ತೀವ್ರ ನಿಗಾ ಕಲಿಕಾ ತರಬೇತಿ ಆರಂಭ 


Team Udayavani, Jan 2, 2019, 10:02 AM IST

1-january-14.jpg

ಬೀದರ: ಎಸ್‌ಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಕಲಬುರಗಿ ಆಯುಕ್ತರು ಹೈದ್ರಾಬಾದ ಕರ್ನಾಟಕದ ಆರು ಜಿಲ್ಲೆಗಳ 524 ಸರ್ಕಾರಿ ಪ್ರೌಢಶಾಲೆಗಳಲ್ಲಿನ ಎಸ್‌ಸ್‌ ಎಲ್‌ಸಿ ವಿದ್ಯಾರ್ಥಿಗಳಿಗಾಗಿ ತೀವ್ರ ನಿಗಾ ಕಲಿಕಾ ತರಬೇತಿ ಶುರು ಮಾಡಿದ್ದಾರೆ.

ಪ್ರತಿ ವರ್ಷ ಎಸ್‌ಸ್‌ಎಲ್‌ಸಿ ಫಲಿತಾಂಶದಲ್ಲಿ ಹಿಂದೇ ಉಳಿಯುತ್ತಿರುವ ಹೈ.ಕ. ಭಾಗದ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿ ಪ್ರಸಕ್ತ ವರ್ಷದಲ್ಲಿ ಹೆಚ್ಚು ಫಲಿತಾಂಶ ಪಡೆಯಬೇಕು. ಮಕ್ಕಳ ಕಲಿಕಾ ಸಾಮರ್ಥ್ಯ ಹೆಚ್ಚಿಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ‘ತೀವ್ರ ನಿಗಾ ಕಲಿಕಾ ಯೋಜನೆ’ ಅನುಷ್ಠಾನಗೊಳಿಸಿದೆ.

ಬೀದರ್‌ ಜಿಲ್ಲೆಯ ಔರಾದ ಹಾಗೂ ಬೀದರ್‌ ತಾಲೂಕಿನಲ್ಲಿ ಈಗಾಗಲೇ ವಿದ್ಯಾರ್ಥಿಗಳ ಬೋಧನೆ ಕಾರ್ಯ ಆರಂಭಗೊಂಡಿದ್ದು, ಕೆಲ ದಿನಗಳಲ್ಲಿ ಹುಮನಾಬಾದ, ಬಸವಕಲ್ಯಾಣ ಹಾಗೂ ಭಾಲ್ಕಿ ತಾಲೂಕಿನಲ್ಲಿ ಕೂಡ ತೀವ್ರ ನಿಗಾ ಕಲಿಕಾ ತರಬೇತಿ ಆರಂಭಗೊಳ್ಳಲಿದೆ. ಅಲ್ಲದೆ, ಈ ಯೋಜನೆ ಕುರಿತು ಶಿಕ್ಷಕರಿಗೆ ತರಬೇತಿ ಕಾರ್ಯಗಳನ್ನು ಕೂಡ ನೀಡಲಾಗಿದೆ. ಆಯಾ ತಾಲೂಕುಗಳಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮುಖ್ಯಗುರುಗಳ ಸಭೆ ನಡೆಸಿ ಸೂಕ್ತ ಮಾರ್ಗದರ್ಶನ ನೀಡುವಂತೆ ತಿಳಿಸಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಭಾರಿ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಎರಡು ಗಂಟೆ ತರಬೇತಿ: ಹೈದ್ರಾಬಾದ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿ ಸಹಯೋಗದಲ್ಲಿ ಎಸ್‌ಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ನೀಡಲಾಗುತ್ತಿದ್ದು, ಶಾಲಾ ಅವಧಿಗಿಂತ ಒಂದು ಗಂಟೆ ಮುಂಚೆ ಹಾಗೂ ಶಾಲಾ ಅವಧಿ ಮುಗಿದ ನಂತರ ಒಂದು ಗಂಟೆ ಕಾಲ ಒಟ್ಟಾರೆ ದಿನಕ್ಕೆ ಎರಡು ಗಂಡೆಗಳ ಕಾಲ, ವಾರದ ಐದು ದಿನ  (ಶನಿವಾರ ಹೊರೆತುಪಡಿಸಿ) ವಿದ್ಯಾರ್ಥಿಗಳಿಗೆ ತೀವ್ರ ನಿಗಾ ಕಲಿಕಾ ತರಬೇತಿ ನೀಡಲು ಆಯುಕ್ತರು ಸೂಚಿಸಿದ್ದಾರೆ.

