ಯ ವಿಳಂಭವಾಗಿತ್ತು. ಹಿಂದಿನ ರಾಜ್ಯ ಸರ್ಕಾರ ವಸತಿ ಇಲಾಖೆ ಮಂತ್ರಿಗಳು ಯೋಜನೆಯ ಬೆಂಬಲ ನೀಡಲಿಲ್ಲ. ಹೀಗಾಗಿ ಪ್ರಧಾನಮಂತ್ರಿ ಆವಾಸ ಯೋಜನೆಯಡಿ ಸುಮಾರು 11 ಕೋಟಿ ರೂ. ಅನುದಾನ ಪಡೆದು ಯೋಜನೆ ಪೂರ್ಣಗೊಳಸಲಾಗುತ್ತಿದ್ದು, ಆದಷ್ಟು ಬೇಗ ಬಡ ಜನತೆಗೆ ಮನೆ ಕನಸು ನನಸಾಗಲಿದೆ ಎಂದು ಭರವಸೆ ನೀಡಿದರು.

ಪ್ರತಿ ವರ್ಷ ಸ್ಲಂ ಬೋರ್ಡನಿಂದ ಹಣ ತಂದು ಎಸ್‌ಸಿ, ಎಸ್‌ಟಿ ಹಾಗೂ ಅಲ್ಪಸಂಖ್ಯಾತ ಜನಾಂಗ ಇರುವ ಬಡವಾಣೆಗೆ ಮೂಲ ಸೌಕರ್ಯ ಕಲ್ಪಿಸಲಾಗಿದೆ ಎಂದರು. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆಶಯದಂತೆ 2020ರೊಳಗೆ ಸೂರಿಲ್ಲದವರಿಗೆ ಸೂರು ಕಲ್ಪಿಸುವ ಕಾರ್ಯ ನಡೆದಿದೆ. ಹೀಗಾಗಿ ಈ ಯೋಜನೆ ಪೂರ್ಣಗೊಳಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನೀಡಿದ ಪ್ರಧಾನ ಮಂತ್ರಿ ಆವಾಸ್‌ ಯೋಜನೆಯಡಿ 11ಕೋಟಿ ಮೊತ್ತವು ಸಹಕಾರಿಯಾಗಲಿದೆ ಎಂದರು.

ಪುರಸಭೆ ಸದಸ್ಯ ಸುಭಾಷ ಚವ್ಹಾಣ ಮಾತನಾಡಿ, ಬಡವರಿಗೆ ಅತೀ ಕಡಿಮೆ ದರದಲ್ಲಿ ಸುಸಜ್ಜಿತ ಮನೆ ನೀಡುವುದು ಶಾಸಕ ಬೊಮ್ಮಾಯಿವರ ಕನಸಿನ ಕೂಸು. ಈ ಯೋಜನೆ ಕಾರ್ಯರೂಪಕ್ಕೆ ಬಂದಿದ್ದು ನಮಗೆ ಹೆಮ್ಮೆಯ ವಿಷಯವಾಗಿದೆ ಎಂದರು.

ಪುರಸಭೆ ಅಧ್ಯಕ್ಷ, ಶಿವಪ್ರಸಾದ ಸುರಗಿಮಠ, ಉಪಾಧ್ಯಕ್ಷ ಪರಶುರಾಮ ಸೊನ್ನದ, ಸದಸ್ಯರಾದ ಫಕ್ಕಿರೇಶ ಶಿಗ್ಗಾವಿ, ಶ್ರೀಕಾಂತ ಬುಳ್ಳಕ್ಕನವರ, ಕೆಸಿಸಿ ಬ್ಯಾಂಕ್‌ ನಿರ್ದೇಶಕ ಗಂಗಣ್ಣ ಸಾತಣ್ಣವರ, ಮುಖ್ಯಾಧಿಕಾರಿ ಪಿ.ಕೆ. ಗುಡದಾರಿ, ಶಿವಾನಂದ ಮ್ಯಾಗೇರಿ, ಫಕ್ಕಿರಪ್ಪ ವಡ್ಡರ ಮೃತ್ಯುಂಜಯ ಕಟ್ಟಿಮನಿ, ನೀಲವ್ವ ಕಾಲವಾಡ ಹಾಗೂ ಫಲಾನುಭವಿಗಳು ಇದ್ದರು.

