Udayavni Special

ಜಾನುವಾರು ಕೊಟ್ಟಿಗೆಯಾದ ಕ್ರೀಡಾಂಗಣ

ಕೆಕೆಆರ್‌ಡಿಬಿಯಿಂದ 3.98 ಕೋಟಿ ರೂ. ವೆಚ್ಚ ; ಜಿಪಂ ಉಪಾಧ್ಯಕ್ಷರ ತಾಕೀತಿಗೂ ಕೈಗೊಂಡಿಲ್ಲ ಕ್ರಮ

Team Udayavani, Aug 20, 2021, 7:48 PM IST

ಜಾನುವಾರು ಕೊಟ್ಟಿಗೆಯಾದ ಕ್ರೀಡಾಂಗಣ

ಅಫಜಲಪುರ: 2015-16ರಲ್ಲಿ ನಾಲ್ಕು ಕೋಟಿ ರೂ. ವೆಚ್ಚದಲ್ಲಿ ತಾಲೂಕು ಮಟ್ಟದ ಕ್ರೀಡಾಂಗಣ ಕಾಮಗಾರಿ ಆರಂಭವಾಗಿ ಆರು ವರ್ಷ ಗತಿಸಿದರೂ ಕ್ರೀಡಾಂಗಣ ಕಾಮಗಾರಿ ಮುಕ್ತಾಯವಾಗಿಲ್ಲ. ಹೀಗಾಗಿ ತಾಲೂಕಿನ ಕ್ರೀಡಾಪಟುಗಳಿಗೆ ತೀವ್ರ ನಿರಾಸೆಯಾಗಿದೆ.

ನಾಲ್ಕು ಕೋಟಿ ವೆಚ್ಚದ ಕ್ರೀಡಾಂಗಣ: 2015-16ರಲ್ಲಿ ಯುವಜನ ಕ್ರೀಡಾ ಇಲಾಖೆ ವತಿಯಿಂದ ನಾಲ್ಕು ಕೋಟಿ ರೂ. ವೆಚ್ಚದ ತಾಲೂಕು
ಮಟ್ಟದ ಕ್ರಿಡಾಂಗಣ ಕಾಮಗಾರಿಗೆ ಆಗಿನ ಶಾಸಕ ಮಾಲೀಕಯ್ಯ ಗುತ್ತೇದಾರ ಅಡಿಗಲ್ಲು ನೆರವೇರಿಸಿದ್ದರು.

ಕ್ರೀಡಾಪಟುಗಳಿಗೆ ತೀವ್ರ ನಿರಾಸೆ: ತಾಲೂಕಿನ ಕ್ರೀಡಾಪಟುಗಳು ಪ್ರತಿ ವರ್ಷ ತಾಲೂಕು ಕ್ರೀಡಾಂಗಣದಲ್ಲಿ ಆಟವಾಡಿ ಖುಷಿ ಪಡಬೇಕೆಂಬ
ಕನಸು ನಾಲ್ಕೈದು ವರ್ಷಗಳಿಂದ ನನಸಾಗುತ್ತಿಲ್ಲ. 2015-16ರಲ್ಲಿ ಕೆಕೆಆರ್‌ಡಿಬಿ ವತಿಯಿಂದ 3.98 ಕೋಟಿ ರೂ. ವೆಚ್ಚದ ತಾಲೂಕು ಕ್ರೀಡಾಂಗಣಕ್ಕೆ ಚಾಲನೆ ನಿಡಲಾಗಿತ್ತು. ಆಗಿನಿಂದ ಈಗಿನ ವರೆಗೆ ತಾಲೂಕು ಕ್ರೀಡಾಂಗಣ ಕಾಮಗಾರಿ ಮುಗಿದಿಲ್ಲ. ಅನೇಕ ಸಮಸ್ಯೆಗಳನ್ನು ಎದುರಿಸಿ ಈಗಲೂ ಕ್ರೀಡಾಂಗಣ ಕಾಮಗಾರಿ ಕುಂಟುತ್ತಲೆ ಸಾಗಿದೆ.