ಶಾಲೆಗಳ ಆಯ್ಕೆ: ಐದು ವರ್ಷಗಳಲ್ಲಿ ಸರಾಸರಿ ಶೇ.75ಕ್ಕಿಂತ ಕಡಿಮೆ ಫಲಿತಾಂಶ ಪಡೆದ ಶಾಲೆಗಳನ್ನು ಆಯ್ಕೆ ಮಾಡಿಕೊಂಡಿರುವ ಶಿಕ್ಷಣ ಇಲಾಖೆ ಮೊದಲಿಗೆ ಶೇ.50ಕ್ಕೂ ಕಡಿಮೆ ಫಲಿತಾಂಶ ಪಡೆದ ಶಾಲೆಗಳನ್ನು ಗುರುತಿಸಿ ತರಗತಿಗಳನ್ನು ಪ್ರಾರಂಭಿಸುತ್ತಿದೆ. ಮುಂದಿನ ದಿನಗಳಲ್ಲಿ ಶೇ.75ಕ್ಕೂ ಕಡಿಮೆ ಫಲಿತಾಂಶ ಪಡೆದ ಶಾಲೆಗಳಲ್ಲಿ ಕೂಡ ತರಬೇತಿ ನೀಡುವ ಗುರಿ ಹೊಂದಿದೆ.

ಸರಳ ಭೋದನೆ: ವಿದ್ಯಾರ್ಥಿಗಳಿಗೆ ಕಠಿಣವಾದ ಪರಿಕಲ್ಪನೆಗಳನ್ನು ಆಯಾ ಶಿಕ್ಷಕರು ಗುರುತಿಸಿಕೊಂಡು ಸರಳವಾಗಿ ವಿದ್ಯಾರ್ಥಿಗಳಿಗೆ ಅರ್ಥವಾಗುವಂತೆ ಬೋಧನೆ ಮಾಡಬೇಕಾದ ಮುಖ್ಯ ಅಂಶವನ್ನು ಈ ಯೋಜನೆ ಹೊಂದಿದೆ. ಪ್ರತಿ ಶಿಕ್ಷಕರು ತಮ್ಮ ವಿಷಯಗಳಲ್ಲಿ ಕಠಿಣವಾದ ಕಲ್ಪನೆಗಳನ್ನು ಗುರುತಿಸಿಕೊಂಡು ಶಾಲೆಯ ಮುಖ್ಯ ಶಿಕ್ಷಕರ ಗಮನಕ್ಕೆ ತಂದು ಅವರ ಅನುಮೋದನೆ ಪಡೆದು ನಿಗದಿಪಡೆಸಿರುವ ದಿನ ಹಾಗೂ ಸಮಯ ಅನುಸಾರ ಮಕ್ಕಳಿಗೆ ಬೋಧನೆ ಮಾಡಬೇಕಾಗಿದೆ.

ಮೇಲುಸ್ತುವಾರಿ: ಮುಖ್ಯ ಶಿಕ್ಷಕರು ಪ್ರತಿ ಶಿಕ್ಷಕರ ಕ್ರಿಯಾ ಯೋಜನೆಯಂತೆ ನಿರಂತರವಾಗಿ ಮಕ್ಕಳ ತೀವ್ರ ನಿಗಾ ತರಬೇತಿಗಳು ನಡೆಯುವಂತೆ ಮೇಲುಸ್ತುವಾರಿ ಮಾಡಬೇಕಿದೆ. ತರಬೇತಿಗಳ ಹಾಜರಾತಿಯನ್ನು ಪ್ರತಿದಿನ ಶಾಲೆಯ ಮುಖ್ಯ ಶಿಕ್ಷಕರು ದೃಢೀಕರಿಸುವಂತೆ ಸೂಚಿಸಲಾಗಿದ್ದು, ಆಯಾ ತಾಲೂಕುಗಳ ಬಿಇಒ ಹಾಗೂ ಬಿಆರ್‌ಸಿ, ಇಸಿಒಗಳು ಪರಿಶೀಲನೆ ನಡೆಸಿ ಸೂಕ್ತವಾಗಿ ತರಬೇತಿ ನಡೆಯುವಂತೆ ಮೇಲಸ್ತುವಾರಿ ಮಾಡುವಂತೆ ಆದೇಶದಲ್ಲಿ ತಿಳಿಸಲಾಗಿದೆ.