ಟಾಪ್ ನ್ಯೂಸ್

1-qq

ಟಿ20 ವಿಶ್ವಕಪ್‌ : ದಕ್ಷಿಣ ಆಫ್ರಿಕಾ ವಿರುದ್ಧ ಆಸ್ಟ್ರೇಲಿಯಕ್ಕೆ ರೋಚಕ ಜಯ

d-1

ದುಬೈನಲ್ಲಿ ಮಿಂಚಿದ ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಮಳಿಗೆ

Untitled-1

ಡ್ರೋಣ್ ಮೂಲಕ ಕೀಟನಾಶಕ ಸಿಂಪಡಣೆ: ಕೆಕೆಆರ್ ಡಿಬಿಯಿಂದ ಪ್ರಾಯೋಗಿಕ ಜಾರಿ

25fine

ಮಾಹಿತಿ ಕೊಡದ ಎಸಿಗೆ ಐದು ಸಾವಿರ ರೂ. ದಂಡ

ನಿಮ್ಮ ಪಾಕ್ ಗೆಳತಿಗೂ ಐಎಸ್ ಐಗೂ ಏನು ಸಂಬಂಧ: ಅಮರಿಂದರ್ ಸಿಂಗ್ ಗೆ ರಾಂಧವಾ

ನಿಮ್ಮ ಪಾಕ್ ಗೆಳತಿಗೂ ಐಎಸ್ ಐಗೂ ಏನು ಸಂಬಂಧ: ಅಮರಿಂದರ್ ಸಿಂಗ್ ಗೆ ರಾಂಧವಾ

siddaramaiah

ಪ್ರತಿ ಪ್ರಜೆಯ ಮೇಲೆ 44 ಸಾವಿರಕ್ಕೂ ಅಧಿಕ ಸಾಲದ ಹೊರೆ!:’ಬುರುಡೆರಾಮಯ್ಯ’ ಎಂದ ಬಿಜೆಪಿ

ಹಿಂದೂ ಧಾರ್ಮಿಕ ಸ್ಥಳಗಳನ್ನು ಭಗ್ನಗೊಳಿಸುವವರಿಗೆ ಕ್ಷಮೆಯಿಲ್ಲ: ಶಾಸಕ ಡಾ.ಭರತ್ ಶೆಟ್ಟಿ

ಹಿಂದೂ ಧಾರ್ಮಿಕ ಸ್ಥಳಗಳನ್ನು ಭಗ್ನಗೊಳಿಸುವವರಿಗೆ ಕ್ಷಮೆಯಿಲ್ಲ: ಶಾಸಕ ಡಾ.ಭರತ್ ಶೆಟ್ಟಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪ್ರಧಾನಿಗಳ ಬಗ್ಗೆ ಏಕವಚನದಲ್ಲಿ ಮಾತಾಡಿದರೆ ದೊಡ್ಡತನವಾಗದು: ಸಿಎಂ ಬೊಮ್ಮಾಯಿ

ಪ್ರಧಾನಿಗಳ ಬಗ್ಗೆ ಏಕವಚನದಲ್ಲಿ ಮಾತಾಡಿದರೆ ದೊಡ್ಡತನವಾಗದು: ಸಿಎಂ ಬೊಮ್ಮಾಯಿ

12-asasa

ನಾನು ಸಚಿವನಾಗಲು, ಸಿಎಂ ಆಗಲು ಯಡಿಯೂರಪ್ಪ ಕಾರಣ : ಬಸವರಾಜ ಬೊಮ್ಮಾಯಿ

21hkr1

ಜಿಲ್ಲಾದ್ಯಂತ ಬಿಸಿಯೂಟ ಕಾರ್ಯಕ್ರಮಕ್ಕೆ ಚಾಲನೆ

21hvr8

ಹಣ ದೋಚಲು ಸಚಿವರ ಕಿತ್ತಾಟ: ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ

21hvr15

ಕಳೆದ ಬಾರಿ ಸೋತರೂ ನುಡಿದಂತೆ ನಡೆದಿದ್ದೇನೆ: ಶ್ರೀನಿವಾಸ ಮಾನೆ

MUST WATCH

udayavani youtube

11 ಮಂದಿ ಚಾರಣಿಗರು ಸಾವು, 17,000 ಅಡಿ ಎತ್ತರದಲ್ಲಿ ವಾಯುಪಡೆ ಕಾರ್ಯಾಚರಣೆ

udayavani youtube

ಮುಂದುವರೆದ ಒಂಟಿ ಸಲಗದ ದಾಂಧಲೆ ಕಾಂಪೌಂಡ್, ಮನೆಯ ಮೇಲ್ಚಾವಣಿ ಪುಡಿಪುಡಿ

udayavani youtube

ಕೃಷಿಕರ ಬದುಕಿಗೆ ಆಶಾಕಿರಣವಾಗಿರುವ MO4 ಭತ್ತದ ತಳಿಯನ್ನು ಯಾಕೆ ಬೆಳೆಯಬೇಕು?

udayavani youtube

ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಡಿಕ್ಕಿ ಹೊಡೆದ ಕಾರು, ಮಹಿಳೆ ಸಾವು

udayavani youtube

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಹುಲಿಗಳ ಸ್ವಚ್ಛಂದ ವಿಹಾರ

ಹೊಸ ಸೇರ್ಪಡೆ

ಸರಕಾರಿ ಆಸ್ಪತ್ರೆ ವೈದ್ಯರು-ಸಿಬ್ಬಂದಿ ಸೇವೆ ಅನನ್ಯ

ಸರಕಾರಿ ಆಸ್ಪತ್ರೆ ವೈದ್ಯರು-ಸಿಬ್ಬಂದಿ ಸೇವೆ ಅನನ್ಯ

1-qq

ಟಿ20 ವಿಶ್ವಕಪ್‌ : ದಕ್ಷಿಣ ಆಫ್ರಿಕಾ ವಿರುದ್ಧ ಆಸ್ಟ್ರೇಲಿಯಕ್ಕೆ ರೋಚಕ ಜಯ

ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡಿ: ಮೆಹ್ತಾ

ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡಿ: ಮೆಹ್ತಾ

d-1

ದುಬೈನಲ್ಲಿ ಮಿಂಚಿದ ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಮಳಿಗೆ

ಚಾಮುಂಡಿಬೆಟ್ಟದಲ್ಲಿ ದೇವಿಗೆ ಒಟ್ಟಿಗೆ ಪೂಜೆ ಸಲ್ಲಿಸಿದ ಇಬ್ಬರು ಯುವ ನಾಯಕರು

ನಿಖೀಲ್‌-ಹರೀಶ್‌ ಭೇಟಿ: ರಾಜಕೀಯ ಕುತೂಹಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.