ಇದನ್ನೂ ಓದಿ:ಜನನ ಪ್ರಮಾಣ ಭಾರೀ ಇಳಿಕೆ : ಚೀನಾದಲ್ಲಿ ಇನ್ನು ಮೂರು ಮಕ್ಕಳಿಗೆ ಅವಕಾಶ

ಅಧಿಕಾರಿಗಳ ನಿರ್ಲಕ್ಷ್ಯ : ಕ್ರೀಡಾಂಗಣ ಕಾಮಗಾರಿ ಸ್ಥಳಕ್ಕೆ ಜಿ.ಪಂ ಮಾಜಿ ಉಪಾಧ್ಯಕ್ಷೆ ಶೋಭಾ ಶಿರಸಗಿ ಎರಡು ಬಾರಿ ಭೇಟಿ ನೀಡಿ ಅ ಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಕಾಮಗಾರಿ ಮುಗಿಸುವಂತೆ ತಾಕೀತು ಮಾಡಿದರೂ ಪ್ರಯೋಜನವಾಗಿಲ್ಲ

ನಾನು ಭೂಸೇನಾ ನಿಗಮದ ಪ್ರಭಾರಿ ಅಧಿಕಾರ ವಹಿಸಿ ಕೆಲ ದಿನಗಳಾಗಿವೆ. ಕ್ರೀಡಾಂಗಣ ಕಾಮಗಾರಿ ದಾಖಲಾತಿ ಪರಿಶೀಲಿಸಿ, ಶೀಘ್ರವೇ ಮುತುವರ್ಜಿ ವಹಿಸಿ ಕಾಮಗಾರಿ ಮುಕ್ತಾಯ ಮಾಡುವತ್ತ ಕ್ರಮ ಕೈಗೊಳ್ಳುತ್ತೇನೆ
-ರಾಜಶೇಖರ, ಲ್ಯಾಂಡ್‌ ಆರ್ಮಿ, ಪ್ರಭಾರಿ ಅಧಿಕಾರಿ

ಕ್ರೀಡಾಂಗಣಕ್ಕೆ ದಾರಿ ಸಮಸ್ಯೆ ಇತ್ತು. ಅದೀಗ ಬಗೆಹರಿದಿದೆ. ಬಹುತೇಕ ಕಾಮಗಾರಿ ಮುಗಿದಿದೆ. ಕ್ರೀಡಾಂಗಣಕ್ಕೆ ಹೋಗುವ ದಾರಿ ಮತ್ತು
ಇತರೆ ವ್ಯವಸ್ಥೆಗಾಗಿ ಎರಡು ಕೊಟಿ ರೂ. ಅನುದಾನ ಬಂದಿದೆ. ಇದನ್ನು ಕ್ರೀಡಾಂಗಣ ಆರಂಭಿಸಲಾಗುತ್ತದೆ.
-ಎಂ.ವೈ. ಪಾಟೀಲ, ಶಾಸಕ

2015ರಿಂದ ಕ್ರೀಡಾಂಗಣ ಕಾಮಗಾರಿ ಆರಂಭವಾದರೂ ಇಲ್ಲಿಯ ವರೆಗೆ ಮುಗಿದಿಲ್ಲ. ಪ್ರತಿ ಬಾರಿ ಸ್ವಾತಂತ್ರ್ಯದಿನದಂದು ಶಾಸಕರು ಕ್ರೀಡಾಂಗಣದಲ್ಲಿ ಧ್ವಜಾರೋಹಣ ಮಾಡುತ್ತೇವೆ ಎಂದು ಹುಸಿ ಭರವಸೆ ನೀಡಿ ಜಾರಿಕೊಳ್ಳುತ್ತಿದ್ದಾರೆ. ಇದು ತಾಲೂಕಿನ ಕ್ರೀಡಾಪಟುಗಳಿಗೆ ಮಾಡುತ್ತಿರುವ ಮೋಸವಾಗಿದೆ.
-ಸದ್ದಾಂ ನಾಕೇದಾರ, ಸಾಮಾಜಿಕ ಕಾರ್ಯಕರ್ತ