ಕಲಿಕಾ ಉದ್ದೇಶಗಳು: ಸಂಪೂರ್ಣ ಪಠ್ಯಕ್ರಮವನ್ನು ಪುನಃ ಇನ್ನೊಂದು ಸಾರಿ ತೀವ್ರವಾಗಿ ಬೋಧನೆ ಮಾಡಿ ಮುಗಿಸಿ ಮಕ್ಕಳಿಗೆ ಪಾಠದ ಕುರಿತು ಸಂಪೂರ್ಣ ಅರಿವು ಮೂಡಿಸುವುದು ಈ ಯೋಜನೆಯ ಮುಖ್ಯ ಗುರಿಯಾಗಿದೆ. ಪಠ್ಯದಲ್ಲಿರುವ ಕಠಿಣ ಅಂಶಗಳಿಗೆ ವಿಶೇಷ ಒತ್ತು ನೀಡಿ ಅವುಗಳಿಗೆ ಪರಿಹಾರ ನೀಡುವುದು. ಸಾಧ್ಯವಾದಲ್ಲಿ ಪರ್ಯಾಯ ಶಿಕ್ಷಕರು ಈ ಬೋಧನಾ ಕಾರ್ಯ ಕೈಗೊಳ್ಳುವಂತೆ ಪ್ರೋತ್ಸಾಹ ನೀಡುವುದು. ಮಕ್ಕಳ ಕಲಿಕೆಯ ಆಸಕ್ತಿ ಹೆಚಿಸಿ ಕಲಿಕಾ ದೃಢೀಕರಣಗೊಳಿಸುವುದು ಮತ್ತು ಕಲಿಕೆಯಲ್ಲಿ ಪರಿಪೂರ್ಣತೆ ಸಾಧಿ ಸುವಲ್ಲಿ ನೆರವಾಗುವ ಮೂಲಕ ಮಕ್ಕಳಲ್ಲಿರುವ ಕಲಿಕಾ ಭಯ ಮತ್ತು ಆಂತಕಗಳನ್ನು ದೂರ ಮಾಡುವ ಕೆಲಸವನ್ನು ಶಿಕ್ಷಕರು ಮಾಡಬೇಕಿದೆ.

ಅವಧಿ: ಜನವರಿ ಹಾಗೂ ಫೆಬ್ರವರಿ ತಿಂಗಳಲ್ಲಿ ಬೋಧನಾ ಕಾಲಾವ ಧಿ ನಿಗದಿ ಮಾಡಲಾಗಿದ್ದು, ಮಾರ್ಚ್‌ 21ರಿಂದ ಏ.4ರ ವರೆಗೆ ಪರೀಕ್ಷೆಗಳು ನಡೆಯಲಿವೆ. ಆ ಸಂದರ್ಭದಲ್ಲಿ ಕೂಡ ಆಯಾ ಶಿಕ್ಷಕರು ನಿರಂತರ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮತ್ತು ಪ್ರೇರಣೆ ನೀಡಬೇಕಾಗಿದೆ. ಮುಂಜಾನೆ 8:45 ರಿಂದ 9:45ರ ವರೆಗೆ ಹಾಗೂ ಸಂಜೆ 4:45ರಿಂದ 5:45ರ ವರೆಗೆ ತೀವ್ರ ಕಲಿಕಾ ತರಬೇತಿಗಳು ನಡೆಯಲಿವೆ.

ಪ್ರೋತ್ಸಾಹ ಧನ: ಶಾಲೆಯ ಮುಖ್ಯ ಶಿಕ್ಷಕರು ಹಾಗೂ 3 ವಿಷಯಗಳ ಶಿಕ್ಷಕರಿಗೆ ಪ್ರತಿ ತಿಂಗಳು ತಲಾ ಸಾವಿರ ರೂ. ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಫಲಿತಾಂಶ ಬಂದ ನಂತರ ರಾಜ್ಯದ ಸರಾಸರಿ ಫಲಿತಾಂಶಕ್ಕಿಂತ ಹೆಚ್ಚುವರಿ ಫಲಿತಾಂಶ ಪಡೆದ ಶಾಲೆಗಳಿಗೆ ತಲಾ ಶಿಕ್ಷಕರಿಗೆ ಎರಡು ಸಾವಿರ ರೂ. ಪಾರಿತೋಷಕ ಮೊತ್ತ ಹಾಗೂ ಪ್ರಶಂಸಾ ಪತ್ರದೊಂದಿಗೆ ಗೌರವಿಸುವ ಕಾರ್ಯವನ್ನು ಶಿಕ್ಷಣ ಇಲಾಖೆ ಈ ವರ್ಷದ ಮಾಡಲಿದೆ.

ಫಲಿತಾಂಶ ಸುಧಾರಣೆ ಹಿನ್ನೆಲೆಯಲ್ಲಿ ವಿವಿಧ ಯೋಜನೆಗಳನ್ನು ಅನುಷ್ಠಾಗೊಳ್ಳಿಸಲಾಗುತ್ತಿದೆ. ಇದೀಗ ತೀವ್ರ ನಿಗಾ ಕಲಿಕಾ ಯೋಜನೆ ಅಡಿಯಲ್ಲಿ ಕಲಿಕೆಯಲ್ಲಿ ಹಿಂದುಳಿದ ಹಾಗೂ ಫಲಿತಾಂಶ ಕಡಿಮೆ ಬಂದ ಶಾಲೆಗಳಲ್ಲಿ ವಿಶೇಷ ತರಬೇತಿಗಳನ್ನು ನಡೆಸುವ ಮೂಲಕ ಮಕ್ಕಳಿಗೆ ಪ್ರೋತ್ಸಾಹ ನಿಡುವುದು, ಪರೀಕ್ಷೆ ಭಯ ದೂರ ಮಾಡುವ ನಿಟ್ಟಿನಲ್ಲಿ ಎಲ್ಲ ಶಾಲೆಗಳ ಶಿಕ್ಷಕರು ಹಾಗೂ ಮುಖ್ಯ ಶಿಕ್ಷಕರು ಕೆಲಸ ನಿರ್ವಹಿಸಲಿದ್ದಾರೆ. ಈ ಯೋಜನೆಯಿಂದ ಹೆಚ್ಚು ಫಲಿತಾಂಶ ಬರುವ ನಿರೀಕ್ಷೆ ಇದೆ.
. ಶಿವರಾಚಪ್ಪ ವಾಲಿ, ಬಿಇಒ

„ದುರ್ಯೋಧನ ಹೂಗಾರ 

ಟಾಪ್ ನ್ಯೂಸ್

Vijayapura:ತತ್ಕಾಲ ಪೋಡಿಗೆ 47ಸಾವಿರ ಲಂಚ: ಲೋಕಾಯುಕ್ತರ ಬಲೆಗೆ ಬಿದ್ದ ಸರ್ವೇಯರ್,ಮಧ್ಯವರ್ತಿ

Vijayapura:ತತ್ಕಾಲ ಪೋಡಿಗೆ 47ಸಾವಿರ ಲಂಚ: ಲೋಕಾಯುಕ್ತರ ಬಲೆಗೆ ಬಿದ್ದ ಸರ್ವೇಯರ್,ಮಧ್ಯವರ್ತಿ

crime

Ramanagara: ತಂದೆಯಿಂದಲೇ ಮಗನ ಕೊಲೆ.!

Bus Carrying Devotees Catches Fire In Haryana

Nuh; ಹೊತ್ತಿ ಉರಿದ ಮಥುರಾ ಭಕ್ತರಿದ್ದ ಬಸ್; ಎಂಟು ಮಂದಿ ಸಾವು

ಕಾಶಿಯಲ್ಲಿ ಕಾಲು ಸಂಕ- ಬಟ್ಟೆ ಒಗೆಯುವ ಕಲ್ಲಾಗಿದೆ ಕೆಳದಿ ಸಾಮ್ರಾಜ್ಯದ ಶಾಸನ

ಅವ್ಯವಸ್ಥೆ… ಕಾಶಿಯಲ್ಲಿ ಕಾಲು ಸಂಕ- ಬಟ್ಟೆ ಒಗೆಯುವ ಕಲ್ಲಾಗಿದೆ ಕೆಳದಿ ಸಾಮ್ರಾಜ್ಯದ ಶಾಸನ

PU ಕಂಪ್ಯೂಟರ್‌ ಸೈನ್ಸ್‌, ಸೈಕಾಲಜಿಗೂ ಎನ್‌ಸಿಇಆರ್‌ಟಿ ಪಠ್ಯ

PU ಕಂಪ್ಯೂಟರ್‌ ಸೈನ್ಸ್‌, ಸೈಕಾಲಜಿಗೂ ಎನ್‌ಸಿಇಆರ್‌ಟಿ ಪಠ್ಯ

ಕೇರಳದಲ್ಲಿ 2 ವಾರದಲ್ಲಿ 2 ಲಕ್ಷ ಮಂದಿಗೆ ಸಾಂಕ್ರಾಮಿಕ ರೋಗ; 10 ಸಾವು

ಕೇರಳದಲ್ಲಿ 2 ವಾರದಲ್ಲಿ 2 ಲಕ್ಷ ಮಂದಿಗೆ ಸಾಂಕ್ರಾಮಿಕ ರೋಗ; 10 ಸಾವು

KARಸಾಗರದಾಚೆಯಿಂದ ತವರಿಗೆ ಕರೆ ತಂದ ಕೃಷಿ ಪ್ರೀತಿ

Karkala ಸಾಗರದಾಚೆಯಿಂದ ತವರಿಗೆ ಕರೆ ತಂದ ಕೃಷಿ ಪ್ರೀತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kalaburagi; Suresh Sajjan submits nomination as BJP rebel candidate