-ಮಲ್ಲಿಕಾರ್ಜುನ ಹಿರೇಮಠ

ಟಾಪ್ ನ್ಯೂಸ್

Untitled-1

ಕುಂದಾನಗರಿಯಲ್ಲಿ ಗಣೇಶ ವಿಸರ್ಜನೆ ವೇಳೆ ಲಾಠಿ ಚಾರ್ಜ್

ಆರ್‌ಸಿಬಿ ನಾಯಕತ್ವಕ್ಕೂ ವಿರಾಟ್‌ ವಿದಾಯ

ಆರ್‌ಸಿಬಿ ನಾಯಕತ್ವಕ್ಕೂ ವಿರಾಟ್‌ ವಿದಾಯ

ಉತ್ತರ ಪ್ರದೇಶ ಈಗ ಗಲಭೆಮುಕ್ತ: ಸಿಎಂ ಯೋಗಿ ಆದಿತ್ಯನಾಥ್‌

ಉತ್ತರ ಪ್ರದೇಶ ಈಗ ಗಲಭೆಮುಕ್ತ: ಸಿಎಂ ಯೋಗಿ ಆದಿತ್ಯನಾಥ್‌

frty5y56

ಕೋವಿಡ್ ಹೊಡೆತ | ಸದ್ದು ಮಾಡದ ಕೊಂಬು ಕಹಳೆ ವಾದ್ಯ

fcgrdtr

ಅವಮಾನಿಸಿದ ಪಕ್ಷದಲ್ಲಿ ಇರಬೇಡಿ,ಬಿಜೆಪಿಗೆ ಬನ್ನಿ : ಅಮರೀಂದರ್ ಗೆ ಅಠಾವಳೆ ಆಹ್ವಾನ

1ರಿಂದ 5ನೇ ತರಗತಿ ಸದ್ಯಕ್ಕಿಲ್ಲ: ಸಚಿವ ನಾಗೇಶ್‌

1ರಿಂದ 5ನೇ ತರಗತಿ ಸದ್ಯಕ್ಕಿಲ್ಲ: ಸಚಿವ ನಾಗೇಶ್‌

ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ವಿರುದ್ಧ ಎಫ್ಐಆರ್‌?

ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ವಿರುದ್ಧ ಎಫ್ಐಆರ್‌?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಸ್ತೆ ಅಪಘಾತ : ಶರಣಬಸವ ವಿಶ್ವವಿದ್ಯಾಲಯದ ಕುಲಸಚಿವ ಸಾವು