Kalaburagi; ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸುರೇಶ ಸಜ್ಜನ್ ನಾಮಪತ್ರ ಸಲ್ಲಿಕೆ

Kalaburagi: ಮರ್ಮಾಂಗಕ್ಕೆ ಕರೆಂಟ್ ಶಾಕ್ ನೀಡಿದ ಪ್ರಕರಣ: ಶೀಘ್ರ ಇನ್ನುಳಿದ ಆರೋಪಿಗಳ ಬಂಧನ

Kalaburagi: ಮರ್ಮಾಂಗಕ್ಕೆ ಕರೆಂಟ್ ಶಾಕ್ ನೀಡಿದ ಪ್ರಕರಣ: ಶೀಘ್ರ ಇನ್ನುಳಿದ ಆರೋಪಿಗಳ ಬಂಧನ

ಕಲಬುರಗಿ: ಎಂಎಲ್ಸಿ ಚುನಾವಣೆಯಲ್ಲಿ ಕೈತಪ್ಪಿದ ಟಿಕೆಟ್: ಬಿಜೆಪಿಯಲ್ಲಿ ಬಂಡಾಯ ಬಿಸಿ

ಎಂಎಲ್ಸಿ ಚುನಾವಣೆ: ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಮುಂದಾದ ಬಿಜೆಪಿ ನಾಯಕ…

2-kalburgi

Kalburgi: ಕರೆಂಟ್ ಶಾಕ್ ಪ್ರಕರಣ;ಖಂಡಿಸಿ ಹಿಂದೂ ಜಾಗೃತಿ ಸೇನೆಯಿಂದ ಸರಕಾರದ ಪ್ರತಿಕೃತಿ ದಹನ

1-wqew-ewqe

Kalaburagi: ಹಣಕ್ಕಾಗಿ ಮೂವರ ವಿವಸ್ತ್ರಗೊಳಿಸಿ ಗುಪ್ತಾಂಗಕ್ಕೆ ಶಾಕ್‌!: 7 ಮಂದಿ ಸೆರೆ

MUST WATCH

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

ಹೊಸ ಸೇರ್ಪಡೆ

Vijayapura:ತತ್ಕಾಲ ಪೋಡಿಗೆ 47ಸಾವಿರ ಲಂಚ: ಲೋಕಾಯುಕ್ತರ ಬಲೆಗೆ ಬಿದ್ದ ಸರ್ವೇಯರ್,ಮಧ್ಯವರ್ತಿ

Vijayapura:ತತ್ಕಾಲ ಪೋಡಿಗೆ 47ಸಾವಿರ ಲಂಚ: ಲೋಕಾಯುಕ್ತರ ಬಲೆಗೆ ಬಿದ್ದ ಸರ್ವೇಯರ್,ಮಧ್ಯವರ್ತಿ

crime

Ramanagara: ತಂದೆಯಿಂದಲೇ ಮಗನ ಕೊಲೆ.!

Bus Carrying Devotees Catches Fire In Haryana

Nuh; ಹೊತ್ತಿ ಉರಿದ ಮಥುರಾ ಭಕ್ತರಿದ್ದ ಬಸ್; ಎಂಟು ಮಂದಿ ಸಾವು

ಕಾಶಿಯಲ್ಲಿ ಕಾಲು ಸಂಕ- ಬಟ್ಟೆ ಒಗೆಯುವ ಕಲ್ಲಾಗಿದೆ ಕೆಳದಿ ಸಾಮ್ರಾಜ್ಯದ ಶಾಸನ

ಅವ್ಯವಸ್ಥೆ… ಕಾಶಿಯಲ್ಲಿ ಕಾಲು ಸಂಕ- ಬಟ್ಟೆ ಒಗೆಯುವ ಕಲ್ಲಾಗಿದೆ ಕೆಳದಿ ಸಾಮ್ರಾಜ್ಯದ ಶಾಸನ

PU ಕಂಪ್ಯೂಟರ್‌ ಸೈನ್ಸ್‌, ಸೈಕಾಲಜಿಗೂ ಎನ್‌ಸಿಇಆರ್‌ಟಿ ಪಠ್ಯ

PU ಕಂಪ್ಯೂಟರ್‌ ಸೈನ್ಸ್‌, ಸೈಕಾಲಜಿಗೂ ಎನ್‌ಸಿಇಆರ್‌ಟಿ ಪಠ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.