ರಸ್ತೆ ಅಪಘಾತ : ಶರಣಬಸವ ವಿಶ್ವವಿದ್ಯಾಲಯದ ಕುಲಸಚಿವ ಸಾವು

ಐದು ವರ್ಷಗಳಿಂದ ಪ್ರೀತಿಸಿ ಮದುವೆಗೆ ಒಲ್ಲೆ ಎಂದ ಯುವಕನಿಗೆ ಠಾಣೆ ಮುಂದೆ ಧರ್ಮದೇಟು

ಐದು ವರ್ಷಗಳಿಂದ ಪ್ರೀತಿಸಿ ಮದುವೆಗೆ ಒಲ್ಲೆ ಎಂದ ಯುವಕನಿಗೆ ಠಾಣೆ ಮುಂದೆಯೇ ಥಳಿಸಿದ ಯುವತಿ

Cmನಕಲಿ ಬೀಜ ಮಾರಾಟ: ಕ್ರಮಕ್ಕೆ ಸಿಎಂ ಬೊಮ್ಮಾಯಿಗೆ ಮನವಿ

ನಕಲಿ ಬೀಜ ಮಾರಾಟ: ಕ್ರಮಕ್ಕೆ ಸಿಎಂ ಬೊಮ್ಮಾಯಿಗೆ ಮನವಿ

25 ವರ್ಷ ನಂತರ ಕಲಬುರಗಿಯಲ್ಲಿ 36ನೇ ಪತ್ರಕರ್ತರ ರಾಜ್ಯ ಸಮ್ಮೇಳನ

25 ವರ್ಷ ನಂತರ ಕಲಬುರಗಿಯಲ್ಲಿ 36ನೇ ಪತ್ರಕರ್ತರ ರಾಜ್ಯ ಸಮ್ಮೇಳನ

ಶರಣಬಸವ ವಿವಿಯಲ್ಲಿ ಕಲ್ಯಾಣ ಕರ್ನಾಟಕ ಉತ್ಸವ

ಶರಣಬಸವ ವಿವಿಯಲ್ಲಿ ಕಲ್ಯಾಣ ಕರ್ನಾಟಕ ಉತ್ಸವ

MUST WATCH

udayavani youtube

ಗಿಡಗಳಿಗೆ “ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಕಾರು ಖರೀದಿಸಿ ತರುತ್ತಿದ್ದ ವೇಳೆ ಅಗ್ನಿ ಅವಘಡ ಕಣ್ಣೆದುರೇ ಹೊತ್ತಿ ಉರಿದ ಕಾರು

udayavani youtube

ನದಿಗೆ ಹಾರಿ ಎರಡು ದಿನ ಕಳೆದರೂ ಪತ್ತೆಯಾಗದ ದೇಹ : ಶೋಧ ಕಾರ್ಯ ಮುಂದುವರಿಕೆ

udayavani youtube

ಚರಣ್ ಜಿತ್ ಸಿಂಗ್ ಛನ್ನಿ ಪಂಜಾಬ್ ನೂತನ ಮುಖ್ಯಮಂತ್ರಿ|UDAYAVANI NEWS BULLETIN|19/9/2021

udayavani youtube

ಗಣೇಶನ ಆರಾಧನೆಯ ಜೊತೆಗೆ ಕೋವಿಡ್ ಲಸಿಕೆಯ ಬಗ್ಗೆ ಜನಜಾಗೃತಿ

ಹೊಸ ಸೇರ್ಪಡೆ

Untitled-1

ಕುಂದಾನಗರಿಯಲ್ಲಿ ಗಣೇಶ ವಿಸರ್ಜನೆ ವೇಳೆ ಲಾಠಿ ಚಾರ್ಜ್

ಆರ್‌ಸಿಬಿ ನಾಯಕತ್ವಕ್ಕೂ ವಿರಾಟ್‌ ವಿದಾಯ

ಆರ್‌ಸಿಬಿ ನಾಯಕತ್ವಕ್ಕೂ ವಿರಾಟ್‌ ವಿದಾಯ

ಉತ್ತರ ಪ್ರದೇಶ ಈಗ ಗಲಭೆಮುಕ್ತ: ಸಿಎಂ ಯೋಗಿ ಆದಿತ್ಯನಾಥ್‌

ಉತ್ತರ ಪ್ರದೇಶ ಈಗ ಗಲಭೆಮುಕ್ತ: ಸಿಎಂ ಯೋಗಿ ಆದಿತ್ಯನಾಥ್‌

Children’s education

ಆದಿವಾಸಿ ಮುಖಂಡರು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಿ :ಡಿವೈಎಸ್ ಪಿ ರವಿಪ್ರಸಾದ್ ಮನವಿ

frty5y56

ಕೋವಿಡ್ ಹೊಡೆತ | ಸದ್ದು ಮಾಡದ ಕೊಂಬು ಕಹಳೆ ವಾದ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.